05:20 PM
ಜುಲೈ 31ರಂದು ವಿಧಾನಸಭೆ ಸ್ಪೀಕರ್ ಚುನಾವಣೆ ನಡೆಯಲಿದೆ ಎಂದು ತಿಳಿಸಿದ ಡೆಪ್ಯುಟಿ ಸ್ಪೀಕರ್ ಕಲಾಪವನ್ನು ಬುಧವಾರ 11ಗಂಟೆಗೆ ಮುಂದೂಡಿದರು.
05:18 PM
ವಿಧಾನಸಭಾ ಕಲಾಪ ಮತ್ತೆ ಆರಂಭ. ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಆರಂಭ.
03:42 PM
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡಿಸಿದ ಧನವಿನಿಯೋಗ ವಿಧೇಯಕ ವಿಧಾನಪರಿಷತ್ ನಲ್ಲಿ ಅಂಗೀಕಾರ.
12:27 PM
ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಆರಂಭಗೊಂಡ ಬೆನ್ಲ್ಲೇ ಕಲಾಪ ಸಂಜೆ 5ಕ್ಕೆ ಮುಂದೂಡಿಕೆ.
12:25 PM
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ರಮೇಶ್ ಕುಮಾರ್. ವಿದಾಯ ಭಾಷಣದ ನಂತರ ರಾಜೀನಾಮೆ ಘೋಷಣೆ.
12:18 PM
ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ..ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ಸಾಧ್ಯತೆ?
12:15 PM
ಮುಂದಿನ ಮೂರು ತಿಂಗಳಿಗೆ ಲೇಖಾನುದಾನಕ್ಕೆ ಅಂಗೀಕಾರ.ಕಾಂಗ್ರೆಸ್ ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರೋಧ.
11:56 AM
ಬಿಎಸ್ ಯಡಿಯೂರಪ್ಪ ಮಂಡಿಸಿದ ಧನವಿನಿಯೋಗ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರ.
11:49 AM
3 ತಿಂಗಳಿಗೆ ಲೇಖಾನುದಾನು ಮಾಡುವುದು ಸರಿಯಲ್ಲ, 8ತಿಂಗಳಿಗೆ ಮಾಡಿ ಎಂದು ನಾನು ಮನವಿ ಮಾಡುತ್ತೇನೆ-ಸಿದ್ದರಾಮಯ್ಯ
11:47 AM
ಬಿಎಸ್ ವೈ ವಿಶ್ವಾಸಮತಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ. ಚರ್ಚೆಯೇ ಇಲ್ಲದೇ ಧನವಿನಿಯೋಗ ವಿಧೇಯಕ ಇದೇ ಮೊದಲು-ಸಿದ್ದರಾಮಯ್ಯ
11:44 AM
ವಿಶ್ವಾಸಮತ ಗೆದ್ದ ನಂತರ ಮಹತ್ವದ ಧನ ವಿನಿಯೋಗ ವಿಧೇಯಕ ಮಂಡಿಸಿದ ಸಿಎಂ ಯಡಿಯೂರಪ್ಪ.
11:42 AM
ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಗೆದ್ದ ಬಿಎಸ್ ಯಡಿಯೂರಪ್ಪ. ಧ್ವನಿ ಮತದ ಮೂಲಕ ವಿಶ್ವಾಸಮತ ಪ್ರಸ್ತಾವನೆ ಅಂಗೀಕರಿಸಿದ ಸ್ಪೀಕರ್ ರಮೇಶ್ ಕುಮಾರ್.
11:40 AM
ನಿಮ್ಮ ಸರಕಾರಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂಬ ಭರವಸೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ
11:27 AM
ಯಾವಾಗ, ಹೇಗೆ ಆಡಳಿತ ಯಂತ್ರ ಕುಸಿದಿತ್ತು ಎಂದು ಹೇಳಲಿ, ಆಧಾರರಹಿತ ಆರೋಪ ಮಾಡೋದು ಬೇಡ-ಮಾಜಿ ಸಿಎಂ ಕುಮಾರಸ್ವಾಮಿ
11:26 AM
14 ತಿಂಗಳಿಂದ ಈ ಸ್ಥಾನಕ್ಕೆ ಬರಲು ಯಡಿಯೂರಪ್ಪನವರು ತುಂಬಾ ಪ್ರಯತ್ನಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ-ಕುಮಾರಸ್ವಾಮಿ
11:25 AM
ಶಾಸಕರ ಅನರ್ಹತೆ ಪ್ರಕರಣ, ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಕುಮಟಳ್ಳಿ, ಪಕ್ಷೇತರ ಶಾಸಕ ಶಂಕರ್ ಅವರು ಸುಪ್ರೀಂಗೆ ಮೊರೆ.
