07:08 PM IST
ರಾಜ್ಯದಲ್ಲಿ ಇಂದು ಹೊಸದಾಗಿ 6 ಕೋವಿಡ್-19 ಪ್ರಕರಣಗಳು ಪತ್ತೆ, ಒಟ್ಟಾರೆ ಪ್ರಕರಣ 26ಕ್ಕೆ ಏರಿಕೆ.
07:00 PM IST
ಬೆಂಗಳೂರಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ.
06:59 PM IST
ನಾಳೆಯಿಂದ ಮಾರ್ಚ್ 31ರವರೆಗೆ ದೆಹಲಿ ಲಾಕ್ ಡೌನ್
06:53 PM IST
ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚನೆ.
06:53 PM IST
9 ಜಿಲ್ಲೆಗಳಲ್ಲಿ ಸರಕಾರಿ ಕ್ಯಾಂಟಿನ್ ಗಳು ತೆರೆದಿರುತ್ತವೆ.
06:52 PM IST
ಬೆಂಗಳೂರಿನಲ್ಲಿ ನಾಳೆಯಿಂದ 50% ಬಿ.ಎಂ.ಟಿ.ಸಿ. ಬಸ್ಸುಗಳು ಮಾತ್ರ ಓಡಾಟವನ್ನು ನಡೆಸಲಿವೆ. ಆದರೆ ಎ.ಸಿ. ಬಸ್ಸುಗಳ ಸಂಚಾರ ಇರುವುದಿಲ್ಲ.
06:51 PM IST
ಲಾಕ್ ಡೌನ್ ಆಗಿರುವ 9 ಜಿಲ್ಲೆಗಳಲ್ಲಿ ಹಾಲು, ತರಕಾರಿ, ಪೆಪರ್, ದಿನಸಿ ಮತ್ತು ತುರ್ತು ಸೇವೆಗಳು ಲಭ್ಯವಿರುತ್ತದೆ.
06:49 PM IST
ಲಾಕ್ ಡೌನ್ ಆಗಿರುವ ಕರ್ನಾಟಕದ 9 ಜಿಲ್ಲೆಗಳ ಸಂಪರ್ಕ ಕಡಿತ.
05:33 PM IST
ಸೋಮವಾರ ನಿಗದಿಯಾಗಿದ್ದ ದ್ವಿತೀಯ ಪರೀಕ್ಷೆ ಮುಂದೂಡಿಕೆ
05:13 PM IST
ಜನತಾ ಕರ್ಫ್ಯೂ ಬೆಂಬಲಿಸಿ ಚಪ್ಪಾಳೆ ತಟ್ಟಿದ ಸಿಎಂ ಬಿ.ಎಸ್ ಯಡಿಯೂರಪ್ಪ
04:58 PM IST
ದೇಶಾದ್ಯಂತ ಮೊಳಗಿದ ಚಪ್ಪಾಳೆ ಸದ್ದು: ಪ್ರಧಾನಿ ಕರೆಗೆ ಭರಪೂರ ಬೆಂಬಲ
04:53 PM IST
ಪ್ರಧಾನಿ ಮೋದಿ ಕರೆಕೊಟ್ಟ ಜನತಾ ಕರ್ಫ್ಯೂಗೆ ಬೆಳಗ್ಗೆ 7 ಗಂಟೆಯಿಂದ ವ್ಯಾಪಕ ಬೆಂಬಲ: ಚಪ್ಪಾಳೆ ಜಾಗೃತಿಗೆ ಓಗೊಟ್ಟ ಜನತೆ
04:51 PM IST
ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಚಪ್ಪಾಳೆ ಜಾಗೃತಿಗೆ ಕ್ಷಣಗಣನೆ
04:44 PM IST
ಕೋವಿಡ್-19 ತಡೆಗಟ್ಟಲು ಹಗಲು ರಾತ್ರಿ ಜನಸೇವೆ ಮಾಡುತ್ತಿರುವ ಕರ್ನಾಟಕದ ಎಲ್ಲಾ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಸಹಕರಿಸಿ, ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಿ ಒಂದು ಮತ್ತೊಮ್ಮೆ ವಿನಂತಿಸುತ್ತೇನೆ- ಶ್ರೀರಾಮುಲು
04:41 PM IST
ಕೋವಿಡ್-19 ತಡೆಗೆ ಪ್ರತ್ಯೇಕ ಆಸ್ಪತ್ರೆ, 111 ಲ್ಯಾಬ್ ಗಳಲ್ಲಿ ಪರೀಕ್ಷೆ, ದೇಶಾದ್ಯಂತ 70 ಸಾವಿರ ಮಂದಿಯ ಆರೋಗ್ಯ ತಪಾಸಣೆ: ಆರೋಗ್ಯ ಇಲಾಖೆ
04:38 PM IST
ಮೈಸೂರು ನಗರದ ಎಲ್ಲಾ ಫ್ಲೈ ಓವರ್ ಗಳಲ್ಲಿ ಸಂಚಾರ್ ಬಂದ್: ಅಪಘಾತ ಸಂಭವಿಸಿದ ಹಿನ್ನಲೆ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕ್ರಮ
04:28 PM IST
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇವೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ
04:26 PM IST
ನಾಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಬಸ್ ಸೇವೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
04:20 PM IST
ತೆಲಂಗಾಣದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಕೋವಿಡ್ -19 ಸೋಂಕು ಪತ್ತೆ: ಒಟ್ಟಾರೆ ಪ್ರಕರಣ 22ಕ್ಕೆ ಏರಿಕೆ
04:08 PM IST
ಕೊರೊನಾ ಪರೀಕ್ಷೆಗೆ ಗರಿಷ್ಠ ₹4,500: ಖಾಸಗಿ ಲ್ಯಾಬ್‌ಗಳಿಗೆ ಕೇಂದ್ರದ ಖಡಕ್‌ ಮಾರ್ಗಸೂಚಿ!
