01:12 AM
ಮಹಾರಾಷ್ಟ್ರ ವಿಧಾನಸಭಾ ಫೈನಲ್ ಫಲಿತಾಂಶ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145): ಬಿಜೆಪಿ + ಶಿವಸೇನೆ: 162 ; ಕಾಂಗ್ರೆಸ್ + ಎನ್.ಸಿ.ಪಿ.: 104, ಇತರರು: 22
11:15 PM
ಹರ್ಯಾಣ ವಿಧಾನಸಭಾ ಫೈನಲ್ ಫಲಿತಾಂಶ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 40, ಕಾಂಗ್ರೆಸ್- 31. ಜೆಜೆಪಿ – 10, ಇತರರು – 07, ಹರ್ಯಾಣ ಲೋಕಹಿತ ಪಕ್ಷ 01 ಸ್ಥಾನ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ 01 ಸ್ಥಾನ.
06:43 PM
ಕೇರಳ ವಿಧಾನಸಭೆಯ 05 ಸ್ಥಾನಗಳ ಉಪಚುನಾವಣೆಯಲ್ಲಿ ಯುಡಿಎಫ್ 03 ಸ್ಥಾನಗಳನ್ನು ಮತ್ತು 02 ಸ್ಥಾನ ಆಡಳಿತಾರೂಢ ಎಲ್.ಡಿ.ಎಫ್. ಪಾಲಾಗಿದೆ.
06:39 PM
ಹಿಮಾಚಲ ಪ್ರದೇಶ ವಿಧಾನಸಭೆಯ 02 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 02 ಸ್ಥಾನಗಳನ್ನು ಗೆದ್ದುಕೊಂಡಿದೆ. ಗುಜರಾತ್ ವಿಧಾನಸಭೆಯ 06 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 03 ಸ್ಥಾನಗಳನ್ನು ಗೆದ್ದುಕೊಂಡಿವೆ.
06:35 PM
ಉತ್ತರಪ್ರದೇಶ ವಿಧಾನಸಭೆಯ 11 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 08 ಸ್ಥಾನಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳ ಪಾಲಾಗಿದೆ. ಎಸ್.ಪಿ. 02 ಸ್ಥಾನಗಳನ್ನು ಮತ್ತು ಬಿ.ಎಸ್.ಪಿ. 01 ಸ್ಥಾನ ಗೆದ್ದುಕೊಂಡಿವೆ.
06:26 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-103, ಶಿವಸೇನೆ- 57, ಕಾಂಗ್ರೆಸ್-46, ಎನ್.ಸಿ.ಪಿ.-53, ಇತರರು-29
06:26 PM
ಹರ್ಯಾಣ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 40, ಕಾಂಗ್ರೆಸ್- 31. ಜೆಜೆಪಿ – 10, ಇತರರು – 09
06:22 PM
ಮಹಾರಾಷ್ಟ್ರದಲ್ಲಿ ಮತ್ತೆ ಮೈತ್ರಿ ಸರಕಾರವನ್ನು ಆರಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ. ಈ ಗೆಲುವಿನ ರೂವಾರಿಗಳಾದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಗಡ್ಕರಿ.
06:19 PM
ಬಿಹಾರ ವಿಧಾನಸಭೆಯ 05 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ RJD 02 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, AIMIM ಮತ್ತು ಆಡಳಿತಾರೂಢ ಜೆಡಿ(ಯು) ತಲಾ 01 ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು ಉಳಿದೊಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
05:56 PM
ತಮಿಳುನಾಡು ವಿಧಾನಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ. ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ.
05:53 PM
ಹರ್ಯಾಣದಲ್ಲಿ ಸೋತ ಪ್ರಮುಖರು: ರಣದೀಪ್ ಸಿಂಗ್ ಸುರ್ಜೇವಾಲಾ, ಬಬಿತಾ ಪೋಗಟ್, ಸುಭಾಷ್ ಬರಾಲಾ, ಸೋನಾಲಿ ಪೋಗಟ್, ಕ್ಯಾಪ್ಟನ್ ಅಭಿಮನ್ಯು.
05:52 PM
ಹರ್ಯಾಣದಲ್ಲಿ ಗೆದ್ದ ಪ್ರಮುಖರು: ಮನೋಹರ ಲಾಲ್ ಖಟ್ಟರ್, ಭೂಪಿಂದರ್ ಸಿಂಗ್ ಹೂಡಾ, ದುಷ್ಯಂತ್ ಸಿಂಗ್ ಚೌಟಾಲ, ಅಭಯ್ ಸಿಂಗ್ ಚೌಟಾಲ, ಕುಲದೀಪ್ ಬಿಷ್ಣೋಯಿ.
05:50 PM
ಮಹಾರಾಷ್ಟ್ರದಲ್ಲಿ ಗೆದ್ದ ಪ್ರಮುಖರು: ಆದಿತ್ಯ ಠಾಕ್ರೆ, ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್, ಅಜಿತ್ ಪವಾರ್, ಚಂದ್ರಕಾಂತ್ ದಾದಾ ಪಾಟೀಲ್, ಅಮಿತ್ ವಿಲಾಸ್ ರಾವ್ ದೇಶ್ ಮುಖ್, ಧೀರಜ್ ವಿಲಾಸ್ ರಾವ್ ದೇಶ್ ಮುಖ್, ಪ್ರಣೀತಿ ಶಿಂಧೆ, ರೋಹಿತ್ ಪವಾರ್, ರಾಧಾಕೃಷ್ಣ ವಿಖೆ ಪಾಟೀಲ್.
05:42 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-102, ಶಿವಸೇನೆ- 56, ಕಾಂಗ್ರೆಸ್-46, ಎನ್.ಸಿ.ಪಿ.-54, ಇತರರು-30
05:37 PM
ಸತಾರಾ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ್ತು ಪಾರ್ಲಿ ವಿಧಾನಸಭಾ ಕ್ಷೇತ್ರದ ಫಲಿತಾಂಶಗಳು ನಮ್ಮ ಪಾಲಿಗೆ ಅನಿರೀಕ್ಷಿತ ಆಘಾತ ನೀಡಿದೆ. ನಮ್ಮ ಆರು ಜನ ಸಚಿವರು ಸೋತಿದ್ದಾರೆ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕಲಾಗುವುದು ಎಂದು ಫಡ್ನವೀಸ್ ಹೇಳಿಕೆ.
05:31 PM
ಅತೀ ಹೆಚ್ಚಿನ ಮತಗಳ ಅಂತರದಲ್ಲಿ ನನ್ನನ್ನು ಹರಸಿದ ವರ್ಲಿ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ.
05:28 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-103, ಶಿವಸೇನೆ- 57, ಕಾಂಗ್ರೆಸ್-45, ಎನ್.ಸಿ.ಪಿ.-53, ಇತರರು-30
05:26 PM
ರಾಜಸ್ಥಾನ ವಿಧಾನ ಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಗಳು ತಲಾ 01 ಸ್ಥಾನಗಳನ್ನು ಗೆದ್ದುಕೊಂಡಿವೆ.
05:24 PM
ಬಿಜೆಪಿ ಮತ್ತು ಶಿವಸೇನೆ ನಡುವೆ ಚುನಾವಣಾ ಪೂರ್ವದಲ್ಲಿ ನಡೆದಿರುವ ಮಾತುಕತೆಗಳಿಗೆ ಅನುಗುಣವಾಗಿ ನಾವು ನಡೆದುಕೊಳ್ಳಲಿದ್ದೇವೆ ಎಂದ ದೇವೇಂದ್ರ ಫಡ್ನವೀಸ್.
05:12 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-102, ಶಿವಸೇನೆ- 57, ಕಾಂಗ್ರೆಸ್-45, ಎನ್.ಸಿ.ಪಿ.-53, ಇತರರು-31
05:10 PM
ಹರ್ಯಾಣ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 40, ಕಾಂಗ್ರೆಸ್- 31. ಜೆಜೆಪಿ – 10, ಇತರರು – 09
05:09 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-102, ಶಿವಸೇನೆ- 57, ಕಾಂಗ್ರೆಸ್-45, ಎನ್.ಸಿ.ಪಿ.-53, ಇತರರು-31
05:08 PM
ಬಿಜೆಪಿ ಮತ್ತು ಶಿವಸೇನೆ ನಡುವೆ ನಡೆದಿರುವ ಮಾತುಕತೆಗಳಿಗೆ ಅನುಗುಣವಾಗಿ ನಾವು ನಡೆದುಕೊಳ್ಳಲಿದ್ದೇವೆ ಎಂದ ದೇವೇಂದ್ರ ಫಡ್ನವೀಸ್.
04:54 PM
ಮೈತ್ರಿ ಸಂದರ್ಭದಲ್ಲಿ 50:50 ಸೂತ್ರವನ್ನು ನಾವು ಒಪ್ಪಿಕೊಂಡಿದ್ದೆವು. ಬಿಜೆಪಿಯೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲಾಗುವುದು ಎಂದು ಹೇಳಿಕೆ ನೀಡಿದ ಉದ್ಭವ್ ಠಾಕ್ರೆ.
04:49 PM
ಹರ್ಯಾಣದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಂತಸ. ಇನ್ನು ಸ್ವಲ್ಪ ಪ್ರಯತ್ನಪಟ್ಟಿದ್ದರೆ ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೇರಬಹುದಿತ್ತು ಎಂದು ಅಭಿಪ್ರಾಯಪಟ್ಟ ಪಂಜಾಬ್ ಸಿ.ಎಂ.
04:47 PM
ಪಂಜಾಬ್ ವಿಧಾನಸಭೆಯ 04 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟ. 04 ಸ್ಥಾನ ಗೆದ್ದ ಆಡಳಿತಾರೂಢ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳಕ್ಕೆ 01 ಸ್ಥಾನ.
04:45 PM
ಹರ್ಯಾಣದಲ್ಲಿ ಬಿಜೆಪಿ ಪಾಲಿಗೆ ಪಕ್ಷೇತರರೇ ನಿರ್ಣಾಯಕ? ಸದ್ಯ 06 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಪಕ್ಷೇತರರು.
04:43 PM
ಹರ್ಯಾಣ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 40, ಕಾಂಗ್ರೆಸ್- 30. ಜೆಜೆಪಿ – 10, ಇತರರು – 10
04:43 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-101, ಶಿವಸೇನೆ- 58, ಕಾಂಗ್ರೆಸ್-45, ಎನ್.ಸಿ.ಪಿ.-53, ಇತರರು-31
03:47 PM
ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಂತಸ.
03:44 PM
ಉಪಚುನಾವಣೆ: ಗುಜರಾತ್ ನ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್. ಒಂದು ಕ್ಷೇತ್ರಕ್ಕೆ ತೃಪ್ತಿಪಟ್ಟ ಬಿಜೆಪಿ.
03:44 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-100, ಶಿವಸೇನೆ- 57, ಕಾಂಗ್ರೆಸ್-43, ಎನ್.ಸಿ.ಪಿ.-55, ಇತರರು-33
03:43 PM
ಮಹಾರಾಷ್ಟ್ರದ ಮಾಜೀ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್ ಮತ್ತು ಪೃಥ್ವಿರಾಜ್ ಚವ್ಹಾಣ್ ಅವರು ಜಯಗಳಿಸಿದ್ದಾರೆ.
