01:03 PM
ದೇಶದ ನ್ಯಾಯ ಪ್ರಕ್ರಿಯೆ ಮೇಲೆ ದೇಶದ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಅಯೋಧ್ಯೆ ಪ್ರಕರಣದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿಪ್ರಾಯ.
12:28 PM
ಪ್ರಜಾಪ್ರಭುತ್ವದಲ್ಲಿ ಸುಪ್ರೀಕೋರ್ಟ್ ತೀರ್ಪನ್ನು ಎಲ್ಲರೂ ಸ್ವಾಗತಿಸುವಂತೆ ನಾನೂ ಸಹ ಈ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ.
12:22 PM
ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡ. ಹಿಂದೂಗಳ ಬಹುದಿನಗಳ ಬಯಕೆ ಈಡೇರಿದೆ.
12:21 PM
1045 ಪುಟಗಳ ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ.
12:10 PM
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
11:55 AM
ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸಾಧ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ನಾವು ಕೈಗೊಳ್ಳಲಿದ್ದೇವೆ. ಸಾಂವಿಧಾನಿಕ ಪೀಠದ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆ.- ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕೀಲರ ಹೇಳಿಕೆ.
11:47 AM
ಸಾಂವಿಧಾನಿಕ ಪೀಠದ ತೀರ್ಪನ್ನು ನಾವೆಲ್ಲರೂ ಸ್ವಾಗತಿಸೋಣ. ಶಾಂತಿ ಮತ್ತು ಸುವ್ಯಸ್ಥೆ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ.
11:37 AM
ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷರಾದ ಝುಫರ್ ಫಾರೂಖಿ ಅವರು ಸಾಂವಿಧಾನಿಕ ಪೀಠದ ಈ ತೀರ್ಪನ್ನು ಸ್ವಾಗತಿಸಿವುದಾಗಿ ಹೇಳಿದ್ದಾರೆ.
11:33 AM
ಇದೊಂದು ಐತಿಹಾಸಿಕ ತೀರ್ಪು. ಈ ತೀರ್ಪಿನ ಮೂಲಕ ಸಾಂವಿಧಾನಿಕ ಪೀಠ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ದೇಶಕ್ಕೆ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿಂದೂ ಮಹಾಸಭಾದ ವಕೀಲರು.
11:30 AM
ವಿವಾದಿತ 2.77 ಎಕರೆ ಭೂಮಿಯ ಸಂಪೂರ್ಣ ಹಕ್ಕು ರಾಮ ಲಲ್ಲಾ ಹಕ್ಕು ಎಂದು ಐತಿಹಾಸಿಕ ಆದೇಶ ನೀಡಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ.
11:24 AM
ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿದ ಸಾಂವಿಧಾನಿಕ ಪೀಠ.
11:19 AM
ರಾಮ ಮಂದಿರ ನಿರ್ಮಾಣದ ಹೊಣೆ ಕೇಂದ್ರ ಸರಕಾರಕ್ಕೆ.
11:18 AM
ಸುನ್ನಿ ವಕ್ಫ್ ಬೋರ್ಡ್ ಗೆ ಪ್ರತ್ಯೇಕ 05 ಎಕರೆ ಜಾಗವನ್ನು ನೀಡಲು ಸಾಂವಿಧಾನಿಕ ಪೀಠ ಆದೇಶ. ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲೇ ಪರ್ಯಾಯ ಜಾಗವನ್ನು ನೀಡಬೇಕು.
11:12 AM
ರಾಮ ಜನ್ಮಭೂಮಿಯ ಸ್ವಾಧೀನವನ್ನು ಟ್ರಸ್ಟ್ ಗೆ ಒಪ್ಪಿಸಬೇಕು.
11:10 AM
ರಾಮ ಮಂದಿರ ನಿರ್ಮಾಣ ಹೊಣೆ ಸರಕಾರಕ್ಕೆ.
11:10 AM
ವಿವಾದಿತ ಜಮೀನು ರಾಮಲಲ್ಲಾ ಪಾಲು. ರಾಮಲಲ್ಲಾ ವಾದ ಎತ್ತಿಹಿಡಿದ ಸಾಂವಿಧಾನಿಕ ಪೀಠ. ಮಂದಿರ ನಿರ್ಮಿಸಲು ನಿಯಮ ರೂಪಿಸಿ ಎಂದ ನ್ಯಾಯಪೀಠ.
