07:39 PM
ವಿಶ್ವಾಸ ಮತ ಪ್ರಸ್ತಾವನೆಯ ಪರ 99 ಮತಗಳು ಮತ್ತು ವಿರೋಧವಾಗಿ 105 ಮತಗಳು.
07:38 PM
ಕೆಲವೇ ಕ್ಷಣಗಳಲ್ಲಿ ಮೈತ್ರಿ ಸರಕಾರದ ಭವಿಷ್ಯ ನಿರ್ಧಾರ
07:37 PM
ಮತಗಳ ಎಣಿಕೆ ಮಾಡಿ ಸ್ಪೀಕರ್ ಗೆ ನೀಡಿದ ಅಧಿಕಾರಿಗಳು
07:31 PM
ಒಂದೊಂದೇ ಸಾಲಿನ ಬಿಜೆಪಿ ಶಾಸಕರ ತಲೆ ಎಣಿಸುತ್ತಿರುವ ಸಿಬ್ಬಂದಿಗಳು.
07:31 PM
ಇದೀಗ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದ ಸದಸ್ಯರ ತಲೆ ಎಣಿಕೆ ಕಾರ್ಯ ಪ್ರಾರಂಭ. (ಬಿಜೆಪಿ ಶಾಸಕರು)
07:29 PM
ವಿಶ್ವಾಸ ಮತದ ಪರ ಅಭಿಪ್ರಾಯ ಮಂಡಿಸಿದ ಡೆಪ್ಯೂಟಿ ಸ್ಪೀಕರ್
07:29 PM
ವಿಶ್ವಾಸ ಮತ ನಿರ್ಣಯದ ಪರ ಮುಕ್ತಾಯಗೊಂಡ ಎಣಿಕೆ ಕಾರ್ಯ.
07:27 PM
ಒಂದೊಂದೇ ಸಾಲಿನ ಆಡಳಿತ ಪಕ್ಷದ ಸದಸ್ಯರ ತಲೆ ಎಣಿಕೆ ಪ್ರಗತಿಯಲ್ಲಿ
07:25 PM
ನಿರ್ಣಯದ ಪರ ಎದ್ದುನಿಂತ ಆಡಳಿತ ಪಕ್ಷದ ಸದಸ್ಯರು, ಎದ್ದು ನಿಂತವರ ತಲೆ ಎಣಿಕೆ ನಡೆಯುತ್ತಿದೆ.
07:24 PM
ವಿಶ್ವಾಸಮತ ನಿರ್ಣಯವನ್ನು ಸದನದಲ್ಲಿ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ.
07:07 PM
7ಗಂಟೆ ಕಳೆದರೂ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲೆ ಚರ್ಚೆ ಮುಂದುವರಿಸಿದ ಸಿಎಂ ಕುಮಾರಸ್ವಾಮಿ, ಸ್ಪೀಕರ್ ನೀಡಿದ್ದ 6ಗಂಟೆ ಗಡುವು ಮುಕ್ತಾಯ.
06:34 PM
ಎಲ್ಲರಿಗೂ ನನ್ನ ರಾಜೀನಾಮೆ ಪತ್ರವನ್ನು ಸದನದ ಎಲ್ಲಾ ಸದಸ್ಯರಿಗೆ ತೋರಿಸಿ ಎಂದ ಸ್ಪೀಕರ್ ರಮೇಶ್ ಕುಮಾರ್.
