06:30 PM
ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ ಶಾಲಾ, ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ.
06:21 PM
ಚಿಕ್ಕಮಗಳೂರು ಜಿಲ್ಲೆಯ ಕಂಟ್ರೋಲ್ ರೂಂ ವಿವರ: ಚಿಕ್ಕಮಗಳೂರು- 08262-231392, ಮೂಡಿಗೆರೆ-08263-220204, ಕೊಪ್ಪ-08265-221047, ಶೃಂಗೇರಿ-08265-250135, ತರೀಕೆರೆ-08261-222259, ಎನ್ ಆರ್ ಪುರ-08266-220128, ಕಡೂರು-08267-221250
06:17 PM
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
06:13 PM
ಮಲೆನಾಡಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.ಚಿಕ್ಕಮಗಳೂರು, ಮೂಡಿಗೆರೆ, ಎನ್ ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲಾ, ಕಾಲೇಜಿಗೆ ನಾಳೆ ರಜೆ.
06:02 PM
ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಕೊಚ್ಚಿ ಹೋದ ರಸ್ತೆ. ನದಿ ನೋಡುವುದಕ್ಕೆ ತೆರಳಿದ್ದ ವೇಳೆ ಕೊಚ್ಚಿ ಹೋದ ಯುವಕ
03:45 PM
ನೇತ್ರಾವತಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಧರ್ಮಸ್ಥಳಕ್ಕೆ ಬಂದ ಭಕ್ತರು ನೇತ್ರಾವತಿಯಲ್ಲಿ ಪುಣ್ಯಸ್ನಾನ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
03:45 PM
ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟ ಸಂಪೂರ್ಣ ಜಲಾವೃತ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ.
03:32 PM
ಚಿಕ್ಕಮಗಳೂರು ಮಾಗುಂಡಿ ರಸ್ತೆ ಬಂದ್. ಬಾಳೆಹೊನ್ನೂರು ಮಾಗುಂಡಿ ಸಂಪರ್ಕ ಕಡಿತ. ಮಾಗುಂಡಿ,ಕಳಸಕ್ಕೆ ತೆರಳುವ ವಾಹನ ಸವಾರರ ಪರದಾಟ.
03:30 PM
ಶಿವಮೊಗ್ಗ; ತುಂಗಾ ನದಿಯಲ್ಲಿ ಕೊಚ್ಚಿ ಹೋದ ಮಹಿಳೆ. ನದಿಯಲ್ಲಿ ಕೊಚ್ಚಿಹೋದ ಮಹಿಳೆ ಯಾರೆಂಬುದು ತಿಳಿದು ಬಂದಿಲ್ಲ.
02:59 PM
ಯಲ್ಲಾಪುರ-ಅಂಕೋಲಾ, ಹುಬ್ಬಳ್ಳಿ-ಅಂಕೋಲಾ, ಮಡಿಕೇರಿ-ಭಾಗಮಂಡಲ ರಸ್ತೆ ಬಂದ್. ವಾಹನ ಸವಾರರ ಪರದಾಟ.
02:58 PM
ಹರಿಹರ, ಹೊನ್ನಾಳಿ ತಾಲೂಕಿನ 63 ಗ್ರಾಮಗಳಿಗೆ ಪ್ರವಾಹ ಭೀತಿ. ಬಂಟ್ವಾಳದ ತಗ್ಗುಪ್ರದೇಶಗಳಲ್ಲಿ ಇರುವ ಮನೆಗಳಿಗೆ ಹರಿದು ಬಂದ ನೀರು.
02:51 PM
ಧಾರವಾಡ ಜಿಲ್ಲೆಯಲ್ಲಿ ಮುಂದುವರಿದ ಮಳೆ. ಬಸ್ ಮೇಲೆ ಮರ ಉರುಳಿ ಬಿದ್ದ ಘಟನೆ ಧಾರವಾಡ ವಿವಿ ಸಮೀಪ ನಡೆದಿದೆ. ಬಸ್ ನಲ್ಲಿ ಯಾರೂ ಇಲ್ಲದ ಕಾರಣ ತಪ್ಪಿದ ಅನಾಹುತ.
