08:49 PM
ನಾಳೆ ಮಧ್ಯಾಹ್ನ 1.30 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ ರಾಜ್ಯಪಾಲರು. ಪತ್ರದ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿರ್ದೇಶನ ನೀಡಿದ ರಾಜ್ಯಪಾಲ ವಜೂಭಾಯ್ ವಾಲಾ.
06:22 PM
ವಿಧಾನಸಭಾ ಕಲಾಪವನ್ನು ನಾಳೆಗೆ ಮುಂದೂಡಿದ ಉಪಸಭಾಧ್ಯಕ್ಷರು.
06:20 PM
ಇಂದು ಸದನದಲ್ಲೇ ಉಳಿಯುತ್ತೇವೆಂದು ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆ
06:16 PM
ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆಗೆ ಬಿಜೆಪಿ ಸದಸ್ಯರ ಪಟ್ಟು.
06:14 PM
ವಿಧಾನಸಭಾ ಕಲಾಪ ಮತ್ತೆ ಆರಂಭ
05:51 PM
ತೀವ್ರ ಗದ್ದಲದ ಹಿನ್ನೆಲೆಯಲ್ಲಿ ವಿಧಾನ ಸಭಾ ಕಲಾಪ 10 ನಿಮಿಷಗಳ ಕಾಲ ಮುಂದೂಡಿಕೆ
05:46 PM
ಸದನದಲ್ಲಿ ಶ್ರೀಮಂತ ಕುಮಾರ್ ಫೋಟೋ ಹಿಡಿದು ಕಾಂಗ್ರೆಸ್ ಜೆಡಿಎಸ್ ಸದಸ್ಯರಿಂದ ಪ್ರತಿಭಟನೆ
05:39 PM
ಸಿಎಂ ವಿಶ್ವಾಸಮತ ಯಾಚನೆ ಮಾಡುತ್ತೇವೆ ಎಂದಿದ್ದಕ್ಕೆ ನಾವು ಬಂದಿದ್ದೇವೆ.ಕೆಎಸ್ ಈಶ್ವರಪ್ಪ, ಬಸವರಾಜ ಬೊಮ್ಮಾಯಿ.
05:37 PM
ಕಲಾಪದ ಮಧ್ಯೆಯೇ ಎದ್ದು ಹೋದ ಸ್ಪೀಕರ್ ರಮೇಶ್ ಕುಮಾರ್. ನಾವೇನು ಸುಮ್ಮನೆ ಬಂದಿಲ್ಲ ಇಲ್ಲಿ ಕೂಡಲೇ ವಿಶ್ವಾಸಮತ ಯಾಚಿಸಿ-ಬಿಜೆಪಿ ಆಗ್ರಹ.
05:30 PM
ಸದನದ ನಡಾವಳಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತಿಲ್ಲ ಎಂದ ಕಾಂಗ್ರೆಸ್ ಹಿರಿಯ ಮುಖಮಡ ಎಚ್.ಕೆ.ಪಾಟೀಲ್
05:17 PM
ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿದ್ದು ನಿಜ, ವಿಶ್ವಾಸಮತ ಯಾಚನೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇವು- ಕೆಎಸ್ ಈಶ್ವರಪ್ಪ
05:11 PM
ಒಬ್ಬೊಬ್ಬರಿಗೆ 5 ನಿಮಿಷ ಕಾಲಾವಕಾಶ ಕೊಡಿ,ಆದರೆ ಇವತ್ತು ರಾತ್ರಿ 12ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ ಎಂದು ಮನವಿ ಮಾಡಿಕೊಂಡ ಬಿಎಸ್ ಯಡಿಯೂರಪ್ಪ
05:08 PM
ಈ ಸದನದ ಹಕ್ಕನ್ನು ನೀವು ರಕ್ಷಿಸಬೇಕು. ಶಾಸಕರ ಕಣ್ಮರೆ ಬಗ್ಗೆ ಚರ್ಚೆಯಾಗಲಿ ಎಂದ ಸಚಿವ ಕೃಷ್ಣಭೈರೇಗೌಡ. ಬಿಜೆಪಿ ತೀವ್ರ ಆಕ್ಷೇಪ.
05:07 PM
ರಾಜ್ಯಪಾಲರು ನಮಗೆ ಸಂದೇಶ ಮಾತ್ರ ನೀಡಿದ್ದಾರೆ,ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ ಸ್ಪೀಕರ್ ರಮೇಶ್ ಕುಮಾರ್
05:00 PM
ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂಬ ರಾಜ್ಯಪಾಲರ ಸೂಚನೆಗೆ ಕಾಂಗ್ರೆಸ್ ಆಕ್ಷೇಪ.
