08:25 PM
ವಿಧಾನಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
07:04 PM
ಕಲಾಪದ ನಡುವೆಯೇ ಎದ್ದು ಹೋದ ಸ್ಪೀಕರ್ ರಮೇಶ್ ಕುಮಾರ್. ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಮುಂದುವರಿಕೆ.
07:00 PM
ಇವತ್ತು 11, 12 ಗಂಟೆ ಆದರು ಆಗಲಿ ವಿಶ್ವಾಸಮತ ಯಾಚನೆ ಇಂದೇ ನಡೆಯಲಿ ಎಂದು ಪಟ್ಟು ಹಿಡಿದ ಬಿಎಸ್ ಯಡಿಯೂರಪ್ಪ.
06:59 PM
ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿ ಬಿಡೋಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ.
06:36 PM
ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಆಡಳಿತ, ವಿಪಕ್ಷಗಳ ನಡುವೆ ವಾಕ್ಸಮರ, ಕಲಾಪದಲ್ಲಿ ಮತ್ತೆ ಗದ್ದಲ, ಕೋಲಾಹಲ.
06:06 PM
ಸೋಮವಾರ ಅಥವಾ ಮಂಗಳವಾರ ಮತಕ್ಕೆ ಹಾಕೋಣ ಎಂಬ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಿದ ಸ್ಪೀಕರ್. ನೀವು ಬೇಕಿದ್ದರೆ ಒಂದೂವರೆ ಗಂಟೆ ಮಾತನಾಡಿ.
06:05 PM
ಚರ್ಚೆ ಮುಗಿಸೋಣ,ಸುಮ್ಮನೆ ಎಳೆಯೋದರಲ್ಲಿ ಅರ್ಥವಿಲ್ಲ. ಸದನ ಮುಂದೂಡಿದರೆ ಜನತೆಗೆ ಮುಖ ತೋರಿಸಲು ಆಗಲ್ಲ-ಸ್ಪೀಕರ್
05:58 PM
ಸದನವನ್ನು ಸೋಮವಾರಕ್ಕೆ ಮುಂದೂಡಲು ಜೆಡಿಎಸ್-ಕಾಂಗ್ರೆಸ್ ಶಾಸಕರ ಒತ್ತಾಯ.
05:56 PM
ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ನಾಳೆ ನವದೆಹಲಿಯಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಭೆ ನಡೆಯಲಿದೆ.
05:55 PM
ಕೆಂದ್ರದ ಅಂಗಳ ಪ್ರವೇಶಿಸಿದ ರಾಜ್ಯ ಬಿಕ್ಕಟ್ಟು.
04:35 PM
ವಿಶ್ವಾಸಮತವನ್ನು ಚರ್ಚೆಗೆ ಹಾಕುತ್ತಿದ್ದೇನೆ ಎಂದ ಸ್ಪೀಕರ್, ಆರಂಭಿಕವಾಗಿ ಜೆಡಿಎಸ್ ನ ಶಿವಲಿಂಗೇಗೌಡ ಚರ್ಚೆ ಮುಂದುವರಿಸಿದ್ದಾರೆ.
04:34 PM
ವಿಶ್ವಾಸಮತ ಪ್ರಸ್ತಾಪವಾಗಿದೆ. ಅದರ ಬಗ್ಗೆ ಎಲ್ಲರಿಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ಬಳಿ ಸಿಎಂ ಕುಮಾರಸ್ವಾಮಿ ಮನವಿ.
03:40 PM
ದಿನೇಶ್ ಗುಂಡೂರಾವ್ ಪರ ವಕೀಲರ ಅರ್ಜಿ ಸಲ್ಲಿಕೆ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೊರೆ ಹೋದ ಸಿಎಂ ಕುಮಾರಸ್ವಾಮಿ.
03:31 PM
ಇಂದು ಸಂಜೆ 6ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ-ಸಿಎಂ ಕುಮಾರಸ್ವಾಮಿಗೆ ಮರು ಜ್ಞಾಪನಾ ಪತ್ರ ಕಳುಹಿಸಿದ ರಾಜ್ಯಪಾಲರು.
03:09 PM
ವಿಪ್ ವಿಚಾರದ ಗೊಂದಲ ಪರಿಹರಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್. ದಿನೇಶ್ ಗುಂಡೂರಾವ್ ಪರ ವಕೀಲರಿಂದ ಅರ್ಜಿ ದಾಖಲು.
