12:49 PM IST
ಶುಕ್ರವಾರ ಬೆಳಿಗ್ಗೆ 10.30ರವರೆಗೆ ಸದನವನ್ನು ಮುಂದೂಡಿದ ಸ್ಪೀಕರ್ ಕಾಗೇರಿ.
12:47 PM IST
1.46 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿದ ಯಡಿಯೂರಪ್ಪ.
12:46 PM IST
2020ರ ಸಾಲಿನ ಬಜೆಟ್ ಪೂರ್ಣಗೊಳಿಸಿದ ಬಿ ಎಸ್ ವೈ.
12:45 PM IST
ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ ನಗದು ರಹಿತ ಶಸ್ತ್ರ ಚಿಕಿತ್ಸೆ.
12:41 PM IST
ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯಕ್ಕೆ ಒದಗಿಸಲಾದ ಅನುದಾನ- 55,732 ಕೋಟಿ ರೂ.
12:40 PM IST
ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ” ಬ್ರಾಂಡ್ ಮೂಲಕ ಮಾರುಕಟ್ಟೆ ಸೌಲಭ್ಯ.
12:40 PM IST
ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 HP ವರೆಗಿನ ಪಂಪ್ ಸೆಟ್‍ಗಳ ವಿದ್ಯುತ್ ಶುಲ್ಕ ಮರುಪಾವತಿಗೆ ಕ್ರಮ.
12:40 PM IST
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮ ಪ್ರಾರಂಭ. ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಕ್ಷಣ, ಒಂದು ಸಾವಿರ ರೂ. ಮಾಸಿಕ ಶಿಷ್ಯವೇತನ.
12:39 PM IST
ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಆಶ್ರಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ” ಸ್ಥಾಪನೆ.
12:39 PM IST
ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಕಾಳಿ, ಶರಾವತಿ, ಹಂಗಾರಕಟ್ಟೆ, ಗುರುಪುರ ಮತ್ತು ನೇತ್ರಾವತಿ ಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ ಅಭಿವೃದ್ಧಿ.
12:38 PM IST
SSLC ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ. ಪ್ರತೀ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪ್ರಶಸ್ತಿ.
12:35 PM IST
2 ಕೋಟಿ ವೆಚ್ಷದಲ್ಲಿ ರಾಮನಗರ ಜಿಲ್ಲೆಯಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ
12:31 PM IST
ಖಾಸಗಿ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಫಿಲಂ ಸಿಟಿಗೆ 500 ಕೋಟಿ ರೂ. ಅನುದಾನ.
12:28 PM IST
ಪ್ರವಾಸಿ ಸ್ನೇಹಿ ನೀತಿಗಳ ಹೊಸ ಪ್ರವಾಸೋದ್ಯಮ ಯೋಜನೆ ಜಾರಿ
12:27 PM IST
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ. ಅನುದಾನ.
12:26 PM IST
ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ.
12:25 PM IST
ಕೀಡಾಪಟುಗಳಿಗೆ ಉದ್ಯೊಗ ಯೋಜನೆ ಮತ್ತು ಪ್ರೋತ್ಸಾಹಕ್ಕೆ 5 ಕೋ.ರೂ ಅನುದಾನ.
12:22 PM IST
ಬೆಂಗಳೂರು ನವ ನಗರೋತ್ಥಾನ ಯೋಜನೆಯಡಿ ರೂ. 8344 ಕೋಟಿ ಅನುದಾನ
12:21 PM IST
“ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ.
12:20 PM IST
ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ.
12:20 PM IST
ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ. ಇದು ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟು.
12:19 PM IST
ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆಗೆ 28 ಕೋಟಿ ರೂ. ಅನುದಾನ.
12:19 PM IST
ಏಷ್ಯಾ ಖಂಡದ ದೇಶಗಳ ಶಿಕ್ಷಣ ಸಚಿವರ ಶೈಕ್ಷಣಿಕ ಸಮಾವೇಶ ಮತ್ತು ಬೃಹತ್ ವಸ್ತು ಪ್ರದರ್ಶನ ಆಯೋಜನೆ.
12:19 PM IST
ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, “ಸಂಭ್ರಮ ಶನಿವಾರ” ಆಚರಣೆ.
12:17 PM IST
“ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
12:16 PM IST
ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ.