05:00 PM
ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆಯೇ ಮತ್ತೆ ಕೋಲಾಹಲ. ಇಂದೇ ಬಹುಮತ ಸಾಬೀತುಪಡಿಸಿ ರಾಜ್ಯಪಾಲರಿಂದ ಸ್ಪೀಕರ್ ಗೆ ಸಂದೇಶ.
04:31 PM
ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಗೆ ಆಗಮಿಸಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ. ಕಾನೂನು ತೊಡಕಿನ ಕುರಿತು ಚರ್ಚೆ.
04:31 PM
ಕ್ರಿಯಾಲೋಪದ ಬಗ್ಗೆಯಷ್ಟೇ ಬಿಜೆಪಿ ಶಾಸಕರು ಬೆಳಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯಾಹ್ನ ಭೋಜನ ವಿರಾಮದ ನಂತರ ಕಲಾಪ ಆರಂಭವಾದಾಗ ಸ್ಪೀಕರ್ ವಿರುದ್ಧ ವಾಗ್ದಾಳಿ.
04:29 PM
ವಿಪ್ ಜಾರಿ ಗೊಂದಲಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಅಡ್ವೋಕೇಟ್ ಜನರಲ್ ಜೊತೆ ಸ್ಪೀಕರ್ ರಮೇಶ್ ಕುಮಾರ್ ಸಮಾಲೋಚನೆ.
04:04 PM
ಬಿಜೆಪಿ ನಿಯೋಗದ ಭೇಟಿಯ ಬೆನ್ನಲ್ಲೇ ಸ್ಪೀಕರ್ ಭೇಟಿಗೆ ಆಗಮಿಸಿದ ರಾಜ್ಯಪಾಲರ ವಿಶೇಷಾಧಿಕಾರಿ ಆಗಮನ.
04:03 PM
ಸದನದಲ್ಲಿ ಮುಂದುವರಿದ ಗದ್ದಲ, ಬಹುಮತ ಸಾಬೀತುಪಡಿಸುವ ಬದಲು ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ.
03:57 PM
ವಿಧಾನಸಭೆಯಲ್ಲಿ ಕೋಲಾಹಲದಿಂದ ಕಲಾಪ ಅರ್ಧ ಗಂಟೆ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್
03:53 PM
ಪಾಟೀಲ್ ಮುಂಬೈ ಆಸ್ಪತ್ರೆಗೆ ಹೋಗಿದ್ದೇಕೆ ಎಂಬ ಮಾಹಿತಿ ಪಡೆಯಿರಿ..ಗೃಹ ಸಚಿವರಿಗೆ ಸ್ಪೀಕರ್ ಸೂಚನೆ. ನಿಮ್ಮಿಂದ ಆಗದಿದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಹೇಳುತ್ತೇನೆ.
03:44 PM
ಶಾಸಕರು ಎಲ್ಲಿಗೆ ಹೋದರು ಎಂಬ ಬಗ್ಗೆ ತನಿಖೆ ನಡೆಸುವುದು ನನ್ನ ಕೆಲಸವಲ್ಲ. ಆ ಕೆಲಸ ಗೃಹ ಸಚಿವರು ಮಾಡಬೇಕು-ಸ್ಪೀಕರ್
03:43 PM
ಯಾರು ಎಲ್ಲಿಗೆ ಹೋದರು ಎಂಬ ಬಗ್ಗೆ ನಾನು ಮಾತನಾಡಲ್ಲ.ಇದರ ಬಗ್ಗೆ ನನಗೆ ದೂರು ಕೊಡಬೇಕಿತ್ತು.ಪಾಟೀಲ್ ಹೆಸರಿನಲ್ಲಿ ನನಗೆ ಪತ್ರ ಬಂದಿದೆ-ಸ್ಪೀಕರ್
03:36 PM
ಅಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ. ಶಾಸಕರನ್ನು ಮಾರಾಟದ ವಸ್ತು ಮಾಡಲು ನಾವು ಹೋಗಿಲ್ಲ. ಸಿಎಂ ಕುಮಾರಸ್ವಾಮಿ
03:32 PM
ರಾತ್ರೋ ರಾತ್ರಿ ಚೆನ್ನೈಗೆ ತೆರಳಿ, ಅಲ್ಲಿಂದ ಮುಂಬೈಗೆ ತೆರಳಿದ್ದಾರೆ. ಲಕ್ಷ್ಮಣ್ ಸವದಿ ಜೊತೆ ಶ್ರೀಮಂತ ಪಾಟೀಲ್ ಮುಂಬೈಗೆ ಹೋಗಿದ್ದಾರೆ. ದಿನೇಶ್ ಗುಂಡೂರಾವ್
03:31 PM
ಶ್ರೀಮಂತ ಪಾಟೀಲ್ ನಿನ್ನೆ ರಾತ್ರಿ ಆರೋಗ್ಯವಾಗಿದ್ದರು. ರೆಸಾರ್ಟ್ ನಿಂದ ಬಿಜೆಪಿಯವರೇ ಕರೆದೊಯ್ದಿದ್ದಾರೆ.ದಿನೇಶ್ ಗುಂಡೂರಾವ್ ಹೇಳಿಕೆಗೆ ಕೋಲಾಹಲ.