03:07 PM
ಸಿಪಿ ಯೋಗೇಶ್ವರ್, ಎಸ್.ಆರ್.ವಿಶ್ವನಾಥ್ ಹಣ ಕೊಡಲು ಮನೆಗೆ ಬಂದಿದ್ದರು-ಕೋಲಾರ ಶಾಸಕ ಶ್ರೀನಿವಾಸ ಗೌಡ ಆರೋಪ
03:05 PM
ಶಾಸಕ ಶ್ರೀನಿವಾಸ ಗೌಡ ದಾಖಲೆ ಬಹಿರಂಗಪಡಿಸಲಿ. ನಾವು ಶ್ರೀನಿವಾಸ ಗೌಡ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ. ವಿಧಾನಸೌಧದಲ್ಲಿ ಬಿಎಸ್ ವೈ ಹೇಳಿಕೆ
01:39 PM
ವಿಶ್ವಾಸಮತ ಯಾಚನೆ ನಡೆಯದ ಹಿನ್ನೆಲೆಯಲ್ಲಿ ತೀವ್ರ ಕೋಲಾಹಲ, ಗದ್ದಲ ನಡೆದಿದ್ದು, ಕಲಾಪವನ್ನು ಸ್ಪೀಕರ್ 3ಗಂಟೆಗೆ ಮುಂದೂಡಿದ್ದಾರೆ.
01:38 PM
ವಿಶ್ವಾಸಮತ ಯಾಚನೆಗೆ ಬಿಜೆಪಿ ಸದಸ್ಯರ ಪಟ್ಟು, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್ ರಮೇಶ್ ಕುಮಾರ್.
01:35 PM
ಚರ್ಚೆ ಮುಗಿಯುವವರೆಗೆ ಮತಕ್ಕೆ ಹಾಕಲ್ಲ. ನಾನು ಯಾವುದೇ ಕಾರಣಕ್ಕೂ ನಿಯಮಾವಳಿಯನ್ನು ಮೀರಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್.
01:31 PM
ಸಿಎಂ ಕುಮಾರಸ್ವಾಮಿಗೆ ರಾಜ್ಯಪಾಲರು ನೀಡಿದ 1.30ಅಂತಿಮ ಗಡುವು ಮುಕ್ತಾಯ. ರಾಜ್ಯಪಾಲರ ಡೆಡ್ ಲೈನ್ ಮೀರಿದ ಸರ್ಕಾರ.
01:25 PM
ನಮಗೆ ಅನುಮತಿ ಜೊತೆಗೆ ರಕ್ಷಣೆ ಸಹ ನೀಡಬೇಕು ಎಂದ ಬಿಜೆಪಿಯ ಶಾಸಕ ಮಾಧುಸ್ವಾಮಿ ಸ್ಪೀಕರ್ ಗೆ ಮನವಿ.
01:18 PM
ಬಿಜೆಪಿ ಏಜೆಂಟ್ ಆಗಿರುವ ಗವರ್ನರ್ ಗೋ ಬ್ಯಾಕ್ ಘೋಷಣೆ ಕೂಗಿದ ಕಾಂಗ್ರೆಸ್, ಜೆಡಿಎಸ್ ಶಾಸಕರು. ಕಲಾಪದಲ್ಲಿ ಗದ್ದಲ.
01:16 PM
ಕೃಷ್ಣಭೈರೇಗೌಡ ವಾಗ್ದಾಳಿ, ಬಿಜೆಪಿ ಸದಸ್ಯರ ಆಕ್ರೋಶ..ಕಲಾಪದಲ್ಲಿ ತೀವ್ರ ಕೋಲಾಹಲ. ವಿಶ್ವಾಸಮತ ಯಾಚಿಸಲು ಬಿಜೆಪಿ ಪಟ್ಟು.
01:11 PM
ಸಂವಿಧಾನ ಯಾರಿಗೂ ಸರ್ವಾಧಿಕಾರ ನೀಡಿಲ್ಲ. ನಾವು ಚರ್ಚೆಗೆ ಅವಕಾಶ ಕೇಳಿದಾಗ. ನೀವು ಚರ್ಚೆಗೆ ಅವಕಾಶ ನೀಡಬೇಕು-ಕೃಷ್ಣಭೈರೇಗೌಡ
12:57 PM
ಒಂದೆರಡು ಗಂಟೆಯಲ್ಲಿ ಈ ಪ್ರಕ್ರಿಯೆ ಮುಗಿಸಲು ಸಾಧ್ಯವಿಲ್ಲ ಎಂದ ಸಿಎಂ. ಈ ವೇಳೆ ಬೊಮ್ಮಾಯಿ ಪ್ರಕರಣದ ಪ್ರಸ್ತಾಪ.
