08:49 AM
ನಾಳೆ ಸಂಜೆ 6 ಗಂಟೆ ಗಡುವು ನಿಗದಿಪಡಿಸಿ ಕಲಾಪವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್.
08:49 AM
ನಾಳೆ ಬೆಳಗ್ಗೆ 10ಗಂಟೆಯಿಂದ ಕಲಾಫ ಆರಂಭ, 6ಗಂಟೆವರೆಗೆ ವಿಶ್ವಾಸಮತ ಯಾಚಿಸಲು ಮೈತ್ರಿ ಪಕ್ಷಕ್ಕೆ ಸ್ಪೀಕರ್ ಡೆಡ್ ಲೈನ್
11:45 PM
ರಾತ್ರಿ 11.43ರವರೆಗೆ ನಡೆದ ಕಲಾಪ. ನಮ್ಮ ಮಾತಿಗೆ ಬೆಲೆಯೇ ಇಲ್ಲವೇ ಎಂದ ಬಿಜೆಪಿಯ ಮಾಧುಸ್ವಾಮಿ. ವಿರೋಧದ ನಡುವೆಯೇ ಕಲಾಪ ಮುಂದೂಡಿದ ಸ್ಪೀಕರ್.
11:43 PM
ಕೇವಲ ಚರ್ಚೆಯಲ್ಲಿಯೇ ಮುಗಿದ ವಿಶ್ವಾಸಮತ ಯಾಚನೆ ಕಲಾಪ. ನಾಳೆ ಸಂಜೆ 4ಗಂಟೆಯೊಳಗೆ ವಿಶ್ವಾಸಮತ ಯಾಚಿಸಲು ಸ್ಪೀಕರ್ ಗಡುವು.
11:42 PM
ನಾಳೆ ಸಂಜೆ 4ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮುಗಿಸಿ ಎಂದು ಹೇಳಿದ ಸ್ಪೀಕರ್ ರಮೇಶ್ ಕುಮಾರ್.
11:41 PM
ಸಾಧ್ಯವಿಲ್ಲ ಎಂದ ಬಿಜೆಪಿಯ ಮಾಧುಸ್ವಾಮಿ. ಇಂದೇ ವಿಶ್ವಾಸಮತ ಯಾಚಿಸಿ ಎಂದು ಮನವಿ.
11:41 PM
ನಾಳೆ ಎಷ್ಟು ಗಂಟೆಗೆ ಅಂತ ಸಮಯ ನಿಗದಿ ಮಾಡಿ ಎಂದ ಸ್ಪೀಕರ್. ಮಂಗಳವಾರ 8ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುತ್ತೇವೆ ಎಂದ ಸಿದ್ದರಾಮಯ್ಯ.
11:39 PM
ಶಾಸಕ ಶಿವಲಿಂಗೇಗೌಡ ಚರ್ಚೆ, ಮಾಜಿ ಸಿಎಂ ಸಿದ್ದರಾಮಯ್ಯ ಮಾತು. ನಾಳೆ ವಿಶ್ವಾಸಮತ ಯಾಚಿಸುತ್ತೇವೆ..
11:18 PM
ವಿಶ್ವಾಸಮತ ಯಾಚನೆಗೆ ಇಂದು ಯಾರೂ ಸಿದ್ದರಿಲ್ಲ. ಕಲಾಪ ನಾಳೆಗೆ ಮುಂದೂಡಿ- ಸಚಿವ ಯುಟಿ ಖಾದರ್
11:15 PM
ಒಂದು ಗಂಟೆಯಾದರೂ ಪರವಾಗಿಲ್ಲ, ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ-ಬಿಎಸ್ ವೈ
11:13 PM
ಇನ್ನೂ ನಾಲ್ಕೈದು ಜನ ಮಾತನಾಡಲಿಕ್ಕೆ ಇದ್ದಾರೆ. ನಾಳೆ ವಿಶ್ವಾಸಮತ ಯಾಚಿಸುವ. ದಿನೇಶ್ ಗುಂಡೂರಾವ್
11:12 PM
ಹಿರಿಯ ಸದಸ್ಯ ದೇಶಪಾಂಡೆಯವರ ಮನವಿ ಬಗ್ಗೆ ಏನ್ ಹೇಳುತ್ತೀರಿ. ಸ್ಪೀಕರ್. ಶುಕ್ರವಾರ ಏನ್ ಹೇಳಿದ್ದೀರಿ..ಅದರ ಬಗ್ಗೆ ಹೇಳಿ, ಇಂದೇ ಮುಗಿಸಿ. ಬಿಎಸ್ ವೈ
11:10 PM
ಚರ್ಚೆ ಮಾಡೋದು ಬದಲು..ನೀವೇ 12ಗಂಟೆಯೊಳಗೆ ಅಂತಿಮ ನಿರ್ಧಾರ ಹೇಳಿ. ಜಮೀರ್ ಅಹ್ಮದ್
11:07 PM
ನಿಮಗೆ ಕಮಿಂಟ್ ಮೆಂಟ್ ಇಲ್ಲ. ಅನಾವಶ್ಯಕವಾಗಿ ಕಾಲಹರಣ ಯಾಕೆ ಮಾಡುತ್ತಿದ್ದೀರಿ. ಶೆಟ್ಟರ್ ತರಾಟೆ.