12:10 PM IST
ಕಳಸಾ ಬಂಡೂರಿ ನಾಲೆ ನಿರ್ಮಾಣಕ್ಕೆ 500 ಕೊಟಿ ರೂ.
12:09 PM IST
ಮುರುಘಾ ಮಠದಲ್ಲಿ 325 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಾಣ.
12:06 PM IST
400 ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳ ಆರಂಭ
12:02 PM IST
60 ವರ್ಷ ಮೀರಿದ ಬಿಪಿಎಲ್ ಕಾರ್ಡುದಾರರಿಗೆ ಜೀವನಚೈತ್ರ ಯಾತ್ರೆ. ದೇಶದ ಪ್ರಸಿದ್ದ ತೀರ್ಥಕ್ಷೇತ್ರಗಳ ದರ್ಶನ. 20 ಕೋಟಿ. ರೂ ಮೀಸಲು.
11:58 AM IST
ಗ್ರಾಮೀಣ ರಸ್ತೆ ಅಭಿವೃದ್ದಿಗೆ ರೂ. 780 ಕೋಟಿ ಮೀಸಲು.
11:58 AM IST
ಶುದ್ದ ಕುಡಿಯು ನೀರು ಪೂರೈಸಲು ‘ಮನೆ ಮನೆಗೆ ಗಂಗೆ’ ಎಂಬ ಹೊಸ ಯೋಜನೆ
11:55 AM IST
ಮದ್ಯ ತೆರಿಗೆ ಸ್ಲಾಬ್ ನ ಈಗಿನ ದರದ ಮೇಲೆ ಶೇ.6ರಷ್ಟು ಹೆಚ್ಚಳ. ಅಬಕಾರಿ ಇಲಾಖೆಗೆ ರೂ. 22,500 ಕೋಟಿ ಸಂಗ್ರಹ ಗುರಿ
11:52 AM IST
ಅಪಾರ್ಟ್ ಮೆಂಟ್ ನೋಂದಣಿ ಮುದ್ರಾಂಕ ಶುಲ್ಕ ಕಡಿತ. 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ ಮೆಂಟ್ ಗೆ ನೋಂದಣಿ ಮುದ್ರಾಂಕ ಶುಲ್ಕ ಶೇ. 5ರಿಂದ ಶೇ.2ಕ್ಕೆ ಇಳಿಕೆ
11:48 AM IST
ಕೆ ಎಸ್ ಆರ್ ಟಿಸಿಗೆ 2450 ಹೊಸ ಬಸ್.
11:47 AM IST
ಬೆಂಗಳೂರು ಪೊಲೀಸರಿಗೆ 75 ಹೊಸ ಹೊಯ್ಸಳ ವಾಹನಗಳು
11:47 AM IST
ಪೊಲೀಸ್ ಸಿಬ್ಬಂದಿಗೆ ‘ಗೃಹ ಭಾಗ್ಯ’. ಈ ಯೋಜನೆಗೆ 200 ಕೊಟಿ ರೂ.
11:46 AM IST
ಶಿಕ್ಷಕರಿಗೆ ಮಾಹಿತಿ ನೀಡಲು ‘ಶಿಕ್ಷಕ ಮಿತ್ರ” ಮೊಬೈಲ್ ಆಪ್
11:44 AM IST
ಬಸವ ಕಲ್ಯಾಣದಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ.
11:42 AM IST
ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವುಳಿ ಪಾರ್ಕ್.
11:42 AM IST
ಡೀಸೆಲ್ ತೆರಿಗೆ ಶೇ.21ರಿಂದ ಶೇ. 24ಗೆ ಏರಿಕೆ. ಪ್ರತಿ ಲೀಟರ್ ಗೆ ರೂ.1.59 ಏರಿಕೆ.
11:41 AM IST
ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಳ. 32%ರಿಂದ 35% ವರೆಗೆ ಹೆಚ್ಚಳ. ರಾಜ್ಯದಲ್ಲಿ ಇಂದಿನಿಂದ ಪೆಟ್ರೋಲ್ ಗೆ 1.60ರೂ ಹೆಚ್ಚಳ.
11:39 AM IST
ಸರ್ಖಾರಿ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಪ್ರತ್ಯೇಕ ಕಟ್ಟಡ. ಆನಂದ್ ರಾವ್ ಸರ್ಕಲ್ ನಲ್ಲಿ 25 ಮಹಡಿಗಳ ಕಟ್ಟಡ ನಿರ್ಮಾಣ. 400 ಕೋಟಿ ರೂಪಾಯಿ ಮೀಸಲು.