12:56 PM
ರಾಜ್ಯಪಾಲರ ನಿರ್ದೇಶನದ ಬಗ್ಗೆ ಸಿಎಂ ಪ್ರಸ್ತಾಪ. ರಾಜ್ಯಪಾಲರ ಬಗ್ಗೆ ನಾನು ಟೀಕೆ ಮಾಡಲು ಹೋಗುವುದಿಲ್ಲ. ವಿಶ್ವಾಸಮತ ಯಾಚನೆ ಚರ್ಚೆ ವೇಳೆ ರಾಜ್ಯಪಾಲರ ಆದೇಶ-ಸಿಎಂ
12:54 PM
1-30ಕ್ಕೆ ವಿಶ್ವಾಸಮತ ಸಾಧ್ಯವಿಲ್ಲ ಎಂದ ಸಿಎಂ ಕುಮಾರಸ್ವಾಮಿ. ರಾಜ್ಯಪಾಲರ ನಿರ್ದೇಶನದ ಬಗ್ಗೆ ನೀವೇ ಸ್ಪಷ್ಟನೆ ಕೊಡಿ-ಸಿಎಂ
12:50 PM
ವಿಶ್ವಾಸಮತ ಈ ಸದನದ ಸೊತ್ತು.ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಒಂದು ವಾರ ಕಾಲಾವಕಾಶ ನೀಡಬೇಕು-ಕೃಷ್ಣಭೈರೇಗೌಡ
12:32 PM
ಆಪರೇಷನ್ ಕಮಲಕ್ಕೆ ನೂರಾರು ಕೋಟಿ ಬಿಜೆಪಿಯಿಂದ ಖರ್ಚು. ಒಬ್ಬೊಬ್ಬ ಶಾಸಕರಿಗೆ 30 ಕೋಟಿ ಆಫರ್ ಕೊಟ್ಟಿದ್ದಾರೆ-ಕೃಷ್ಣಭೈರೇಗೌಡ
12:32 PM
ಚುನಾವಣೆಯ ಸಾಲ ತೀರಿಸಲು ಎಚ್.ವಿಶ್ವನಾಥ ಬಿಜೆಪಿಗೆ ಹೋಗಿದ್ದಾರೆ ಸಾರಾ ಮಹೇಶ್ ಗಂಭೀರ ಆರೋಪ.
12:29 PM
ತನಗೆ ಸಚಿವ ಸ್ಥಾನ ಬೇಡ ಎಂದು ಎಚ್.ವಿಶ್ವನಾಥ ಹೇಳಿದ್ದರು. ಬಿಜೆಪಿಯಿಂದ 26 ಕೋಟಿ ರೂಪಾಯಿ ಆಫರ್ ಬಂದಿರುವುದಾಗಿ ಹೇಳಿದ್ದರು-ಸಾರಾ ಮಹೇಶ್ ಆರೋಪ.
12:24 PM
ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ವಾಗ್ದಾಳಿ.ಎಲ್ಲರೂ ಮಾತನಾಡಲಿ...ಎಲ್ಲವೂ ಜನರಿಗೆ ಗೊತ್ತಾಗಲಿ-ಸ್ಪೀಕರ್ ಆಕ್ರೋಶ
12:23 PM
ಬಿಜೆಪಿಯವರು ನನಗೆ 5 ಕೋಟಿ ತಂದು ಕೊಟ್ಟಿದ್ದರು. ಜನಪ್ರತಿನಿಧಿಗಳಿಗೆ ಬೆಲೆ ಕಟ್ಟುತ್ತೀರಾ- ಶಾಸಕ ಶ್ರೀನಿವಾಸ ಗೌಡ ಆರೋಪ.
12:22 PM
ಮಾತನಾಡಲು ಅವಕಾಶ ಕೊಡಿ, ಯಾವುದೇ ರೀತಿಯಲ್ಲಿ ದಾರಿ ತಪ್ಪುವುದಿಲ್ಲ-ಕೃಷ್ಣಭೈರೇಗೌಡ ಸ್ಪೀಕರಲ್ಲಿ ಮನವಿ.
12:21 PM
ಇದು ಶಾಂತವೇರಿ ಗೋಪಾಲಕೃಷ್ಣ ಗೌಡರು ಇದ್ದ ಸದನವೋ..ರಾಜ್ಯದ ಸ್ಥಿತಿ ಎಲ್ಲಿಗೆ ಬಂತಪ್ಪಾ? ಎಲ್ಲವನ್ನೂ ರಾಜ್ಯದ ಜನತೆ ನೋಡಲಿ-ಸ್ಪೀಕರ್.
12:20 PM
ಬಿಜೆಪಿಯವರು ಮನೆಗೆ ಬಂದು ದುಡ್ಡು ಕೊಟ್ಟಿದ್ದರು. ಶಾಸಕ ಶ್ರೀನಿವಾಸ ಗೌಡ ಆರೋಪ. ಶಾಸಕರ ಗದ್ದಲಕ್ಕೆ ಸ್ಪೀಕರ್ ಕೆಂಡಾಮಂಡಲ.
12:19 PM
ಕಲಾಪದಲ್ಲಿ ಗದ್ದಲ, ಕೋಲಾಹಲ. ಆಡಳಿತ-ವಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ. ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೋಟಿ, ಕೋಟಿ ಆಫರ್ ಆರೋಪ.
11:48 AM
ಅಧಿಕಾರ ಬರುತ್ತೆ,ಹೋಗುತ್ತೆ, ನಮ್ಮ ಕುಟುಂಬ ಅಧಿಕಾರಕ್ಕೆ ಅಂಟಿ ಕುಳಿತಿಲ್ಲ ಎಂದ ಸಿಎಂ ಕುಮಾರಸ್ವಾಮಿ, ಹಿಂದಿನ ಘಟನೆ ಪ್ರಸ್ತಾಪಿಸಿದರು.
11:41 AM
ಚರ್ಚೆಯೇ ಬೇಡ ಮತಕ್ಕೆ ಹಾಕಿ ಎಂದು ಮಾಧುಸ್ವಾಮಿ, ಬಿಎಸ್ ವೈ ಹೇಳುತ್ತಾರೆ. ಆದರೆ ಇಂದು ಸದನದಲ್ಲಿ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ-ಸಿಎಂ
11:38 AM
ಯಾರು ಸಿಎಂ ಆಗುತ್ತಾರೆ ಎಂಬುದು ಮುಖ್ಯವಲ್ಲ, ಇಂದು ನಾನು, ನಾಳೆ ಯಡಿಯೂರಪ್ಪ ಆಗಬಹುದು. ಆದರೆ ಪಕ್ಷಾಂತರ ಪಿಡುಗನ್ನು ತೊಲಗಿಸದಿದ್ದರೆ ಕಷ್ಟ. ಸಿಎಂ
11:24 AM
ಅಪ್ಪ ಹೇಳಿದಂತೆ ಮಗ ಡ್ರಾಮಾ ಮಾಡುತ್ತಾನೆ ಎನ್ನುತ್ತಾರೆ, ಧರಂ ಸಿಂಗ್ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ದೂರುತ್ತಾರೆ. ಹೀಗೆ ಹಲವಾರು ರೀತಿ ಆರೋಪಿಸಿದ್ದಾರೆ-ಸಿಎಂ
11:23 AM
ಧರಂಸಿಂಗ್ ಸಾವಿಗೆ ನಾನು ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.ಅಂದಿನ 20 ತಿಂಗಳ ಆಡಳಿತದ ನಂತರ ಸಮ್ಮಿಶ್ರ ಸರ್ಕಾರ ಬಂದಿತ್ತು-ಸಿಎಂ
11:18 AM
ನಾನು ರಾಜಕೀಯಕ್ಕೆ ಅನಿವಾರ್ಯವಾಗಿ ಬಂದವನು.2004ರಲ್ಲಿ ನಾನು ರಾಜಕೀಯ ಪ್ರವೇಶ. ಅಂದೂ ಕೂಡಾ ರಾಜಕೀಯ ಪರಿಸ್ಥಿತಿ ಹೀಗೆಯೇ ಇತ್ತು.ಕುಮಾರಸ್ವಾಮಿ
11:14 AM
ಪ್ರಸ್ತಾವನೆ ಮಾತನಾಡಲು ಸಿಎಂ ಕುಮಾರಸ್ವಾಮಿಗೆ ಅವಕಾಶ ಕೊಟ್ಟ ಸ್ಪೀಕರ್ ರಮೇಶ್ ಕುಮಾರ್. ಕ್ರಿಯಾಲೋಪದ ಮೇಲೆ ರೂಲಿಂಗ್ ಕಾಯ್ದಿರಿಸಿದ್ದೇನೆ-ಸ್ಪೀಕರ್
11:13 AM
ನಾನು ಪಕ್ಷಪಾತ ಮಾಡುವುದಿಲ್ಲ. ಲಕ್ಷ ಆಪಾದನೆಗಳು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇನೆ-ಸ್ಪೀಕರ್ ರಮೇಶ್ ಕುಮಾರ್
11:12 AM
ನನ್ನ ಚಾರಿತ್ರ್ಯ ವಧೆ ಮಾಡಲು ಬರಬೇಡಿ,ನಿಮ್ಮ, ನಿಮ್ಮ ಚಾರಿತ್ರ್ಯ ನೋಡಿಕೊಳ್ಳಿ. ನಾನೇನು ಕೋಟಿ, ಕೋಟಿ ಪಡೆದು ಬದುಕುತ್ತಿಲ್ಲ-ಬಿಜೆಪಿ ಆರೋಪಕ್ಕೆ ಸ್ಪೀಕರ್ ತಿರುಗೇಟು
11:07 AM
ವಿಧಾನಸಭೆ ಕಲಾಪ ಆರಂಭ, ಅಟಾರ್ನಿ ಜನರಲ್ ಜೊತೆಗಿನ ಚರ್ಚೆಯ ಕುರಿತು ವಿವರಣೆ ನೀಡುತ್ತಿರುವ ಸ್ಪೀಕರ್ ರಮೇಶ್ ಕುಮಾರ್.
11:04 AM
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ. ಸುಪ್ರೀಂಕೋರ್ಟ್ ನಲ್ಲಿ ಕೆಲವೇ ಹೊತ್ತಿನಲ್ಲಿ ರಾಜ್ಯಪಾಲರ ಆದೇಶದ ಕುರಿತ ಅರ್ಜಿಯ ವಿಚಾರಣೆ ಆರಂಭ.
10:58 AM
ರಾಜ್ಯಪಾಲರು ನಮಗೆ ನಿರ್ದೇಶನ ನೀಡಬಹುದು.ಆದರೆ ನಮ್ಮ ಶಾಸಕರು ಬೆಂಬಲ ವಾಪಸ್ ಪಡೆದಿರುವುದನ್ನು ಸಾಬೀತುಪಡಿಸಲಿ-ಡಿಕೆ ಶಿವಕುಮಾರ್
10:50 AM
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ. ವಿಧಾನಸಭೆ ಕಲಾಪ ಆರಂಭಕ್ಕೆ ಕ್ಷಣಗಣನೆ.
10:44 AM
ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಗಮನ. ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ.
10:35 AM
ಎಚ್.ಡಿ.ದೇವೇಗೌಡರ ಜೊತೆ ಸುದೀರ್ಘ ಚರ್ಚೆ ನಡೆಸಿ ತೆರಳಿದ ಸಿಎಂ ಕುಮಾರಸ್ವಾಮಿ. ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ ರಾಜೀವ್ ಧವನ್.
10:11 AM
ಕ್ರಿಯಾಲೋಪ, ಪಾಯಿಂಟ್ ಆಫ್ ಆರ್ಡರ್ ಚರ್ಚೆಯೇ ಗುರುವಾರ ಇಡೀ ದಿನ ಎಳೆದು ವಿಶ್ವಾಸಮತದ ವಿಚಾರ ಶುಕ್ರವಾರಕ್ಕೆ ಮುಂದೂಡಿಕೆಯಾಗಿತ್ತು.
10:08 AM
ವಿಶ್ವಾಸಮತ ಯಾಚಿಸದೇ ಗುರುವಾರ ಕಲಾಪ ಮುಂದೂಡಿದ್ದನ್ನು ಪ್ರತಿಭಟಿಸಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.
10:06 AM
ಗದ್ದಲ, ಕೋಲಾಹಲದಿಂದ ಗುರುವಾರ ವಿಶ್ವಾಸಮತ ಯಾಚನೆ ನಡೆಯದೇ ಕಲಾಪವನ್ನು ಡೆಪ್ಯುಟಿ ಸ್ಪೀಕರ್ ಮುಂದೂಡಿಕೆ ಮಾಡಿದ್ದರು.
10:05 AM
ಶುಕ್ರವಾರ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸಲು ಸಿಎಂ ಕುಮಾರಸ್ವಾಮಿಗೆ ರಾಜ್ಯಪಾಲ ವಜೂಭಾಯ್ ವಾಲಾ ಸೂಚನೆ ನೀಡಿದ್ದಾರೆ.