11:06 PM
ನಾಳೆಗೆ ಮುಂದೂಡಿ ಅಂತ ಯಾಕೆ ಹೇಳುತ್ತೀರಿ. ನೀವು ಇಂದೇ ವಿಶ್ವಾಸಮತ ಯಾಚಿಸುತ್ತೇವೆ ಅಂತ ಹೇಳಿದ್ದೀರಿ. ಜಗದೀಶ್ ಶೆಟ್ಟರ್
11:05 PM
ಕಲಾಪದ ಮಧ್ಯೆ ಎದ್ದು ಹೋದ ಉಮೇಶ್ ಕತ್ತಿ, ಅವರ ಬೆನ್ನಲ್ಲೇ ಹೊರ ಹೋದ ಬಸವರಾಜ ಬೊಮ್ಮಾಯಿ.
11:04 PM
ಸದನದ ಗೌರವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ದೇಶಪಾಂಡೆ
11:03 PM
ಇವತ್ತು ಚರ್ಚೆ ಮುಗಿಯಬೇಕು ಅಂತ ಸ್ಪೀಕರ್ ಹೇಳಿದ್ದಾರೆ. ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಒಪ್ಪಿಕೊಂಡಿದ್ದಾರೆ.ದೇಶಪಾಂಡೆ
11:02 PM
ರಮೇಶ್ ಕುಮಾರ್ ಆಗಮನ. ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ನಿರ್ಗಮನ. ಕಾಂಗ್ರೆಸ್ ಹಿರಿಯ ಮುಖಂಡ ದೇಶಪಾಂಡೆ ಚರ್ಚೆ ಮುಂದುವರಿಕೆ.
10:54 PM
ವಿಧಾನಸಭಾ ಕಲಾಪದಲ್ಲಿ ಹೈಡ್ರಾಮಾ. ವಿಶ್ವಾಸಮತ ಮುಂದೂಡಲು ಮೈತ್ರಿ ಪಕ್ಷದ ಶಾಸಕರಿಂದ ಊಟ ಹಾಗೂ ಅನಾರೋಗ್ಯದ ನೆಪ.
10:53 PM
ಮೊದಲು ನಿಮ್ಮ, ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ. ಕಲಾಪ ಮುಂದೂಡುವಂತೆ ಕಾಂಗ್ರೆಸ್, ಜೆಡಿಎಸ್ ಗದ್ದಲ.
10:52 PM
ನಾವು ಹೆಣ್ಮಕ್ಕಳಿದ್ದೇವೆ.ಬೇಗ ಕಲಾಪ ಮುಗಿಸಿ ಎಂದ ಕೈ ಶಾಸಕಿಯರು. ನಾವೂ ಹೆಣ್ಮಕ್ಕಳೇ ಮೊದಲು ವಿಶ್ವಾಮತ ಯಾಚಿಸಿ ಎಂದ ಬಿಜೆಪಿ ಶಾಸಕಿಯರು.
10:38 PM
ಕಲಾಪ ನಾಳೆಗೆ ಮುಂದೂಡುವಂತೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರ ಗದ್ದಲ. ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಬೇಕು.ಡೆಪ್ಯುಟಿ ಸ್ಪೀಕರ್ ಸೂಚನೆ.
