01:05 PM
ಕಲಬುರಗಿ, ಹಾಸನ,ಮಡಿಕೇರಿ, ಚಾಮರಾಜನಗರ,ಉತ್ತರಕನ್ನಡ ಜಿಲ್ಲೆಗೆ ಸಿಗದ ಸಚಿವ ಸ್ಥಾನ.
01:04 PM
ಮಡಿಕೇರಿಗೆ ಸಿಗದ ಸಚಿವ ಸ್ಥಾನ, ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ. ಗೂಳಿಹಟ್ಟಿ ಶೇಖರ್, ಬಾಲಚಂದ್ರ ಜಾರಕಿಹೊಳಿ ಆಕ್ರೋಶ.
12:52 PM
ಜಾರಕಿಹೊಳಿ ಕುಟುಂಬಕ್ಕಿಲ್ಲ ಸಚಿವ ಸ್ಥಾನ, ಸೋತ ಲಕ್ಷ್ಮಣ ಸವದಿಗೆ ಸ್ಥಾನ ಕೊಟ್ಟಿದ್ದಕ್ಕೆ ಬಿಜೆಪಿಯಲ್ಲಿ ಆಕ್ರೋಶ.
12:33 PM
ನನ್ನ ಕ್ಷೇತ್ರದ ಜನರ ಅಪೇಕ್ಷೆ, ನಿರೀಕ್ಷೆ ಸುಳ್ಳಾಗಿದೆ ಎಂದು ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:32 PM
ಚಿತ್ರದುರ್ಗದಲ್ಲಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಆಕ್ರೋಶಗೊಂಡು ಪಕ್ಷದ ಕಾರ್ಯಕರ್ತರು ಟಯರ್ ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
12:26 PM
ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ. ಗೂಳಿಹಟ್ಟಿ ಶೇಖರ್, ಜಿಎಚ್ ತಿಪ್ಪಾರೆಡ್ಡಿ, ಸಂಜೀವ ಮಠಂದೂರು ಸೇರಿದಂತೆ ಹಲವು ಶಾಸಕರ ಅಸಮಾಧಾನ.
11:22 AM
ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ರಾಷ್ಟ್ರಗೀತೆಯೊಂದಿಗೆ ಮುಕ್ತಾಯ.
11:19 AM
ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11:18 AM
ಲಂಬಾಣಿ ಧಿರಿಸಿನಲ್ಲಿ ಆಗಮಿಸಿ ಪ್ರಮಾಣವಚನ ಸ್ವೀಕರಿಸಿದ ಪ್ರಭು ಚೌಹಾಣ್.
11:16 AM
ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11:13 AM
ಮುಳಬಾಗಿಲು ಕ್ಷೇತ್ರದ ಶಾಸಕ ಎಚ್.ಶಾಸಕ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11:10 AM
ನರಗುಂದ ಕ್ಷೇತ್ರದ ಶಾಸಕ ಸಿಸಿ ಪಾಟೀಲ್ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11:09 AM
ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಬಾಯಿತಪ್ಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಎಂದು ಹೇಳಿ ಕೂಡಲೇ ಸಚಿವರಾಗಿ ಎಂಬುದಾಗಿ ಸರಿಪಡಿಸಿಕೊಂಡ ಮಾಧುಸ್ವಾಮಿ.
11:07 AM
ಚಿಕ್ಕನಾಯಕನಹಳ್ಳಿ ಶಾಸಕ ಜೆಸಿ ಮಾಧುಸ್ವಾಮಿ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
11:05 AM
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
11:02 AM
ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11:00 AM
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿಟಿ ರವಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:58 AM
ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ.ಸೋಮಣ್ಣ ಅವರು ಬಸವಾದಿ ಪ್ರಮುಖರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:54 AM
ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:51 AM
ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:49 AM
ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
10:46 AM
ಪದ್ಮನಾಭ ನಗರ ಆರು ಬಾರಿ ಶಾಸಕರಾಗಿರುವ ಆರ್.ಅಶೋಕ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:43 AM
ಶಿವಮೊಗ್ಗ ನಗರ ಶಾಸಕ ಕೆಎಸ್ ಈಶ್ವರಪ್ಪ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
10:40 AM
ಲಕ್ಷ್ಮನ ಸವದಿ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ರಾಜ್ಯಪಾಲ ವಜೂಭಾಯ್ ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು.
10:37 AM
ಗೋವಿಂದ ಕಾರಜೋಳ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಶ್ವಥ್ ನಾರಾಯಣ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾನವಚನ ಸ್ವೀಕರಿಸಿದರು.
10:32 AM
ರಾಜಭವನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಜೂಭಾಯ್ ವಾಲಾ ಆಗಮನ.
10:22 AM
ಕೇಂದ್ರ ಸಚಿವರು ಸೇರಿದಂತೆ ರಾಜಭವನದಲ್ಲಿ ಗಣ್ಯರ ದಂಡು. ರಾಜಭವನದಲ್ಲಿ ಭಾವಿ ಸಚಿವರು, ಶಾಸಕರು ಉಪಸ್ಥಿತಿ.
10:20 AM
17 ಸಚಿವರಲ್ಲಿ ಏಳು ಮಂದಿ ಲಿಂಗಾಯತ ಸಮುದಾಯಕ್ಕೆ ಮಣೆ, ಉಳಿದಂತೆ ವಾಲ್ಮೀಕಿ 1, ಒಕ್ಕಲಿಗ 03, ಕುರುಬ, ಈಡಿಗ, ಬ್ರಾಹ್ಮಣ, ದಲಿತ ಸೇರಿದಂತೆ ತಲಾ ಒಂದು ಸ್ಥಾನ ನೀಡಲಾಗಿದೆ.
10:01 AM
ಕರಾವಳಿಗೆ ಒಂದೇ ಒಂದು ಸಚಿವ ಸ್ಥಾನ. ಈ ಬಾರಿಯೂ ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸಂಪುಟದಲ್ಲಿ ಮಣೆ.
10:00 AM
ಬಿಎಸ್ ಯಡಿಯೂರಪ್ಪ ಆಪ್ತರಾದ ವಿ.ಸೋಮಣ್ಣ, ಗೋವಿಂದ ಕಾರಜೋಳಗೆ ಸಚಿವ ಸಂಪುಟದಲ್ಲಿ ಮಣೆ.
10:00 AM
ಮೊದಲ ಹಂತದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ. ಆರ್.ಅಶೋಕ್, ಈಶ್ವರಪ್ಪಗೆ ಒಲಿದ ಅದೃಷ್ಟ.
09:59 AM
ಸಚಿವ ಸಂಪುಟ ಸಮಾರಂಭಕ್ಕೆ ತೆರಳದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮನೆಯಲ್ಲಿಯೇ ಸಾರ್ವಜನಿಕರ ಅಹವಾಲು ಸ್ವೀಕಾರ.
09:59 AM
ಈ ಬಾರಿಯೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಳ್ಯ ಶಾಸಕ ಅಂಗಾರ ಅವರಿಗೆ ಒಲಿಯದ ಸಚಿವ ಸ್ಥಾನ.
09:58 AM
ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ.
09:57 AM
ಬಿಎಸ್ ಯಡಿಯೂರಪ್ಪ ಸಂಪುಟದ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ, 17 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ.