04:19 PM
ಇನ್ನು ಪಾನ್ ಕಾರ್ಡಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಪಾನ್ ಕಾರ್ಡ್ ಮಂಜೂರು
02:08 PM
2.5 ಗಂಟೆಗಳ ಕಾಲ ಬಜೆಟ್ ಭಾಷಣವನ್ನು ಓದಿ ಅರ್ಧಕ್ಕೆ ನಿಲ್ಲಿಸಿದ ನಿರ್ಮಲಾ ಸೀತಾರಾಮನ್. ಇನ್ನೂ ಎರಡು ಪುಟಗಳು ಬಾಕಿ ಇರುವಂತೆಯೇ ಬಟೆಜ್ ಭಾಷಣ ಮುಕ್ತಾಯಗೊಳಿಸಿದ ವಿತ್ತ ಸಚಿವೆ. ಲೋಕ ಸಭಾ ಅಧಿವೇಶನ ಮುಂದೂಡಿಕೆ.
01:44 PM
ಆಮದು ಮಾಡಿಕೊಂಡ ವೈದ್ಯೋಪಕರಣಗಳು ಇನ್ನು ದುಬಾರಿ
01:43 PM
ಆಮದು ಮಾಡಿಕೊಳ್ಳಲಾದ ಚಪ್ಪಲಿ, ಪೀಠೋಪಕರಣ ದರ ದುಬಾರಿ
01:33 PM
ಸಹಕಾರಿ ಸಂಘಗಳ ಮೇಲಿನ ತೆರಿಗೆ 22%ದಷ್ಟು ಇಳಿಕೆ
01:30 PM
2020 ಮಾರ್ಚ್ 31ರ ಒಳಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಹಾಗೂ ಬಡ್ಡಿ ಮನ್ನಾ
01:29 PM
ವಿವಾದದಿಂದ ವಿಶ್ವಾಸದೆಡೆಗೆ – ಹೊಸ ಯೋಜನೆ ಘೋಷಣೆ
01:28 PM
ಮಧ್ಯಮ ಬಜೆಟ್ ನಲ್ಲಿ ಮನೆ ನಿರ್ಮಿಸುವ ಬಿಲ್ಡರ್ ಗಳಿಗೆ ಸರಕಾರದ ಕೊಡುಗೆ.ಲಾಭಾಂಶ ಮೇಲಿನ ತೆರಿಗೆ ಒಂದು ವರ್ಷದ ಅವಧಿಗೆ ಮನ್ನಾ
01:27 PM
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್ ಕೊಡುಗೆ. ಒಂದು ವರ್ಷ ಲಾಭಾಂಶದ ಮೇಲೆ ತೆರಿಗೆ ಕಟ್ಟಬೇಕಾಗಿಲ್ಲ
01:26 PM
ವಾರ್ಷಿಕ 05 ಕೋಟಿ ವ್ಯವಹಾರಕ್ಕೆ ಆಡಿಟ್ ರಿಯಾಯ್ತಿ
01:25 PM
ಮನೆ ಸಾಲದ ಮೇಲಿನ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆ
01:25 PM
ಸ್ಟಾರ್ಟ್ ಅಪ್ ಗಳಿಗೆ 05 ವರ್ಷಗಳವರೆಗೆ ತೆರಿಗೆ ವಿನಾಯಿತಿ
01:20 PM
05 ಲಕ್ಷ ದಿಂದ 7.5 ಲಕ್ಷ ವಾರ್ಷಿಕ ಆದಾಯಕ್ಕೆ 10% ತೆರಿಗೆ (ಹಿಂದೆ ಇದ್ದಿದ್ದು 20%)
01:13 PM
07.5 ಲಕ್ಷದಿಂದ 10 ಲಕ್ಷ ವಾರ್ಷಿಕ ಆದಾಯಕ್ಕೆ 15% ತೆರಿಗೆ (ಹಿಂದೆ ಇದ್ದಿದ್ದು 20%)
01:13 PM
10 ಲಕ್ಷದಿಂದ 12.5 ಲಕ್ಷದವರೆಗಿನ ವಾರ್ಷಿಕ ಆದಾಯಕ್ಕೆ20% ತೆರಿಗೆ (ಹಿಂದೆ ಇದ್ದಿದ್ದು 30%)
01:13 PM
15 ಲಕ್ಷಕ್ಕಿಂತಲೂ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ 30% ತೆರಿಗೆ
01:13 PM
05 ಲಕ್ಷದವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಿರುವುದಿಲ್ಲ
01:04 PM
ಹೊಸದಾಗಿ ಹೂಡಿಕೆ ಮಾಡುವ ಸಂಸ್ಥೆಗಳಿಗೆ ತೆರಿಗೆ ರಿಲೀಫ್
01:03 PM
ಉತ್ಪಾದನಾ ವಲಯದಲ್ಲಿ ಕಾರ್ಪೊರೇಟ್ ತೆರಿಗೆ ಶೇ.15ರಷ್ಟು ಇಳಿಕೆ
01:02 PM
2020ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿ 3.8% ಆಗಿದ್ದರೆ 2021ರಲ್ಲಿ ವಿತ್ತೀಯ ಕೊರತೆಯನ್ನು3.5%ಕ್ಕೆ ಇಳಿಸುವ ಗುರಿ.
12:59 PM
2020-21ರಲ್ಲಿ ಅಂದಾಜು ವೆಚ್ಚ 30.42 ಲಕ್ಷ ಕೋಟಿ ರೂ.
12:58 PM
2020-21ರಲ್ಲಿ 22.66 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಗುರಿ
12:57 PM
2021ರಲ್ಲಿ ಜಿಡಿಪಿ ಶೇ.10ರ ದರದಲ್ಲಿ ಏರಿಕೆಯಾಗುವ ವಿಶ್ವಾಸ
12:56 PM
ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಾಲಗಳಿಗೆ ಭಾಗಶಃ ಗ್ಯಾರಂಟಿ
12:56 PM
15ನೇ ಹಣಕಾಸು ಆಯೋಗದ ವರದಿಗೆ ಒಪ್ಪಿಗೆ
12:53 PM
ಎಲ್.ಐ.ಸಿ.(LIC)ಯಲ್ಲಿರುವ ಸರಕಾರಿ ಹೂಡಿಕೆಯಲ್ಲಿ ಅಲ್ಪ ಪಾಲು ಮಾರಾಟ
12:52 PM
ಡಿಪಾಸಿಟ್ ವಿಮೆ ಮೊತ್ತ 01 ಲಕ್ಷದಿಂದ 05 ಲಕ್ಷಕ್ಕೆ ಏರಿಕೆ
12:51 PM
ಹಣದ ಹರಿವಿನ ಪ್ರಮಾಣ ಹೆಚ್ಚಳಕ್ಕೆ ಕ್ರಮ
12:51 PM
ಐಡಿಬಿಐ (IDBI)ಬ್ಯಾಂಕ್ ಸಂಪೂರ್ಣ ಖಾಸಗೀಕರಣ
12:50 PM
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಹೆಚ್ಚಳಕ್ಕೆ ಕ್ರಮ
12:49 PM
ಕೌಶಲಾಭಿವೃದ್ಧಿ ಯೋಜನೆಗಳ ಉತ್ತೇಜನಕ್ಕಾಗಿ 3000 ಕೋಟಿ ರೂಪಾಯಿಗಳ ಅನುದಾನ
12:48 PM
ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ವಿವಿಧ ಅಬಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ 2.83 ಲಕ್ಷ ಕೋಟಿ ರೂಪಾಯಿಗಳ ಅನುದಾನ
12:47 PM
ಬ್ಯಾಂಕ್ ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರಕಾರದ ತೀವ್ರ ನಿಗಾ
12:46 PM
ನೂತನ ಕೇಂದ್ರಾಡಳಿತ ಪ್ರದೇಶ ಲಢಾಕ್ ಗಾಗಿ 5,958 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ
12:44 PM
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಯೋಜನೆಗಳಿಗಾಗಿ 30,757 ಕೋಟಿ ರೂಪಾಯಿಗಳ ಅನುದಾನ ಘೋಷಣೆ
12:40 PM
ಹಿರಿಯ ನಾಗರಿಕರು ಹಾಗೂ ಒಬಿಸಿ ವರ್ಗಗಳ ಅಭಿವೃದ್ಧಿ ಯೋಜನೆಗಳಿಗಾಗಿ 9,500 ಕೋಟಿ ರೂಪಾಯಿಗಳ ನೆರವು
12:39 PM
ಪರಿಶಿಷ್ಟ ಜಾತಿಗಳ ಅಭಿವೃದ್ಧಿಗಾಗಿ 85ಸಾವಿರ ಕೋಟಿ ರೂಪಾಯಿ ಪರಿಶಿಷ್ಟ ಮತ್ತು ಪಂಗಡಗಳ ಅಭಿವೃದ್ಧಿಗಾಗಿ 53,700 ಕೋಟಿ ರೂಪಾಯಿಗಳ ಅನುದಾನ ಘೋಷಣೆ
12:36 PM
ನಾನ್ ಗಜೆಟೆಡ್ ಹುದ್ದೆಗಳಲ್ಲಿ ಭಾರೀ ಸುಧಾರಣೆ ಘೋಷಣೆ.ಸಾಮಾನ್ಯ ಪರೀಕ್ಷಾ ಪದ್ಧತಿ ಅಳವಡಿಕೆ
12:35 PM
ತೆರಿಗೆ ಕಿರುಕುಳ ಪ್ರಕರಣಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ
12:34 PM
