03:47 PM
ವಾದ-ಪ್ರತಿವಾದದ ಬಳಿಕ ಶಾಸಕರ ರಾಜೀನಾಮೆ ಕುರಿತ ತೀರ್ಪನ್ನು ಕಾಯ್ದಿರಿಸಿದ ಸುಪ್ರಿಂ ಪೀಠ.
03:26 PM
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಬುಧವಾರ ಬೆಳಗ್ಗೆ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
03:24 PM
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಬುಧವಾರ ಬೆಳಗ್ಗೆ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
03:20 PM
ಅಲ್ಪಮತದ ಸರ್ಕಾರವನ್ನು ಉಳಿಸಲು ಸ್ಪೀಕರ್ ಸಹಕರಿಸುತ್ತಿದ್ದಾರೆ. ರೋಹ್ಟಗಿ ವಾದ
03:19 PM
ಸರ್ಕಾರ ಬಹುಮತ ಕಳೆದುಕೊಂಡಿದೆ. ನಾಲ್ಕು ವರ್ಷದವರೆಗೆ ಅನರ್ಹತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳದೇ ಹೋದರೆ ರಾಜೀನಾಮೆ ಕಥೆ ಏನು? ರೋಹ್ಟಗಿ ಪ್ರಶ್ನೆ.
03:13 PM
ರಾಜೀನಾಮೆಯನ್ನು ಅನರ್ಹತೆಯೊಂದಿಗೆ ಬೆರೆಸಲಾಗಿದೆ. ರಾಜೀನಾಮೆ ನೀಡಿ ಬೇಕಾದ ಹಾಗೆ ಬದುಕುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ರೋಹ್ಟಗಿ ವಾದ
03:06 PM
ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿದೆ. ಅಂದು ಮೂರು ಸಾಲಿನ ವಿಪ್ ಜಾರಿಯಲ್ಲಿರಲಿದೆ. ಧವನ್ ಪ್ರತಿವಾದ
03:06 PM
ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿದೆ. ಅಂದು ಮೂರು ಸಾಲಿನ ವಿಪ್ ಜಾರಿಯಲ್ಲಿರಲಿದೆ. ಧವನ್ ಪ್ರತಿವಾದ
03:02 PM
10ನೇ ಪರಿಚ್ಛೇದದಡಿ ನಾವು ಬರಲ್ಲ ಎಂದು ಶಾಸಕರು ತೀರ್ಮಾನಿಸುವಂತಿಲ್ಲ. 10ನ ಪರಿಚ್ಛೇದ ಶಾಸಕರ ಅನರ್ಹತೆ ಬಗ್ಗೆ ಹೇಳುತ್ತೆ. ಇದರ ಬಗ್ಗೆ ಸ್ಪೀಕರ್ ನಿರ್ಧರಿಸಬೇಕು.
02:47 PM
ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಗೆ ವಿಚಾರಣೆ ನಡೆಸಲು ಸಮಯಾವಕಾಶ ಕೊಡಬೇಕು. ಧವನ್ ಮನವಿ
02:42 PM
ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ..ರಾಜೀವ್ ಧವನ್ ವಾದ
02:27 PM
ಶಾಸಕರು ಮಂತ್ರಿಯಾಗಲು ಬಯಸಿದ್ದಾರೆಂದು ನಾನು ಹೇಳಿಲ್ಲ. ಮಧ್ಯಪ್ರವೇಶಿಸಿದ ರೋಹ್ಟಗಿ ವಾದ.
02:26 PM
ಸಾಮೂಹಿಕ ರಾಜೀನಾಮೆಗೆ ಸ್ಪೀಕರ್ ವಿಚಾರಣೆ ಅಗತ್ಯ. ಸ್ಪೀಕರ್ ಭೇಟಿಯಾಗಲು ಬದಲು ಶಾಸಕರು ಮುಂಬೈಗೆ ಹೋಗಿದ್ದಾರೆ. ಧವನ್ ವಾದ
02:22 PM
ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮುಕ್ತಾಯ, ಈಗ ಸಿಎಂ ಪರ ವಕೀಲ ರಾಜೀವ್ ಧವನ್ ವಾದ ಮಂಡನೆ ಆರಂಭ.
02:20 PM
ಉನ್ನತ ಹುದ್ದೆಯಲ್ಲಿರುವ ಸ್ಪೀಕರ್ ಬಗ್ಗೆ ಮರುಚಿಂತನೆ ಅಗತ್ಯ. 2018ರಂದು ನೀಡಿದ ತೀರ್ಪು ಬೇರೆ ಸಂದರ್ಭದಲ್ಲಿ ಬಂದಿದೆ. ಸಿಂಘ್ವಿ ವಾದ
02:18 PM
ರಾಜೀನಾಮೆ ತಡೆಯಲೆಂದೇ 10ನೇ ಪರಿಚ್ಛೇದ ಪ್ರಯೋಗಿಸಿದ್ದಾರೆ. ರಾಜೀನಾಮೆ ಹಕ್ಕು ಕಿತ್ತುಕೊಳ್ಳಲು ಅನರ್ಹತೆ ಅಸ್ತ್ರ ಉಪಯೋಗಿಸುತ್ತಿದ್ದೀರಾ? ಸಿಜೆಐ
02:05 PM
ಕೆಲವೇ ಕ್ಷಣಗಳಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಕುರಿತ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಪೀಠದಲ್ಲಿ ಆರಂಭವಾಗಲಿದೆ.
12:58 PM
ಭೋಜನ ವಿರಾಮದ ಹಿನ್ನಲೆ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆ. 2ಗಂಟೆಯಿಂದ ಮತ್ತೆ ಕೋರ್ಟ್ ಕಲಾಪ ಆರಂಭವಾಗಲಿದೆ.
12:56 PM
ರಾಜೀನಾಮೆ ಮತ್ತು ಅನರ್ಹತೆ ನಡುವೆ ನೇರ ಸಂಬಂಧವಿದೆ. ಸ್ಪೀಕರ್ ತಪ್ಪು ನಿರ್ಧಾರ ಕೈಗೊಂಡರೆ ನೀವು ಮಧ್ಯಪ್ರವೇಶಿಸಬಹುದು.
12:53 PM
ನೀವು ನೀಡುವ ಆದೇಶದ ಪರಿಣಾಮಗಳನ್ನು ಮತ್ತೆ ಸರಿಪಡಿಸಲು ಆಗಲ್ಲ. ಸ್ಪೀಕರ್ ಪರ ವಕೀಲ ಸಿಂಘ್ವಿ
12:53 PM
ಸ್ಪೀಕರ್ ತುಂಬಾ ಅನುಭವಿ ಇದ್ದಾರೆ. ಸ್ಪೀಕರ್ ಕಚೇರಿ ಕೂಡಾ ನ್ಯಾಯಾಂಗವನ್ನು ಗೌರವಿಸುತ್ತದೆ.
12:52 PM
ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶನ ನೀಡಬಾರದು. ಅದರಲ್ಲೂ ಸ್ಪೀಕರ್ ಹುದ್ದೆಗೆ ನಿರ್ದೇಶನ ನೀಡಬಾರದು.
11:59 AM
ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಆರಂಭ. ರೋಹ್ಟಗಿ ವಾದಕ್ಕೆ ಪ್ರತ್ಯುತ್ತರ.
11:58 AM
ಅತೃಪ್ತ ಶಾಸಕರ ಪರ ಹಿರಿಯ ವಕೀಲ, ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡನೆ ಮುಕ್ತಾಯ.
11:50 AM
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ಮಾಡುವಂತಿಲ್ಲ. ನೀವು ಯಾವ ಆದೇಶ ನಿರೀಕ್ಷೆ ಮಾಡ್ತೀದ್ದಿರಿ..ರೋಹ್ಟಗಿಗೆ ಸಿಜೆಐ ಪ್ರಶ್ನೆ.
11:44 AM
ಕೇರಳ ಶಾಸಕರ ಪ್ರಕರಣದಲ್ಲಿ ಅನರ್ಹತೆ ಬಾಕಿ ಇದ್ದರೂ, ರಾಜೀನಾಮೆ ಅಂಗೀಕಾರವಾಗಿತ್ತು. ರೋಹ್ಟಗಿ ವಾದ.
11:43 AM
ಶಾಸಕರು ರಾಜೀನಾಮೆಗೆ ನೀಡುವ ಕಾರಣಗಳು ಅಪ್ರಸ್ತುತ. ರಾಜೀನಾಮೆ ಕೊಟ್ಟು ಕೆಲವರು ನಿವೃತ್ತಿಯಾಗಬಹುದು, ಕೆಲವರು ಬೇರೆ ವೃತ್ತಿಗೂ ಹೋಗಬಹುದು.
11:37 AM
ರಾಜೀನಾಮೆಗೆ ಮುನ್ನ ಅನರ್ಹತೆ ತೀರ್ಮಾನ ಮಾಡೋ ಬಗ್ಗೆ ಬಾಧ್ಯತೆ ಏನಾದರು ಇದೆಯಾ?
11:29 AM
ಸ್ಪೀಕರ್ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ನಿರ್ಧರಿಸುವ ಹಕ್ಕಿದೆ. ಸ್ಪೀಕರ್ ವ್ಯಾಪ್ತಿಯಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ: ಸುಪ್ರಿಂ