06:33 PM
ನಾನು ರಾಜೀನಾಮೆ ಪತ್ರವನ್ನು ಕಿಸೆಯಲ್ಲಿ ಇಟ್ಟುಕೊಂಡೇ ಬಂದಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರೆ ನಾನು ಒಂದು ಕ್ಷಣವೂ ಈ ಕುರ್ಚಿಯಲ್ಲಿ ಮುಂದುವರಿಯಲಾರೆ. ಸ್ಪೀಕರ್
06:25 PM
ನಾನು ಸರ್ಕಾರಿ ಕಾರು ಬಳಸಿಲ್ಲ, ಜನರ ಹಣ ಬಳಕೆ ಮಾಡಿಕೊಳ್ಳುವುದು ಬೇಕಾಗಿಲ್ಲವಾಗಿತ್ತು.ತಾಜ್ ವೆಸ್ಟ್ ಎಂಡ್ ನಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ಉಳಿದುಕೊಂಡಿದ್ದು-ಸಿಎಂ
06:22 PM
ಸುಮ್ಮನೆ ಟೀಕಿಸಬೇಡಿ, ತಪ್ಪಾಗಿದ್ದರೆ ಹೇಳಿ ತಿದ್ದಿಕೊಳ್ಳುತ್ತೇವೆ. ವಚನಭ್ರಷ್ಟ ಎಂದು ಹೇಳಬೇಡಿ-ಕುಮಾರಸ್ವಾಮಿ
06:19 PM
ನನ್ನ ಆಡಳಿತದಲ್ಲಿ ರೈತರನ್ನು ಕಡೆಗಣಿಸಿಲ್ಲ, ಆದರೆ ಅಭದ್ರ ಸರ್ಕಾರ ಎಂದು ಅಪಪ್ರಚಾರ ಮಾಡಿದರು.ನಾನು ಯಾವುದೇ ದ್ರೋಹ ಎಸಗಿಲ್ಲ- ಕುಮಾರಸ್ವಾಮಿ
05:58 PM
ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ದನಿದ್ದೇನೆ. ವಿಧಾನಸಭೆ ಕಲಾಪದಲ್ಲಿ ಕುಮಾರಸ್ವಾಮಿ ಹೇಳಿಕೆ
05:44 PM
ಇಂದು ಸಂಜೆ 6ಗಂಟೆಯಿಂದ ಜುಲೈ 25ರ ಸಂಜೆ 6ಗಂಟೆವರೆಗೆ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ- ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿಕೆ
05:41 PM
ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ. ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಲು ಸೂಚನೆ ನೀಡಲಾಗಿದೆ.
05:40 PM
ರೇಸ್ ಕೋರ್ಟ್ ಅಪಾರ್ಟ್ ಮೆಂಟ್ ಬಳಿ ಪ್ರತಿಭಟನಾನಿರತ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ.
05:37 PM
ನಿನ್ನೆ ನಾವು ಕಾಲಹರಣ ಮಾಡಿದ್ದೇವೆಂದು ನಿಮಗೆ(ಸ್ಪೀಕರ್) ಬೇಸರವಾಗಿದೆ. ನಮ್ಮ ನಡವಳಿಕೆ ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೀಡಾಗಿದೆ-ಕುಮಾರಸ್ವಾಮಿ
05:30 PM
ವಿಶ್ವಾಸಮತ ಪ್ರಸ್ತಾಪದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮುಂದುವರಿಕೆ. ವಿಶ್ವಾಸಮತ ನಿರ್ಣಯದ ಮೇಲೆ ವಿಪಕ್ಷದಿಂದ ಚರ್ಚೆ ಇಲ್ಲ.
05:10 PM
ಪರಸ್ಪರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು. ಅಪಾರ್ಟ್ ಮೆಂಟ್ ಗೆ ನುಗ್ಗಲು ಕೈ ಕಾರ್ಯಕರ್ತರ ಯತ್ನ.
05:08 PM
ರೇಸ್ ಕೋರ್ಸ್ ನಲ್ಲಿ ಕಾಂಗ್ರೆಸ್, ಕಾರ್ಯಕರ್ತರ ನೂಕಾಟ, ತಳ್ಳಾಟ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ.
05:04 PM
ವಿಧಾನಸೌಧದಲ್ಲಿ ಭದ್ರತೆ ಪರಿಶೀಲಿಸುತ್ತಿರುವ ಅಲೋಕ್ ಕುಮಾರ್. ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಹೋಟೆಲ್ ನಲ್ಲಿ ಪಕ್ಷೇತರ ಶಾಸಕರು.
04:52 PM
ಪಕ್ಷೇತರರ ಶಾಸಕರಿಗಾಗಿ ಹುಡುಕಾಟ, ಬಂಡಾಯ ಶಾಸಕರ ರಕ್ಷಣೆಗೆ 100 ಮಂದಿ ಪೊಲೀಸರು ಮಫ್ತಿಯಲ್ಲಿದ್ದಾರೆ.
