09:02 AM IST
ಕೆಂಪು ಕೋಟೆಯಲ್ಲಿ ಒಂದು ಗಂಟೆ 25 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.
09:00 AM IST
ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಭಾಷಣ ಅಂತ್ಯಗೊಳಿಸಿದ ಪ್ರಧಾನಿ ಮೋದಿ.
09:00 AM IST
ಕೋವಿಡ್ ದೊಡ್ಡ ವಿಪತ್ತು ಹೌದು. ಆದರೆ ಆತ್ಮನಿರ್ಭರ ಭಾರತದ ವಿಜಯ ಯಾತ್ರೆಯನ್ನು ತಡೆಯುವಷ್ಟು ದೊಡ್ಡ ವಿಪತ್ತಲ್ಲ: ಮೋದಿ
08:59 AM IST
ನಾವು ಯಾರಿಗಿಂತಲೂ ಕಡಿಮೆಯಿಲ್ಲ. ಎಲ್ಲರಿಗಿಂತ ಎತ್ತರದಲ್ಲಿದ್ದೇವೆ. ನಾವು ಎಷ್ಟು ಶಕ್ತಿಶಾಲಿ ಎಂದು ನಾವು ವಿಶ್ವಕ್ಕೆ ತೋರಿಸಬೇಕಿದೆ.
08:57 AM IST
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ.
08:56 AM IST
ಗಡಿ ಭಾಗದ ಪ್ರದೇಶಗಳನ್ನು ಸುರಕ್ಷತೆಯೊಂದಿಗೆ ಪ್ರಗತಿ ಸಾಧಿಸಲಾಗುತ್ತಿದೆ. ಗಡಿ ಭಾಗ ಮತ್ತು ಕರಾವಳಿ ಭಾಗದಲ್ಲಿ ಎನ್ ಸಿಸಿ ಜಾಲ ವಿಸ್ತಾರ ಮಾಡಲು ಆದ್ಯತೆ ನೀಡಲಾಗುತ್ತಿದೆ.
08:54 AM IST
ಅಂಡಮಾನ್ ನಿಕೋಬಾರ್ ಗಳಲ್ಲಿ ದಿಲ್ಲಿ ರೀತಿಯ ವೇಗದ ಇಂಟರ್ನೆಟ್ ನೀಡಿದ್ದೇವೆ. ಲಕ್ಷದ್ವೀಪದಲ್ಲೂ ಇದೇ ರೀತಿಯ ಇಂಟರ್ನೆಟ್ ಸೌಲಭ್ಯ ನೀಡಲಾಗುವುದು.
08:51 AM IST
ರಕ್ಷಣಾ ಕೇಂದ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಯೋಜನೆ ರೂಪಿಸಿದ್ದೇವೆ. ಯುದ್ಧ ವಿಮಾನಗಳು ಸೇರಿದಂತೆ ಯುದ್ಧ ಸಾಮಾಗ್ರಿಗಳು ಭಾರತದಲ್ಲಿ ಉತ್ಪಾದನೆಯಾಗಲಿದೆ.
08:49 AM IST
ನಮ್ಮೊಂದಿಗೆ ಭೂ ಭಾಗ ಹಂಚಿಕೊಂಡವರು ಮಾತ್ರ ನಮ್ಮ ನೆರೆಯೊರೆಯವರಲ್ಲ. ಬದಲಾಗಿ ನಮ್ಮೊಂದಿಗೆ ಹೃದ್ಯ ಭಾವನೆಗಳನ್ನು ಹಂಚಿಕೊಂಡವರು ಕೂಡಾ ನಮ್ಮ ನೆರೆಹೊರೆಯವರು.
08:47 AM IST
ಭಾರತೀಯ ಸೈನಿಕರ ಶೌರ್ಯ ಎಂತಹದು ಎಂದು ಇಡೀ ವಿಶ್ವವೇ ಲಡಾಖ್ ನಲ್ಲಿ ನೋಡಿದೆ
08:41 AM IST
ಪರಿಸರ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಭಾರತದಲ್ಲಿ ಅರಣ್ಯ ಪ್ರದೇಶಗಳು ಹೆಚ್ಚುತ್ತಿದೆ. ಹುಲಿ ಸಂರಕ್ಷಣೆ, ಆನೆಗಳ ಸರಂಕ್ಷಣೆ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
08:38 AM IST
ಲೇಹ್, ಲಡಾಖ್, ಕಾರ್ಗಿಲ್ ಪ್ರದೇಶಗಳನ್ನು ಕಾರ್ಬನ್ ನ್ಯೂಟ್ರಲ್ ಪ್ರದೇಶವನ್ನಾಗಿ ಮಾಡಲಿದ್ದೇವೆ.