10:33 PM
ಕಲಾಪ ನಾಳೆ ಮುಂದೂಡುವಂತೆ ದಿನೇಶ್ ಗುಂಡೂರಾವ್. ಕಲಾಪದಿಂದ ಎದ್ದು ಹೋದ ಸ್ಪೀಕರ್ ರಮೇಶ್ ಕುಮಾರ್. ಡೆಪ್ಯುಟಿ ಸ್ಪೀಕರ್ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ..
10:18 PM
ವಿಶ್ವಾಸಮತ ಯಾಚನೆ ವಿಳಂಬ..ಬಿಜೆಪಿ ಶಾಸಕರಿಂದ ತೀವ್ರ ಆಕ್ಷೇಪ. ಎಷ್ಟೇ ಸಮಯವಾಗಲಿ ಇಂದೇ ವಿಶ್ವಾಸಮತ ಯಾಚಿಸಲು ಒತ್ತಾಯ.
10:15 PM
ವಿಶ್ವಾಸಮತ ಇಂದೇ ಫೈನಲ್??
10:13 PM
ನಾವು ದುಡ್ಡು ಕೊಟ್ಟು ಊಟ ಮಾಡುತ್ತೇವೆ. ಊಟದ ವ್ಯವಸ್ಥೆ ಮಾಡಿ, 1ಗಂಟೆ ಆಗಲಿ, 2ಗಂಟೆ ಆಗಲಿ ಇವತ್ತೇ ವಿಶ್ವಾಸಮತ ಯಾಚಿಸಲಿ-ಬಿಎಸ್ ವೈ
10:11 PM
ನೀವು ಅಧಿಕಾರಕ್ಕೆ ಬರಲು ಹಾತೊರೆಯುತ್ತಿದ್ದೀರಿ.ಕೆಜೆ ಜಾರ್ಜ್, ನಮಗೆ ಜನ 105 ಸ್ಥಾನ ಕೊಟ್ಟಿದ್ದಾರೆ, 37 ಸ್ಥಾನ ಕೊಟ್ಟವರ ಜೊತೆ ಸೇರಿಕೊಂಡವರು ನೀವು-ಮಾಧುಸ್ವಾಮಿ.
10:08 PM
ನೀವು ಯಾರೂ ಮೂರ್ಖರಾಗಬೇಡಿ. ಬಿಜೆಪಿಯವರು ನಿಮ್ಮ ತಲೆಗೆ ಮಂಗನ ಟೋಪಿ ಇಟ್ಟಿದ್ದಾರೆ. ಡಿಕೆ ಶಿವಕುಮಾರ್
10:07 PM
ಕಾಂಗ್ರೆಸ್ ಶಾಸಕ ಜಾರ್ಜ್ ಚರ್ಚೆ ವೇಳೆ ಬಿಜೆಪಿಯ ಹಿರಿಯ ಮುಖಂಡ ಸುರೇಶ್ ಕುಮಾರ್ ಆಕ್ಷೇಪ.
10:06 PM
ನೀವು ಯಾರೂ ಮೂರ್ಖರಾಗಬೇಡಿ, ಬಿಜೆಪಿಯವರು ನಿಮ್ಮ ಮೇಲೆ ಮಂಗನ ಟೋಪಿ ಹಾಕಿದ್ದಾರೆ ಎಂದು ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ.
10:06 PM
ಅತೃಪ್ತ ಶಾಸಕರು ನಾಳೆ ಅನರ್ಹಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆ
10:05 PM
ನಾಳೆ ಬೆಳಿಗ್ಗೆ ಅತೃಪ್ತ ಶಾಸಕರೆಲ್ಲರೂ ಸ್ಫೀಕರ್ ಎದುರು ವಿಚಾರಣೆಗೆ ಹಾಜರಾಗಬೇಕು. ನಿಮಗೆ ಇದು ಎಚ್ಚರಿಕೆ ಅಲ್ಲ, ಮಾಹಿತಿ ಎಂದು ಅತೃಪ್ತರಿಗೆ ಸಂದೇಶ ರವಾನಿಸಿದ ಸಚಿವ ಡಿ.ಕೆ. ಶಿವಕುಮಾರ್.
09:25 PM
ನೀವು ಹೆಳಿದ್ದನ್ನೇ ಹೇಳ್ತಾ ಇದ್ರೆ ನನ್ನ ಸ್ಥಿತಿ ಏನಾಗ್ಬೇಕು ಎಂದ ಸ್ಪೀಕರ್ ರಮೇಶ್ ಕುಮಾರ್.
09:24 PM
ಸುಪ್ರೀಂಕೋರ್ಟ್ ತನ್ನ ತೀರ್ಪಿನ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.
09:08 PM
ನಿಮಗೆ ವಿಶ್ವಾಸ ಮತ ಇದೆಯೋ ಇಲ್ಲವೋ ಅಷ್ಟು ಹೇಳಿ – ಶಾಸಕ ಮಾಧುಸ್ವಾಮಿ ಸದನದಲ್ಲಿ ಪ್ರಶ್ನೆ.
09:04 PM
ಹೆಚ್.ಕೆ. ಪಾಟೀಲ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ.
09:02 PM
ಇಂದು ವಿಶ್ವಾಸಮತ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೆಚ್.ಕೆ.ಪಾಟೀಲ್.
08:44 PM
ಸದನದ ಬಾವಿಯ ಬಳಿ ಜಮಾಯಿಸಿ ‘ನ್ಯಾಯ ಬೇಕು…’ ಎಂದು ಘೋಷಣೆ ಕೂಗುತ್ತಿರುವ ಮೈತ್ರಿ ಪಕ್ಷದ ಶಾಸಕರು.
08:39 PM
ನಾನು ಇಲ್ಲಿರುವುದು ಸಂವಿಧಾನ ಉಳಿಸಲು, ಆದರೆ ನೀವಿದನ್ನು ಉಳಿಸುತ್ತಿಲ್ಲ - ಸ್ಪೀಕರ್ ರಮೇಶ್ ಕುಮಾರ್ ಖೇದ.
08:39 PM
ಸದನದಲ್ಲಿ ಮುಖ್ಯಮಂತ್ರಿ ಉಪಸ್ಥಿತಿ.
08:35 PM
ರಾತ್ರಿ 12 ಗಂಟೆಯಾದರೂ ನಾವು ಕುಳಿತುಕೊಳ್ಳಲು ಸಿದ್ಧ ಎಂದ ಯಡಿಯೂರಪ್ಪ. ಆದರೆ ನಾವು ಸಿದ್ಧರಿಲ್ಲ ಎಂದು ಗದ್ದಲ ಶುರುಮಾಡಿದ ಆಡಳಿತ ಮೈತ್ರಿ ಪಕ್ಷದ ಸದಸ್ಯರು.
08:34 PM
ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇದೀಗ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
08:32 PM
ವಿಧಾನಸಭಾ ಕಲಾಪ ಪುನರಾರಂಭ, ಸುಮಾರು ಎರಡು ಗಂಟೆಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ವಿಧಾನಸಭಾ ಕಲಾಪ.
08:30 PM
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಮನ ಒಲಿಸಲು ಹರಸಾಹಸಪಡುತ್ತಿರುವ ಮೈತ್ರಿ ನಾಯಕರು. ಸಿದ್ಧರಾಮಯ್ಯ, ಕುಮಾರಸ್ವಾಮಿ, ರೇವಣ್ಣ ಅವರ ಮನವಿಗೆ ಕಿವಿಗೊಡುತ್ತಿಲ್ಲ ಸ್ಪೀಕರ್.
08:28 PM
‘ನಿಮ್ಮ ಕುತಂತ್ರ ಬಯಲಾಗುತ್ತಿದೆ’ ಎಂದು ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿದ ಕಾಂಗ್ರೆಸ್.
08:21 PM
ನಾಳೆ ಅತೃಪ್ತ ಶಾಸಕರ ವಿಚಾರಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಗೆ ಸ್ಪೀಕರ್ ನಾಳೆ ಅಫಿಡವಿಟ್ ಸಲ್ಲಿಸಲಿದ್ದಾರೆ.
08:12 PM
ಬಿಜೆಪಿಯಿಂದ ದೋಸ್ತಿಗಳಿಗೆ ಖಡಕ್ ಟ್ವೀಟ್: ‘ನುಡಿದಂತೆ ನಡೆಯಿರಿ’ ಎಂದು ಎರಡೇ ಪದಗಳಲ್ಲಿ ದೋಸ್ತಿಗಳನ್ನು ಕೆಣಕಿದ ಬಿಜೆಪಿ.
08:06 PM
ಹತ್ತು ನಿಮಿಷದ ಬಳಿಕದ ವಿರಾಮದ ಬಳಿಕ ಮತ್ತೆ ಸಮಾವೇಶಗೊಳ್ಳದ ಸದನ. ಸ್ಪೀಕರ್ ಕಛೇರಿಯಲ್ಲಿ ಮುಂದುವರಿದ ಚರ್ಚೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಸೇರಿದಂತೆ ಹಲವರೊಂದಿಗೆ ಸ್ಪೀಕರ್ ಚರ್ಚೆ.
06:59 PM
ಮತ್ತೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ಎಚ್.ಡಿ.ರೇವಣ್ಣ.ನಾಳೆ ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ.
06:45 PM
ಆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸದನಕ್ಕೆ ಉತ್ತರಿಸಲಿದ್ದಾರೆ.
06:44 PM
ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸದನದಲ್ಲಿ ಇನ್ನೂ 15 ಸದಸ್ಯರು ಮಾತನಾಡಲು ಬಾಕಿ ಇದೆ.
06:42 PM
ಇಂದೇ ಬಹುಮತ ಸಾಬೀತುಪಡಿಸಲೇಬೇಕು. ಇನ್ನೂ ಕಾಲಾವಕಾಶ ಕೇಳಿದ್ರೆ ನಾನೇ ರಾಜೀನಾಮೆ ಕೊಡ್ತೇನೆ ಎಂದ ಸ್ಪೀಕರ್ ರಮೇಶ್ ಕುಮಾರ್.
06:22 PM
ವಿಧಾನಸಭಾ ಕಲಾಪದಲ್ಲಿ ತೀವ್ರ ಕೋಲಾಹಲ, ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್.
05:58 PM
ವಿಧಾನಸೌಧಕ್ಕೆ ಡಿಜಿಪಿ ನೀಲಮಣಿ ರಾಜು ಆಗಮನ. ವಿಧಾನಸೌಧದ ಕಲಾಪಕ್ಕೆ ಹಾಜರಾಗದೆ ಸಿಎಂ ಕಚೇರಿಯಲ್ಲಿ ಕುಳಿತಿರುವ ಕುಮಾರಸ್ವಾಮಿ.
05:55 PM
ಕರ್ನಾಟಕದ ವಿಧಾನಸಭೆಯ ಸದ್ಯದ ಒಟ್ಟು ಬಲ 205, ಕಾಂಗ್ರೆಸ್-ಜೆಡಿಎಸ್-100, ಬಿಜೆಪಿ-105. ಮ್ಯಾಜಿಕ್ ನಂಬರ್ 103
05:54 PM
ಸಂಜೆ 5ಗಂಟೆಗೆ ಎಲ್ಲಾ ಶಾಸಕರು ಹಾಜರಿರಬೇಕು. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಣೇಶ್ ಹುಕ್ಕೇರಿ ಸೂಚನೆ.ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್-ಸ್ಪೀಕರ್ ಗರಂ
05:53 PM
ಸದನದಲ್ಲಿ ಪ್ರತಿಭಟನೆ ನಡೆದರೂ ತೊಂದರೆ ಇಲ್ಲ. ಸುಪ್ರೀಂಕೋರ್ಟ್ ತೀರ್ಪಿನ ನಂತರವೇ ವಿಶ್ವಾಸಮತ ಯಾಚಿಸುವೆ- ಸಿಎಂ
05:47 PM
ಬಹುಮತ ಸಾಬೀತು ಇಂದೂ ಸಹ ಅನುಮಾನ?
05:47 PM
ವಿಶ್ವಾಸ ಮತವನ್ನು ಎರಡು ದಿನಗಳ ಕಾಲ ಮುಂದೂಡುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ.
05:46 PM
ಆಸ್ಪತ್ರೆಯಿಂದ ಸದನಕ್ಕೆ ಬಂದ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶಾಸಕರಾಗಿರುವ ಉಮಾನಾಥ್ ಕೋಟ್ಯಾನ್ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಾಗಿದ್ದರು.
05:04 PM
ಸದ್ಯದ ಕಲಾಪದಿಂದ ಸಿಎಂ ಕುಮಾರಸ್ವಾಮಿ ಗೈರು. ವಿಶ್ವಾಸಮತ ಮುಂದೂಡಲು ಕಾಂಗ್ರೆಸ್, ಜೆಡಿಎಸ್ ಶಾಸಕರ ಯತ್ನ.