04:49 PM
ಪ್ರಜಾಪ್ರಭುತ್ವದ ಬುಡ ಅಲ್ಲಾಡುತ್ತಿದೆ. ನಮಗೂ ಇದಕ್ಕೂ ಸಂಬಂಧ ಇಲ್ಲಾ ಅಂತ ಯಾಕೆ ಹೇಳುತ್ತೀರಿ? ಬಹಿರಂಗವಾಗಿ ಹೇಳಿಬಿಡಿ-ಸಿದ್ದರಾಮಯ್ಯ
04:11 PM
4 ಚುನಾವಣೆ ನಂತರ ಪಕ್ಷಾಂತರ ಹೆಚ್ಚಾಯಿತು, ಹೀಗೆ 201 ಶಾಸಕರು ಸಚಿವರಾಗಿದ್ದರು-ಸಿದ್ದರಾಮಯ್ಯ, ಹೀಗಾಗಿ ಪಕ್ಷಾಂತರ ಪಿಡುಗು ಕೊನೆಯಾಗಬೇಕು.
04:10 PM
ದೇಶದ ಪ್ರಥಮ ನಾಲ್ಕು ಚುನಾವಣೆಗಳಲ್ಲಿ ಪಕ್ಷಾಂತರ ಇರಲಿಲ್ಲ. ರಾಜ್ಯದಲ್ಲಿ ಮೊದಲು ನಡೆದ 4 ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು.
04:03 PM
ಇತಿಹಾಸ ತಿಳಿಯದವರು, ಇತಿಹಾಸ ಸೃಷ್ಟಿಸಲಾರರು..ಇದು ಅಂಬೇಡ್ಕರ್ ಹೇಳಿದ್ದ ಮಾತು- ಮಾಜಿ ಸಿಎಂ ಸಿದ್ದರಾಮಯ್ಯ
04:01 PM
ವಿಶ್ವಾಸಮತ ಯಾಚನೆಗೆ ಕೇವಲ ಎರಡು ಗಂಟೆಗಳಷ್ಟೇ ಬಾಕಿ ಉಳಿದಿದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಚರ್ಚೆ.
03:26 PM
ಎಲ್ಲಾ ಶಾಸಕರು ಸದನದಲ್ಲಿ ಹಾಜರಿರಬೇಕು-ಬಿಜೆಪಿ ಶಾಸಕರಿಗೆ ಬಿಎಸ್ ಯಡಿಯೂರಪ್ಪ ಫರ್ಮಾನು. ನಾನು ಕೂಡಾ ಪಕ್ಷೇತರ ಶಾಸಕರಿಗಾಗಿ ಕಾಯುತ್ತಿದ್ದೇನೆ-ಡಿಕೆಶಿ
03:17 PM
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ. ವಿಶ್ವಾಸಮತ ಯಾಚನೆಯ ಚರ್ಚೆ 4ಗಂಟೆವರೆಗೆ ನಡೆಯಲಿದೆ. ನಂತರ ಸಿಎಂ ಭಾಷಣ.
03:08 PM
ಶಾಸಕರಿಗೆ ಕೊನೆ ವಾರ್ನಿಂಗ್ ಕೊಟ್ಟ ಸ್ಪೀಕರ್ ರಮೇಶ್ ಕುಮಾರ್, ಬೇಗ, ಬೇಗ ಚರ್ಚೆ ಮುಗಿಸಿ, ವಿಶ್ವಾಸಮತ ಪ್ರಕ್ರಿಯೆ ನಡೆಯಬೇಕಾಗಿದೆ.
03:06 PM
ಹೋಟೆಲ್ ಆವರಣ ಪ್ರವೇಶಿಸದಂತೆ ಪೊಲೀಸ್ ಸರ್ಪಗಾವಲು. ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ.
03:05 PM
ಮುಂಬೈ ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು.
02:55 PM
ಮುಂಬೈನಲ್ಲಿರುವ ಅತೃಪ್ತ ಶಾಸಕರ ಹೋಟೆಲ್ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.
02:33 PM
ಸಂಜೆ 4ರಿಂದ 5ಗಂಟೆವರೆಗೆ ಸಿಎಂ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ. ವಿಶ್ವಾಸ ನಿರ್ಣಯದ ಮೇಲೆ ಸಾರಾ ಮಹೇಶ್ ಚರ್ಚೆ.