08:37 AM IST
ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಆದ ತಕ್ಷಣ ಚುನಾವಣೆ ನಡೆಯಲಿದೆ.
08:36 AM IST
ಜಮ್ಮು ಕಾಶ್ಮೀರದಲ್ಲಿ ಸ್ಥಳೀಯ ನಾಯಕರ ಸಹಕಾರದೊಂದಿಗೆ ವಿಕಾಸದ ಹೊಸ ಯುಗ ಆರಂಭವಾಗಿದೆ. ಲಡಾಖ್ ನಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಸ್ಥಳೀಯರ ಅಭಿಲಾಶೆಗೆ ಒತ್ತು ನೀಡಿದ್ದೇವೆ.
08:32 AM IST
ಕೋವಿಡ್ ಗೆ ಔಷದಿ ಕಂಡುಹಿಡಿಯಲು ಭಾರತದ ವಿಜ್ಞಾನಿಗಳು ಹಗಲಿರುಳು ದುಡಿಯುತ್ತಿದ್ದಾರೆ. ಮೂರು ವ್ಯಾಕ್ಸಿನ್ ಗಳು ಭಾರತದಲ್ಲಿ ಪರೀಕ್ಷಾ ಹಂತದಲ್ಲಿ ನಡೆಯುತ್ತಿದೆ. ಆದಷ್ಟು ಬೇಗ ಉತ್ಪಾದನೆಯಾಗಿ ಪ್ರತಿ ಭಾರತೀಯರಿಗೆ ತಲುಪಲಿದೆ.
08:31 AM IST
ಇಂದಿನಿಂದ ‘ನ್ಯಾಶನಲ್ ಹೆಲ್ತ್ ಡಿಜಿಟಲ್ ಮಿಶನ್’ ಆರಂಭ. ಪ್ರತೀ ಭಾರತೀಯರಿಗೆ ಹೆಲ್ತ್ ಐಡಿ ನೀಡಲಾಗುವುದು.
08:29 AM IST
ಹೊಸ ಸೈಬರ್ ನೀತಿಯನ್ನು ಜಾರಿ ಮಾಡಲಿದ್ದೇವೆ. ಸೈಬರ್ ಸ್ಕ್ಯಾಮ್ ಗಳನ್ನು ತಡೆಯಲು ಒತ್ತು ನೀಡಲಿದ್ದೇವೆ,.
08:27 AM IST
ಭಾರತದಲ್ಲಿ ಮಹಿಳಾ ಶಕ್ತಿಗೆ ಅವಕಾಶ ಸಿಕ್ಕಿದಾಗೆಲ್ಲಾ ಭಾರತದ ಹೆಸರನ್ನು ಪ್ರಕಾಶಗೊಳಿಸಿದ್ದಾರೆ. ಭಾರತದಲ್ಲಿ ಈಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಯುದ್ಧ ವಿಮಾನಗಳನ್ನು ಹಾರಿಸುವಷ್ಟು ಸಶಕ್ತರಾಗಿದ್ದಾರೆ.
08:22 AM IST
ಮೂರು ದಶಕಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿದೆ. ಇದರಲ್ಲಿ ಜಾಗತಿಕ ನಾಗರಿಕ ಅಂಶಕ್ಕೆ ಒತ್ತು ನೀಡಲಾಗಿದೆ.
08:16 AM IST
ಕಳೆದ ಬಾರಿ ಜಲ್ ಜೀವನ್ ಮಿಶನ್ ಘೋಷಣೆ ಮಾಡಿದ್ದೆವು. ಈ ಯೋಜನೆಯು ಯಶಸ್ವಿಯಾಗಿದೆ ಎಂದು ಈ ಬಾರಿ ಹೆಮ್ಮೆಯಿಂದ ಹೇಳುತ್ತಿದ್ದೇವೆ. ವಿಶೇಷವಾಗಿ ಆದಿವಾಸಿ ಕುಟುಂಬಗಳಿಗೂ ನಾವು ಕುಡಿಯುವ ನೀರು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.