04:43 PM
ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಎಚ್.ಡಿ.ಕುಮಾರಸ್ವಾಮಿ. ಸಂಜೆ 6-30ಕ್ಕೆ ಕುಮಾರಸ್ವಾಮಿ ರಾಜಭವನಕ್ಕೆ ಭೇಟಿ.
04:30 PM
ಯಾರೂ ಸದನ ಬಿಟ್ಟು ಹೋಗಬೇಡಿ, ಕಾಂಗ್ರೆಸ್ ಸಚೇತಕ ಗಶೇಶ್ ಹುಕ್ಕೇರಿ ಶಾಸಕರಿಗೆ ಸೂಚನೆ. ಸದನದಲ್ಲಿ ಎಟಿ ರಾಮಸ್ವಾಮಿ ಚರ್ಚೆ
04:14 PM
ವಿಶ್ವಾಸ ನಿರ್ಣಯದ ಮೇಲೆ ಶಾಸಕ ಎಟಿ ರಾಮಸ್ವಾಮಿ. ನೈತಿಕ ಮೌಲ್ಯ ಸಿದ್ದಾಂತಗಳಿಗೆ ಬೆಲೆ ಇಲ್ಲದಂತಾಗಿದೆ.
03:43 PM
ವಿಧಾನಸಭಾ ಕಲಾಪ ಪುನರಾರಂಭ.ಸಂಜೆಯೊಳಗೆ ವಿಶ್ವಾಸಮತ ಯಾಚನೆಯಾಗುತ್ತಾ? ಮುಂದುವರಿದ ಗೊಂದಲ..
03:36 PM
ಸುಪ್ರೀಂಕೋರ್ಟ್ ಗೆ ನಾವು ಉತ್ತರಕೊಡಬೇಕಾಗಿದೆ. ಇಂದು ಸಂಜೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ- ಸಿಎಂಗೆ ಸ್ಪೀಕರ್
02:20 PM
ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲೆ ಮುಂದುವರಿದ ಚರ್ಚೆ. ವಿಧಾನಸಭೆ ಕಲಾಪ ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ.
02:15 PM
ತಕ್ಷಣ ಭಿನ್ನಮತೀಯ ಶಾಸಕರ ರಾಜೀನಾಮೆ ಅಂಗೀಕರಿಸಿ- ಸ್ಪೀಕರ್ ಬಳಿ ಕೃಷ್ಣಭೈರೇಗೌಡ ಮನವಿ.
02:12 PM
ಸುಪ್ರೀಂಕೋರ್ಟ್ ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುತ್ತಿದೆ. ಅನರ್ಹತೆ, ವಿಪ್, ರಾಜೀನಾಮೆ ಮೂರು ಸ್ಪೀಕರ್ ಕೈಯಲ್ಲಿದೆ-ಕೃಷ್ಣಭೈರೇಗೌಡ
01:23 PM
ಪಕ್ಷೇತರ ಶಾಸಕ ಆರ್.ಶಂಕರ್ ಬಗ್ಗೆ ಈಗ ಚರ್ಚೆ ಬೇಡ-ಸ್ಪೀಕರ್, ಕೆಲವರ ಬಂಡವಾಳ ಬಯಲಾಗಬೇಕು-ಡಿಕೆ ಶಿವಕುಮಾರ್
01:16 PM
ಕಲಾಪದಲ್ಲಿ ಐಎಂಎ ಜಟಾಪಟಿ, ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕಲಾಪಪಲ್ಲಿ ಆಪರೇಶನ್ ಆಡಿಯೋ ಸದ್ದು.
12:49 PM
ನೀವು ಕಲಾಪದಲ್ಲಿ ಮಾಡುವ ಆರೋಪಕ್ಕೆ ದಾಖಲೆ ಕೊಡಬೇಕಾಗುತ್ತದೆ-ಕೃಷ್ಣಭೈರೇಗೌಡ ಆರೋಪಕ್ಕೆ ಮಾಧುಸ್ವಾಮಿ
12:48 PM
ಶಾಸಕರು ವ್ಯವಹಾರ ಮಾಡುವುದು ನೈತಿಕತೆನಾ? ಕಾಂಗ್ರೆಸ್ ಸಚಿವ ಕೃಷ್ಣಭೈರೇಗೌಡ ಕಲಾಪದಲ್ಲಿ ಪ್ರಶ್ನೆ.