02:48 PM
ಭಾರೀ ಮಳೆಯಿಂದ ರಾಜ್ಯದ ಹಲವೆಡೆ ರಸ್ತೆ ಸಂಚಾರ ಬಂದ್. ಬೆಳಗಾವಿ-ಪಂಜಿಮ್, ಬೆಳಗಾವಿ-ಪೊಂಡಾ, ಕುಕ್ಕೆ ಸುಬ್ರಹ್ಮಣ್ಯ-ಉಡುಪಿ, ಚಾರ್ಮಾಡಿ ಘಾಟ್-ಧರ್ಮಸ್ಥಳ.
02:38 PM
ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರಿದ ಮಳೆ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ,ಕಾಲೇಜುಗಳಿಗೆ ಆಗಸ್ಟ್ 8, 9 ಮತ್ತು 10ರಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ರಜೆ ಘೋಷಿಸಿದ್ದಾರೆ.
02:01 PM
ನಿಪ್ಪಾಣಿ ಪಟ್ಟಣಕ್ಕೆ ನುಗ್ಗಿದ ವೇದಗಂಗಾ, ಪಶ್ಚಿಮಘಟ್ಟದಲ್ಲಿ ಮುಂದುವರಿದ ಮಳೆಯ ಅಬ್ಬರ.
02:00 PM
ಧಾರವಾಡ ಕುಂದಗೋಳ ತಾಲೂಕಿನ ಬದದ್ವಾಡ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
01:36 PM
ಮುನ್ನೆಚ್ಚರಿಕಾ ಕ್ರಮವಾಗಿ ಚನ್ನೂರ ಗ್ರಾಮದ ವೃದ್ದರು, ಮಹಿಳೆಯರು ಹಾಗೂ ಮಕ್ಕಳನ್ನು ವಡಗೇರಾ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
01:35 PM
ಯಾದಗಿರಿಯಲ್ಲಿ ಕೃಷ್ಣಾ ನದಿ ಪಾತ್ರಕ್ಕೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಡಗೇರಾ ತಾಲೂಕಿನ ಚನ್ನೂರ, ಗೊಂದೆನೂರ ಗ್ರಾಮಸ್ಥರಿಗೆ ಪ್ರವಾಹ ಭೀತಿ.
01:11 PM
ಶಿರಾಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿದ್ದ ಮರಗಳನ್ನು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಗುಂಡ್ಯ ಅವರು ಶಿರಾಡಿ ಅರಣ್ಯ ಇಲಾಖೆ ಜತೆ ಜಂಟಿ ಕಾರ್ಯಾಚರಣೆಯಲ್ಲಿ ಮರಗಳನ್ನು ತೆರವುಗೊಳಿಸಿದರು.
01:01 PM
ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ಚಾರ್ಮಾಡಿ ಘಾಟ್ ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್. ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ.
01:00 PM
ನೆಲಕ್ಕುರುಳಿದ ಹಳೆ ಕಾಲದ ವಿಗ್ರಹಗಳು. ವಿಗ್ರಹ ಕೆಳಗೆ ಹಾಕಿದ್ದ ಪೀಠ ಮಾತ್ರ ಧ್ವಂಸ, ವಿಗ್ರಹಗಳಿಗೆ ಯಾವುದೇ ಹಾನಿಯಾಗಿಲ್ಲ.
12:59 PM
ಶಿವಮೊಗ್ಗ ಶಿವಪ್ಪ ನಾಯಕ ಅರಮನೆ ಆವರಣದಲ್ಲಿರುವ ಪ್ರಾಚ್ಯ ವಸ್ತು ಸಂಗ್ರಹಾಲಯದ ಮೇಲೆ ಬಿದ್ದ ಬೃಹತ್ ಮರ.
12:44 PM
ಒಂದು ವಾರದಲ್ಲಿ ಮಹಾಮಳೆಗೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆ. ಅಂಕೋಲಾ-ಹುಬ್ಬಳ್ಳಿ ಸಂಪರ್ಕ ರಸ್ತೆ ಬಂದ್.
12:41 PM
ಘಟಪ್ರಭಾ ನದಿ ನೀರಲ್ಲಿ ಲೋಳಸುರ ಜಲಾವೃತ. ಬೆಳಗಾವಿ ಜಿಲ್ಲೆಯ ಲೋಳಸುರ ಗ್ರಾಮದಲ್ಲಿ ಮನೆ ಕುಸಿದು ಯುವತಿ ಸಾವು. ಪದ್ಮಾವತಿ ಪಾಟೀಲ್ (21) ಸಾವನ್ನಪ್ಪಿರುವ ಯುವತಿ.