08:14 AM IST
ಭಾರತದ ಕೃಷಿಕರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ತಾವಾಗಿ ಮಾರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾವೀಗ ಎಲ್ಲಾ ಬಂಧನಗಳಿಂದ ಮುಕ್ತಿಗೊಳಿಸಿದ್ದೇವೆ. ಹಾಗಾಗಿ ನಮ್ಮ ದೇಶದ ಕೃಷಿಕರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ತಾನೇ ಮಾರಾಟ ಮಾಡಬಹುದು.
08:10 AM IST
ಬಡವರು, ಕೃಷಿಕರ ಬ್ಯಾಂಕ್ ಖಾತಗೆ ನೇರವಾಗಿ ಹಣ ವರ್ಗಾವಣೆಯಾಗಿದೆ.
08:08 AM IST
ಭೂ, ರೈಲು, ವಾಯು, ಒಳನಾಡು, ಸಮುದ್ರ ಸಾರಿಗಳನ್ನು ಜೋಡಿಸಬೇಕಿದೆ.
08:06 AM IST
ಕೋವಿಡ್ ಕಾಲದಲ್ಲೂ ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಭಾರತದತ್ತ ಮುಖಮಾಡಿದೆ. ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದೆ.
08:03 AM IST
ಮೇಕ್ ಇಂಡಿಯಾ ಮಾತ್ರವಲ್ಲ, ಮೇಡ್ ಫಾರ್ ವರ್ಲ್ಡ್ ಗೆ ಚಿಂತಿಸಿ: ಪ್ರಧಾನಿ ಮೋದಿ ಕರೆ
08:02 AM IST
ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ಮಾಡಲಾಗಿದೆ. ಎಪಿಎಂಸಿ ನೀತಿಯಲ್ಲಿ ಬದಲಾವಣೆ ಮಾಡಿದ್ದೇವೆ
08:00 AM IST
ಕೋವಿಡ್ ಆರಂಭವಾದ ಕಾಲದಲ್ಲಿ ಭಾರತ ಪಿಪಿಇ ಕಿಟ್, ವೆಂಟಿಲೇಟರ್ ಉತ್ಪಾದಿಸುತ್ತಿರಲಿಲ್ಲ. ಆದರೆ ಈಗ ಭಾರತ ಪಿಪಿಇ ಕಿಟ್, ವೆಂಟಿಲೇಟರ್ ಗಳನ್ನು ಉತ್ಪಾದಿಸುತ್ತಿದೆ. ಆತ್ಮನಿರ್ಭರ ಭಾರತ ಕನಸು ನನಸಾಗಲು ಕೌಶಲ್ಯ ವೃದ್ಧಿಗೆ ಒತ್ತು ನೀಡಬೇಕಿದೆ.
07:57 AM IST
ಕೃಷಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತಂದಿದ್ದೇವೆ. ಹಲವು ಬಂಧನಗಳಿಂದ ಮುಕ್ತಿಗೊಳಿಸಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರ ಸಾಧಿಸುತ್ತಿದೆ.
07:55 AM IST
ಜಗತ್ತಿನ ಕಲ್ಯಾಣಕ್ಕೆ ಭಾರತ ಹೆಚ್ಚಿನ ಕೊಡುಗೆ ಸಲ್ಲಿಸಬೇಕಿದೆ. ವಿಶ್ವದಲ್ಲಿ ಯಾರಿಗೆ ಅವಶ್ಯಕತೆ ಇದೆಯೇ ಅವರಿಗೆ ನಾವು ಅನ್ನ ಕೊಡಬಲ್ಲವು. ಇದು ನಮ್ಮ ದೇಶದ ಸ್ವಾತಂತ್ರ್ಯ.
07:51 AM IST
ಆರ್ಥಿಕ ವಿಕಾಸ ಆಗಬೇಕು. ಇದರೊಂದಿಗೆ ಮಾನವೀಯತೆಯ ವಿಕಾಸವೂ ಆಗಬೇಕು. ನಾವು ಜಗಕಲ್ಯಾಣಕ್ಕೆ ನಮ್ಮನ್ನು ನಾವು ಸಮರ್ಥರನ್ನಾಗಿಸಬೇಕು
07:50 AM IST
ಸಾಮ್ರಾಜ್ಯಶಾಹಿತ್ವ ಯಾರಿಗೂ ಒಳ್ಳೆಯದಲ್ಲ. ಸಾಮ್ರಾಜ್ಯಶಾಹಿಯನ್ನು ಭಾರತ ಈಗಾಗಲೇ ಸೋಲಿಸಿದೆ.