04:01 PM IST
ಕೋವಿಡ್-19 ಗೆ ಗುಜರಾತ್ ನಲ್ಲಿ ಒಬ್ಬ ವ್ಯಕ್ತಿ ಬಲಿ: ದೇಶದಲ್ಲಿ ಈ ಸೋಂಕಿಗೆ ಮೃತರಾದವರ ಸಂಖ್ಯೆ 7ಕ್ಕೆ ಏರಿಕೆ
03:58 PM IST
ಮಹಾರಾಷ್ಟ್ರದಲ್ಲಿ 144 ಸೆಕ್ಷನ್ ಜಾರಿಗೆ, ಸೋಮವಾರ ಬೆಳಗ್ಗೆಯವರೆಗೂ ಜನತಾ ಕರ್ಫ್ಯೂ ವಿಸ್ತರಣೆ
03:55 PM IST
ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವ ಸಚಿವ ಸುರೇಶ್ ಕುಮಾರ್: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಕೆಲವೇ ಹೊತ್ತಿನಲ್ಲಿ ಅಂತಿಮ ನಿರ್ಧಾರ ಪ್ರಕಟ ಸಾಧ್ಯತೆ
03:44 PM IST
ಶೇ.84% ಜನರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ: ಗೃಹ ಸಚಿವ ಬೊಮ್ಮಾಯಿ ಹೇಳಿಕೆ
03:37 PM IST
ದೇಶಾದ್ಯಂತ 75 ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
03:33 PM IST
ಒಡಿಶಾ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
03:29 PM IST
ಲಾಕ್ ಡೌನ್ ಆದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ
03:28 PM IST
ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ವಿಧಾನ ಮಂಡಲ ಅಧಿವೇಶನ ನಿಗದಿತ ಸಮಯದಲ್ಲಿ ನಡೆಯಲಿದೆ: ಬಸವರಾಜ್ ಬೊಮ್ಮಾಯಿ
03:27 PM IST
ನಾಳೆ ರಾಜ್ಯದಲ್ಲಿ ಸಂಪೂರ್ಣ ಸಾರಿಗೆ ರದ್ದು
03:24 PM IST
ರಾಜ್ಯದ 9 ಜಿಲ್ಲೆಗಳು ನಾಳೆಯಿಂದ ಮಾ.31ರವೆರಗೂ ಸಂಪೂರ್ಣ ಬಂದ್
03:23 PM IST
ಬೆಳಗಾವಿ, ಮಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೂಡ ಸಂಪೂರ್ಣ ಲಾಕ್ ಡೌನ್
03:12 PM IST
ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ ಶಿಕ್ಷಕರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ
03:09 PM IST
ಬೆಂಗಳೂರಿನಲ್ಲಿ ಇಂದು ರಾತ್ರಿ ರಾತ್ರಿ 9ರಿಂದ 12ರವರೆಗೂ ನಿಷೇಧಾಜ್ಞೆ, ಜನರು ಗುಂಪು ಸೇರುವಂತಿಲ್ಲ; ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ
03:02 PM IST
ಅಗತ್ಯ ಸೇವೆಗಳಾದ ಹಾಲು-ಪೇಪರ್, ದಿನಸಿ ವಸ್ತುಗಳು, ಮೆಡಿಕಲ್ ಸ್ಟೋರ್ ಎಂದಿನಂತೆ ಕಾರ್ಯನಿರ್ವಹಣೆ: ರಾಜ್ಯದ ಜನರು ಭಯಪಡುವ ಅಗತ್ಯವಿಲ್ಲ-ರಾಜ್ಯ ಸರ್ಕಾರ
03:00 PM IST
ನಾಳೆಯಿಂದ ರಾಜ್ಯದ 6 ಜಿಲ್ಲೆಗಳಲ್ಲಿ ಗೂಡ್ಸ್ ವಾಹನ ಸಂಚಾರ, ಬಾರ್, ರೆಸ್ಟೋರೆಂಟ್ , ಕ್ಲಬ್, ಪಬ್, ಬಸ್ ಸಂಚಾರ, ಆಟೋ -ಕ್ಯಾಬ್ ಸೇವೆ, ಮಾಲ್ ಎಲ್ಲವೂ ಸ್ಥಗಿತ- ತುರ್ತು ಸೇವೆಗಳು ಮಾತ್ರ ಲಭ್ಯ
02:56 PM IST
ದೇಶಾದ್ಯಂತ ಮೆಟ್ರೋ ಸೇವೆ ಮಾ. 31 ರವರೆಗೂ ಬಂದ್ . ಟಿಕೆಟ್ ಬುಕ್ ಮಾಡಿದವರಿಗೆ ಹಣ ವಾಪಾಸ್
02:53 PM IST
ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ 6 ಜಿಲ್ಲೆಗಳು ಮಾ.31ರವರೆಗೂ ಬಂದ್: ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯ
02:51 PM IST
ಬೆಂಗಳೂರು,ಕಲಬುರಗಿ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಧಾರವಾಡ – ಈ ಜಿಲ್ಲೆಗಳು ಮಾರ್ಚ್ 31ರವರೆಗೂ ಸಂಪೂರ್ಣ ಲಾಕ್ ಡೌನ್
02:47 PM IST
ಪಂಜಾಬ್ ನಲ್ಲಿ ಮತ್ತೆ ಸೋಂಕು ಪೀಡಿತರ ಸಂಖ್ಯೆ 7ಕ್ಕೆ ಏರಿಕೆ: ಒಟ್ಟಾರೆಯಾಗಿ 21 ಜನರಿಗೆ ಮಾರಕ ವೈರಸ್ ತಗುಲಿರುವುದು ದೃಢ.
02:43 PM IST
ಭಾರತ ಸೇರಿದಂತೆ 35 ರಾಷ್ಟ್ರಗಳು ಲಾಕ್, 3 ಲಕ್ಷ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ
02:33 PM IST
ನಾಳೆಯಿಂದ ಕರ್ನಾಟಕ ದಿಂದ ಹೊರ ರಾಜ್ಯಗಳಿಗೆ ತೆರಳುವ ಎಲ್ಲ ಬಸ್ ಗಳ ಸಂಚಾರ ರದ್ದು. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ‌ಮಹಾರಾಷ್ಟ್ರ, ಗೋವಾ ರಾಜ್ಯಗಳ ಬಸ್ ಸಂಚಾರ ಸ್ಥಗಿತ.
02:27 PM IST
ಚಿಕ್ಕಮಗಳೂರು ನಗರದಲ್ಲಿ ಸೈಕಲ್ ಸವಾರಿ ಮಾಡಿದ ಸಚಿವ ಸಿ ಟಿ ರವಿ
02:18 PM IST
ಮುಂಬೈನ ಎಲ್ಲಾ ಲೋಕಲ್ ಟ್ರೈನ್ ಗಳನ್ನೂ ಮಾರ್ಚ್ 31ರವರೆಗೆ ರದ್ದು ಮಾಡಲಾಗಿದೆ.
02:01 PM IST
ಸೋಮವಾರ ಮುಂಜಾನೆ ಐದು ಗಂಟೆಯವರೆಗೆ ಜನತಾ ಕರ್ಫ್ಯೂ ಮುಂದುವರಿಸಲು ಆದೇಶಿಸಿದ ಜಾರ್ಖಂಡ್ ಮತ್ತು ತಮಿಳುನಾಡು ಸರ್ಕಾರ
01:44 PM IST
ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ: ಚೆಕ್ ಪಾಯಿಂಟ್ ಗಳಲ್ಲಿ ಕಟ್ಟೆಚ್ಚರ
01:28 PM IST
ಪುದುಚೇರಿಯಲ್ಲಿ ಸೆಕ್ಷನ್ 144ಗೇ ಆದೇಶಿಸಿದ ಸ್ಥಳೀಯ ಮುಖ್ಯಮಂತ್ರಿ: ನಾರಾಯಣ ಸ್ವಾಮಿ
01:20 PM IST
ಕೋವಿಡ್-19 ಭೀತಿ ಹಿನ್ನಲೆ ಲೋಕಸಭಾ ಅಧಿವೇಶನಕ್ಕೆ ತಮ್ಮ ಸಂಸದರನ್ನು ಕಳುಹಿಸದೇ ಇರಲು ತೃಣಮೂಲ ಕಾಂಗ್ರೆಸ್ ನಿರ್ಧಾರ
01:15 PM IST
ದೇಶದ ಎಲ್ಲಾ ಪ್ಯಾಸೆಂಜರ್ ರೈಲುಗಳನ್ನು ಮಾರ್ಚ್ 31ರವರೆಗೆ ರದ್ದು ಮಾಡಲಾಗಿದೆ.
12:55 PM IST
ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ: ಶ್ರೀರಾಮುಲು ಟ್ವೀಟ್
12:53 PM IST
ಕಡಬ, ಮಂಡೆಕೋಲು‌ ಪೇಟೆ ಜನತಾ ಕರ್ಫ್ಯೂ ಗೆ ಸ್ತಬ್ದ; ಅಂಗಡಿ ಮುಂಗಟ್ಟು ಬಂದ್; ಜನಸಂಚಾರವಿಲ್ಲದೆ ಬಿಕೊ ಎನ್ನುತ್ತಿರುವ ರಸ್ತೆಗಳು
12:53 PM IST
ತಮಿಳುನಾಡಿಗೆ ಬಂದಿರುವ ಸ್ಪೇನ್ ದೇಶದ ಪ್ರವಾಸಿಗನಲ್ಲಿ ಕೋವಿಡ್-19 ಸೋಂಕು ಪತ್ತೆ
12:44 PM IST
ಮಹಾರಾಷ್ಟ್ರದಲ್ಲಿ 74ಕ್ಕೇರಿದ ಪಾಸಿಟಿವ್ ಕೋವಿಡ್-19 ಪ್ರಕರಣ.
12:43 PM IST
ಪಂಜಾಬ್ ರಾಜ್ಯದಲ್ಲಿ ಲಾಕ್ ಡೌನ್ ಆದೇಶ
12:39 PM IST
ಕಾರವಾರ, ಮಂಗಳೂರು, ಶಿವಮೊಗ್ಗ, ಮುಧೋಳ ಹೀಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಜನರಿಂದ ಉತ್ತಮ ಸ್ಪಂದನೆ. ನಾವೆಲ್ಲರೂ ಒಂದಾಗಿ ಕೋವಿಡ್19 ಎಂಬ ಮಹಾಮಾರಿ ಹರಡುವುದನ್ನು ತಡೆಯೋಣ: ಬಿ ಶ್ರೀರಾಮುಲು
12:37 PM IST
ಪಾಟ್ನಾದಲ್ಲಿ ಶನಿವಾರ ಸಾವನ್ನಪ್ಪಿದ್ದ 36 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
12:36 PM IST
ನಾಳೆಯಿಂದ ಸಾರ್ವಜನಿಕ ವಾಹನ ಬಳಸದಂತೆ ಕಾರ್ಮಿಕ ಇಲಾಖೆಯಿಂದ ತಮ್ಮ ಸಿಬ್ಬಂದಿಗೆ ಸೂಚನೆ
12:33 PM IST
ಧಾರವಾಡಕ್ಕೆ ಬರುವ ಹೊರರಾಜ್ಯದ ಬಸ್ ಗಳಿಗೆ ಮಾರ್ಚ್ 31ರವರೆಗೂ ನಿಷೇಧ: ಜಿಲ್ಲಾಧಿಕಾರಿ ದೀಪಾ ಚೊಳನ್ ಆದೇಶ
12:22 PM IST
ಮೆಜೆಸ್ಟಿಕ್ ಗೆ ಬರಬೇಕಿದ್ದ ಎಲ್ಲಾ ರೈಲುಗಳಿಗೆ ತಡೆ. ರೈಲು ಸಂಚಾರವಿಲ್ಲದೆ ಪ್ರಯಾಣಿಕರ ಪರದಾಟ.
11:30 AM IST
ನಿರ್ಜನ ರಸ್ತೆ ಇದ್ದರೂ ವಿಜಯಪುರದಲ್ಲಿ ಆ್ಯಂಬುಲೆನ್ಸ್ ಹಾಗೂ ಕಾರು ಮಧ್ಯೆ ಅಪಘಾತ
11:21 AM IST
ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಕೋವಿಡ್-19 ವೈರಸ್ ಕಾರಣದಿಂದಾಗಿ ದೇವರ ದರ್ಶನವನ್ನು ನಿಲ್ಲಿಸಲಾಗಿದೆ.
11:20 AM IST
ಮಂಗಳೂರಿನಲ್ಲಿ ಕ್ಲಿನಿಕ್ ಗಳು ಮುಚ್ಚಿವೆ. ಆಸ್ಪತ್ರೆ ಗಳು ತೆರೆದಿದ್ದು, ತುರ್ತು ಅಗತ್ಯತೆ ಇರಿವ ವೈದ್ಯರು ಸಹಿತ ಕೆಲವು ವೈದ್ಯರಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ.
11:04 AM IST
ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೋಟೆಲಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ. ಕ್ರಮ ಕೈಗೊಳ್ಳಿ: ಎಚ್.ಕೆ. ಪಾಟೀಲ್ ಟ್ವೀಟ್
11:01 AM IST
ಸದಾ ಜನ ಜಂಗುಳಿಯಾಗಿದ್ದ ಮಲ್ಪೆ ಮೀನುಗಾರಿಕೆ ಬಂದರು ಸ್ತಬ್ದವಾಗಿದೆ.
11:00 AM IST
ಕಿಷ್ಕಿಂದಾ ಅಂಜನಾದ್ರಿಯ ಕೋತಿಗಳ ಮೇಲೂ ಕೋವಿಡ್-19 ಎಫೆಕ್ಟ್ ಬೀರಿದ್ದು, ಪ್ರವಾಸಿಗರಿಲ್ಲದ ಕಾರಣ ಆಹಾರವಿಲ್ಲದೆ ಪರದಾಟ ಅನುಭವಿಸುತ್ತಿದೆ.
11:00 AM IST
ಕೇರಳ - ಕರ್ನಾಟಕ ಗಡಿ ಪ್ರದೇಶ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ. ಕೇರಳ ರಾಜ್ಯದ ವಾಹನಗಳಿಗೆ ಪ್ರವೇಶವಿಲ್ಲ.
10:41 AM IST
ಈ ಕರ್ಫ್ಯೂನಲ್ಲಿ ನಾವೆಲ್ಲರೂ ಭಾಗಿಯಾಗೋಣ. ಇದು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ: ಪ್ರಧಾನಿ ಮೋದಿ
10:35 AM IST
ಕೋವಿಡ್-19ಗೆ ಭಾರತದಲ್ಲಿ 5ನೇ ಬಲಿ; ಮುಂಬೈ ಆಸ್ಪತ್ರೆಯಲ್ಲಿ 56 ವರ್ಷದ ವ್ಯಕ್ತಿ ಮೃತ
10:20 AM IST
ಇಟಲಿಯಿಂದ 263 ವಿದ್ಯಾರ್ಥಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮನ
10:10 AM IST
ಜನತಾ ಕರ್ಫ್ಯೂ ಬೆಂಬಲಿಸಿ ತೆಲಂಗಾಣದಲ್ಲಿ ವಾಹನ ಸಂಚಾರ ನಿಷೇಧ: ಗಡಿದಾಟಲು ಸಾಧ್ಯವಾಗದೇ ಶಕ್ತಿನಗರದಲ್ಲಿ ಜಮಾಯಿಸಿದ ಸರಕು ವಾಹನಗಳು
09:53 AM IST
ಜನತಾ ಕರ್ಫ್ಯೂಗೆ 4 ಲಕ್ಷಕ್ಕಿಂತಲೂ ಹೆಚ್ಚು ಜನರ ಬೆಂಬಲ
09:41 AM IST
ಜನತಾ ಕರ್ಫ್ಯೂಗೆ ಕರಾವಳಿ ಬೆಂಬಲ: ಬಸ್, ರೈಲು ಬಂದ್, ಕಡಲಿಗಿಳಿಯದ ಮೀನುಗಾರಿಕಾ ಬೋಟ್ ಗಳು
09:37 AM IST
ಬೆಂಗಳೂರಿನ ರಸ್ತೆಯಲ್ಲಿ ಓಡಾಡುತ್ತಿದ್ದ ಕೋವಿಡ್19 ಶಂಕಿತನನ್ನು ಅ್ಯಂಬುಲೆನ್ಸ್ ಮೂಲಕ ಶಿಫ್ಟ್ ಮಾಡಿದ ಆರೋಗ್ಯ ಸಿಬ್ಬಂದಿಗಳು
09:34 AM IST
ಕಲಬುರುಗಿಯಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ: ಬಹುತೇಕ ರಸ್ತೆಗಳು ಜನರಿಲ್ಲದೆ ಭಣಗುಟ್ಟಿವೆ.