03:28 PM
ವಿಧಾನಸಭೆಯ ಕಲಾಪದಲ್ಲಿ ಮತ್ತೆ ಗದ್ದಲ,ಕೋಲಾಹಲ. ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕರಿಂದ ತೀವ್ರ ಆಕ್ಷೇಪ.
03:25 PM
ಸದನಕ್ಕೆ ವಿಮಾನದ ಟಿಕೆಟ್ ಪ್ರತಿ ತೋರಿಸಿದ ಡಿಕೆ ಶಿವಕುಮಾರ್. ಕಲಾಪದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಕ್ಸಮರ.
03:22 PM
ಪಾಟೀಲರನ್ನು ಬಲವಂತವಾಗಿ ಆಸ್ಪತ್ರೆಯಲ್ಲಿ ಮಲಗಿಸಿದ್ದಾರೆ. ಶಾಸಕರನ್ನು ಹೊತ್ತೊಯ್ದಿರುವ ದಾಖಲೆ ಕೊಡುವೆ-ಡಿಕೆ ಶಿವಕುಮಾರ್
03:22 PM
ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಆಸ್ಪತ್ರೆಯಲ್ಲಿ ಮಲಗಿರುವ ಥರಾ ಫೋಟೋ ಬಿಡುಗಡೆ ಮಾಡಿದ್ದಾರೆ. ಡಿಕೆಶಿ ಆಕ್ರೋಶ.
03:18 PM
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ ಬಿಜೆಪಿ ನಿಯೋಗ.ವಿಧಾನಸಭೆ ಕಲಾಪ ಮತ್ತೆ ಆರಂಭ.
03:06 PM
ರಾಜ್ಯ ಸರ್ಕಾರದ ವಿಶ್ವಾಸಮತ ಯಾಚನೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ರಾಜ್ಯಪಾಲರ ಭೇಟಿಗೆ ನಿರ್ಧಾರ.
02:13 PM
ಕೆಲವು ಗೊಂದಲಗಳಿಗೆ ಸ್ಪಷ್ಟನೆ ಸಿಗುವವರೆಗೆ ವಿಶ್ವಾಸಮತ ಯಾಚನೆ ಮುಂದೂಡುವುದು ಒಳ್ಳೆಯದು ಎಂದು ಮನವಿ ಮಾಡಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ.
01:43 PM
ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್.
01:36 PM
ನನಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಪ್ರಶ್ನೆ ಮುಖ್ಯವಲ್ಲ, ನಾನು ಕಾನೂನು ತಜ್ಞನಲ್ಲ..ಮಾಧುಸ್ವಾಮಿ ಪ್ರಶ್ನೆಗೆ ಸ್ಪೀಕರ್ ಅಸಮಾಧಾನ.
01:13 PM
ಇದು ಕ್ರಿಯಾಲೋಪ ಎತ್ತುವಂತಹ ಪ್ರಶ್ನೆಯೇ ಅಲ್ಲ. ಇದು ಉದ್ದೇಶಪೂರ್ವಕವಾದ ಕ್ರಿಯಾಲೋಪ ಎಂದು ಆರೋಪಿಸಿದ ಬಿಜೆಪಿ ಶಾಸಕರು.