02:33 PM
ನನಗೆ ಯಾರ ಮೇಲೂ ದ್ವೇಷ ಇಲ್ಲ. ಮನುಷ್ಯತ್ವ ಇದ್ದಿದ್ದಕ್ಕೆ ನಾನು ಇವತ್ತು ಇದ್ದೇನೆ. ಡಿಕೆ ಶಿವಕುಮಾರ್
02:25 PM
ಭೋಜನ ವಿರಾಮ ಇಲ್ಲ. 04 ಗಂಟೆಯೊಳಗೆ ಚರ್ಚೆ ಮುಗಿಸುವಂತೆ ಸದನ ಸದಸ್ಯರಿಗೆ ಸೂಚನೆ ನೀಡಿದ ಸಭಾಧ್ಯಕ್ಷರು.
02:22 PM
ಸದನದಲ್ಲಿ ಮಾತನಾಡುತ್ತಿರುವ ಸಚಿವ ಡಿ.ಕೆ. ಶಿವಕುಮಾರ್. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ತನಗಾದ ನೋವನ್ನು ತೋಡಿಕೊಳ್ಳುತ್ತಿರುವ ಸಚಿವ ಡಿಕೆಶಿ.
02:02 PM
ನಾನು ಮುಂಬೈಗೆ ಸುಮ್ಮನೆ ಹೋಗಿರಲಿಲ್ಲ. ನನ್ನ ಹೊಟ್ಟೆ ಉರಿಯುತ್ತಿದೆ - ಡಿಕೆಶಿ
02:00 PM
ನನ್ನ ಬಾಂಬೆ ಮಿತ್ರರಿಗೆ ಹೇಳುತ್ತಿದ್ದೇನೆ.ನಿಮ್ಮನ್ನು ಯಾರೂ ಮಂತ್ರಿ ಮಾಡುವುದಿಲ್ಲ:ಡಿ.ಕೆ.ಶಿವಕುಮಾರ್
01:52 PM
ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದ ಬಿಎಸ್ ಯಡಿಯೂರಪ್ಪ.
01:41 PM
10ನೇ ಶೆಡ್ಯೂಲ್ ನ್ನು ನಿಷ್ಕ್ಟಿಯಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿದೆ -ಸಿದ್ದರಾಮಯ್ಯ
01:40 PM
ಅನ್ಯಾಯವಾಗಿ ಬಿಜೆಪಿಯವರು ತೋಡಿದ ಹಳ್ಳಕ್ಕೆ ಬಿದ್ದು, ನಿಮ್ಮ ರಾಜಕೀಯ ಜೀವನ ಹಾಳುಮಾಡಿಕೊಳ್ಳಬೇಡಿ-ಮಾಜಿ ಸಿಎಂ ಸಿದ್ದರಾಮಯ್ಯ
01:39 PM
ನಾವು ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿಲ್ಲ, ನಮ್ಮ ಸದಸ್ಯರನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇವೆ. ಕೃಷ್ಣಭೈರೇಗೌಡ
01:38 PM
ಶಾಸಕರು ಬೇರೆ ಪಕ್ಷದವರ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅನರ್ಹತೆಗೆ ಅವರು ಒಳಗಾಗುತ್ತಾರೆ. ಇದನ್ನೇ ಡಿಕೆಶಿ ಹೇಳಿದ್ದು ಎಂದ ಕೃಷ್ಣಭೈರೇಗೌಡ
01:32 PM
ಸದನದಲ್ಲಿ ವಿಶ್ವಾಸಮತ ಯಾಚನೆ ಶುರುವಾಗಿದೆ. ಆದರೆ ಸಿಎಂ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿದ್ದಾರೆ. ಬಿಜೆಪಿ ಟ್ವೀಟ್ ಮೂಲಕ ಟಾಂಗ್, ಸದನಕ್ಕೆ ಹಾಜರಾದ ಸಿದ್ದು.
01:19 PM
ಪ್ರಜಾಪ್ರಭುತ್ವದಲ್ಲಿ ಈ ಪಕ್ಷಾಂತರ ಪಿಡುಗಿಗೆ ಕಡಿವಾಣ ಹಾಕೋಣ, ನೀವು ಬಸವಣ್ಣನ ನಾಡಲ್ಲಿ ಹುಟ್ಟಿದ್ದೀರಿ..ಬಿಎಸ್ ವೈಗೆ ಡಿಕೆ ಶಿವಕುಮಾರ್
01:09 PM
ಸದನದ ಕಲಾಪಕ್ಕೆ ಹಾಜರಾದ ಡಿಕೆ ಶಿವಕುಮಾರ್, ಡಿವಿಜಿ ಕಗ್ಗ, ಮಹಾಭಾರತ, ಕೌಟಿಲ್ಯ ನೀತಿ ಉದಾಹರಣೆ ಮೂಲಕ ಟಾಂಗ್ ಕೊಡುತ್ತಿರುವ ಡಿಕೆಶಿ.
12:31 PM
ಸುಪ್ರೀಂ ಸೂಚನೆಯ ಹಿನ್ನೆಲೆಯಲ್ಲಿ ಇಂದು ವಿಶ್ವಾಸಮತ ಯಾಚನೆ ನಡೆಯಲೇಬೇಕಾಗಿದೆ. ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕಾಗಿಲ್ಲ- ಸುಪ್ರೀಂ
12:11 PM
ಇಂದು ವಿಶ್ವಾಸಮತ ಯಾಚಿಸುವ ಬಗ್ಗೆ ನಂಬಿಕೆ ಇದೆ ಎಂದ ಸುಪ್ರೀಂಕೋರ್ಟ್ ಸಿಜೆಐ. ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ.
12:07 PM
ಅತೃಪ್ತ ಶಾಸಕರಿಗೆ ಸ್ಪೀಕರ್ ನೋಟಿಸ್ ನೀಡಿದ್ದಾರೆ. ಇವತ್ತು ವಿಶ್ವಾಸಮತ ಯಾಚನೆ ನಡೆಯಲಿದೆ-ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ.
12:06 PM
ವಾದ, ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಪೀಠ, ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್.
11:59 AM
ಇಂದು ಸಂಜೆ 6ಗಂಟೆಯೊಳಗೆ ವಿಶ್ವಾಸಮತಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂನಲ್ಲಿ ರೋಹ್ಟಗಿ ಮನವಿ.
11:56 AM
ರಾಜೀನಾಮೆ ನೀಡಿದ ಶಾಸಕರಿಗೆ ನೀವು(ಬಿಜೆಪಿ) ಯಾವುದೇ ಸ್ಥಾನಮಾನ ನೀಡಬೇಡಿ, ನಾವೂ ನೀಡಲ್ಲ- ಯುಟಿ ಖಾದರ್ ಮನವಿ
11:55 AM
ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರ ಪರ ಅಶೋಕ್ ಹಾರ್ನಳ್ಳಿ, ಕಾಂಗ್ರೆಸ್ ಪರ ವಿಎಸ್ ಉಗ್ರಪ್ಪ ವಾದ ಮಂಡನೆ.
11:49 AM
ವಿಧಾನಸೌಧದ ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯ ಆಗಮನ. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಮಾರಸ್ವಾಮಿ, ಡಿಕೆಶಿ ಸಮಾಲೋಚನೆ.
11:39 AM
ಸ್ಪೀಕರ್ ಕಚೇರಿ ಎದುರು ಮುಖಾಮುಖಿಯಾದ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ಎಸ್.ಆರ್ .ವಿಶ್ವನಾಥ್..ಈ ಸಂದರ್ಭದಲ್ಲಿ ಗುಡ್ ಲಕ್ ಎಂದ ಸಿದ್ದು!
11:23 AM
ಅತೃಪ್ತ ಶಾಸಕರ ಪರ ವಕೀಲರ ವಾದ ಆಲಿಸುತ್ತಿರುವ ಸ್ಪೀಕರ್ ರಮೇಶ್ ಕುಮಾರ್. ಸುಪ್ರೀಂಕೋರ್ಟ್ ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.
11:19 AM
ಕಾವೇರಿ ನಿವಾಸದಲ್ಲಿ ಜಮೀರ್ ಅಹ್ಮದ್ ಜೊತೆ ಸಿದ್ದರಾಮಯ್ಯ ಮಾತುಕತೆ. ಬಹುತೇಕ ಕಾಂಗ್ರೆಸ್, ಜೆಡಿಎಸ್ ಶಾಸಕರು ಕಲಾಪಕ್ಕೆ ಗೈರು.