03:23 PM
ಹರ್ಯಾಣ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 38, ಕಾಂಗ್ರೆಸ್- 34. ಜೆಜೆಪಿ – 10, ಇತರರು – 08
03:21 PM
ಹರ್ಯಾಣದ ಎಲೆನಾಬಾದ್ ಕ್ಷೇತ್ರದಲ್ಲಿ ಅಭಯ್ ಸಿಂಗ್ ಚೌಟಾಲ ಜಯಭೇರಿ.
03:14 PM
ಒಡಿಶ್ಸಾದ ಬಿಜೇಪುರ್ ವಿಧಾನಸಭಾ ಚುನಾವಣೆಯಲ್ಲಿ ಜಿಜು ಜನತಾ ದಳದ ಅಭ್ಯರ್ಥಿಗೆ ಗೆಲುವು.
03:12 PM
ಹರ್ಯಾಣದ ಪಕ್ಷೇತರರ ಜೊತೆ ಬಿಜೆಪಿ ಮಾತುಕತೆ. ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆಯುತ್ತಿರುವ ಮೀಟಿಂಗ್.
03:09 PM
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ಕರ್ನಾಲ್ ಕ್ಷೇತ್ರದಲ್ಲಿ 41,950 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
03:05 PM
ಮಹಾ ಕುತೂಹಲ: ಶಿವಸೇನೆಯ ಸುದ್ದಿಗೋಷ್ಠಿ ದಿಢೀರ್ ಮುಂದೂಡಿಕೆ. ಇಂದು ಸಂಜೆ 4 ಗಂಟೆಗೆ ನಡೆಯಬೇಕಿದ್ದ ಸುದ್ದಿಗೋಷ್ಠಿ ಸಂಜೆ 5 ಗಂಟೆಗೆ ನಡೆಯಲಿದೆ.
02:58 PM
ಛತ್ತೀಸ್ ಗಢದ ಚಿತ್ರಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು.
02:49 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-101, ಶಿವಸೇನೆ- 58, ಕಾಂಗ್ರೆಸ್-44, ಎನ್.ಸಿ.ಪಿ.-57, ಇತರರು-28
02:44 PM
ಹರ್ಯಾಣದಲ್ಲಿ ಸ್ಥಳೀಯ ಸಮಸ್ಯೆಗಳ ಮುಂದೆ ಮಂಕಾದ ಮೋದಿ-ಶಾ ಭಾಷಣ. ಲೋಕಸಭಾ ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ.
02:41 PM
ಇಂದು ಸಂಜೆ 4 ಗಂಟೆಗೆ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಮಹತ್ವದ ಸುದ್ದಿಗೋಷ್ಠಿ.
02:37 PM
ಎರಡೂ ರಾಜ್ಯಗಳ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ. ಪ್ರತಿಪಕ್ಷಗಳು ಪ್ರಚಾರ ಮಾಡಲು ಸಾಧ್ಯವಾಗದಂತಹ ಮತ್ತು ನಾಯಕರು ಮಾತನಾಡಲು ಭಯಪಡುವಂತಹ ವಾತಾವರಣವನ್ನು ಕೇಂದ್ರ ಸರಕಾರ ನಿರ್ಮಾಣ ಮಾಡಿತ್ತು. ಆದರೂ ಮತದಾರರು ಪ್ರತಿಪಕ್ಷಗಳಿಗೆ ಮನ್ನಣೆ ನೀಡಿದ್ದಾರೆ ಎಂದು ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
02:34 PM
ಹರ್ಯಾಣ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 90, ಬಹುಮತಕ್ಕೆ-46) ಬಿಜೆಪಿ- 40, ಕಾಂಗ್ರೆಸ್- 32. ಜೆಜೆಪಿ – 10, ಇತರರು – 08
02:33 PM
ಮಹಾರಾಷ್ಟ್ರ ವಿಧಾನ ಸಭೆ ಫಲಿತಾಂಶ: ಪಕ್ಷಗಳ ಸದ್ಯದ ಬಲಾಬಲ: (ಒಟ್ಟು ಸ್ಥಾನಗಳು- 288, ಬಹುಮತಕ್ಕೆ-145) ಬಿಜೆಪಿ-102, ಶಿವಸೇನೆ- 60, ಕಾಂಗ್ರೆಸ್-44, ಎನ್.ಸಿ.ಪಿ.-55, ಇತರರು-27
02:21 PM
ಕಳೆದ ಬಾರಿಯ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರಕ್ಕೇರಿತ್ತು. ಐ.ಎನ್.ಎಲ್. 19 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಪಕ್ಷ 15 ಸ್ಥಾನಗಳಲ್ಲಿ ಮಾತ್ರವೇ ಜಯಗಳಿಸಲು ಶಕ್ತವಾಗಿತ್ತು.
02:18 PM
2014ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 122, ಶಿವಸೇನೆ 63 ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿ-ಸೇನಾ ಸರಕಾರ ಅಧಿಕಾರದ ಗದ್ದುಗೆಯನ್ನು ಹಿಡಿದಿತ್ತು.ಕಾಂಗ್ರೆಸ್ 42 ಹಾಗೂ ಎನ್.ಸಿ.ಪಿ. 41 ಸ್ಥಾನಗಳಲ್ಲಿ ಜಯಗಳಿಸಿತ್ತು.
02:06 PM
ಉಪಚುನಾವಣೆ: ತಮಿಳುನಾಡಿನ ಎರಡು ಕ್ಷೇತ್ರಗಳು ಎಐಡಿಎಂಕೆ ಮುಡಿಗೆ.
02:05 PM
ಹರ್ಯಾಣ: ಬಿಜೆಪಿ- 37, ಕಾಂಗ್ರೆಸ್ 35, ಜೆಜೆಪಿ 10, ಇತರ ಎಂಟು ಕ್ಷೇತ್ರಗಳಲ್ಲಿ ಮುನ್ನಡೆ.
02:05 PM
ಮಹಾರಾಷ್ಟ್ರ: ಬಿಜೆಪಿ-103, ಶಿವಸೇನಾ- 62 ಕಾಂಗ್ರೆಸ್ 40, ಎನ್ ಸಿಪಿ 53 ಇತರ-30 ಕ್ಷೇತ್ರಗಳಲ್ಲಿ ಮುನ್ನಡೆ.
02:03 PM
ಹರ್ಯಾಣ: ಬಿಜೆಪಿ- 37, ಕಾಂಗ್ರೆಸ್ 35, ಜೆಜೆಪಿ 10, ಇತರ ಎಂಟು ಕ್ಷೇತ್ರಗಳಲ್ಲಿ ಮುನ್ನಡೆ.
01:59 PM
ಠಾಕ್ರೆ ಕುಟುಂಬದ ಮೊದಲ ಸದಸ್ಯನ ಗೆಲುವು. ಆದಿತ್ಯ ಠಾಕ್ರೆಗೆ ವರ್ಲಿ ಕ್ಷೇತ್ರದಲ್ಲಿ ಗೆಲುವು.
01:55 PM
ಠಾಕ್ರೆ ಮನೆಯಂಗಳದಲ್ಲೇ ಸೋಲು: ಠಾಕ್ರೆ ಮನೆತನದ ನಿವಾಸ ಮಾತೋಶ್ರೀ ಇರುವ ಕ್ಷೇತ್ರ ಬಾಂದ್ರಾ ಪೂರ್ವದಲ್ಲಿ ಸೇನಾ ಅಭ್ಯರ್ಥಿಗೆ ಸೋಲು. ಕಾಂಗ್ರೆಸ್ ನ ಜೇಶಾನ್ ಸಿದ್ದಿಕಿಗೆ ಗೆಲುವು.
01:53 PM
ಕಾಂಗ್ರೆಸ್ ನ ವಕ್ತಾರ ರಣ್ ದೀಪ್ ಸುರ್ಜೆವಾಲಗೆ ಸೋಲು. ಕೇವಲ 567 ಮತಗಳ ಅಂತರದಿಂದ ಸೋಲು.
01:51 PM
ಉಪಚುನಾವಣೆ: ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಗೆ ಗೆಲುವು. ಪ್ರತಿಸ್ಪರ್ಧಿ ಬಿಜೆಪಿಯ ರವೀಶ್ ತಂತ್ರಿ ಕುಂಟಾರು ವಿರುದ್ಧ 7923 ಮತ ಅಂತರದ ಗೆಲುವು.
01:48 PM
ಶಿವಸೇನೆಯ ಅಜಯ್ ಚೌಧರಿಗೆ ಜಯಭೇರಿ. ಶಿವಡಿ ಕ್ಷೆತ್ರದಲ್ಲಿ 39 ಸಾವಿರ ಮತಗಳ ಅಂತರದ ಗೆಲುವು
01:35 PM
ಮಹಾರಾಷ್ಟ್ರ; ಪರ್ಲಿ ಕ್ಷೇತ್ರದಲ್ಲಿ ಪಂಕಜಾ ಮುಂಡೆಗೆ ಸೋಲು. ಪ್ರತಿಸ್ಪರ್ಧಿ ಧನಂಜಯ್ ಮುಂಡೆ ವಿರುದ್ದ 22 ಸಾವಿರ ಮತ ಅಂತರದಿಂದ ಸೋಲು
01:31 PM
ಉಪಚುನಾವಣೆ: ಸೋಲಿಗೆ ಇವಿಎಂ ದೋಷವೆಂದ ಲಕ್ನೋ ಕ್ಷೇತ್ರದ ಎಸ್ ಪಿ ಅಭ್ಯರ್ಥಿ.
01:28 PM
ಹರ್ಯಾಣ: ಜಯ ಗಳಿಸಿದ ಭೂಪಿಂದರ್ ಸಿಂಗ್ ಹೂಡಾ. ಹರ್ಯಾಣ: ಜಯ ಗಳಿಸಿದ ಭೂಪಿಂದರ್ ಸಿಂಗ್ ಹೂಡಾ. ಗರ್ಹಿ ಸಂಪ್ಲಾ ಕಿಲೊಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಯಭೇರಿ.
01:25 PM
ಉಪಚುನಾವಣೆ; ಹಿಮಾಚಲ ಪ್ರದೇಶದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯಭೇರಿ.