12:34 PM
ಆಪರೇಶನ್ ಆಡಿಯೋ ಬಗ್ಗೆ ಕೃಷ್ಣಭೈರೇಗೌಡ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ಷೇಪ. ಕಲಾಪದಲ್ಲಿ ವಾಕ್ಸಮರ.
12:24 PM
ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ಆರಂಭ, ಕಾಂಗ್ರೆಸ್ ನ ಕೃಷ್ಣಭೈರೇಗೌಡಗೆ ಮಾತನಾಡಲು ಸ್ಪೀಕರ್ ಸೂಚನೆ.
12:22 PM
ರೂಲಿಂಗ್ ಕೊಟ್ಟ ಮೇಲೆ ಕ್ರಿಯಾಲೋಪದ ಮೇಲೆ ಚರ್ಚೆ ಇಲ್ಲ. ಡಿಕೆ ಶಿವಕುಮಾರ್ ಚರ್ಚೆಗೆ ಬಿಜೆಪಿಯ ಮಾಧುಸ್ವಾಮಿಯಿಂದ ತೀವ್ರ ಆಕ್ಷೇಪ.
12:22 PM
ಎಲ್ಲೋ ಕುಳಿತಿರುವವರ ವಿರುದ್ಧ ನಾನು ಕ್ರಮ ಕೈಗೊಳ್ಳಲು ಆಗಲ್ಲ. ಇದು ಪಿತೂರಿ ಎಂಬ ಸಂದೇಶ ಹೋಗುತ್ತದೆ-ಸ್ಪೀಕರ್ ರಮೇಶ್ ಕುಮಾರ್
12:18 PM
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂ ಸಭಾಧ್ಯಕ್ಷರ ಹಕ್ಕನ್ನು ಗೌರವಿಸಿದೆ.
12:17 PM
ಇಂದೇ ವಿಶ್ವಾಸಮತಯಾಚಿಸುವಂತೆ ಸಿಎಂ ಕುಮಾರಸ್ವಾಮಿಗೆ ಸೂಚನೆ ಕೊಟ್ಟಿದ್ದೇನೆ- ಸ್ಪೀಕರ್ ರಮೇಶ್ ಕುಮಾರ್
12:16 PM
ವಿಶ್ವಾಸಮತ ಯಾಚನೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ ಎಂದ ಬಿಜೆಪಿ ಶಾಸಕರು. ಬಿಜೆಪಿ ಮನವಿಗೆ ಸ್ಪೀಕರ್ ಸ್ಪಂದನೆ.
12:08 PM
ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಶಾಸಕರಿಗೆ ರಕ್ಷಣೆ ಕೊಡುವುದು ನನ್ನ ಕರ್ತವ್ಯ-ಸ್ಪೀಕರ್
12:08 PM
ವಿಪ್ ಜಾರಿಗೊಳಿಸಬಹುದು-ಮಾಜಿ ಸಿಎಂ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್.
12:03 PM
ವಿಧಾನಸಭಾ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ಕ್ಷಮೆಯಾಚಿಸಿದ ಸ್ಪೀಕರ್ ರಮೇಶ್ ಕುಮಾರ್.
12:02 PM
12ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಆರಂಭವಾದ ವಿಧಾನಸಭಾ ಕಲಾಪ. ಕ್ರಿಯಾಲೋಪದ ಕುರಿತು ಸ್ಪೀಕರ್ ರೂಲಿಂಗ್.
11:34 AM
2 ದಿನ ಸಮಯ ಕೊಡಿ ಎಂಬ ಸಿಎಂ ಮನವಿಗೆ ಯಾವುದೇ ಭರವಸೆ ನೀಡದ ಸ್ಪೀಕರ್ ರಮೇಶ್ ಕುಮಾರ್.
11:33 AM
ವಿಶ್ವಾಸಮತ ಯಾಚಿಸಲು ಇನ್ನೂ ಎರಡು ದಿನಗಳ ಕಾಲಾವಕಾಶ ಕೊಡಿ ಎಂದು ಸ್ಪೀಕರ್ ಬಳಿ ಕುಮಾರಸ್ವಾಮಿ, ಕೃಷ್ಣಭೈರೇಗೌಡ,ಪ್ರಿಯಾಂಕಾ ಖರ್ಗೆ ಮನವಿ.
11:26 AM
ಸದನ ಆರಂಭವಾಗುವ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಜೊತೆ ಸಿಎಂ ಕುಮಾರಸ್ವಾಮಿ ಸಮಾಲೋಚನೆ. ಸ್ಪೀಕರ್ ಕಚೇರಿಗೆ ಬಿಜೆಪಿ ನಿಯೋಗ ಭೇಟಿ.
11:09 AM
ವಿಧಾನಸೌಧಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗಮನ.
11:05 AM
ಒಂದೇ ಬಸ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕರು, ಮಾಜಿ ಸಿಎಂ ಸಿದ್ದರಾಮಯ್ಯ ಆಗಮನ.
10:56 AM
ಜುಲೈ 23ರಂದು 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಬಂಡಾಯ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ಜಾರಿ.
10:54 AM
ಪಕ್ಷೇತರ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ವಾದ ಮಂಡನೆ, ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.
10:51 AM
ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮನವಿ. ಕೆಲವೇ ಹೊತ್ತಿನಲ್ಲಿ ವಿಧಾನಸಭೆ ಕಲಾಪ ಆರಂಭ.
10:50 AM
ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಇಂದು ಸಂಜೆ 5ಗಂಟೆಯೊಳೆಗೆ ತೀರ್ಪು ನೀಡುವಂತೆ ಮುಕುಲ್ ರೋಹ್ಟಗಿ ಸುಪ್ರೀಂಗೆ ಮನವಿ.
10:50 AM
ಇಬ್ಬರು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಸುವ ಬಗ್ಗೆ ನಾಳೆ ನೋಡುತ್ತೇವೆ-ಸುಪ್ರೀಂಕೋರ್ಟ್
10:21 AM
ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು.
10:11 AM
ಕಾಂಗ್ರೆಸ್ ಪಕ್ಷ ನೀಡಿದ್ದ ದೂರಿನ ಮೇರೆಗೆ ಅತೃಪ್ತ ಶಾಸಕರಿಗೆ ಸ್ಪೀಕರ್ ಕಚೇರಿ ಕಾರ್ಯದರ್ಶಿಯಿಂದ ನೋಟಿಸ್ ಜಾರಿ.
10:10 AM
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ವಿಶೇಷ ಪೂಜೆ. ವಿಶ್ವಾಸಮತ ಗೆಲುವಿಗಾಗಿ ದೇವರ ಮೊರೆ ಹೋದ ದೇವೇಗೌಡರ ಕುಟುಂಬ.
10:07 AM
ನಾವು ಎಲ್ಲ ಒಗ್ಗಟ್ಟಾಗಿದ್ದೇವೆ, ಯಾವುದೇ ಕಾರಣಕ್ಕೂ ಕಲಾಪಕ್ಕೆ ಆಗಮಿಸುವುದಿಲ್ಲ ಎಂದು ಅತೃಪ್ತ ಶಾಸಕರು ನಿನ್ನೆ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಸ್ಪಷ್ಟಪಡಿಸಿದ್ದಾರೆ.
10:06 AM
ಸೋಮವಾರವೂ ವಿಧಾನಸಭೆಯಲ್ಲಿ ಮುಂದುವರಿಯಲಿದೆ ವಿಶ್ವಾಸಮತ ಯಾಚನೆ ಕಸರತ್ತು. ಕಲಾಪದಲ್ಲಿ ವಿಶ್ವಾಸಮತ ಯಾಚನೆಯೋ ಅಥವಾ ಚರ್ಚೆಯ ಮುಂದುವರಿಕೆಯೋ ಎಂಬುದು ಕಾದು ನೋಡಬೇಕು.
10:05 AM
ಇಂದು ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಜಯ ಸಿಕ್ಕೆ ಸಿಗುತ್ತದೆ-ಸಚಿವ ಯುಟಿ ಖಾದರ್ ವಿಶ್ವಾಸ.
10:05 AM
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸದಲ್ಲಿ ನಾಲ್ವರು ಅರ್ಚಕರಿಂದ ವಿಶೇಷ ಪೂಜೆ, ಪುನಸ್ಕಾರ.