ಜನಸಾಮಾನ್ಯರ ಜೀವನವನ್ನು ಸುಗಮವಾಗಿಸುವುದೇ ನಮ್ಮ ಗುರಿ
12:33 PM
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸರಕಾರದ ಆದ್ಯತೆ
12:30 PM
ರಾಷ್ಟ್ರೀಯ ಭದ್ರತೆ ಈ ಸರಕಾರದ ಪ್ರಥಮ ಆದ್ಯತೆ
12:30 PM
ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಅನಿಲ ಹೊರಹಾಕುವ ಕಾರ್ಖಾನೆಗಳನ್ನು ಮುಚ್ಚಲು ಕ್ರಮ
12:29 PM
ಅಹಮದಾಬಾದ್ ನಲ್ಲಿ ಸಿಂಧೂ ನಾಗರಿಕತೆಯ ಮಹತ್ವವನ್ನು ಸಾರುವ ಮ್ಯೂಸಿಯಂ ಸ್ಥಾಪನೆ
12:28 PM
ಸದನದಲ್ಲಿ ತಿರುವಳ್ಳರ್ ತ್ರಿಪದಿ ಮೂಲಕ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಪ್ರತಿಪಾದಿಸಿದ ಅರ್ಥ ಸಚಿವೆ.
12:27 PM
ಸ್ವಚ್ಛ ಗಾಳಿ ಪೂರಕ ಯೋಜನೆಗಳಿಗಾಗಿ 4,400 ಕೋಟಿ ರೂಪಾಯಿಗಳ ಅನುದಾನ
12:25 PM
ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 53,700 ಕೋಟಿ ರೂಪಾಯಿಗಳ ಅನುದಾನ
12:25 PM
ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ 2,500 ಕೋಟಿ ರೂಪಾಯಿ ಘೋಷಣೆ
12:23 PM
ಜಾರ್ಖಂಡ್ ನಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ
12:23 PM
ಸಂಸ್ಕೃತಿ ಸಚಿವಾಲಯಕ್ಕೆ 3150 ಕೋಟಿ ರೂಪಾಯಿಗಳ ಅನುದಾನ
12:21 PM
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28,600 ಕೋಟಿ ರೂಪಾಯಿಗಳ ಅನುದಾನ
12:19 PM
ಪೌಷ್ಠಿಕಾಂಶ ಪೂರಕ ಯೋಜನೆಗಳಿಗಾಗಿ 35,600 ಕೋಟಿ ರೂಪಾಯಿಗಳ ಅನುದಾನ
12:17 PM
ಗರ್ಭಿಣಿಯರ ಮರಣ ಪ್ರಮಾಣ ತಡೆಗೆ ಹೊಸ ಟಾಸ್ಕ್ ಫೋರ್ಸ್ ಸ್ಥಾಪನೆ
12:16 PM
ಮುಂದಿನ 05 ವರ್ಷಗಳಲ್ಲಿ ಕ್ವಾಂಟಮ್ ಟೆಕ್ನಾಲಜಿಗಾಗಿ 8 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
12:14 PM
ಖಾಸಗಿ ವಲಯದವರಿಗೆ ಡಾಟಾ ಸೆಂಟರ್ ಪಾರ್ಕ್ ನಿರ್ಮಿಸಲು ಆಹ್ವಾನ
12:13 PM
ಎರಡು ರಾಷ್ಟ್ರೀಯ ವಿಜ್ಞಾನ ಯೋಜನೆಗಳಿಗೆ ಅನುದಾನ
12:13 PM
ಅಂಗನವಾಡಿ ಕೇಂದ್ರಗಳಲ್ಲೂ ಇನ್ನು ಮಂದೆ ಇಂಟರ್ನೆಟ್ ಸೌಲಭ್ಯ
12:11 PM
ಒಂದು ಲಕ್ಷ ಗ್ರಾಮಗಳಿಗೆ ಫೈಬರ್ ನೆಟ್ ಸೌಲಭ್ಯ ವಿಸ್ತರಣೆ
12:11 PM
ಭಾರತ್ ನೆಟ್ ಯೋಜನೆಗೆ 2021 ಆರ್ಥಿಕ ವರ್ಷದಲ್ಲಿ 06 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
12:08 PM
ಮುಂದಿನ ಮೂರು ವರ್ಷಗಳೊಳಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.
12:08 PM
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ 22 ಸಾವಿರ ಕೋಟಿ ರೂ. ಅನುದಾನ
12:07 PM
27ಸಾವಿರ ಕಿಲೋಮೀಟರ್ ಹಳಿಗಳ ವಿದ್ಯುದ್ದೀಕರಣ ಪೂರ್ಣ
12:05 PM
ಉಡಾನ್ ಯೋಜನೆಯಡಿಯಲ್ಲಿ 2024ರೊಳಗೆ 100 ವಿಮಾನ ನಿಲ್ದಾಣಗಳ ಸ್ಥಾಪನೆ
12:05 PM
ಭಾರತೀಯ ರೈಲ್ವೇಯಲ್ಲಿ ಸೌರ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕ್ರಮ
12:05 PM
18,600 ಕೋಟಿ ರೂಪಾಯಿಗಳ ಬೆಂಗಳೂರು ಸಬ್ ಅರ್ಬನ್ ಟ್ರಾನ್ಸ್ ಪೋರ್ಟೇಷನ್ ಯೋಜನೆ ಜಾರಿಗೆ ಅಸ್ತು. ಇದರಲ್ಲಿ ಕೇಂದ್ರದ ಪಾಲು 20%.
12:03 PM
ಭಾರತೀಯ ರೈಲ್ವೇ ಇಲಾಖೆಗೆ 05 ಕ್ರಮಗಳ ಘೋಷಣೆ
12:00 PM
ಮೂಲಸೌಕರ್ಯಕ್ಕೆ 103 ಲಕ್ಷ ಕೋಟಿ ರೂ.ಗಳ ಅನುದಾನ. ಮುಂದಿನ 05 ವರ್ಷಗಳ ಅವಧಿಗೆ ಈ ಅನುದಾನ ಮೀಸಲು.
11:59 AM
ರಫ್ತು ಉತ್ತೇಜನಕ್ಕೆ ತೆರಿಗೆ ಕಡಿತ ಮಾದರಿ ಜಾರಿ
11:58 AM
ರಾಷ್ಟ್ರೀಯ ಟೆಕ್ನಿಕಲ್ ಟೆಕ್ಸ್ ಟೈಲ್ ಯೋಜನೆಗೆ 1480 ಕೋಟಿ ರೂಪಾಯಿ ನಿಗದಿ
11:57 AM
ರಫ್ತು ಉದ್ಯಮ ಉತ್ತೇಜನಕ್ಕೆ ‘ನಿರ್ವಿತ್’ ಯೋಜನೆ ಜಾರಿ
11:56 AM
ರಾಷ್ಟ್ರೀಯ ತಾಂತ್ರಿಕ ಜವಳಿ ಯೋಜನೆ ಘೋಷಣೆ
11:55 AM
ರಾಜ್ಯ ಮತ್ತು ಕೇಂದ್ರದಲ್ಲಿ ಇನ್ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸೆಲ್ ಸ್ಥಾಪನೆ
11:55 AM
ಪಿಪಿಪಿ ಯೋಜನೆಯಡಿಯಲ್ಲಿ 05 ಸ್ಮಾರ್ಟ್ ಸಿಟಿಗಳ ನಿರ್ಮಾಣ
11:53 AM
ಕೌಶಲಾಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲು
11:51 AM
ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಕ್ರಮ.
11:49 AM
ಉದ್ಯೋಗಾಧಾರಿತ ಕೋರ್ಸ್ ಗಳಿಗೆ ಆದ್ಯತೆ. ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂಪಾಯಿ ಅನುದಾನ ಮೀಸಲು.
11:48 AM
ಹೊಸದಾಗಿ ರಾಷ್ಟ್ರೀಯ ಪೊಲೀಸ್, ವಿಧಿವಿಜ್ಞಾನ ವಿವಿ ಸ್ಥಾಪನೆ. ಹೊಸ ವೈದ್ಯರ ಉತ್ತೇಜನಕ್ಕಾಗಿ ಮೆಡಿಕಲ್ ಕಾಲೇಜು ಸ್ಥಾಪನೆ.
11:47 AM
ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಆನ್ ಲೈನ್ ಕೋರ್ಸ್. ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜು ಸ್ಥಾಪನೆ.
11:46 AM
ಸ್ಥಳೀಯ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ತರಬೇತಿ. 150 ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು.
11:45 AM
ಶಿಕ್ಷಣದಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ. ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಘೋಷಣೆಯಾಗಲಿದೆ.
11:44 AM
ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂಪಾಯಿ ಅನುದಾನ. ಹೊಸ ಶಿಕ್ಷಣ ನೀತಿ ಜಾರಿಗೆ ಕ್ರಮ.
11:42 AM
ಎಲ್ಲಾ ಜಿಲ್ಲೆಗಳಲ್ಲಿ ಜನೌಷಧ ಮಳಿಗೆ ಸ್ಥಾಪನೆ. ಜಲಜೀವನ ಯೋಜನೆಗೆ 3.6 ಲಕ್ಷ ಕೋಟಿ ರೂಪಾಯಿ ಮೀಸಲು.
11:42 AM
ಪಿಎಂ ಆರೋಗ್ಯ ಯೋಜನೆ ಮೂಲಕ 20 ಸಾವಿರ ಆಸ್ಪತ್ರೆಗೆಳಿಗೆ ನೆರವು. ಆರೋಗ್ಯಕ್ಕೆ 69 ಸಾವಿರ ಕೋಟಿ ರೂಪಾಯಿ ಅನುದಾನ.
11:41 AM
ಆಯುಷ್ಮಾನ್ ಭಾರತ ಯೋಜನೆಯಡಿ 112 ಜಿಲ್ಲೆಗಳಿಗೆ ಹೊಸ ಆಸ್ಪತ್ರೆ ನಿರ್ಮಾಣ ಗುರಿ. ಜಲಜೀವನ್ ಮಿಷನ್ ಯೋಜನೆ.
11:40 AM
ಸಾಗರ ಮಿತ್ರ ಯೋಜನೆಯಡಿ ಮತ್ಸೋದ್ಯಮಕ್ಕೆ ಉತ್ತೇಜನ. 12 ರೋಗಗಳಿಗೆ ಮಿಷನ್ ಇಂದ್ರಧನುಷ್ ಯೋಜನೆ ಜಾರಿ.
11:39 AM
ಕೃಷಿ ವಲಯಕ್ಕೆ 2.83 ಲಕ್ಷ ಕೋಟಿ ರೂಪಾಯಿ ಅನುದಾನ. ಗ್ರಾಮೀಣಾಭಿವೃದ್ದಿಗೆ 1.23 ಲಕ್ಷ ಕೋಟಿ ರೂಪಾಯಿ ಮೀಸಲು.
11:37 AM
ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ. ಕೃಷಿ ಉತ್ಪನ್ನಗಳಿಗಾಗಿ ಇ ಮಾರುಕಟ್ಟೆ. 500 ಮೀನು ಉತ್ಪಾದಕರ ಸಂಘ ಸ್ಥಾಪನೆ.
11:35 AM
ಜಾನುವಾರುಗಳ ಕಾಲು ಬಾಯಿ ರೋಗ ತಡೆಗೆ ಕ್ರಮ. ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಾರುಕಟ್ಟೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಪ್ರಸ್ತಾವನೆ.
11:34 AM
ನಬಾರ್ಡ್ ಗೆ 15 ಲಕ್ಷ ಕೋಟಿ ರೂಪಾಯಿ ಘೋಷಣೆ. ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಜೈವಿಕ್ ಖೇತಿ ಯೋಜನೆ ಜಾರಿ.
11:32 AM
ಅನ್ನದಾತರನ್ನು ವಿದ್ಯುತ್ ಉತ್ಪಾದಕರನ್ನಾಗಿ ಮಾಡುತ್ತೇವೆ. ಗ್ರಾಮ, ಗ್ರಾಮಗಳಲ್ಲಿ ಈ ಯೋಜನೆ ಜಾರಿ.
11:31 AM
ರೈತರ ಅನುಕೂಲಕ್ಕಾಗಿ ಕೃಷಿ ರೈಲು, ಕೃಷಿ ಉಡಾನ್ ಯೋಜನೆ ಜಾರಿ. ಮುದ್ರಾ, ನಬಾರ್ಡ್ ಯೋಜನೆಯಡಿ ಸಾಲ ಸೌಲಭ್ಯ.
11:30 AM
ರೈತರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ. ರೈತ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ. ಕುಸುಮ್ ಯೋಜನೆ ವಿಸ್ತರಣೆ. ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ.
11:29 AM
ಪ್ರಧಾನಮಂತ್ರಿ ಫಸಲ್ ಭೀಮ್ ಯೋಜನೆ. ರೈತರ ಪಂಪ್ ಸೆಟ್ ಸೌರ ವಿದ್ಯುತ್ ಜತೆ ಜೋಡಣೆ. ಫಸಲ್ ಭೀಮಾ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲ.
11:28 AM
ಸಮತೋಲಿತ ರಸಗೊಬ್ಬರ ಬಳಕೆ ಯೋಜನೆ ಜಾರಿ. ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಬಳಕೆಗೆ ಪ್ರೋತ್ಸಾಹ.
11:27 AM
ಅನ್ನದಾತ ವಿದ್ಯುತ್ ದಾತನೂ ಆಗುತ್ತಾನೆ. ಬರಡು ಭೂಮಿಯಲ್ಲಿ ಸಾವಯವ ಕೃಷಿ ಮಾಡಲು ಪ್ರೋತ್ಸಾಹ. ದೇಶದ 100 ಜಿಲ್ಲೆಗಳಲ್ಲಿ ಜಲವರ್ಧನೆಗೆ ಕ್ರಮ.
11:26 AM
2016ರ ಮಾದರಿ ಕೃಷಿ ಭೂಮಿ ಸುಧಾರಣೆಗಳನ್ನು ರಾಜ್ಯ ಜಾರಿಗೆ ತರಲಿ. 20 ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ.ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ.
11:24 AM
ಕೃಷಿ ಮಾರುಕಟ್ಟೆ ಉದಾರೀಕರಣಗೊಳಿಸಲು ಕ್ರಮ. ಕೃಷಿ ಅಭಿವೃದ್ದಿಗೆ 16 ಅಂಶಗಳು ಪ್ರಕಟ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕ್ರಮ.
11:23 AM
2022ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆರ್ಥಿಕ ಒಳಗೊಳ್ಳುವಿಕೆ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಿಸುತ್ತದೆ.
11:21 AM
ನಮ್ಮ ದೇಶ ವಿಶ್ವದಲ್ಲೇ ಇಷ್ಟದ ದೇಶ, ಶಾಲಿಮಾರ್ ತೋಟದಲ್ಲಿ ಅರಳುವ ಹೂವಿನಂತೆ ನಮ್ಮ ದೇಶ, ಯುವಕರ ಬಿಸಿ ರಕ್ತದ ರೀತಿ ನಮ್ಮ ದೇಶ, ದಾಲ್ ಸರೋವರದಲ್ಲಿ ಅರಳುವ ಕಮಲದಂತೆ ನಮ್ಮ ಭಾರತ...
11:20 AM
ಅಂತ್ಯೋದಯ ಉದ್ಧಾರಕ್ಕೆ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಜೆಟ್ ಮಂಡನೆ ನಡುವೆ ಶಾಯರಿ ಹೇಳಿದ ನಿರ್ಮಲಾ ಸೀತಾರಾಮನ್.
11:19 AM
ಈ ಬಾರಿಯ ಬಜೆಟ್ 3 ಅಂಶಗಳ ಮೇಲೆ ನಿಂತಿದೆ. ಆಕಾಂಕ್ಷೆಯ ಭಾರತ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾಳಜಿ.
11:18 AM
ಕಳೆದ 5 ವರ್ಷಗಳಲ್ಲಿ ಭಾರತೀಯರನ್ನು ಉದ್ಯಮಶೀಲರನ್ನಾಗಿಸಲು ಪ್ರಯತ್ನಿಸಲಾಗಿದೆ. ಭಾರತ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ.
11:17 AM
271 ಮಿಲಿಯನ್ ಜನರು ಬಡತನದಿಂದ ಹೊರ ಬಂದಿದ್ದಾರೆ. 2018-19ರಲ್ಲಿ ಶೇ.7ರಷ್ಟು ದೇಶದ ಆರ್ಥಿಕ ವೃದ್ದಿ ದರ ದಾಖಲಾಗಿತ್ತು.
11:15 AM
ಹಿಂದುಳಿದ ವರ್ಗಗಳಿಗೆ ಸಾಲ ಸೌಲಭ್ಯ, ಡಿಜಿಟಲ್ ಇಂಡಿಯಾ ಗುರಿ ಸಾಕಾರದತ್ತ ಹೆಜ್ಜೆ ಹಾಕಿದೆ. ಈ ಬಜೆಟ್ ದೇಶದ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ.
11:14 AM
40 ಕೋಟಿ ಜನರು ಈ ಬಾರಿ ಜಿಎಸ್ ಟಿ ಪಾವತಿಸಿದ್ದಾರೆ. ಜಿಎಸ್ ಟಿಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ.
11:14 AM
ನಮ್ಮ ಪ್ರಧಾನಿ ಮೋದಿಯಿಂದಾಗಿ ಸರ್ಕಾರ ನೀಡುವ ಪ್ರತಿ ಪೈಸೆ ನಾಗರಿಕನಿಗೆ ಸಿಗುತ್ತಿದೆ. ಗೃಹ ನಿರ್ಮಾಣದ ಮೂಲಕ ಜನರಿಗೆ ನೆರವು.
11:12 AM
ಈ ಬಜೆಟ್ ಆದಾಯ ಹೆಚ್ಚಳಕ್ಕೆ ಉತ್ತೇಜನ ನೀಡಲಿದೆ. ವಾರ್ಷಿಕವಾಗಿ ಒಂದು ಲಕ್ಷ ಕೋಟಿ ರೂಪಾಯಿ ತೆರಿಗೆ ವಿನಾಯ್ತಿ ಸಿಕ್ಕಿದೆ.
11:12 AM
ಸಾರಿಗೆ ವಲಯದಲ್ಲಿ ಭಾರೀ ಅಭಿವೃದ್ಧಿಗೆ ಜಿಎಸ್ ಟಿ ಕಾರಣವಾಗಿದೆ. ಜಿಎಸ್ ಟಿಯಿಂದ ಪ್ರತಿಯೊಂದು ಕುಟುಂಬಕ್ಕೂ ಒಳಿತಾಗಿದೆ.
11:11 AM
ಚೆಕ್ ಪೋಸ್ಟ್ ಗಳ ನಿರ್ಮೂಲನೆಯಿಂದ ಶೇ.20ರಷ್ಟು ಸಮಯ ಉಳಿತಾಯ. ಜಿಎಸ್ ಟಿ ಜಾರಿಯಿಂದ ರಾಜಕೀಯ ಮೀರಿ ಬೆಳೆಯುತ್ತದೆ ಎಂಬುದು ಸಾಬೀತಾಗಿದೆ.
11:10 AM
ಕೊಳಕು ರಾಜಕೀಯವನ್ನು ಮೀರಿ ಭಾರತ ಬೆಳೆಯಲು ಸಾಧ್ಯವಿದೆ ಎಂಬುದು ಸಾಬೀತಾಗಿದೆ ಎಂಬ ಹೇಳಿಕೆಗೆ ಮೇಜು ಕುಟ್ಟಿ ಸ್ವಾಗತಿಸಿದ ಬಿಜೆಪಿ ಸಂಸದರು.
11:09 AM
ಬ್ಯಾಂಕಿಂಗ್ ವಲಯಕ್ಕೆ ಕೇಂದ್ರ ಸರ್ಕಾರ ಹಣ ಹೊಂದಿಸಿದೆ. ಬ್ಯಾಂಕಿಂಗ್ ವಲಯವನ್ನು ಸ್ವಚ್ಛಗೊಳಿಸಲಾಗಿದೆ. ಇವತ್ತಿನ ಹಣಕಾಸು ಸ್ಥಿತಿ ಉತ್ತಮವಾಗಿರಲು ಜೇಟ್ಲಿ ಕಾರಣ.
11:08 AM
2019-20ರ ಸಾಲಿನಲ್ಲಿ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ.
11:07 AM
ಯುವ ಜನತೆ, ಮಹಿಳೆಯರು ಹಾಗೂ ಸಮಾಜದ ಎಲ್ಲಾ ಜನರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ.
11:06 AM
ಅಭಿವೃದ್ಧಿ ದರ ಹೆಚ್ಚಳ ಮಾಡುವಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಎಸ್ ಸಿ, ಎಸ್ ಟಿ ಶ್ರೇಯೋಭಿವೃದ್ಧಿಗೆ ಬಜೆಟ್ ಮಂಡಿಸಿದ್ದೇನೆ.
11:04 AM
ಲೋಕಸಭೆಯಲ್ಲಿ 2ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
11:03 AM
ಬಜೆಟ್ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಅನುಮತಿ ನೀಡಿದ ಸ್ಪೀಕರ್.
11:02 AM
2020-21ನೇ ಸಾಲಿನ ಬಜೆಟ್ ಮಂಡನೆ ಆರಂಭ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಲೋಕಸಭೆ ಸ್ಪೀಕರ್ ಬಳಿ ಅನುಮತಿ ಕೋರಿಕೆ.
10:54 AM
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ಆಗಮನ. ಬಜೆಟ್ ಮಂಡನೆಗೆ ಕ್ಷಣಗಣನೆ.
10:46 AM
ಅಮೆರಿಕ-ಇರಾನ್ ಸಂಘರ್ಷದಿಂದ ಎಫ್ ಡಿಐ ಹರಿವು ಕಡಿಮೆಯಾಗಬಹುದು. ಜಾಗತಿಕ ವ್ಯಾಪಾರ ಸಂಘರ್ಷಗಳಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ.
10:45 AM
ಈ ಬಾರಿಯ ಬಜೆಟ್ ನಲ್ಲಿಯೂ ಎಲ್ಲರ ಕಣ್ಣು ಆದಾಯ ತೆರಿಗೆ ಮೇಲೆ ಇದೆ. ಇದರ ಸ್ಲ್ಯಾಬ್ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
10:31 AM
ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ. ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ.
10:05 AM
ಕೇಂದ್ರ ಬಜೆಟ್ ಮಂಡನೆಗೂ ಮುನ್ನ 10-15ಕ್ಕೆ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಬಜೆಟ್ ಮಂಡನೆಗೆ ಅನುಮೋದನೆ ನೀಡಲಿದೆ.
10:04 AM
ಬಜೆಟ್ ಮಂಡನೆ ಹಿನ್ನೆಲೆ ಮುಂಬೈ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 200 ಅಂಕ ಕುಸಿತ, ನಿಫ್ಟಿ 11,950ಕ್ಕೆ ಇಳಿಕೆ.
09:59 AM
2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ, ಇಂದು ಬೆಳಗ್ಗೆ 11ಗಂಟೆಗೆ ನಿರ್ಮಲಾ ಅವರಿಂದ ಬಜೆಟ್ ಮಂಡನೆ.
09:56 AM
ಬಜೆಟ್ ಮಂಡನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಒಪ್ಪಿಗೆ ಪಡೆಯಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
09:38 AM
ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಮಿತಿಯನ್ನು 2.5 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ನಿರೀಕ್ಷೆ.
09:17 AM
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಇದೀಗ ನೀಡಲಾಗುತ್ತಿರುವ 6000 ರೂಪಾಯಿಗಳನ್ನು 8000 ರುಪಾಯಿಗಳಿಗೆ ಹೆಚ್ಚಿಸುವ ನಿರೀಕ್ಷೆ ಇದೆ.
09:17 AM
ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಆಕರ್ಷಕ ಕೊಡುಗೆಗಳನ್ನು ನಿರ್ಮಲಾ ಅವರು ಇಂದಿನ ತಮ್ಮ ಬಜೆಟ್ ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.
09:02 AM
ನಿರ್ಮಲಾ ಸೀತಾರಾಮನ್ ಅವರು ಇದೀಗ ವಿತ್ತ ಕಛೇರಿಗೆ ಆಗಮಿಸಿದ್ದಾರೆ. ಅವರಿಗೆ ವಿತ್ತ ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಸಾಥ್ ನೀಡಿದ್ದಾರೆ.
08:59 AM
ಸ್ವತಂತ್ರ ಭಾರತದ ಎರಡನೇ ಮಹಿಳಾ ವಿತ್ತ ಸಚಿವೆಯಾಗಿರುವ ಹಾಗೂ ಪ್ರಪ್ರಥಮ ಸ್ವತಂತ್ರ ಮಹಿಳಾ ವಿತ್ತ ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಎರಡನೇ ಬಜೆಟನ್ನು ಮಂಡಿಸಲಿದ್ದಾರೆ.
08:53 AM
2024-25ರಲ್ಲಿ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಸಾಧಿಸುವಂತಾಗಲು ಈ ವಿತ್ತ ವರ್ಷದಲ್ಲಿ 1.4 ಟ್ರಿಲಿಯನ್ ಡಾಲರ್ ಗಳನ್ನು ಮೂಲ ಸೌಕರ್ಯ ಕ್ಷೇತ್ರದಲ್ಲಿ ವ್ಯಯಿಸುವ ಅಗತ್ಯವಿದೆ.
08:51 AM
ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣಾ ಕ್ರಮಗಳನ್ನು ಪ್ರಕಟಿಸುವಂತೆ ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ.
08:48 AM
2020ರ ಮೊದಲ ಕೇಂದ್ರ ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರ್ವ ಸಿದ್ಧತೆ.