01:24 PM
ಉಪಚುನಾವಣೆ; ಪಂಜಾಬ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಕಾಂಗ್ರೆಸ್. ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ ಶಿರೋಮಣಿ ಅಕಾಲಿದಳ
01:22 PM
ಇದು ಬಿಜೆಪಿ ಸರಕಾರದ ವಿರುದ್ದ ಬಂದಿರುವ ಫಲಿತಾಂಶ: ಸುದ್ದಿಗೋಷ್ಠಿಯಲ್ಲಿ ಹರ್ಯಾಣ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ
01:15 PM
ಹರ್ಯಾಣದಲ್ಲಿ ಬಿಜೆಪಿಯ ಕ್ಯಾ. ಅಭಿಮನ್ಯುಗೆ ಸೋಲು. ಜೆಜೆಪಿಯ ರಾಮ್ ಕುಮಾರ್ ಗೌತಮ್ ವಿರುದ್ಧ 9000 ಮತಗಳ ಅಂತರದಿಂದ ಸೋಲು
01:13 PM
ಕುಸ್ತಿ ಪಟು ಯೋಗೇಶ್ವರ್ ದತ್ ಗೆ ಸೋಲು. ಹರ್ಯಾಣದ ಬರೋಡಾ ಕ್ಷೇತ್ರದಲ್ಲಿ ಯೋಗೇಶ್ವರ್ ವಿರುದ್ದ ಕಾಂಗ್ರೆಸ್ ನ ಶ್ರೀಕಿಶನ್ ಗೆ ಗೆಲುವು
01:06 PM
ಆದಿತ್ಯ ಠಾಕ್ರೆಗೆ 47,396 ಮತಗಳಿಂದ ಮುನ್ನಡೆ. ಮುಂಬೈನ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಶಿವಸೇನೆಯ ಆದಿತ್ಯ ಠಾಕ್ರೆ
01:02 PM
ಉಪಚುನಾವಣೆ: ಕೇರಳದ ಕೊನ್ನಿ ಕ್ಷೇತ್ರದಲ್ಲಿ ಸಿಪಿಐ(ಎಂ)ನ ಕೆ.ಯು ಜೆನಿಶ್ ಕುಮಾರ್ ಗೆ ಗೆಲುವು.
01:00 PM
ಉಪಚುನಾವಣೆ: ಬಿಹಾರ್ ನ ಕಿಶನ್ ಗಂಜ್ ನಲ್ಲಿ ಎಐಎಂಐಎಂ ಪಕ್ಷದ ಕಮ್ರುಲ್ ಹೂಡಾಗೆ ಜಯ.
12:55 PM
ಅದಂಪುರ್ ದಲ್ಲಿ ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ಗೆ ಸೋಲು. ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯ್ ವಿರುದ್ದ ಸೋಲು.
12:52 PM
ಹರ್ಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ
12:52 PM
ಬಾರಾಮತಿ ಕ್ಷೇತ್ರದ ಎನ್ ಸಿಪಿ ಅಭ್ಯರ್ಥಿ ಅಜಿತ್ ಪವಾರ್ ವಿಜಯ
12:49 PM
ಉಭಯ ರಾಜ್ಯಗಳ ಮುಖ್ಯಂಮತ್ರಿಗಳಾದ ದೇವೇಂದ್ರ ಫಡ್ನವೀಸ್, ಮನೋಹರಲಾಲ್ ಖಟ್ಟರ್ ಗೆ ಮುನ್ನಡೆ.
12:45 PM
ಬಿಜೆಪಿ ಅಭ್ಯರ್ಥಿ, ಕುಸ್ತಿ ಪಟು ಯೋಗೇಶ್ವರ್ ದತ್ ಗೆ ಹಿನ್ನಡೆ. ಹರ್ಯಾಣದ ಬರೋಡಾ ಕ್ಷೇತ್ರದಿಂದ ದತ್ ಸ್ಪರ್ಧೆ
12:36 PM
ಮಹಾರಾಷ್ಟ್ರ: ಬಿಜೆಪಿ- ಶಿವಸೇನೆ ಮೈತ್ರಿ 166, ಕಾಂಗ್ರೆಸ್- ಎನ್ ಸಿಪಿ ಮೈತ್ರಿ 90 ಮತ್ತು ಇತರರು 32 ಕ್ಷೇತ್ರಗಳಲ್ಲಿ ಮುನ್ನಡೆ.
12:31 PM
ಹರ್ಯಾಣ: ಬಿಜೆಪಿ- 41, ಕಾಂಗ್ರೆಸ್-31, ಜೆಜೆಪಿ-10, ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ.
12:27 PM
ಬಿಜೆಪಿಯ ಬಬಿತಾ ಪೋಗಟ್ ಗೆ ಮುನ್ನಡೆ. ಹರ್ಯಾಣದ ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಬಿತಾ
12:23 PM
ಉಪಚುನಾವಣೆ: ಒರಿಸ್ಸಾ್ ಬಿಜೆಪುರ್ ನಲ್ಲಿ ಬಿಜೆಡಿ ಅಭ್ಯರ್ಥಿ ರಿತಾ ಸಾಹು 75,247 ಮತಗಳಿಂದ ಮುನ್ನಡೆ
12:21 PM
ಒಂದು ಗಂಟೆಗೆ ಹರ್ಯಾಣ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಪತ್ರಿಕಾಗೋಷ್ಠಿ
12:10 PM
ಉಪಚುನಾವಣೆ: ರಾಜಸ್ಥಾನದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ.
12:06 PM
ಉಪಚುನಾವಣೆ: ಪಾಂಡಿಚೇರಿಯ ಕಾಮರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯ.
12:04 PM
ಉಪಚುನಾವಣೆ: ತಿರುವಂತನಂತಪುರಂನಲ್ಲಿ ಎಲ್ ಡಿಎಫ್ ಅಭ್ಯರ್ಥಿಗೆ ಜಯ
12:02 PM
ಮಹಾರಾಷ್ಟ್ರದಲ್ಲಿ ಬಿಜೆಪಿ 122, ಕಾಂಗ್ರೆಸ್-40, ಶಿವಸೇನಾ-61 ಎನ್ ಸಿಪಿ-52, ಇತರರು 33 ಕ್ಷೇತ್ರಗಳಲ್ಲಿ ಮುನ್ನಡೆ.