09:28 AM IST
ವಿಮಾನದಲ್ಲಿ ಸ್ಪ್ರೇ ಮಾಡುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ: ಬಸವರಾಜ್ ಬೊಮ್ಮಾಯಿ
09:24 AM IST
ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ
09:17 AM IST
ಶಿರೂರಿನಲ್ಲಿ ಮಂಬೈಯಿಂದ ಬರುವ ಬಸ್ಸುಗಳ ತಪಾಸಣೆ. ಟೋಲ್ ಗೇಟ್ ಬಳಿ ಆರೋಗ್ಯ ಇಲಾಖೆ ಮುಂಜಾನೆಯಿಂದಲೇ ತಪಾಸಣೆ
09:11 AM IST
ಜನತಾ ಕರ್ಫ್ಯೂಗೆ ಮಂಗಳೂರು ಮೀನುಗಾರಿಕಾ ಬಂದರು ಸಂಪೂರ್ಣ ಸ್ತಬ್ಧ: ಜನ ಸಂಚಾರವೇ ಇಲ್ಲದೇ ಖಾಲಿ ಹೊಡೆಯುತ್ತಿದೆ ಮೀನುಗಾರಿಕಾ ಬಂದರು
09:08 AM IST
ಬೆಂಗಳೂರಿನ ರಸ್ತೆಯಲ್ಲಿ ಕೋವಿಡ್-19 ಶಂಕಿತನ ಓಡಾಟ, ಇತ್ತೀಚಿಗಷ್ಟೇ ದುಬೈನಿಂದ ಮರಳಿದ್ದ ಚೆನೈ ಮೂಲದ ವ್ಯಕ್ತಿ
09:03 AM IST
ಇಂದು ರಾತ್ರಿ 10 ಗಂಟೆಯವರೆಗೂ ಇಂಟರ್ ಸಿಟಿ ಮತ್ತು ಪ್ಯಾಸೆಂಜರ್ ರೈಲು ಸೇವೆ ರದ್ದು ಮಾಡಿದ ಭಾರತೀಯ ರೈಲ್ವೆ.
08:59 AM IST
ಧಾರವಾಡದಲ್ಲಿ ಓರ್ವ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ
08:55 AM IST
ಈ ದಿನ ಮುಂಜಾನೆ 7 ಗಂಟೆಯಿಂದ 9 ಗಂಟೆಯವರೆಗೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನತಾ ಕರ್ಪ್ಯೂ. ನನ್ನ ಇಂದಿನ ಕೆಲಸ ಮನೆಯಿಂದಲೇ ಎಂದು ಟ್ವೀಟ್ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು
08:52 AM IST
ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಆದೇಶದ ನೀಡಿದ ಹಿನ್ನಲೆಯಲ್ಲಿ, ದೇಶಾದ್ಯಂತ ಜನಸಂಪರ್ಕ ಕಡಿಮೆಯಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
08:45 AM IST
ಕೊಡಗು ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ, ಸ್ವಯಂಪ್ರೇರಿತರಾಗಿ ಮನೆಯಲ್ಲಿ ಉಳಿದುಕೊಂಡ ಜನರು
08:44 AM IST
ಯಾವುದೇ ಅಗತ್ಯ ವಸ್ತುಗಳಿಗೆ ಭಯಬೇಡ, 2 ತಿಂಗಳ ಪಡಿತರವನ್ನೂ ಒಟ್ಟಿಗೆ ಕೊಡುತ್ತೇವೆ. ಸಿಎಂ ಯಡಿಯೂರಪ್ಪ
08:38 AM IST
ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರಲ್ಲ, ತುರ್ತು ಚಿಕಿತ್ಸೆ ಮಾತ್ರ ಲಭ್ಯ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವವರು ಆಸ್ಪತ್ರೆಗೆ ಬರಬೇಡಿ: ಆರೋಗ್ಯ ಇಲಾಖೆಯ ಅಧಿಕಾರಿಗಳ ಮನವಿ
08:30 AM IST
ಧಾರವಾಡದಲ್ಲಿ ಜನತಾ ಕರ್ಫ್ಯೂ ಗೆ ಉತ್ತಮ ಸ್ಪಂದನೆ:ಜಿಲ್ಲೆಯ ಹಳ್ಳಿಗಳೂ ಕೂಡ ಸಂಪೂರ್ಣ ಸ್ತಬ್ಧವಾಗಿದೆ.
08:27 AM IST
15 ದಿನ ಹಳ್ಳಿಗಳಿಗೆ ತೆರಳದಂತೆ ಸಿಎಂ ಯಡಿಯೂರಪ್ಪ ಮನವಿ
08:25 AM IST
ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಮತ್ಯ್ಸಗಂಧ ಎಕ್ಸ್ ಪ್ರೆಸ್. ಎಲ್ಲಾ ಪ್ರಯಾಣಿಕರ ಸ್ಕ್ರೀನಿಂಗ್. ಮೂರು ದಿನಗಳ ಹಿಂದೆ ಹೊರಟಿದ್ದ ರೈಲು.
