07:15 PM
ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಪುಷ್ಪ ಸ್ವಾಗತ.
07:05 PM
ಆಂಧ್ರಪ್ರದೇಶ ವಿಧಾನ ಸಭೆ: ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಚಂದ್ರಬಾಬು ನಾಯ್ಡು.
07:04 PM
ಟ್ವಿಟ್ಟರ್ ನಲ್ಲಿ ‘ಚೌಕಿದಾರ್’ ಅಭಿಯಾನ ಅಂತ್ಯಗೊಳಿಸಿದ ನರೇಂದ್ರ ಮೋದಿ.
06:44 PM
ಬಿಜೆಪಿ ನೆತೃತ್ವದ NDA ಗೆಲುವಿಗೆ ಬಲ ತುಂಬಿದ ರಾಜ್ಯಗಳು: ಗುಜರಾತ್ (26), ರಾಜಸ್ಥಾನ (24), ಮಧ್ಯಪ್ರದೇಶ (28), ಬಿಹಾರ (39), ಕರ್ನಾಟಕ (25) ಮಹಾರಾಷ್ಟ್ರ (42), ಉತ್ತರಪ್ರದೇಶ (62), ಪಶ್ಚಿಮ ಬಂಗಾಲ (19).
06:41 PM
ಉತ್ತರಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಹೇಮ್ ರಾಜ್ ವರ್ಮಾ ಅವರನ್ನು ಸೋಲಿಸಿದ ಬಿಜೆಪಿಯ ವರುಣ್ ಗಾಂಧಿ.
06:40 PM
ಮಥುರಾ ಕ್ಷೇತ್ರದಲ್ಲಿ ಗೆದ್ದು ಸಂಸತ್ತಿಗೆ ಪುನರಾಯ್ಕೆಯಾದ ಬಿಜೆಪಿಯ ಹೆಮಮಾಲಿನಿ. ಗೆಲುವಿನ ಅಂತರ 2.8 ಲಕ್ಷ ಮತಗಳು.
06:31 PM
ಭಾರತೀಯ ಜನತಾ ಪಕ್ಷದ ಅಭೂತಪೂರ್ವ ವಿಜಯಕ್ಕಾಗಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಪ್ರಿಯಾಂಕ ಗಾಂಧಿ.
05:56 PM
ಪಶ್ಚಿಮ ಬಂಗಾಲದ ಅಸಾನ್ಸೋಲ್ ಕ್ಷೇತ್ರದಲ್ಲಿ ಟಿಎಂಸಿಯ ಮೂನ್ ಮೂನ್ ಸೇನ್ ಅವರನ್ನು ಸೋಲಿಸಿ ಗೆದ್ದ ಬಿಜೆಪಿಯ ಬಾಬುಲ್ ಸುಪ್ರಿಯೋ.
05:51 PM
ಅಮೇಥಿಯಲ್ಲಿ ಜಯಗಳಿಸಿರುವ ಸ್ಮೃತಿ ಇರಾನಿ ಅವರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಕ್ಷೇತ್ರದ ಜನರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದ ರಾಹುಲ್ ಗಾಂಧಿ
05:50 PM
ಭಾರತದ ಮತದಾರರು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ. ಓರ್ವ ಭಾರತೀಯನಾಗಿ ನಾನು ದೇಶದ ಜನರ ನಿರ್ಣಯವನ್ನು ಗೌರವಿಸುತ್ತೇನೆ – ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
05:42 PM
ನರೇಂದ್ರ ಮೋದಿ ಗೆಲುವಿಗೆ ನೇತನ್ಯಾಹು, ಇಮ್ರಾನ್ ಖಾನ್, ಕ್ಸಿ ಝಿಂಗ್ ಪಿಂಗ್ ಸೇರಿದಂತೆ ವಿಶ್ವನಾಯಕರ ಅಭಿನಂದನೆ.
05:39 PM
ಚಾಮರಾಜನಗರದಲ್ಲಿ ಕಾಂಗ್ರೆಸ್ ನ ಧ್ರುವನಾರಾಯಣ ವಿರುದ್ಧ ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಗೆಲುವು.
05:39 PM
ಕೇರಳದ ವಯನಾಡ್ ಕ್ಷೇತ್ರದಿಂದ 416373 ಮತಗಳ ಅಂತರದಿಂದ ಆಯ್ಕೆಯಾದ ರಾಹುಲ್ ಗಾಂಧಿ
05:36 PM
ಗಾಂಧಿನಗರ ಕ್ಷೇತ್ರದಲ್ಲಿ ಐದೂವರೆ ಲಕ್ಷ ಮತಗಳ ಅಂತರದಲ್ಲಿ ಗೆದ್ದ ಅಮಿತ್ ಶಾ.