11:19 AM
ಕಲಾಪಕ್ಕೆ ಇನ್ನೂ ಆಗಮಿಸದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಶಾಸಕ ದಿನೇಶ್ ಗುಂಡೂರಾವ್..
11:02 AM
ಅತೃಪ್ತ ಶಾಸಕರ ಖುದ್ದು ಹಾಜರಾತಿಗೆ ಸ್ಪೀಕರ್ ನೋಟಿಸ್ ನೀಡಿದ್ದರು. ವಕೀಲರ ಜೊತೆ ಸ್ಪೀಕರ್ ರಮೇಶ್ ಕುಮಾರ್ ಚರ್ಚೆ.
11:00 AM
ಅತೃಪ್ತ ಶಾಸಕರ ಪರ ವಕೀಲರ ಆಗಮನ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಲಾಪದಿಂದ ಕಚೇರಿಗೆ ತೆರಳಿದ್ದಾರೆ.
10:51 AM
ಇಂದು ನಾವು ವಿಶ್ವಾಸಮತ ಯಾಚಿಸುತ್ತೇವೆ. ಆದರೆ ಇದರ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ ಎಂದ ಯುಟಿ ಖಾದರ್.
10:39 AM
ನೀವು ನಿಗದಿಪಡಿಸಿದ 6ಗಂಟೆ ಗಡುವಿನೊಳಗೆ ಇಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದ ಯುಟಿ ಖಾದರ್.
10:39 AM
ಕಾಂಗ್ರೆಸ್,ಜೆಡಿಎಸ್ ಶಾಸಕರಿಗೆ ಯಡಿಯೂರಪ್ಪ ಚಾಟಿ. ವಿಧಾನಸೌಧದತ್ತ ಆಗಮಿಸುತ್ತಿರುವ ಕುಮಾರಸ್ವಾಮಿ
10:38 AM
ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ ಇದು-ಕೆಎಸ್ ಈಶ್ವರಪ್ಪ. ಪ್ರಜಾತಂತ್ರ ವ್ಯವಸ್ಥೆ ಕಗ್ಗೊಲೆ ಮಾಡುತ್ತಿರುವವರು ನೀವು-ಬಿಎಸ್ ವೈ
10:37 AM
ಕಲಾಪಕ್ಕೆ ಇನ್ನೂ ಆಗಮಿಸಿದ ಸಿಎಂ ಕುಮಾರಸ್ವಾಮಿ. ತಡವಾಗಿ ಬಂದಿದ್ದಕ್ಕೆ ಯುಟಿ ಖಾದರ್ ಕ್ಷಮೆಯಾಚನೆ.
10:36 AM
ವಿಶ್ವಾಸಮತ ಪ್ರಸ್ತಾಪದ ಮೇಲೆ ಕಾಂಗ್ರೆಸ್ ಪಕ್ಷದ ಶಾಸಕ ಯುಟಿ ಖಾದರ್ ಚರ್ಚೆ ಮುಂದುವರಿಕೆ. ಇನ್ನೂ ಅಜೆಂಡಾ ಬಂದಿಲ್ಲ ಎಂದ ಶಿವಲಿಂಗೇಗೌಡ.
10:35 AM
ಸುಪ್ರೀಂಕೋರ್ಟ್ ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಆರಂಭ. ಬಂಡಾಯ ಶಾಸಕರ ಪರ ವಕೀಲ ರೋಹ್ಟಗಿ ಅವರಿಂದ ವಾದ.
10:34 AM
ನಿಮ್ಮ ಮೇಲೆ ಜನರಿಗಿರುವ ವಿಶ್ವಾಸ ಕಳೆದುಕೊಳ್ಳುತ್ತೀರಿ. ಜನರ ವಿಶ್ವಾಸ ಉಳಿಸಿಕೊಳ್ಳಿ- ಸ್ಪೀಕರ್
10:32 AM
ಸುಪ್ರೀಂಕೋರ್ಟ್ ಕಲಾಪಕ್ಕೆ ಕ್ಷಣಗಣನೆ, ಕೆಲವೇ ಹೊತ್ತಿನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಪ್ರಾರಂಭ. ಕೋರ್ಟ್ ಗೆ ಆಗಮಿಸಿದ ಮುಕುಲ್ ರೋಹ್ಟಗಿ
10:31 AM
ಆಡಳಿತ ಪಕ್ಷದ ಶಾಸಕರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಗರಂ. ಕಾಂಗ್ರೆಸ್, ಜೆಡಿಎಸ್ ಶಾಸಕರ ಕುರ್ಚಿ ಖಾಲಿ, ಖಾಲಿ
10:29 AM
ರಾತ್ರಿ ಲೇಟಾಗಿತ್ತು ಅದಕ್ಕೆ ಬರೋದು ಸ್ವಲ್ಪ ತಡವಾಯ್ತು-ಶಿವಲಿಂಗೇಗೌಡ. ಕಲಾಪದಲ್ಲಿ ಬಿಜೆಪಿ ಶಾಸಕರಿಂದ ಆಕ್ಷೇಪ
10:29 AM
ವಿಪಕ್ಷದವರಾಗಿ ನಾವೆಲ್ಲ ಬಂದಿದ್ದೇವೆ. ಆಡಳಿತ ಪಕ್ಷದವರು ಯಾಕೆ ತಡ-ಕೆಎಸ್ ಈಶ್ವರಪ್ಪ
10:07 AM
ವಿಧಾನಸಭಾ ಕಲಾಪ ಆರಂಭ, ಕಾಂಗ್ರೆಸ್, ಜೆಡಿಎಸ್ ಶಾಸಕರ ಆಸನ ಖಾಲಿ, ಖಾಲಿ. ಬಿಜೆಪಿ ಶಾಸಕರು ಚರ್ಚೆ ಮುಂದುವರಿಸುವಂತೆ ಸ್ಪೀಕರ್ ಸೂಚನೆ.
10:06 AM
10ಗಂಟೆಯಾದರೂ ವಿಧಾನಸೌಧಕ್ಕೆ ಆಗಮಿಸದ ಕಾಂಗ್ರೆಸ್, ಜೆಡಿಎಸ್ ಶಾಸಕರು. ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್.
10:02 AM
ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ. ಬಿಎಸ್ ಯಡಿಯೂರಪ್ಪ ಜತೆ ಆಗಮಿಸಿದ ಶಾಸಕರು. ರೆಸಾರ್ಟ್ ನಿಂದ ವಿಧಾನಸೌಧಕ್ಕೆ ..
10:00 AM
ಸದನ ಕಲಾಪ ಮುಂದೂಡುವುದು ಎಷ್ಟು ಸರಿ. ಎಲ್ಲೋ ಒಂದು ಕಡೆ ಕರ್ನಾಟಕ ವಿಧಾನಸಭೆ ಅವನತಿಯತ್ತ ಹೋಗುತ್ತಿದೆ ಅಂತ ಎನಿಸುತ್ತಿದೆ-ಜೆ.ಮಾಧುಸ್ವಾಮಿ
10:00 AM
ಮಂಗಳವಾರ 6ಗಂಟೆಯೊಳಗೆ ವಿಶ್ವಾಸಮತ ಯಾಚಿಸಿ ಎಂದು ರೂಲಿಂಗ್ ಕೊಟ್ಟಿದ್ದ ಸ್ಪೀಕರ್ ಮಂಗಳವಾರ ಬೆಳಗ್ಗೆ 10ಗಂಟೆಗೆ ಕಲಾಪ ಆರಂಭ ಎಂದು ತಿಳಿಸಿದ್ದರು.
09:59 AM
ಮಾಜಿ ಸಿಎಂ ಸಿದ್ದರಾಮಯ್ಯ ಮನವಿಯಂತೆ ಮಂಗಳವಾರ 6ಗಂಟೆಯೊಳಗೆ ವಿಶ್ವಾಸಮತ ಯಾಚಿಸಲು ಅಂತಿಮ ಗಡುವು ಕೊಟ್ಟ ಸ್ಪೀಕರ್ ರಮೇಶ್ ಕುಮಾರ್
09:58 AM
ಸೋಮವಾರ ತಡರಾತ್ರಿವರೆಗೂ ವಿಧಾನಸಭಾ ಕಲಾಪದಲ್ಲಿ ಹೈಡ್ರಾಮಾ..ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ತೀವ್ರ ಗದ್ದಲ, ಕೋಲಾಹಲ.