11:37 AM IST
ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ವರೆಗೆ ಔಟರ್ ರಿಂಗ್ ರೋಡ್
11:35 AM IST
ಉಡುಪಿಯ ಹೆಜಮಾಡಿಕೋಡಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ, ಹಂಗಾರಕಟ್ಟೆಯಲ್ಲಿ ಬಂದರು ಅಭಿವೃದ್ಧಿ.
11:32 AM IST
ವಿಶ್ವಕರ್ಮ ಅಭಿವೃದ್ಧಿಗೆ 25 ಕೋಟಿ ರೂ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.
11:31 AM IST
ಎತ್ತಿನ ಹೊಳೆ ಯೋಜನೆಗೆ ನಮ್ಮ ಸರಕಾರದ ಆದ್ಯತೆ. ಮುಂದಿನ ಮುಂಗಾರಿನಲ್ಲಿ ಪ್ರಾಯೋಗಿನ ಚಾಲನೆ. 1,500 ಕೊಟಿ ನೆರವು
11:28 AM IST
ಕರಾವಳಿಯ ನದಿಗಳಿಗೆ ಕಿಂಡಿ ಅಣೆಕಟ್ಟು ಅಳವಡಿಸಲು ಮಾಸ್ಟರ್ ಪ್ಲಾನ್
11:26 AM IST
ಮತ್ಸ ವಿಕಾಸ ಯೋಜನೆ, ಸಮಗ್ರ ವರಾಹ ಯೋಜನೆ ಜಾರಿ.
11:26 AM IST
ಬಿತ್ತನೆ ಬೀಜ, ರಸಗೊಬ್ಬರ ಸಂಬಂಧಿಸಿ ಹೊಸ ನೀತಿ.
11:24 AM IST
ಮಣ್ಣು, ನೀರು ಪರೀಕ್ಷೆಗೆ ಸಂಚಾರಿ ಹೆಲ್ತ್ ಕ್ಲಿನಿಕ್.
11:23 AM IST
ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್. ರೈತರು ಅಧಿಕ ಬಡ್ಡಿ ದರದಿಂದ ತಪ್ಪಿಸಲು ಹೊಸ ಕಾರ್ಯಕ್ರಮ.
11:23 AM IST
ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಮೀಸಲು: ಬಿಎಸ್ ವೈ
11:21 AM IST
ಹೊಸ ಕೃಷಿ ನೀತಿ ಜಾರಿ. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಗೆ ರಾಜ್ಯದಿಂದ ನೀಡುತ್ತಿದ್ದ ನಾಲ್ಕು ಸಾವಿರ ಹಣ ಮುಂದುವರಿಕೆ.
11:18 AM IST
ಬೈಸಿಕಲ್ ಯೋಜನೆ, ಭಾಗ್ಯಲಕ್ಷಿ ಮುಂತಾದ ಯೋಜನೆ ಮುಂದುವರಿಕೆ
11:17 AM IST
ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದೆ, ಹೀಗಾಗಿ ರಾಜ್ಯದ ಅನುದಾನವೂ ಕಡಿಮೆಯಾಗಿದೆ.
11:15 AM IST
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ ಎಂದ ಬಿಎಸ್ ವೈ. ರೂ.8883 ಕೋಟಿ ಅನುದಾನ ಕಡಿಮೆಯಾಗಿದೆ.
11:14 AM IST
ಕಳೆದ ಬಾರಿಯ ಬಜೆಟ್ ಗಾತ್ರ 2 ಲಕ್ಷದ 34 ಸಾವಿರ ಕೊಟಿಯಾಗಿದ್ದು, ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿಯಾಗಿದೆ.
11:12 AM IST
ಕಳೆದ ಸಾಲಿನಲ್ಲಿ ಬರಗಾಲದಿಂದ ಕೃಷಿ ಕ್ಷೇತ್ರದಲ್ಲಿ ಕುಸಿತವಾಗಿದ್ದು, ಈ ಸಾಲಿನಲ್ಲಿ ಚೇತರಿಕೆಯಾಗಿದೆ.
11:11 AM IST
ರಾಜ್ಯದಲ್ಲಿ ಉಂಟಾದ ನೆರೆ ಪ್ರವಾಹ, ಪರಿಹಾರ ಕಾರ್ಯಗಳ ಬಗ್ಗೆ ಕಲಾಪಕ್ಕೆ ಮಾಹಿತಿ ನೀಡುತ್ತಿರುವ ಬಿಎಸ್ ವೈ
11:09 AM IST
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೃಷಿಗೆ ಹೆಚ್ಚಿನ ಆದ್ಯತೆ: ಬಿಎಸ್ ವೈ
11:06 AM IST
ಪ್ರತಿಯೋರ್ವರಿಗೂ ಬಜೆಟ್ ಪುಸ್ತಕ ನೀಡಲು ಮುಖ್ಯಮಂತ್ರಿ ಬಿ ಎಸ್ ವೈ ಸೂಚನೆ.
11:05 AM IST
ಬಜೆಟ್ ಪ್ರತಿ ಹಂಚಲು ಪ್ರತಿಪಕ್ಷದವರ ಆಗ್ರಹ. ಕಳೆದ ವರ್ಷವೂ ಇದೇ ರೀತಿ ಮಾಡಲಾಗಿತ್ತು. ಕಳೆದ ಸರ್ಕಾರವೂ ಬಜೆಟ್ ಪ್ರತಿ ನೀಡಿಲ್ಲ ಎಂದ ಸ್ಪೀಕರ್ ಕಾಗೇರಿ ಮತ್ತು ಸಚಿವ ಮಾದೇಸ್ವಾಮಿ.
11:03 AM IST
ಸರ್ವರಿಗೂ ಸಮಬಾಳು , ಎಲ್ಲರನ್ನೂ ಒಳಗೊಂಡ ಬಜೆಟ್
11:01 AM IST
ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಅವಕಾಶ ನೀಡಿದ ರಾಜ್ಯದ ಜನರಿಗೆ ಧನ್ಯವಾದ ಸಮರ್ಪಿಸಿದ ಬಿಎಸ್ ವೈ.
10:57 AM IST
ಕೆಲವೇ ಕ್ಷಣಗಳಲ್ಲಿ ಈ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭ
10:44 AM IST
ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ, ಸಿಎಂ ಗೆ ಶುಭ ಹಾರೈಸಿದ ಸಹೋದ್ಯೋಗಿಗಳು
10:41 AM IST
ಸಂಪುಟ ಸಭೆಯಲ್ಲಿ ಬಜೆಟ್ ಗೆ ಒಪ್ಪಿಗೆ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ. ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆ
10:34 AM IST
ಈ ಬಾರಿಯ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಬಜೆಟ್ ಗಾತ್ರ ರೂ.2.50 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ.
10:26 AM IST
ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇಲ್ಲ ಎಂದು ಬಿಎಸ್ ವೈ ಘೋಷಿಸಿದ್ದು, ಕೃಷಿ ಅಗತ್ಯಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
10:12 AM IST
ಬಜೆಟ್ ಪ್ರತಿಯೊಂದಿಗೆ ವಿಧಾನಸೌಧ ತಲುಪಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
09:55 AM IST
ಬಜೆಟ್ ಪ್ರತಿಯ ಬ್ರೀಫ್ ಕೇಸ್ ನೊಂದಿಗೆ ಮಲ್ಲೇಶ್ವರಂನ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ಬಿಎಸ್ ವೈ. ಕೃಷಿಯ ಅಗತ್ಯಗಳನ್ನು ಪೂರೈಸಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ ಎಂದ ಸಿಎಂ ಬಿಎಸ್ ವೈ.
09:50 AM IST
ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿಎಸ್ ವೈ ಯವರು ರಾಜ್ಯ ಅಯವ್ಯಯ ಪತ್ರ ಮಂಡಿಸಲಿದ್ದಾರೆ.
09:50 AM IST
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇದುವರೆಗೆ ಆರು ಬಾರಿ ಬಜೆಟ್ ಮಂಡಿಸಿದ್ದು, ಇಂದು ಏಳನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.
09:49 AM IST
ಇಂದು ಬಿಜೆಪಿ- 2 ಸರಕಾರದ ಚೊಚ್ಚಲ ಬಜೆಟ್