12:40 PM
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿನಲ್ಲಿ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ. ತೋಟ, ಗದ್ದೆಗಳಿಗೆ ನುಗ್ಗಿದ ನೀರು.
12:38 PM
ಶಿವಮೊಗ್ಗದ ಲಕ್ಷ್ಮಿ ಟಾಕೀಸ್ ಬಳಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು. ಮಳೆ ಹಾನಿ ಪ್ರದೇಶಗಳಿಗೆ ಉಪಮೇಯರ್ ಚನ್ನಬಸಪ್ಪ ಭೇಟಿ.
12:37 PM
ಶಿವಮೊಗ್ಗದಲ್ಲಿ ಭಾರೀ ಮಳೆ. ನಗರದ ಮಧ್ಯಭಾಗದ ಹಾದು ಹೋಗಿರುವ ತುಂಗಾ ಚಾನಲ್ ತುಂಬಿ ಅವಾಂತರ.
12:37 PM
ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್ ನಗರದಲ್ಲಿ ಮನೆ ಕುಸಿತ. ನಗರದ ಹಲವೆಡೆ ಧರಾಶಾಯಿಯಾದ ಮರಗಳು.
12:34 PM
ಶಿರಾಡಿ ಬಳಿಯ ಕೊಡ್ಕಕಲ್ ಎಂಬಲ್ಲಿ ಹೆದ್ದಾರಿ ಮೇಲೆ ಮರ ಬಿದ್ದ ಪರಿಣಾಮ ಅರ್ಧ ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಬಂದ್. ಮರ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಶೀಘ್ರವೇ ಸಂಚಾರ ಆರಂಭ ಸಾಧ್ಯತೆ.
12:29 PM
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನ ಸಂಚಾರ ಸ್ಥಗಿತ. ದಾವಣಗೆರೆ ಹೊನ್ನಾಳಿ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರ ಪರದಾಟ.
12:19 PM
ಬೆಳಗಾವಿ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ. ಕೃಷ್ಣಾ ಹಾಗೂ ವೇದಗಂಗಾ ನದಿ ತೀರಗಳ ಚಿಕ್ಕೋಡಿ, ಅಥಣಿ, ರಾಯಭಾಗ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ 40ಕ್ಕೂ ಹೆಚ್ಚು ಹಳ್ಳಿ ಜಲಾವೃತ.
12:18 PM
ಬಿರುಗಾಳಿ ಸಹಿತ ಮಳೆಗೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಬರಗೇನಹಳ್ಳಿಯಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್.
12:17 PM
ಬೆಳಗಾವಿ ಹಿಡಕಲ್ ಜಲಾಶಯಕ್ಕೆ ಬುಧವಾರ 93 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು, ಜಲಾಶಯದಿಂದ 89ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
12:16 PM
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ.
12:15 PM
ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆ. ಕಳಸ-ಹೊರನಾಡು ಸಂಪರ್ಕ ಬಂದ್.
12:14 PM
ಮೆಣಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಳುರು ದಿಣ್ಣೆಯಲ್ಲಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಕುಮಾರ ಎಂಬವರು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.
12:14 PM
ಭಾರೀ ಮಳೆಯ ಹಿನ್ನೆಲೆಯಲ್ಲಿ ಮೈಸೂರಿನ ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು.
12:12 PM
ಧಾರವಾಡ ಜಿಲ್ಲೆಯ ಅಳ್ನಾವರ ಸಮೀಪದ ಗ್ರಾಮಕ್ಕೆ ತೆರಳಲು ಇದ್ದ ಏಕೈಕ ರಸ್ತೆಯೇ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಚಿಂತನೆ.
12:11 PM
ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ. ದೇವದುರ್ಗದ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆ.ಸೇತುವೆ ಸಮೀಪದ ಹೋಟೆಲ್ ಗಳಿಗೆ ನುಗ್ಗಿದ ನೀರು.