11:08 AM
ಸುನ್ನಿ ವಕ್ಫ್ ಬೋರ್ಡ್ ಗೆ ಬದಲೀ ಜಾಗವನ್ನು ನೀಡಬೇಕು ಎಂದು ಸಾಂವಿಧಾನಿಕ ಪೀಠ ಆದೇಶ.
11:06 AM
ಅಲಹಬಾದ್ ಕೋರ್ಟ್ ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ. ಇದು ತಾರ್ಕಿಕವಲ್ಲ ಎಂದು ಸಾಂವಿಧಾನಿಕ ಪೀಠವೂ ಅಭಿಪ್ರಾಯ ವ್ಯಕ್ತಪಡಿಸಿದೆ.
11:05 AM
ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ.
11:03 AM
ಮಸೀದಿ ಹಾನಿ ಮಾಡಿದ್ದು ಕಾನೂನಿನ ಉಲ್ಲಂಘನೆ.
11:02 AM
ಮಸೀದಿಯ ಒಳಭಾಗದ ಕುರಿತಾಗಿಯೂ ವಿವಾದ ಇದೆ.
11:01 AM
ಇತಿಹಾಸಕಾರರ ವಿವರಣೆ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರ ಇದೆ.
11:01 AM
ಮುಸ್ಲಿಂರಿಗೆ ಮಸೀದಿಯ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲದಿದ್ದರೂ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು.
11:00 AM
ಮಸೀದಿಯ ಮುಖ್ಯ ಗುಂಬಜ್ ಕೆಳಭಾಗದಲ್ಲಿ ಗರ್ಭಗುಡಿ ಇತ್ತೆಂದು ನಂಬಲಾಗುತ್ತಿದೆ.
10:59 AM
ಮಸೀದಿಯ ಒಳಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ಇದನ್ನು ನಿರ್ಬಂಧಿಸಿದಾಗ ಹೊರಭಾಗದಲ್ಲಿ ಹಿಂದೂಗಳಿಂದ ಪೂಜೆ ಸಲ್ಲಿಸಲಾಗುತ್ತಿತ್ತು.
10:57 AM
ಬ್ರಿಟಿಷರು ಆ ಜಾಗವನ್ನು ಪ್ರತ್ಯೇಕಗೊಳಿಸಿ ಬೇಲಿ ಹಾಕಿದ್ದರು.
10:56 AM
1856ರಿಂದ 1857ರವರೆಗೆ ಈ ಜಾಗದಲ್ಲಿ ನಮಾಜು ಮಾಡಲಾಗುತ್ತಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.
10:55 AM
ಮಸೀದಿಯ ಕೆಳಗಡೆ ಇರುವುದು ಹಿಂದೂ ರಚನೆ ಎಂದು ನಂಬಲು ಸಾಧ್ಯವಿಲ್ಲ.
10:54 AM
ಆದರೆ ಸ್ವಾಧೀನದ ಆಧಾರದ ಮೇಲೆ ಭೂಮಿಯ ಹಕ್ಕನ್ನು ಕೇಳುವಂತಿಲ್ಲ.
10:54 AM
ಸುನ್ನಿ ವಕ್ಫ್ ಬೋರ್ಡನ್ನು ಅರ್ಜಿದಾರ ಎಂದು ಪರಿಗಣಿಸಬಹುದು.
10:52 AM
ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.
10:51 AM
ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲಾಗುವುದಿಲ್ಲ.
10:51 AM
ಚಬೂತರ್, ಸೀತಾ ರಸೋಯಿ, ಭಂಡಾರಗಳೆಲ್ಲಾ ರಾಮನ ಹುಟ್ಟಿಗೆ ಪುಷ್ಠಿ ನೀಡುತ್ತಿವೆ.
10:50 AM
ಪುರಾಣಗಳಲ್ಲೂ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಆ ಪ್ರದೇಶದಲ್ಲಿ ಹಿಂದು ಪರಿಕ್ರಮವನ್ನೂ ಮಾಡ್ತಾ ಇದ್ದರು.
10:49 AM
ಮಸೀದಿಯ ಪ್ರಮುಖ ಗುಂಬಜನ್ನು ರಾಮನ ಜನ್ಮಸ್ಥಳ ಎಂದು ನಂಬುತ್ತಾರೆ.
10:48 AM
ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದಾರೆ.
10:48 AM
ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಎನ್ನುವುದರ ಬಗ್ಗೆ ವಿವಾದವಿಲ್ಲ.