11:21 AM
ಬಿಎಸ್ ವೈ ಎಂದೂ ಜನಾದೇಶದಿಂದ ಮುಖ್ಯಮಂತ್ರಿ ಆಗಿಲ್ಲ. ಇದನ್ನು ಜನಾದೇಶ ಎಂದು ಹೇಳಲಿಕ್ಕೆ ಆಗುತ್ತಾ? ಸಿದ್ದರಾಮಯ್ಯ
11:20 AM
ನಾನು ಸಿಎಂ ಆಗಿದ್ದಾಗ ರೈತ ಬೆಳಕು ಎಂಬ ಯೋಜನೆಯನ್ನು ಘೋಷಣೆ ಮಾಡಿದ್ದೆ-ವಿಧಾನಸಭೆಯಲ್ಲಿ ಸಿದ್ದರಾಮಯ್ಯ
11:18 AM
ಇವತ್ತು ಇಡೀ ದಿನ ಯಡಿಯೂರಪ್ಪನವರಿಗೆ ಅಭಿನಂದನೆ, ನಾಳೆಯಿಂದ ನಿಂದನೆ ಎಂದು ನಗೆ ಚಟಾಕಿ ಹಾರಿಸಿದ ಸ್ಪೀಕರ್ ರಮೇಶ್ ಕುಮಾರ್.
11:17 AM
ಕುಮಾರಸ್ವಾಮಿ ಉತ್ತಮ ಆಡಳಿತ ನೀಡಿದ್ದರೆ. ರೈತರು, ಬಡವರು, ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿದ್ದೇವೆ. ಸಿದ್ದರಾಮಯ್ಯ
11:16 AM
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿಲ್ಲ, ಆಡಳಿತ ಯಂತ್ರ ಸ್ಥಗಿತವಾಗಿಲ್ಲ. ಮೈತ್ರಿ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ-ಸಿದ್ದರಾಮಯ್ಯ ಪ್ರತಿಕ್ರಿಯೆ
11:09 AM
ರಾಜ್ಯದ ಆಡಳಿತ ಯಂತ್ರ ಕುಸಿದಿದೆ, ಅದನ್ನು ಮೊದಲು ಸರಿದಾರಿಗೆ ತರುವುದೇ ನನ್ನ ಕೆಲಸ ಎಂದ ಸಿಎಂ ಯಡಿಯೂರಪ್ಪ.
11:09 AM
ನಾನು ದ್ವೇಷದ ರಾಜಕಾರಣ ಮಾಡಲ್ಲ, ಯಾರೇ ದ್ವೇಷದ ರಾಜಕಾರಣ ಮಾಡಿದರೂ ನಾನು ಪ್ರೀತಿಯಲ್ಲಿ ನಂಬಿಕೆ ಇಟ್ಟವನು-ಬಿಎಸ್ ಯಡಿಯೂರಪ್ಪ
11:04 AM
ವಿಧಾನಸಭೆ ಕಲಾಪ ಆರಂಭ, ಚರ್ಚೆ ಆರಂಭಿಸಬಹುದು ಎಂದ ಸ್ಪೀಕರ್ ರಮೇಶ್ ಕುಮಾರ್. ಬಿಎಸ್ ಯಡಿಯೂರಪ್ಪ ಮಾತು ಆರಂಭ.
10:52 AM
ಕೆಲವೇ ಕ್ಷಣಗಳಲ್ಲಿ ವಿಧಾನಸಭಾ ಕಲಾಪ ಆರಂಭ, ಸ್ಪೀಕರ್ ರಮೇಶ್ ಕುಮಾರ್, ಬಿಎಸ್ ಯಡಿಯೂರಪ್ಪ ಆಗಮನ.
10:44 AM
ಕ್ಷೇತ್ರದ ಅಭಿವೃದ್ದಿ ಕುಂಠಿತಗೊಂಡಿದ್ದರಿಂದ ರಾಜೀನಾಮೆ,ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ- ಮುನಿರತ್ನ ಹೇಳಿಕೆ.
10:43 AM
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ. ನೂತನ ಸ್ಪೀಕರ್ ಆಯ್ಕೆ ಬಗ್ಗೆ ಚರ್ಚೆ.
10:42 AM
ಜುಲೈ 25ರಂದು ಸ್ಪೀಕರ್ ನೀಡಿದ್ದ ರಾಜೀನಾಮೆ ಆದೇಶ ರದ್ದುಪಡಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಮೂವರು ಅನರ್ಹ ಶಾಕಸರಿಂದ ಅರ್ಜಿ.
10:39 AM
ಬಿಜೆಪಿ ನಾಯಕರು ವಿಧಾನಸಭೆಗೆ ಆಗಮನ. ಅವಿಶ್ವಾಸ ನಿರ್ಣಯಕ್ಕೂ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಇಂದು ರಾಜೀನಾಮೆ ಸಾಧ್ಯತೆ?
10:07 AM
ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ .
10:07 AM
ತಡರಾತ್ರಿಗೆ ಬೆಂಗಳೂರಿಗೆ ಆಗಮಿಸಿದ್ದ ಬಂಡಾಯ ಶಾಸಕರು. ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ತಿಳಿಸಿದ ಅತೃಪ್ತ ಶಾಸಕ ಮುನಿರತ್ನ.
10:01 AM
ಬೆಂಗಳೂರಿನ ಸಂಜಯ ನಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಿಎಸ್ ವೈ ವಿಶೇಷ ಪೂಜೆ ಸಲ್ಲಿಸಿದ್ದರು, ಬಳಿಕ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
09:51 AM
ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರ ನಿರ್ಧಾರ. ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ವಿರುದ್ಧ ಕಾನೂನು ಸಮರ.
09:49 AM
ಇಂದು ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚನೆ, ಭಾನುವಾರ 14 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಒಟ್ಟು 17 ಶಾಸಕರು ಅನರ್ಹಗೊಂಡಂತಾಗಿದೆ.