05:34 PM
ವಾರಣಾಸಿ ಕ್ಷೇತ್ರದಲ್ಲಿ 4 ಲಕ್ಷದ 75 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ ನರೇಂದ್ರ ಮೋದಿ.
05:32 PM
ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸೋಲು.
05:29 PM
ರಾಯ್ ಬರೇಲಿ ಕ್ಷೇತ್ರದಲ್ಲಿ ಗೆದ್ದ ಸೋನಿಯಾ ಗಾಂಧಿ.
05:22 PM
ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ಸೋಲುಣಿಸಿ ಗೆದ್ದ ಬಿಜೆಪಿಯ ಪ್ರಗ್ಯಾ ಸಿಂಗ್ ಠಾಕೂರ್.
05:06 PM
ರಾಯಚೂರಿನಲ್ಲಿ ಬಿಜೆಪಿಯ ಅಮರೇಶ್ವರ ನಾಯಕ್‌ ಗೆ ಜಯ.ಹಾಲಿ ಕಾಂಗ್ರೆಸ್‌ ಸಂಸದ ಬಿ.ವಿ.ನಾಯಕ್‌ಗೆ ಸೋಲು
04:48 PM
ಜನರ ತೀರ್ಪಿಗೆ ತಲೆಬಾಗಲಿದ್ದೇವೆ. ಜನ ತೀರ್ಪು ನೀಡಿರುವುದು ಕೇಂದ್ರ ಸರಕಾರ ರಚನೆಗಾಗಿ. ರಾಜ್ಯ ಸರಕಾರದ ವಿಷಯದಲ್ಲಿ ಮತದಾರರು 2018ರಲ್ಲೇ ತೀರ್ಪು ನೀಡಿದ್ದಾರೆ – ಸಿದ್ಧರಾಮಯ್ಯ ಪ್ರತಿಕ್ರಿಯೆ.
04:45 PM
ಆಂಧ್ರಪ್ರದೇಶ ಮತ್ತು ಒಡಿಸ್ಸಾ ವಿಧಾನ ಸಭೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಜಗನ್ ಮತ್ತು ನವೀನ್ ಪಟ್ನಾಯಕ್ ಅವರನ್ನು ಅಭಿನಂದಿಸಿದ ನರೇಂದ್ರ ಮೋದಿ.
04:41 PM
ಚಾಮರಾಜನಗರದಲ್ಲಿ 20 ನೇ ಸುತ್ತಿನ ಅಂತ್ಯಕ್ಕೆ ಶ್ರೀನಿವಾಸ ಪ್ರಸಾದ್ ಅವರಿಗೆ 507 ಮತಗಳ ಮುನ್ನಡೆ. ಕ್ಷಣಕ್ಷಣಕ್ಕೂ ರೋಮಾಂಚಕ ಘಟ್ಟಕ್ಕೆ ಸಾಗುತ್ತಿರುವ ಫಲಿತಾಂಶ.
04:27 PM
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ ಸಿದ್ಧರಾಮಯ್ಯ.
04:24 PM
ತುಮಕೂರಿನಲ್ಲಿ ಹೆಚ್.ಡಿ. ದೇವೇಗೌಡರಿಗೆ ಸೋಲು. 15,433 ಮತಗಳ ಅಂತರದಿಂದ ಬಿಜೆಪಿಯ ಬಸವರಾಜು ಅವರಿಗೆ ಗೆಲುವು.
04:14 PM
ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರಿಗೆ 4.09 ಲಕ್ಷ ಮತಗಳ ಮುನ್ನಡೆ.
04:03 PM
ಮೋದಿ ಮತ್ತು ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಲಾಲ್ ಕೃಷ್ಣ ಅಡ್ವಾಣಿ ಅಭಿನಂದನೆಯ ಟ್ವೀಟ್.
04:00 PM
ಇಂದು ಸಂಜೆ 06 ಗಂಟೆಗೆ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
03:54 PM
ರಾಹುಲ್ ಗಾಂಧಿಗಿಂತ 14030 ಮತಗಳ ಮುನ್ನಡೆ ಸಾಧಿಸಿದ ಸ್ಮೃತಿ ಇರಾನಿ.