12:00 PM
ಹರ್ಯಾಣದಲ್ಲಿ ಬಿಜೆಪಿ- 40, ಕಾಂಗ್ರೆಸ್- 29, ಜೆಜೆಪಿ- 12 ಮತ್ತು ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ
11:58 AM
ಉಪಚುನಾವಣೆ: ವಿವಾದಿತ ನಾಯಕ ಅಜಂ ಖಾನ್ ಪತ್ನಿ ತಂಜೀನ್ ಫಾತಿಮಾ ಅವರು ರಾಂಪುರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ಧಾರೆ.
11:42 AM
ಉಪಚುನಾವಣೆ: ತಮಿಳುನಾಡಿನ ಎರಡು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಮುನ್ನಡೆ
11:41 AM
ಉಪಚುನಾವಣೆ: ಸಿಕ್ಕಿಂ ನ ಮರ್ತಮ್ ರುಮ್ಟಕ್ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು
11:40 AM
ಉಪಚುನಾವಣೆ: ಉತ್ತರ ಪ್ರದೇಶದ ಜೈದ್ ಪುರ್ ನಲ್ಲಿ ಸಮಾಜವಾದಿ ಪಕ್ಷದ ಗೌರವ್ ರಾವತ್ 8000 ಮತಗಳಿಂದ ಮುನ್ನಡೆ.
11:37 AM
ಹರ್ಯಾಣ: 11 ಕ್ಷೇತ್ರಗಳಲ್ಲಿ ಜನನಾಯಕ್ ಜನತಾ ಪಕ್ಷದ ಮುನ್ನಡೆ
11:34 AM
ಉಪಚುನಾವಣೆ: ಆಲಿಗಢ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
11:27 AM
ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಸಿಎಂ ದೇವೇಂದ್ರ ಫಡ್ನವೀಸ್ 8398 ಮತಗಳಿಂದ ಮುನ್ನಡೆ.
11:19 AM
ಹರ್ಯಾಣದಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಕಾಂಗ್ರೆಸ್. ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಇದ್ದರೆ ಕಾಂಗ್ರೆಸ್- ಜೆಜೆಪಿ ಮೈತ್ರಿ ಸಾಧ್ಯತೆ.
11:16 AM
ಉಪಚುನಾವಣೆ: ಧರ್ಮಶಾಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
11:15 AM
ಮಾಜಿ ಹಾಕಿ ನಾಯಕ, ಪೆಹೋವಾ ಬಿಜೆಪಿ ಅಭ್ಯರ್ಥಿ ಸಂದೀಪ್ ಸಿಂಗ್ ಮುನ್ನಡೆ
11:11 AM
ಉಪಚುನಾವಣೆ: ಅಸ್ಸಾಂನಲ್ಲಿ ಮೂರು ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ.
11:10 AM
ಮಹಾರಾಷ್ಟ್ರದಲ್ಲಿ ಬಿಜೆಪಿ- 107 ಶಿವಸೇನಾ-70, ಕಾಂಗ್ರೆಸ್- 39 ಎನ್ ಸಿಪಿ- 50 ಮತ್ತು ಇತರರು 22 ಕ್ಷೇತ್ರಗಳಲ್ಲಿ ಮುನ್ನಡೆ.
11:08 AM
ಹರ್ಯಾಣದಲ್ಲಿ ಬಿಜೆಪಿ -42, ಕಾಂಗ್ರೆಸ್- 31, ಜೆಜೆಪಿ- 8 ಮತ್ತು ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ.
11:04 AM
ಬಿಜೆಪಿ ಅಭ್ಯರ್ಥಿ, ಕುಸ್ತಿಪಟು ಯೋಗೇಶ್ವರ್ ದತ್ ಮುನ್ನಡೆ.
11:02 AM
ಮಹಾರಾಷ್ಟ್ರದ ಪರ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪಂಕಜಾ ಮುಂಡೆ ಹಿನ್ನಡೆ
10:59 AM
ಐದನೇ ಹಂತದ ಮತ ಎಣಿಕೆಯ ನಂತರ ಕಾಂಗ್ರೆಸ್ ನ ರಣ್ ದೀಪ್ ಸುರ್ಜೇವಾಲ ಮುನ್ನಡೆ.
10:49 AM
ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ಗೆ ಹಿನ್ನಡೆ. ಹರ್ಯಾಣದ ಅದಂಪುರ್ ನಲ್ಲಿ ಕಾಂಗ್ರೆಸ್ ನ ಕುಲ್ ದೀಪ್ ಬಿಶ್ನೋಯ್ ವಿರುದ್ದ ಕಣಕ್ಕಿಳಿದಿರುವ ಪೋಗಟ್.
10:44 AM
ಮೂರನೇ ಹಂತದ ಮತ ಎಣಿಕೆ ನಂತರ ಮನೊಹರ್ ಲಾಲ್ ಖಟ್ಟರ್ 14030 ಮತಗಳಿಂದ ಮುನ್ನಡೆ.
10:40 AM
ಯಾರೇ ಸಿಎಂ ಹುದ್ದೆ ಕೊಟ್ಟರೂ ಅವರ ಜೊತೆಗೆ ಮೈತ್ರಿ: ಜೆಜೆಪಿಯ ದುಷ್ಯಂತ್ ಚೌಟಾಲ
10:39 AM
ಉಪಚುನಾವಣೆ: ಮಂಜೆಶ್ವರಂ ನಲ್ಲಿ ಯುಡಿಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ 3000 ಮತಗಳಿಂದ ಮುನ್ನಡೆ.