01:12 PM
ಸಿದ್ದರಾಮಯ್ಯ ಜೊತೆ ಚರ್ಚಿಸಿರುವುದಾಗಿ ಕೃಷ್ಣಭೈರೇಗೌಡ ಹೇಳುತ್ತಾರೆ.ಹೀಗಾಗಿ ಇದೊಂದು ಪೂರ್ವ ನಿಯೋಜಿತ ಪಾಯಿಂಟ್ ಆಫ್ ಆರ್ಡರ್ ಚರ್ಚೆ ಎಂದ ಸುರೇಶ್ ಕುಮಾರ್.
01:10 PM
ಇಂದು ವಿಶ್ವಾಸಮತ ಯಾಚನೆ ಪ್ರಮುಖವಾದ ಅಜೆಂಡಾ. ಪಾಯಿಂಟ್ ಆಫ್ ಆರ್ಡರ್ ಗೆ ಸ್ಪೀಕರ್ ಅವಕಾಶ ಕೊಡಲಿ-ಜಗದೀಶ್ ಶೆಟ್ಟರ್
01:05 PM
ಈ ಸಂದರ್ಭದಲ್ಲಿ ಎಲ್ಲದರ ಬಗ್ಗೆ ಚರ್ಚೆ ಮಾಡಲು ಆಗುತ್ತಾ? ಇನ್ನೊಂದು ದಿನ ಚರ್ಚೆ ಮಾಡುವ ಎಂದ ಬಿಜೆಪಿ ಶಾಸಕ ಮಾಧುಸ್ವಾಮಿ
12:49 PM
ಕ್ರಿಯಾಲೋಪ ಮೇಲ್ನೋಟಕ್ಕೆ ಅರ್ಥವಾಗದೆ ಹೋಗಬಹುದು. ಹೀಗಾಗಿ ಸಿದ್ದರಾಮಯ್ಯನವರು ಕ್ರಿಯಾಲೋಪ ಎತ್ತಿದ್ದಾರೆ ಎಂದ ಸಚಿವ ಕೃಷ್ಣಭೈರೇಗೌಡ
12:36 PM
ಎಚ್.ಕೆ.ಪಾಟೀಲ್ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಜೆಸಿ ಮಾಧುಸ್ವಾಮಿ. ದಿನೇಶ್ ಗುಂಡೂರಾವ್ ಆಕ್ಷೇಪ
12:33 PM
ಸಿದ್ದರಾಮಯ್ಯ ಪ್ರತಿಕ್ರಿಯೆ, ವಿರೋಧ ಪಕ್ಷದ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್. ಬಳಿಕ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಚರ್ಚೆ ಆರಂಭ.
12:23 PM
ಸಿದ್ದರಾಮಯ್ಯ ವಿಷಯ ಮಂಡನೆಗೆ ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈಶ್ವರಪ್ಪ ತೀವ್ರ ಆಕ್ಷೇಪ ಸದನದಲ್ಲಿ ಕೋಲಾಹಲ.
12:15 PM
ವಿಧಾನಸಭೆಯ ಪಡಸಾಲೆಯಲ್ಲಿ ವಿಧಾನಪರಿಷತ್ ಸದಸ್ಯರ ಪಹರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರಿಂದ ಪಹರೆ.
12:14 PM
ನಮ್ಮ ಸದಸ್ಯರಿಗೆ ವಿಪ್ ಕೊಡುವ ಅಧಿಕಾರ ನನಗಿದೆ.ಆದರೆ ಸುಪ್ರೀಂಕೋರ್ಟ್ ಆದೇಶ ನಮಗೆ ಗೊಂದಲ ಮೂಡಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ಬೇಕಾಗಿದೆ.
12:12 PM
ಸಿದ್ದರಾಮಯ್ಯ ಮಾತಿಗೆ ಮತ್ತೆ ಮಾಧುಸ್ವಾಮಿ ಆಕ್ಷೇಪ,ಇದಕ್ಕೆ ಆಡಳಿತ, ವಿರೋಧ ಪಕ್ಷ ಸದಸ್ಯರ ವಾಕ್ಸಮರ.
12:06 PM
ನಾನೂ ಕೂಡಾ ನಾಲ್ಕು ವರ್ಷ ವಿಪಕ್ಷ ನಾಯಕನಾಗಿದ್ದೆ, ಬಾಯಿತಪ್ಪಿ ಹಾಗೆ ಅಂದಿದ್ದಕ್ಕೆ ಮೇಜು ಗುದ್ದಿ ಹರ್ಷಪಡುತ್ತೀರಾ?ಇರಲಿ ಸ್ವಲ್ಪವಾದರೂ ಖುಷಿಯಾಗಲಿ-ಸಿದ್ದರಾಮಯ್ಯ
12:05 PM
ಮಾತನಾಡುವ ಭರದಲ್ಲಿ ನಾನು ವಿಪಕ್ಷ ನಾಯಕ ಎಂದ ಸಿದ್ದರಾಮಯ್ಯ, ಇದಕ್ಕೆ ಮೇಜು ಗುದ್ದಿ ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು.
12:03 PM
ಸಂವಿಧಾನದ ಕುರಿತು ಸ್ಪಷ್ಟನೆ ಕೇಳಲು ಕ್ರಿಯಾಲೋಪ ಎತ್ತಿದ್ದೇನೆ. ಎಲ್ಲಾ ಸದಸ್ಯರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ-ಸಿದ್ದರಾಮಯ್ಯ
12:01 PM
ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ಕೀರ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ಸಲ್ಲಬೇಕು-ಸಿದ್ದರಾಮಯ್ಯ
12:00 PM
ಪಕ್ಷಾಂತರ ಪಿಡುಗನ್ನ ಕೊನೆಗಾಣಿಸಬೇಕಾಗಿದೆ.ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಸಿದ್ದರಾಮಯ್ಯ.
11:56 AM
ಸ್ಪೀಕರ್ ವ್ಯಾಪ್ತಿಯೊಳಗೆ ಬರುವ ವಿಷಯಗಳ ಬಗ್ಗೆ ಚರ್ಚಿಸೋಣ. ನೀವು ಕೂಡಾ ಈ ಬಗ್ಗೆ ಚರ್ಚೆ ಮಾಡಿ ನಮ್ಮದೇನೂ ಅಭ್ಯಂತರವಿಲ್ಲ-ಸಿದ್ದರಾಮಯ್ಯ
11:55 AM
ಸುಪ್ರೀಂಕೋರ್ಟ್ ನಲ್ಲಿ ಅಂದು ಬೋಪಯ್ಯಗೆ ಛೀಮಾರಿ ಹಾಕಿತ್ತು ಎಂದ ಡಿಕೆಶಿ, ಅದಕ್ಕೆ ಧ್ವನಿಗೂಡಿಸಿದ ಸಚಿವ ವೆಂಕಟರಮಣಪ್ಪ
11:48 AM
ಬಿಜೆಪಿಯ ಮಾಧುಸ್ವಾಮಿ, ಬೋಪಯ್ಯ ಮಾತಿಗೆ ಕೆಂಡಾಮಂಡಲರಾದ ಡಿಕೆ ಶಿವಕುಮಾರ್..ಕಲಾಪದಲ್ಲಿ ಗದ್ದಲ
11:46 AM
ಕ್ರಿಯಾಲೋಪ ಎತ್ತಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಶಾಸಕರಿಂದ ಆಕ್ಷೇಪ. ಎಲ್ಲರಿಗೂ ಅವಕಾಶ ಇದೆ ಎಂದ ಸ್ಪೀಕರ್.
11:45 AM
ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡಿಗಲ್ಲನ್ನು ಅಲ್ಲಾಡಿಸುತ್ತಿದೆ.ಸಂವಿಧಾನದ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ.
11:43 AM
ಸಿಎಂ ಕುಮಾರಸ್ವಾಮಿ ಶೆಡ್ಯೂಲ್ 10ರ ಬಗ್ಗೆ ಪ್ರಸ್ತಾಪಿಸಿದ್ದಾರೆ.ಹೀಗಾಗಿ ನಿಮ್ಮಿಂದ(ಸ್ಪೀಕರ್) ಕೆಲವು ಸ್ಪಷ್ಟೀಕರಣ ಬೇಕಾಗಿದೆ ಎಂದ ಸಿದ್ದರಾಮಯ್ಯ.
11:40 AM
ಸಿಎಂ ಕುಮಾರಸ್ವಾಮಿ ಮಾತಿನ ನಡುವೆ ಕ್ರಿಯಾಲೋಪದ ಪ್ರಶ್ನೆ ಎತ್ತಿದ ಮಾಜಿ ಸಿಎಂ ಸಿದ್ದರಾಮಯ್ಯ.
11:39 AM
ಭಾವನೆಗಳನ್ನು ವ್ಯಕ್ತಪಡಿಸಲು ಕಾಲ ಮಿತಿ ನಿಗದಿಪಡಿಸೋದು ಸರಿಯಲ್ಲ. ನಮ್ಮ ರಾಜ್ಯದ ವಿಧಾನಸಭೆ ಇಡೀ ದೇಶಕ್ಕೆ ಮಾದರಿಯಾಗಿದೆ-ಸಿಎಂ
11:38 AM
ನಮ್ಮ ತಂದೆ ಸಿಎಂ ಆಗಿದ್ದಾಗ ನೀವು ಸ್ಪೀಕರ್ ಆಗಿದ್ದೀರಿ, ಈಗ ನಾನು ಸಿಎಂ ಆಗಿದ್ದಾಗಲೂ ನೀವು ಸ್ಪೀಕರ್..ಆದರೆ ನೀವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದೀರಿ-ಸಿಎಂ
11:36 AM
ಅಧಿಕಾರ ಯಾರಿಗೂ ಶಾಶ್ವತವಲ್ಲ, ನಾವೇನು ಖಾಯಂ ಆಗಿ ಗೂಟ ಹೊಡೆದುಕೊಂಡು ಕೂರಲು ಆಗಲ್ಲ ಎಂದ ಕುಮಾರಸ್ವಾಮಿ.
11:35 AM
ಬರಗಾಲದ ಕುರಿತು ನಮಗಿಂತ ಹೆಚ್ಚು ಬಿಎಸ್ ವೈಗೆ ಹೆಚ್ಚು ಗೊತ್ತಿದೆ. ಆ ಬಗ್ಗೆಯೂ ಚರ್ಚಿಸಲು ಎಂದು ಎಚ್ ಡಿಕೆ ತಿರುಗೇಟು.
11:35 AM
ಮೈತ್ರಿ ಸರ್ಕಾರ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಇಂತಹ ಸಮಸ್ಯೆಗಳನ್ನು ಮೈತ್ರಿ ಸರ್ಕಾರ ಸಮರ್ಥವಾಗಿ ನಿರ್ವಹಿಸಿದೆ. ಸಿಎಂ
11:30 AM
ಐಎಂಎ ಪ್ರಕರಣ, ಜಿಂದಾಲ್ ಪ್ರಕರಣದ ಬಗ್ಗೆಯೂ ನಾನು ಸತ್ಯವನ್ನು ಜನರ ಮುಂದೆ ಇಡಬೇಕಾಗಿದೆ. ಬರಗಾಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕು-ಸಿಎಂ
11:29 AM
ಇಂದಿನ ರಾಜಕೀಯ ಪರಿಸ್ಥಿತಿ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗದಂತೆ ನಾವು ಕಲಾಪದಲ್ಲಿ ಚರ್ಚೆ ನಡೆಸಬೇಕಾಗಿದೆ-ಸಿಎಂ
11:28 AM
ಕಳೆದ 14 ತಿಂಗಳಲ್ಲಿ ಏನೆಲ್ಲಾ ನಡೆದಿದೆ ಎಂಬ ಬಗ್ಗೆ ಚರ್ಚೆ ನಡೆಯಬೇಕೋ ಬೇಡವೋ ಅಧ್ಯಕ್ಷರೆ, ಏಕಾಏಕಿ ವಿಶ್ವಾಸಮತ ಯಾಚನೆ ಸಾಧ್ಯವೇ-ಸಿಎಂ
11:27 AM
ಅಂದಿನ ಬೆಳವಣಿಗೆ ಬೇರೆ, ಇಂದಿನ ಬೆಳವಣಿಗೆ ಬೇರೆ, ಸ್ಪೀಕರ್ ಬಗ್ಗೆಯೂ ಅವಿಶ್ವಾಸದ ವಾತಾವರಣ ನಿರ್ಮಿಸಿದ್ದಾರೆ.ಇದರ ಬಗ್ಗೆ ಚರ್ಚೆ ನಡೆಯಲಿ ಎಂದ ಕುಮಾರಸ್ವಾಮಿ.