03:53 PM
ಚಾಮರಾಜನಗರದಲ್ಲಿ ಗುರು ಶಿಷ್ಯರ ನಡುವೆ ತೀವ್ರ ಜಿದ್ದಾಜಿದ್ದಿ. ಬಿಜೆಪಿ ಯ ಶ್ರೀನಿವಾಸಪ್ರಸಾದ್‌ ವಿರುದ್ಧ ಕೇವಲ 1 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನೂ 48 ಸಾವಿರ ಮತಗಳ ಎಣಿಕೆ ಬಾಕಿ ಉಳಿದಿದ್ದು, 4 ಇವಿಎಂಗಳು ಕೈಕೊಟ್ಟಿವೆ.
03:37 PM
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಭರ್ಜರಿ ಜಯಗಳಿಸಿದ್ದಾರೆ.
03:35 PM
ಮಂಡ್ಯದಲ್ಲಿ 15ನೇ ಸುತ್ತಿನ ಮತ ಎಣಿಕೆ ಅಂತ್ಯ. ಸುಮಲತಾ ಗೆಲುವು ಬಹುತೇಕ ಪಕ್ಕಾ.
03:34 PM
28ಕ್ಕೆ ವಾರಣಾಸಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿರುವ ನರೇಂದರ ಮೋದಿ.
03:33 PM
ಇಷ್ಟು ಕಡಿಮೆ ಸೀಟು ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ – ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೆಳಿಕೆ.
03:29 PM
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರಿಗೆ 54910 ಮತಗಳ ಭರ್ಜರಿ ಮುನ್ನಡೆ.
03:27 PM
ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾಗಲಿರುವ ರಕ್ಷಾ ಅಧ್ಯಕ್ಷ ವ್ಲಾದಿಮಿರ್ ಪುತಿನ್.
03:26 PM
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ.
03:13 PM
ಉನ್ನಾವೋ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ 396425 ಮತಗಳ ಮುನ್ನಡೆಯನ್ನು ದಾಖಲಿಸಿದ್ದಾರೆ. ವಾರಣಾಸಿಯಲ್ಲಿ ಪ್ರಧಾನಿ ಮೋದಿ 339412 ಮತಗಳ ಮುನ್ನಡೆಯಲ್ಲಿದ್ದಾರೆ.
03:09 PM
ಉತ್ತರಪ್ರದೇಶದ ಸುಲ್ತಾನ ಪುರದಲ್ಲಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರಿಗೆ 12527 ಮತಗಳ ಮುನ್ನಡೆ.
03:06 PM
ಉತ್ತರಪ್ರದೇಶದ ರಾಂ ಪುರ ಕ್ಷೇತ್ರದಲ್ಲಿ ಅಜಂ ಖಾನ್ (383437) ವಿರುದ್ಧ ಜಯಪ್ರದಾ (249567) ಅವರಿಗೆ ಹಿನ್ನಡೆ.
03:04 PM
ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಅವರಿಗಿಂತ 2 ಲಕ್ಷ ಮತಗಳ ಮುನ್ನಡೆ ದಾಖಲಿಸಿದ್ದಾರೆ.
02:59 PM
ಅಮೇಥಿಯಲ್ಲಿ ಮತ್ತೆ ಸ್ಮೃತಿ ಮುನ್ನಡೆ. ರಾಹುಲ್ ಗಿಂತ 13472 ಮತಗಳಿಂದ ಮುನ್ನಡೆಯಲ್ಲಿರುವ ಬಿಜೆಪಿಯ ಸ್ಮೃತಿ ಇರಾನಿ
02:57 PM
ಮಂಡ್ಯದಲ್ಲಿ ಭಾರೀ ಮುನ್ನಡೆ ಸಾಧಿಸಿದ ಸುಮಲತಾ ಅಂಬರೀಷ್. ನಿಖಿಲ್ ವಿರುದ್ಧ 45 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ.
02:43 PM
ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರಿಗೆ ಭರ್ಜರಿ ಗೆಲುವು. ಸೋಲಿಲ್ಲದ ಸರದಾರ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮೊದಲ ಬಾರಿ ಸೋಲಿನ ರುಚಿ.
02:42 PM
ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್‌ ಜೊಲ್ಲೆಗೆ ಭರ್ಜರಿ ಗೆಲವು. ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿಗೆ ಸೋಲು
02:39 PM
ಲಕ್ನೋದಲ್ಲಿ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಭರ್ಜರಿ ಗೆಲುವು
02:39 PM
ಮಂಡ್ಯದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ಸುಮಲತಾ, ಗೆಲುವಿನತ್ತ ದಾಪುಗಾಲು,40 ಸಾವಿರ ಮತಗಳ ಮುನ್ನಡೆ. ದಿವಂಗತ ಅಂಬರೀಶ್‌ ಅವರ ಭಾವಚಿತ್ರಗಳನ್ನು ಹಿಡಿದು ರಸ್ತೆಗಿಳಿದ ಅಭಿಮಾನಿಗಳು.
02:37 PM
ಪಶ್ಚಿಮ ಬಂಗಾಳದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ಜನತಾ ಪಕ್ಷ. ಒಟ್ಟು 42 ಕ್ಷೇತ್ರಗಳಲ್ಲಿ ಟಿಎಂಸಿ 22, ಬಿಜೆಪಿ 19 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ.
02:23 PM
ರಾಜಕೀಯ ಇನ್ನಿಂಗ್ಸ್ ನಲ್ಲಿ ಗೆಲುವಿನತ್ತ ಗೌತಮ್ ಗಂಭೀರ್. 1 ಲಕ್ಷ 60 ಸಾವಿರಕ್ಕೂ ಹೆಚ್ಚಿನ ಮುನ್ನಡೆಯಲ್ಲಿ ಗಂಭೀರ್.
02:18 PM
ಅಮೇಥಿಯಲ್ಲಿ ಟೈಟ್ ಫೈಟ್. ರಾಹುಲ್ ಗಿಂತ 10 ಸಾವಿರ ಮತಗಳಿಂದ ಮುನ್ನಡೆಯಲ್ಲಿರುವ ಬಿಜೆಪಿಯ ಸ್ಮೃತಿ ಇರಾನಿ
02:08 PM
ಉಪ ಚುನಾವಣೆ: ಕುಂದಗೋಳದಲ್ಲಿ ಕಾಂಗ್ರೆಸ್ ನ ಕುಸುಮಾ ಶಿವಳ್ಳಿ ಅವರಿಗೆ ಗೆಲುವು
02:06 PM
ಚಿಂಚೊಳ್ಳಿ ವಿಧಾನಸಭಾ ಉಪ ಚುನಾವಣೆ: ಬಿಜೆಪಿಯ ಅವಿನಾಶ್ ಜಾಧವ್ ಗೆಲುವು
02:01 PM
350ರ ಗಡಿ ದಾಟಿದ ಎನ್.ಡಿ.ಎ. ಮೈತ್ರಿಕೂಟ.
02:00 PM
ಪಂಜಾಬ್ ನ ಗುರುದಾಸ್ ಪುರ ಕ್ಷೇತ್ರದಲ್ಲಿ ಬಿಜೆಪಿಯ ಸನ್ನಿ ಡಿಯೋಲ್ (444497) ಮುನ್ನಡೆ ಸಾಧಿಸಿದ್ದಾರೆ.
01:57 PM
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ 266008 ಮತಗಳ ಭಾರೀ ಮುನ್ನಡೆ.
01:56 PM
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರಿಗೆ 20443 ಮತಗಳ ಮುನ್ನಡೆ.
01:55 PM
ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ವಿರುದ್ಧ ಬಿ.ವೈ. ರಾಘವೇಂದ್ರ ಅವರು 2 ಲಕ್ಷಕ್ಕೂ ಅಧಿಕ ಮತಗಳ ಭಾರೀ ಮುನ್ನಡೆ ಸಾಧಿಸಿದ್ದಾರೆ.
01:53 PM
ತುಮಕೂರಿನಲ್ಲಿ ದೇವೇಗೌಡರ ಎದುರು ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ಬಸವರಾಜ್. ಒಟ್ಟಾರೆ 27841 ಮತಗಳ ಮುನ್ನಡೆ.
01:51 PM
ಪಂಜಾಬ್ ನ ಆನಂದಪುರ್ ಸಾಹೀಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮನೀಶ್ ತಿವಾರಿ (354489) ಮುನ್ನಡೆ.
01:47 PM
ಗುಜರಾತ್ ನ ಗಾಂಧಿನಗರದಲ್ಲಿ ಭರ್ಜರಿ ಗೆಲುವಿನತ್ತ ಅಮಿತ್ ಶಾ (725035). ಎದುರಾಳಿ ಅಭ್ಯರ್ಥಿ ಕಾಂಗ್ರೆಸ್ ನ ಡಾ. ಸಿ. ಜೆ. ಚಾವ್ಡಾ ಅವರಿಗೆ 270338 ಮತಗಳು.
01:45 PM
ಕಲ್ಬುರ್ಗಿಯಲ್ಲಿ ಖರ್ಗೆ ವಿರುದ್ಧ ಜಾಧವ್ ಅವರಿಗೆ 82162 ಮತಗಳ ಭಾರೀ ಮುನ್ನಡೆ.