10:35 AM
ಹರ್ಯಾಣದಲ್ಲಿ ಬಿಜೆಪಿ 42, ಕಾಂಗ್ರೆಸ್ 34 ಮತ್ತು 14 ಕ್ಷೇತ್ರಗಳಲ್ಲಿ ಇತರರು ಮುನ್ನಡೆ.
10:33 AM
ಮಹಾರಾಷ್ಟ್ರದಲ್ಲಿ 182 ಕ್ಷೇತ್ರದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ ಮುನ್ನಡೆ. 87 ಕ್ಷೇತ್ರದಲ್ಲಿ ಕಾಂಗ್ರೆಸ್- ಎನ್ ಸಿಪಿ ಮುನ್ನಡೆ
10:30 AM
ಉಪಚುನಾವಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿ-5, ಬಿಎಸ್ ಪಿ-2, ಎಸ್ ಪಿ-2 ಮತ್ತು ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ.
10:25 AM
ಹರ್ಯಾಣದಲ್ಲಿ ಯುವ ನಾಯಕ ದುಷ್ಯಂತ ಚೌಟಾಲರ ಜನನಾಯಕ ಜನತಾ ಪಕ್ಷ 10 ಕ್ಷೇತ್ರಗಳಲ್ಲಿ ಮುನ್ನಡೆ.
10:22 AM
ಎರಡನೇ ಹಂತದ ಮತ ಎಣಿಕೆ ನಂತರವೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮುನ್ನಡೆಯಲ್ಲಿದ್ದಾರೆ.
10:18 AM
ಹರ್ಯಾಣದಲ್ಲಿ ಬಿಜೆಪಿ 40, ಕಾಂಗ್ರೆಸ್ 33 ಮತ್ತು ಜೆಜೆಪಿ 11 ಕ್ಷೇತ್ರಗಳಲ್ಲಿ ಮುನ್ನಡೆ
10:16 AM
ಉಪಚುನಾವಣೆ: ಗುಜರಾತ್ ನ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುನ್ನಡೆ.
10:12 AM
ಮಹಾರಾಷ್ಟ್ರ: ಕಾಂಗ್ರೆಸ್ ನ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣಿತಿ ಶಿಂಧೆಗೆ ಸೊಲಾಪುರ್ ಕೇಂದ್ರ ಕ್ಷೇತ್ರದಲ್ಲಿ ಹಿನ್ನಡೆ.
10:10 AM
ಉಪಚುನಾವಣೆ: ಪಂಜಾಬ್ ನಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್,ಒಂದು ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳ ಮುನ್ನಡೆ.
10:07 AM
ಉ.ಪ್ರದೇಶದ ರಾಂಪುರ್ ಉಪಚುನಾವಣೆಯಲ್ಲಿ ಅಜಂ ಖಾನ್ ಪತ್ನಿ ತನ್ ಜೀನ್ ಫಾತಿಮಾ ಮುನ್ನಡೆ.
10:03 AM
ಹರ್ಯಾಣದಲ್ಲಿ ಬಿಜೆಪಿಯ 75 ಮಿಶನ್ ವಿಫಲವಾಗಿದೆ: ಜನನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲ
09:58 AM
ರೋಹ್ಟಕ್ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ.
09:56 AM
ಮಂಜೇಶ್ವರ ಉಪಚುನಾವಣೆಯಲ್ಲಿ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಮುನ್ನಡೆಯಲ್ಲಿದೆ.
09:53 AM
ಕೇರಳದ ಎರ್ನಾಕುಲಂ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
09:45 AM
ಹರ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ. ಕಾಂಗ್ರೆಸ್ 42, ಬಿಜೆಪಿ 41 ಕ್ಷೇತ್ರಗಳಲ್ಲಿ ಮುನ್ನಡೆ.
09:30 AM
ಮೊದಲ ಹಂತದ ಮತ ಎಣಿಕೆಯಲ್ಲಿ ಮನೋಹರಲಾಲ್ ಖಟ್ಟರ್ 4558 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
09:24 AM
ಮಹಾರಾಷ್ಟ್ರದ ಪರ್ಲಿ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ನ ಸುರೇಂದ್ರ ಪವಾರ್ ಸೋನಿಪತ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
09:18 AM
ಶಿವಸೇನೆಯ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಲ್ಲಿ 7020 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
09:08 AM
ಕುಸ್ತಿ ಪಟು ಬಬಿತಾ ಪೋಗಟ್ ಬಿಜೆಪಿ ಟಿಕೆಟ್ ನಿಂದ ದಾದ್ರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಸದ್ಯ ಮುನ್ನಡೆ ಸಾಧಿಸಿದ್ದಾರೆ.
09:04 AM
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮುನ್ನಡೆಯಲ್ಲಿದ್ದಾರೆ. ನಾಗ್ಪುರದಲ್ಲಿ ದೇವೇಂದ್ರ ಫಡ್ನವೀಸ್ ಮುನ್ನಡೆಯಲ್ಲಿದ್ದರೆ, ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಕರ್ನಾಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
08:57 AM
ಹರ್ಯಾಣದ ಅದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯ್ ವಿರುದ್ಧ ಬಿಜೆಪಿ ಟಿಕ್ ಟಾಕ್ ಸ್ಟಾರ್ ಸೋನಾಯಿ ಪೋಗಟ್ ಗೆ ಟಿಕೆಟ್ ನೀಡಿದೆ. ಮತ ಎಣಿಕೆ ಪ್ರಗತಿಯಲ್ಲಿದೆ.
08:52 AM
ಎರಡೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಯತ್ತ ಸಾಗುತ್ತಿದೆ.