10:47 AM
ಹಿಂದುಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ನಂಬುತ್ತಾರೆ.
10:46 AM
ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ರಚನೆಯಾಗಿರಲಿಲ್ಲ.
10:46 AM
ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ.
10:44 AM
ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ ಇದು ಇಸ್ಲಾಂ ರಚನೆಯಾಗಿರಲಿಲ್ಲಿ.
10:44 AM
ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ಕಂದಾಯ ದಾಖಲೆ ಪ್ರಕಾರ ವಿವಾದಿತ ಜಮೀನು ಸರ್ಕಾರಿ ಜಾಗವಾಗಿತ್ತು.
10:42 AM
ನಿರ್ಮೋಹಿ ಅಖಾಡಕ್ಕೆ ಪೂಜಾ ಅಧಿಕಾರವಿಲ್ಲ. ಇನ್ನು ಕೆಲವೇ ನಿಮಿಷಗಳಲ್ಲಿ ಅಂತಿಮ ತೀರ್ಪು ಪ್ರಕಟ.
10:41 AM
ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ. ಪೂರ್ತಿ ತೀರ್ಪು ಓದಲು ಅರ್ಧ ಗಂಟೆ ಬೇಕಾಗಲಿದೆ ಎಂದು ಪಂಚಸದಸ್ಯ ಪೀಠ.
10:40 AM
ನಿರ್ಮೋಹಿ ಅಖಾಡದ ಅರ್ಜಿ ವಜಾ, ಶಿಯಾ ವಕ್ಫ್ ಬೋರ್ಡ್ ಅರ್ಜಿ ವಜಾ. ಅಯೋಧ್ಯೆ ವಿವಾದದ ಕುರಿತು ಸರ್ವಾನುಮತದ ತೀರ್ಪು ಸಾಧ್ಯತೆ.
10:36 AM
ಅಯೋಧ್ಯೆ ಭೂ ವಿವಾದದ ಕುರಿತು ಸರ್ವಾನುಮತದ ತೀರ್ಪು ನಿರೀಕ್ಷೆ. ಪ್ರಕರಣದ ಇತಿಹಾಸ ಓದುತ್ತಿರುವ ನ್ಯಾಯಮೂರ್ತಿಗಳು.
10:35 AM
ಶಿಯಾ ವಕ್ಫ್ ಬೋರ್ಡ್ ಅರ್ಜಿ ವಜಾಗೊಂಡಿದೆ ಎಂದು ಸುಪ್ರೀಂಕೋರ್ಟ್ ಮೂಲ ತಿಳಿಸಿದೆ. ಅರ್ಧ ಗಂಟೆಯಲ್ಲಿ ತೀರ್ಪು ಪೂರ್ಣ.
10:26 AM
ಸುಪ್ರೀಂಕೋರ್ಟ್ ಹಾಲ್ ಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಆಗಮನ. ಕೋರ್ಟ್ ಹಾಲ್ ಒಂದರಲ್ಲಿ ವಕೀಲರು, ಪತ್ರಕರ್ತರು ಸೇರಿ 400 ಮಂದಿ ಉಪಸ್ಥಿತಿ.
10:25 AM
ಅಯೋಧ್ಯೆ ತೀರ್ಪಿನ ವಿಡಿಯೋ ಮಾಡದಂತೆ ಸುಪ್ರೀಂಕೋರ್ಟ್ ಸಿಬ್ಬಂದಿಗಳಿಗೆ ಸೂಚನೆ. ಸುಪ್ರೀಂಕೋರ್ಟ್ ಕಲಾಪ ಕೆಲವೇ ಕ್ಷಣದಲ್ಲಿ ಆರಂಭ.
10:23 AM
ಸಿಜೆಐ ರಂಜನ್ ಗೋಗೊಯಿ ಸುಪ್ರೀಂಕೋರ್ಟ್ ಗೆ ಆಗಮನ. ತೀರ್ಪಿನ ಪ್ರತಿಯನ್ನು ಕೋರ್ಟ್ ಹಾಲ್ ಗೆ ತಂದಿಟ್ಟ ರಿಜಿಸ್ಟ್ರಾರ್.
10:19 AM
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೈಅಲರ್ಟ್, ಉತ್ತರಪ್ರದೇಶ-ನೇಪಾಳ ಗಡಿ ಬಂದ್. ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್.