12:00 PM
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಭಾಗದಲ್ಲಿ ಭಾರೀ ಮಳೆ. ಉಕ್ಕಿ ಹರಿಯುತ್ತಿರುವ ಹೊನ್ನಮ್ಮನಹಳ್ಳ ಫಾಲ್ಸ್. ಫಾಲ್ಸ್ ಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ.
11:59 AM
ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಸಂತ್ರಸ್ತರ ರಕ್ಷಣೆಗೆ ತೆರಳಿ, ಮಳೆ ಮಧ್ಯೆ ರಾತ್ರಿ ಕಳೆದ ಉಪವಿಭಾಗಾಧಿಕಾರಿ, ಪಿಎಸ್ ಐ ಸೇರಿದಂತೆ 7 ಜನರ ರಕ್ಷಣೆ.
11:58 AM
ಚಿಕ್ಕಮಗಳೂರಿನ ಮುತ್ತಿನಕೊಪ್ಪ-ಶಂಕರಪುರ-ಮುಡುಬು ರಸ್ತೆಯಲ್ಲಿರುವ ಸೇತುವೆ ಮುಳುಗಡೆ. ತೀರ್ಥಹಳ್ಳಿ ಭಾಗಕ್ಕೆ ತೆರಳುವ ವಾಹನ ಸವಾರರ ಪರದಾಟ.
11:53 AM
ತರೀಕೆರೆಯಲ್ಲಿ ಭಾರೀ ಮಳೆ. ಗಾಳಿ, ಮಳೆಗೆ ತರೀಕೆರೆಯಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ. ಕಾರಿನಲ್ಲಿ ಯಾರೂ ಇಲ್ಲದ ಕಾರಣ, ತಪ್ಪಿದ ಅನಾಹುತ.
11:52 AM
ಚಿಕ್ಕಮಗಳೂರಿನಲ್ಲಿ ರಸ್ತೆಗೆ ಉರುಳಿ ಬಿದ್ದ ಮರ. ಬಸರೀಕಟ್ಟೆ-ಹೇರೂರು ಜಯಪುರ ರಸ್ತೆ ಬಂದ್. ವಾಹನ ಸವಾರರ ಪರದಾಟ.
11:51 AM
ಮಲೆನಾಡಿನಲ್ಲಿ ಪ್ರವಾಹ ಭೀತಿ. ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿ. ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ.
11:50 AM
ಶಿವಮೊಗ್ಗದ ಚಿಕ್ಕಮಾಗಡಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತ ಸಾವು.ವಿದ್ಯುತ್ ಸ್ಪರ್ಶದಿಂದ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಲೇಖಪ್ಪ ಎಂಬವರು ಸಾವನ್ನಪ್ಪಿದ್ದಾರೆ.
11:50 AM
ಮಹಾಮಳೆಗೆ ತತ್ತರಿಸಿದ ಜನತೆ. ಹಲವು ಗ್ರಾಮಗಳು ಸಂಪೂರ್ಣ ಜಲಾವೃತ. ಬೆಳಗಾವಿಯ ಚಿಕ್ಕೋಡಿಯಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ.
11:11 AM
ಕೃಷ್ಣಾ ನದಿಯ ನೀರಿನ ಹರಿವು ಪ್ರಮಾಣ ಭಾರೀ ಏರಿಕೆ. ನದಿ ಸಮೀಪ ಇರುವ ಕುಟುಂಬಗಳ ಸ್ಥಳಾಂತರ. ಜನಜೀವನ ಅಸ್ತವ್ಯಸ್ತ.
11:09 AM
ಧಾರಾಕಾರ ಮಳೆಗೆ ಹಲವು ವರ್ಷಗಳ ಬಳಿಕ ತುಂಬಿದ ಧಾರವಾಡ ಜಿಲ್ಲೆಯ ಅಳ್ವಾವರ ತಾಲೂಕಿನ ಹುಲಿಕೆರೆ ಗ್ರಾಮದ ಇಂದಿರಾ ಕೆರೆ.
11:08 AM
ರಾಜ್ಯಾದ್ಯಂತ ಮಳೆಯ ಅಬ್ಬರ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮುಂದುವರಿದ ಮಳೆ ಅಬ್ಬರ. ಪ್ರವಾಹದಲ್ಲಿ ಸಿಲುಕಿದ ಹಲವು ಕುಟುಂಬ