07:50 AM IST
ಆತ್ಮನಿರ್ಭರ ಅನಿವಾರ್ಯವಾಗಿದೆ. ಆತ್ಮನಿರ್ಭರ ಭಾರತ ಕನಸು ನನಸಾಗಲು ನಾವೆಲ್ಲ ಒಂದಾಗಬೇಕು.
07:45 AM IST
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ವಿಶಿಷ್ಟ ದೇಶವಾಗಿದೆ
07:44 AM IST
ಮುಂದಿನ ವರ್ಷ ನಾವು ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಮಯದಲ್ಲಿ ನಮ್ಮ ಗುರಿಗಳನ್ನು ನಾವು ಸಾಧಿಸಬೇಕಿದೆ
07:41 AM IST
ಕಳೆದ ಕೆಲವು ಸಮಯದಿಂದ ದೇಶ ಕೆಲವು ಸಮಸ್ಯೆ ಅನುಭವಿಸಿದೆ. ಪ್ರವಾಹ, ಭೂಕುಸಿತ, ಕೋವಿಡ್ ಮುಂತಾದ ಸಮಸ್ಯೆಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಹೋರಾಡುತ್ತಿವೆ.
07:39 AM IST
130 ಕೋಟಿ ಭಾರತೀಯರ ಸಂಕಲ್ಪ ಶಕ್ತಿಯಿಂದ ಈ ಕೋವಿಡ್ ಯುದ್ಧದಲ್ಲಿ ನಾವು ವಿಜಯ ಸಾಧಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ.
07:38 AM IST
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಗಳು ಸೇವೆಯೇ ಪರಮ ಧರ್ಮ ಎಂಬಂತೆ ಭಾರತ ಮಾತೆಯ ಸೇವೆ ಮಾಡಿದ್ದಾರೆ
07:36 AM IST
ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ವೀರರ ತ್ಯಾಗ ಬಲಿದಾನವಿದೆ. ಇವರೆಲ್ಲರನ್ನೂ ನಾವು ನೆನೆಯಬೇಕಿದೆ.
07:35 AM IST
ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಆರಂಭ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ
07:34 AM IST
ಕೆಂಪುಕೋಟೆಯಲ್ಲಿ ತ್ರಿವರ್ನ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
07:22 AM IST
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ
07:16 AM IST
ಪ್ರಧಾನಿ ಭಾಷಣಕ್ಕೆ ಕ್ಷಣಗಣನೆ: ಮಹತ್ವದ ಘೋಷಣೆಗಳ ನಿರೀಕ್ಷೆ
07:13 AM IST
ರಾಜ್ ಘಾಟ್ ಗೆ ಆಗಮಿಸಿದ ಪ್ರಧಾನಿ ಮೋದಿ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮಿಸಿದ ಪ್ರಧಾನಿ
07:09 AM IST
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸಚಿವರುಗಳಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಷಿ ಮುಂತಾದವರು ಕೆಂಪುಕೋಟೆಯಲ್ಲಿ ಭಾಗಿ
07:08 AM IST
ಟ್ವೀಟ್ ಮಾಡಿದ ಮೋದಿ: ಸ್ವಾತಂತ್ರ್ಯ ದಿನದ ಈ ಪವಿತ್ರ ದಿನದಂದು ದೇಶದ ಎಲ್ಲರಿಗೂ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶೂಭ ಕೋರಿದ್ದಾರೆ.
07:05 AM IST
ಏಳನೇ ಬಾರಿ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವ ಭಾಷಣ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
07:04 AM IST
ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೆ ಕ್ಷಣಗಣನೆ. ಕೋವಿಡ್-19 ಕಾರಣದಿಂದ ಈ ಬಾರಿ ಸೀಮಿತ ಸಂಖ್ಯೆಯ ಅತಿಥಿಗಳಿಗಷ್ಟೇ ಆಹ್ವಾನ
07:03 AM IST
ದೇಶದೆಲ್ಲೆಡೆ ಮನೆಮಾಡಿದೆ 74ನೇ ಸ್ವಾತಂತ್ರೋತ್ಸವದ ಸಂಭ್ರಮ