08:19 AM IST
ಚುನಾವಣೆಗಳಿದ್ದರೇ ಅದನ್ನು ಮುಂದೂಡಲಾಗುವುದು, ದೇಶಿಯ ಪ್ರಯಾಣಿಕರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು : ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ
08:16 AM IST
SSLC ಪರೀಕ್ಷೆ ಸೇರಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡುತ್ತೇವೆ. ಕರ್ನಾಟಕದ ಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು: ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ
08:06 AM IST
ಜನತಾ ಕರ್ಫ್ಯೂಗೆ ಕೋಟೆನಾಡು ಚಿತ್ರದುರ್ಗ ಸ್ತಬ್ಧ. ತರಕಾರಿ ಮಾರುಕಟ್ಟೆ, ಅಂಗಡಿ, ಹೊಟೇಲ್ ಗಳು ಬಂದ್
08:05 AM IST
ಮೆಜೆಸ್ಟಿಕ್ ನಲ್ಲಿ ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ: ಒಂದೆರೆಡು ಬಸ್ ಬಿಟ್ಟರೆ ಮೆಜೆಸ್ಟಿಕ್ ಸಂಪೂರ್ಣ ಬಂದ್
08:03 AM IST
ಚಿಕ್ಕಬಳ್ಳಾಪುರದಲ್ಲಿ ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಣೆ
08:01 AM IST
ತುಮಕೂರು ಜಿಲ್ಲೆಯಲ್ಲಿ 600 ಕೆಎಸ್ ಆರ್ ಟಿಸಿ ಸ್ಥಗಿತ, ಖಾಸಗಿ ಬಸ್ ಸಂಚಾರವೂ ಸ್ತಬ್ಧ
07:58 AM IST
ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಡಿಸಿಎಂ ಅಶ್ವಥ್ ನಾರಾಯಣ. ದ್ವಿಚಕ್ರ ವಾಹನದಲ್ಲಿ ಆಗಮನ
07:55 AM IST
ಹುಬ್ಬಳ್ಳಿಯಲ್ಲಿ ಬಂದ್ ಗೆ ಬೆಂಬಲ, ಆಟೋ, ಸಾರಿಗೆ ಸೇವೆ ಸಂಪೂರ್ಣ ಸ್ಥಬ್ಧ
07:51 AM IST
ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಸರಳ ವಿವಾಹ: ತಂದೆಯ ಅನಾರೋಗ್ಯ ಹಿನ್ನಲೆಯಲ್ಲಿ ಇಂದೇ ಮದುವೆ ಕಾರ್ಯಕ್ರಮ ಆಯೋಜನೆ
07:46 AM IST
40 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆ.ಆರ್ ಮಾರ್ಕೆಟ್ ಬಂದ್: ಬಿಬಿಎಂಪಿ ಆರೋಗ್ಯ ಅಧಿಕಾರಿ ನಾಗರಾಜ್ ಹೇಳಿಕೆ
07:44 AM IST
ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಸೈಕಲ್ ಸವಾರಿ, ಜನತಾ ಕರ್ಫ್ಯೂ ವೀಕ್ಷಿಸುತ್ತಿರುವ ಸಚಿವರು
07:39 AM IST
ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಣೆ
07:36 AM IST
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಪ್ರಯಾಣಿಕರು, ಟ್ಯಾಕ್ಸಿಗಳು ಸಿಗದ ಕಾರಣ ಮುನ್ನೇಚ್ಚರಿಕಾ ಕ್ರಮ.
07:33 AM IST
ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು, ಪೇಪರ್, ಮೆಡಿಕಲ್ ಅಂಗಡಿಗಳು. ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋರಿಕ್ಷಾ, ಬಸ್ ಸಂಚಾರ ಸಂಪೂರ್ಣ ಸ್ಥಗಿತ
07:27 AM IST
ಬಂದ್ ನಡುವೆಯೂ ಕೇರಳದಿಂದ ಕರ್ನಾಟಕಕ್ಕೆ ಬರುತ್ತಿರುವ ಜನರು, ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ
07:26 AM IST
ಮಂಗಳೂರಿನಲ್ಲಿ ಜನತಾ ಕರ್ಪ್ಯೂ ಸಂಪೂರ್ಣ ಬೆಂಬಲ. ಹಾಲು ಪೇಪರ್ ಮಾರಾಟ ಯಾಥಾಸ್ಥಿತಿ. 7 ಗಂಟೆಗೂ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ. ಮುಂಜಾನೆ ನಾಲ್ಕು ಗಂಟೆಗೇ ಆರಂಭಗೊಂಡ ಹಾಲು ಪೇಪರ್ ಮಾರಾಟ.
07:22 AM IST
ಜನತಾ ಕರ್ಫ್ಯೂ ಹಿನ್ನಲೆ ಬೆಂಗಳೂರಿನ ಎಲ್ಲಾ ಹೊಟೇಲ್, ರೆಸ್ಟೋರೆಂಟ್ ಬಂದ್, ರಾಜ್ಯದಲ್ಲಿ ಎಲ್ಲಾ ರೈಲು ಸೇವೆಗಳು ಸ್ಥಬ್ಧ
07:13 AM IST
ಜನತಾ ಕರ್ಫ್ಯೂ ಮಧ್ಯೆ ಬೆಂಗಳೂರಿನಲ್ಲಿ ಸರಳ ಮದುವೆ. ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿ ವಿವಾಹ
06:39 AM IST
ಬಳ್ಳಾರಿಯಲ್ಲಿ ಜನತಾ ಕರ್ಫ್ಯೂಗೆ ಜನರಿಗೆ ಅಭೂತಪೂರ್ವ ಬೆಂಬಲ, ಕಲಬುರಗಿಯಲ್ಲಿ ನಿರ್ಲಕ್ಷ್ಯದಿಂದ ಜನರ ಓಡಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ.
06:37 AM IST
ಬಸ್ ಸಂಚಾರ ಇಲ್ಲದ ಕಾರಣ ಶಿವಮೊಗ್ಗದಲ್ಲಿ ಪ್ರಯಾಣಿಕರು ಲಾರಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ ಇಲ್ಲದ ಹಿನ್ನೆಲೆ ಆಟೋಗಳಿಂದ ಅಧಿಕ ಹಣ ವಸೂಲಿ ಆರೋಪ.
06:36 AM IST
ಬೆಂಗಳೂರು ಬಹುತೇಕ ಬಂದ್. ಬೆಳಗ್ಗೆ 7ಗಂಟೆಯಿಂದ ರಾತ್ರಿ 9ರವರೆಗೆ ಮನೆಯಲ್ಲೇ ಇರುವಂತೆ ಪ್ರಧಾನಿ ಮೋದಿ ಕರೆಗೆ ಸಂಪೂರ್ಣ ಬಹುತೇಕ ಬೆಂಬಲ.
06:33 AM IST
ದೇಶದ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಪ್ರಧಾನಿ ಮತ್ತೊಮ್ಮೆ ಮನವಿ ಮಾಡಿದ್ದಾರೆ
06:32 AM IST
ಪ್ರಧಾನಿ ಮೋದಿ ನೀಡಿರುವ ಸಂದೇಶವನ್ನು ಎಲ್ಲರೂ ಪಾಲಿಸಿ, ಇದನ್ನು ಯಾರೂ ಕಡೆಗಣಿಸದಿರಿ ಎಂದು ಕೊಹ್ಲಿ ದಂಪತಿ ಟ್ವಿಟರ್‌ನಲ್ಲಿ ವೀಡಿಯೋ ಸಂದೇಶ ರವಾನಿಸಿದ್ದಾರೆ.
06:31 AM IST
ಮಣಿಪಾಲ ಸೇರಿದಂತೆ ವಿವಿಧ ಕಡೆಯಲ್ಲಿ ಚಾಟ್ಸ್‌ ಅಂಗಡಿಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಬಂದ್‌ ಮಾಡಲಾಗಿದೆ.
06:30 AM IST
ಕೋವಿಡ್-19 ವೈರಸ್‌ ಇದೀಗ ನೂರಾರು ಸಣ್ಣ ಸಣ್ಣ ವ್ಯಾಪಾರಸ್ಥರ ಹಾಗೂ ವಾಹನ ಚಾಲಕರ ಬದುಕಿನ ಮೇಲೂ ಪ್ರಹಾರ ನಡೆಸಿದೆ.
06:29 AM IST
ಕೊರೊನಾ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಕಚೇರಿಗಳಿಗೆ ತುರ್ತು ಕೆಲಸವಿಲ್ಲದೆ ಸಾರ್ವಜನಿಕರು ಬರುವಂತಿಲ್ಲ.
06:29 AM IST
ರವಿವಾರ ಮನೆಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿರುವ ನಾಗರಿಕರು ಶನಿವಾರ ಪೇಟೆಗೆ ತೆರಳಿ ಅಂದಿಗೆ ಬೇಕಿರುವ ಅಗತ್ಯ ವಸ್ತುಗಳ ಖರೀದಿಸಿ ಸಂಗ್ರಹ.
06:28 AM IST
ಕೋವಿಡ್- 19 ತಡೆಗಟ್ಟುವ ಸಲುವಾಗಿ ರವಿವಾರ ದೇಶದೆಲ್ಲೆಡೆ ಜನತಾ ಕರ್ಫ್ಯೂಗೆ ಸರಕಾರ ಕರೆ.ಈ ಹೋರಾಟದಲ್ಲಿ ಸಾರ್ವಜನಿಕರು ಕೈಜೋಡಿಸಿ, ಯಶಸ್ವಿಗೊಳಿಸಲು ನಿರ್ಧಾರ.
06:27 AM IST
ಕೋವಿಡ್ 19 ಸೋಂಕು ಮಹಾಮಾರಿ ಶೀಘ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ನೀಡಿದ್ದ ಕರೆಗೆ ಅಭೂತಪೂರ್ವ ಬೆಂಬಲ.