11:26 AM
ವಿರೋಧ ಪಕ್ಷದ ನಾಯಕರು, ಸದಸ್ಯರಿಗೆ ಹೇಳುತ್ತೇನೆ. ನಮ್ಮದು ಲೂಟಿ ಸರ್ಕಾರವಲ್ಲ. ನಾನು ಮಾನ, ಮರ್ಯಾದೆ ಇಟ್ಟುಕೊಂಡು ಬದುಕಿರುವವನು. ಸಿಎಂ
11:25 AM
ಸಮಯ ನಿಗದಿ ಮಾಡದೇ, ಚರ್ಚೆ ನಡೆಸದೇ ವಿಶ್ವಾಸಮತ ಯಾಚನೆ ಸಾಧ್ಯವೇ? ಭದ್ರವಾದ ಸರ್ಕಾರ ಅಸ್ಥಿರಗೊಳಿಸುತ್ತಿರುವವರು ಯಾರು ಎಂಬ ಚರ್ಚೆ ನಡೆಯಬೇಕು. ಸಿಎಂ
11:24 AM
ವಿಶ್ವಾಸಮತ ಯಾಚನೆ ಯಾವ ಕಾರಣಕ್ಕಾಗಿ ಬಂದಿದೆ. ಶಾಸಕರು ಅಪನಂಬಿಕೆಯಿಂದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಯಬೇಕು-ಸಿಎಂ
11:20 AM
ಈ ಹಿಂದೆ ಒಂದೇ ದಿನದಲ್ಲಿ ವಿಶ್ವಾಸ ಮತದ ಚರ್ಚೆ ನಡೆದಿದೆ ಎಂದ ಬಿಎಸ್ ಯಡಿಯೂರಪ್ಪ. ಮಾಜಿ ಸಿಎಂ ಬಿಎಸ್ ವೈ ತುಂಬಾ ಆತುರದಲ್ಲಿದ್ದಾರೆ-ಕುಮಾರಸ್ವಾಮಿ
11:17 AM
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಸ್ತಾವನೆ ಮಂಡಿಸಲು ಸ್ಪೀಕರ್ ರಮೇಶ್ ಕುಮಾರ್ ಸೂಚನೆ. ಪ್ರಸ್ತಾವದ ಮೇಲೆ ಬಿಎಸ್ ವೈ ಚರ್ಚೆ ಆರಂಭ.
11:15 AM
ವಿಧಾನಸಭೆ ಕಲಾಪ ಆರಂಭ, ಸ್ಪೀಕರ್ ರಮೇಶ್ ಕುಮಾರ್ ಸಭಾಧ್ಯಕ್ಷತೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಚಾಲನೆ.
11:14 AM
ಸದನತ್ತ ಕಾಂಗ್ರೆಸ್, ಜೆಡಿಎಸ್ ಶಾಸಕರ ಆಗಮನ. ಕೆಲವೇ ಹೊತ್ತಿನಲ್ಲಿ ವಿಶ್ವಾಸಮತ ಯಾಚನೆಯ ಕಲಾಪ ಆರಂಭ.
11:13 AM
ರಾಜಾಹುಲಿಗೆ ಜೈ...ಇದು ಬಿಎಸ್ ಯಡಿಯೂರಪ್ಪ ವಿಧಾನಸೌಧದೊಳಕ್ಕೆ ಆಗಮಿಸುವ ವೇಳೆ ಲಾಂಜ್ ನಲ್ಲಿರುವ ಬಿಜೆಪಿ ಶಾಸಕರ ಘೋಷಣೆ.
11:09 AM
ಬರಿಗಾಲಿನಲ್ಲಿಯೇ ವಿಧಾನಸೌಧಕ್ಕೆ ಆಗಮಿಸಿದ ಎಚ್.ಡಿ.ರೇವಣ್ಣ, ನಗುಮೊಗದಿಂದಲೇ ವಿಧಾನಸೌಧಕ್ಕೆ ಬಂದ ಬಿಎಸ್ ಯಡಿಯೂರಪ್ಪ.
11:08 AM
ಸಿದ್ದರಾಮಯ್ಯ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ, ಸ್ಪೀಕರ್ ಜೊತೆ ಡಿಕೆ ಶಿವಕುಮಾರ್ ಸಮಾಲೋಚನೆ.
11:07 AM
ರಾಮಲಿಂಗಾ ರೆಡ್ಡಿ ವಿರುದ್ಧ ಬೆಂಗಳೂರು ಶಾಸಕರ ಅಸಮಾಧಾನ, ರೆಡ್ಡಿ ನಮಗೆ ಮೋಸ ಮಾಡಿದ್ದಾರೆಂದು ವೀಡಿಯೋದಲ್ಲಿ ಆರೋಪ.
11:05 AM
ಮುನಿರತ್ನ, ಎಸ್.ಟಿ.ಸೋಮಶೇಖರ್, ಬೈರತಿ ಸೇರಿದಂತೆ ಯಾವ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯಲ್ಲ. ಮುಂಬೈನಿಂದ ವೀಡಿಯೋ ಬಿಡುಗಡೆ.