08:41 AM
2014ರ ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿದ್ದರೆ, ಕಾಂಗ್ರೆಸ್ 15, ಐಎನ್ ಎಲ್ ಡಿ 19, ಐಎನ್ ಡಿ ಪಕ್ಷ 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಇತರರು ನಾಲ್ಕು ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದರು.
08:37 AM
ಮಹಾರಾಷ್ಟ್ರದಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ 122 ಸೀಟ್, ಶಿವಸೇನಾ 63 ಕ್ಷೇತ್ರಗಳಲ್ಲಿ ಗೆದ್ದು ಸರಕಾರ ರಚಿಸಿತ್ತು. ಉಳಿದಂತೆ ಕಾಂಗ್ರೆಸ್ 42 ಮತ್ತು ಎನ್ ಸಿಪಿ 41 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಇತರರು 20 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರು.
08:31 AM
ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ 18 ರಾಜ್ಯಗಳ 51 ವಿಧಾನಸಭಾ ಕ್ಷೇತ್ರ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಆರಂಭವಾಗಿದೆ.
08:26 AM
ಹರ್ಯಾಣದಲ್ಲಿ ಹಾಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕಾಂಗ್ರೆಸ್ ನ ಭೂಪಿಂದರ್ ಸಿಂಗ್ ಹೂಡಾ, ರಂದೀಪ್ ಸಿಂಗ್ ಸುರ್ಜೇವಾಲ ಮುನ್ನಡೆಯಲ್ಲಿದ್ದಾರೆ.
08:22 AM
ಅಂಚೆ ಮತ ಎಣಿಕೆ ಆರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ದೇವೆಂದ್ರ ಫಡ್ನವೀಸ್, ಆದಿತ್ಯ ಠಾಕ್ರೆ ಮುನ್ನಡೆಯಲ್ಲಿದ್ದಾರೆ.
08:17 AM
ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
08:10 AM
ಉಭಯ ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಬಹುಮತದ ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗೆಲುವಿನ ಆತ್ಮವಿಶ್ವಾಸದಿಂದಿದ್ದು, ಪಕ್ಷದ ಕಚೇರಿಯಲ್ಲಿ ಹಂಚಲೆಂದು ಸಾವಿರಾರು ಲಾಡುಗಳನ್ನು ಸಿದ್ದಪಡಿಸಲಾಗುತ್ತಿದೆ.
08:07 AM
ಉಭಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭ. ಮೊದಲು ಅಂಚೆ ಮತಗಳ ಎಣಿಕೆ.
08:04 AM
ಮಹಾರಾಷ್ಟ್ರದಲ್ಲಿ ಶೇ. 61.13 ಮತದಾನ ನಡೆದಿದ್ದರೆ, ಹರ್ಯಾಣದಲ್ಲಿ ಶೇ. 68ರಷ್ಟು ಮತದಾನ ದಾಖಲಾಗಿತ್ತು.
07:59 AM
ಹರ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಸ್ಪರ್ಧೆಯಿದೆ. ಅದಲ್ಲದೆ ಜನನಾಯಕ್ ಜನತಾ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಲೋಕ ದಳ ಪಕ್ಷಗಳು ಕೂಡಾ ತೀವ್ರ ಪ್ರತಿಸ್ಪರ್ಧೆ ನೀಡುವ ನಿರೀಕ್ಷೆ ಇದೆ.
07:54 AM
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೆ, ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
07:45 AM
ಉಭಯ ರಾಜ್ಯಗಳಲ್ಲಿ ಮತ ಎಣಿಕೆಗೆ ಸಜ್ಜಾದ ಅಧಿಕಾರಿಗಳು. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ
07:02 AM
ಹರ್ಯಾಣ ವಿಧಾನಸಭೆ 90 ಸದಸ್ಯಬಲ ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 46. ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ಮತದಾನೋತ್ತರ ಸಮೀಕ್ಷೆ ತಿಳಿಸಿದೆ.
07:01 AM
ಮಹಾರಾಷ್ಟ್ರದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ, ಶಿವಸೇನಾ 124 ಸ್ಥಾನಗಳಲ್ಲಿ ಸ್ಪರ್ಧೆ. ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ನಂಬರ್ 145.
06:39 AM
ಮಹಾರಾಷ್ಟ್ರ ವಿಧಾನಸಭೆ 288 ಸದಸ್ಯಬಲ, ಹರ್ಯಾಣ ವಿಧಾನಸಭೆ 90 ಸದಸ್ಯ ಬಲ ಹೊಂದಿದೆ.
06:38 AM
ಉಪಚುನಾವಣೆ ನಡೆದಿರುವಂಥ ಕ್ಷೇತ್ರಗಳ ಪೈಕಿ 30 ಬಿಜೆಪಿ, 12 ಕಾಂಗ್ರೆಸ್‌ ಹಾಗೂ ಉಳಿದವುಗಳು ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿದ್ದವು.
06:37 AM
ಮಹಾರಾಷ್ಟ್ರ ಮತ್ತು ಹರಿಯಾಣದ ಮತಗಟ್ಟೆ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಎರಡೂ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿವೆ.
06:37 AM
ಗುರುವಾರ ಬೆಳಗ್ಗೆ 8ರಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಚಿತ್ರಣ ಹೊರಬೀಳಲಿದೆ.
06:37 AM
18 ರಾಜ್ಯಗಳ 51 ವಿಧಾನ ಸಭಾ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತಎಣಿಕೆಯೂ ಇಂದು ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
06:36 AM
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಆರಂಭ. ಮೊದಲಿಗೆ ಅಂಚೆ ಮತ ಎಣಿಕೆ.