10:17 AM
ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ ಗೆ ಆಗಮನ.
10:16 AM
ಸುಪ್ರೀಂಕೋರ್ಟ್ ಹಾಲ್ ಪ್ರವೇಶಿಸಲು ನೂಕುನುಗ್ಗಲು. ವಕೀಲರು, ಪತ್ರಕರ್ತರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ.
10:12 AM
ಸುಪ್ರೀಂಕೋರ್ಟ್ ಗೆ ಜಸ್ಟೀಸ್ ಎಸ್ ಎ ಬೋಬ್ಡೆ ಆಗಮನ. ಕೆಲವೇ ಹೊತ್ತಿನಲ್ಲಿ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ.
10:11 AM
ಅಯೋಧ್ಯೆ ತೀರ್ಪಿನ ಬಗ್ಗೆ ರಾಜ್ಯದ ಜನತೆ ಸಮಚಿತ್ತದಿಂದ ಇದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾದರು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
10:09 AM
ಸುಪ್ರೀಂಕೋರ್ಟ್ ನ ಕೋರ್ಟ್ ಹಾಲ್ ಒಂದರಲ್ಲಿ ಅಯೋಧ್ಯೆ ಐತಿಹಾಸಿಕ ತೀರ್ಪು ಪ್ರಕಟವಾಗಲಿದೆ. ದೆಹಲಿಯಲ್ಲಿ ಬಿಗಿ ಬಂದೋಬಸ್ತ್.
10:08 AM
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ. ಗುಪ್ತಚರ ಇಲಾಖೆ ಮುಖ್ಯಸ್ಥ ಅರವಿಂದ್ ಭಾಗಿ.
09:34 AM
ರಾಜಸ್ಥಾನದ ಭರತ್ ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ. ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಮುನ್ನೆಚ್ಚರಿಕೆ ಕ್ರಮ.
09:25 AM
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
09:22 AM
ಅಯೋಧ್ಯೆಯ ರಾಮಮಂದಿರದ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ
09:08 AM
ದೇಶದಾದ್ಯಂತ ತೀವ್ರ ಕಟ್ಟೆಚ್ಚರ; ಹಲವೆಡೆ 144 ಸೆಕ್ಷನ್ ಜಾರಿ
08:59 AM
ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ. ದೇಶಾದ್ಯಂತ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.
08:59 AM
ಅಯೋಧ್ಯೆ ತೀರ್ಪು: ಶಾಂತಿ ಸೌಹಾರ್ದತೆ ಕಾಪಾಡಿ: ಬಿಎಸ್ ವೈ ಟ್ವೀಟ್
08:36 AM
ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಪ್ರಕರಣದ ವಾದ, ಪ್ರತಿವಾದ ಸತತ 40 ದಿನಗಳ ಕಾಲ ನಡೆಸಿ ಅಕ್ಟೋಬರ್ 16ರಂದು ತೀರ್ಪು ಕಾಯ್ದಿರಿಸಿತ್ತು.
08:32 AM
ಯಾವುದೇ ರೀತಿ ತಪ್ಪು ಸಂದೇಶಗಳನ್ನು ಯಾರಿಗೂ ಕಳುಹಿಸಬೇಡಿ. ಸಾಮಾಜಿಕ ಜಾಲತಾಣಗಳ ಎಲ್ಲಾ ಸದಸ್ಯರು ಎಚ್ಚರದಿಂದ ಇರುವಂತೆ ಸೂಚನೆ.
08:31 AM
ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಟ್ವೀಟರ್ ಗಳಲ್ಲಿ ಆಕ್ಷೇಪಾರ್ಹ ಸಂದೇಶ, ವೀಡಿಯೊ, ಕಮೆಂಟ್ ಹಾಕಬಾರದು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
08:27 AM
ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಪೀಠ ಅಯೋಧ್ಯೆ ಕುರಿತ ಅಂತಿಮ ತೀರ್ಪನ್ನು ಇಂದು 10-30ಕ್ಕೆ ಪ್ರಕಟಿಸಲಿದ್ದು, 134 ವರ್ಷಗಳ ಸುದೀರ್ಘ ವಿವಾದಕ್ಕೆ ತೆರೆ ಬೀಳಲಿದೆ.
08:26 AM
ಐತಿಹಾಸಿಕ ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದದ ಮಹಾತೀರ್ಪು ಇಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಪ್ರಕಟಿಸಲಿದೆ.