11:03 AM
ಅತೃಪ್ತ ನಾಲ್ವರು ಶಾಸಕರಿಂದ ವಿಡಿಯೋ ಬಿಡುಗಡೆ. ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಆದರೆ ನಾವು ರಾಜೀನಾಮೆ ವಾಪಸ್ ಪಡೆಯಲ್ಲ.
10:54 AM
ಕಾಂಗ್ರೆಸ್, ಜೆಡಿಎಸ್ ಸಂಖ್ಯಾಬಲ 100ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಬಿಜೆಪಿ 105 ಶಾಸಕರ ಬಲ ಹೊಂದಿದೆ.ಬಿಎಸ್ ಯಡಿಯೂರಪ್ಪ
10:53 AM
ಸುಪ್ರೀಂಕೋರ್ಟ್, ಸ್ಪೀಕರ್ ಗಿಂತ ಶಾಸಕರು ದೊಡ್ಡವರಲ್ಲ. ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಮೈತ್ರಿ ಸರ್ಕಾರ ವಿಶ್ವಾಸ ಗೆಲ್ಲುತ್ತೆ. ಡಿಕೆ ಶಿವಕುಮಾರ್ ಹೇಳಿಕೆ.
10:52 AM
ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್. ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಉಸ್ತುವಾರಿ.
10:51 AM
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಸದನದಲ್ಲಿ ವಿಶ್ವಾಸಮತ ಯಾಚಿಸಲಿರುವ ಕುಮಾರಸ್ವಾಮಿ.
10:50 AM
ಬಿಎಸ್ ಪಿ ಶಾಸಕ ಮಹೇಶ್ ತಟಸ್ಥ ಹಿನ್ನೆಲೆ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಖ್ಯೆ ಕಡಿತ. ರಾಜ್ಯಪಾಲರ ಕಾರ್ಯದರ್ಶಿ ರಮೇಶ್ ವಿಧಾನಸೌಧಕ್ಕೆ ಆಗಮನ.
10:45 AM
ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್. ಬಿಎಸ್ ಪಿ ಶಾಸಕ ಎನ್.ಮಹೇಶ್ ತಟಸ್ಥ. ಯಾರಿಗೂ ಬೆಂಬಲ ಇಲ್ಲ.
10:32 AM
ತಂದೆ, ತಾಯಿ ಆಶೀರ್ವಾದ ಪಡೆದು ದೇವೇಗೌಡರ ನಿವಾಸದಿಂದ ವಿಧಾನಸೌಧಕ್ಕೆ ಹೊರಟ ಸಿಎಂ ಕುಮಾರಸ್ವಾಮಿ.
10:24 AM
ಜೆಪಿ ನಗರದ ಮನೆಯಿಂದ ಎಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದ ಸಿಎಂ ಕುಮಾರಸ್ವಾಮಿ. ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತು.
10:23 AM
ಶಿವಾಜಿನಗರ ಶಾಸಕ ರೋಷನ್ ಬೇಗ್ ಕೂಡಾ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಗುರುವಾರ 11ಗಂಟೆಗೆ ನಡೆಯುವ ಅಧಿವೇಶನದಲ್ಲಿ ಸಿಎಂ ವಿಶ್ವಾಸಮತ ಯಾಚನೆ.
10:22 AM
ರೆಸಾರ್ಟ್ ನಿಂದ ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ. ಕಾಗೇವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಗೈರು ಹಾಜರಾಗಿದ್ದಾರೆ.
10:21 AM
15 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಮಲಿಂಗಾರೆಡ್ಡಿ ಬೆಂಬಲದೊಂದಿಗೆ ಮೈತ್ರಿ ಶಾಸಕರ ಬಲ 102, ಬಿಜೆಪಿ ಶಾಸಕರ ಬಲ 107. ಬಹುಮತಕ್ಕೆ 105 ಶಾಸಕರ ಬೆಂಬಲ ಅಗತ್ಯ.
10:20 AM
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ಎಂದ ಮಾಜಿ ಸಚಿವ, ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಘೋಷಣೆ.
10:19 AM
ರಾಜ್ಯ ರಾಜಕೀಯದ ಮಹತ್ತರ ಬೆಳವಣಿಗೆಯಲ್ಲಿ 15 ಶಾಸಕರ ರಾಜೀನಾಮೆಯಿಂದಾಗಿ ಸಿಎಂ ಕುಮಾರಸ್ವಾಮಿ ಗುರುವಾರ ಮತ್ತೊಮ್ಮೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಾಗಿದೆ.