05:46 PM
ಸಂಜೆ 5 ಗಂಟೆ ವೇಳೆಯವರೆಗೆ ನಡೆದ ಮತದಾನ:ಹುಣಸೂರು 74.47%,ಯಶವಂತಪುರ 48.34% ಹೊಸಕೋಟೆ 76.19% ,ಕೆ.ಆರ್ .ಪುರಂ 37.50 ರಷ್ಟು ಮತದಾನ ನಡೆದಿದೆ.
05:46 PM
ಸಂಜೆ 5 ಗಂಟೆ ವೇಳೆಯವರೆಗೆ ನಡೆದ ಮತದಾನ:ಯಲ್ಲಾಪುರ 72.23 %,ವಿಜಯನಗರ 58.93%,ಮಹಾಲಕ್ಷ್ಮೀ ಲೇಜೌಟ್ 40.09%,ಶಿವಾಜಿನಗರ 41.92% ರಷ್ಟು ಮತದಾನ ನಡೆದಿದೆ.
05:45 PM
ಸಂಜೆ 5 ಗಂಟೆ ವೇಳೆಯವರೆಗೆ ನಡೆದ ಮತದಾನ: ಕಾಗವಾಡ 69.76%, ಗೋಕಾಕ ಶೇ 66.64% , ಚಿಕ್ಕಬಳ್ಳಾಪುರ ಶೇ 79.80 ರಷ್ಟು ಮತದಾನ ನಡೆದಿದೆ.
05:41 PM
ಸಂಜೆ 5 ಗಂಟೆ ವೇಳೆಯವರೆಗೆ ನಡೆದ ಮತದಾನ: ಹಿರೇಕೆರೂರು ಶೇ 67.92%, ರಾಣೇಬೆನ್ನೂರು ಶೇ 67.92, ಅಥಣಿ 70.73% ರಷ್ಟು ಮತದಾನ ನಡೆದಿದೆ.
03:53 PM
ಹುಣಸೂರು ಕ್ಷೇತ್ರದಲ್ಲಿ 57.44 ರಷ್ಟು ಮತದಾನ,ಹಿರೇಕೆರೂರು ಕ್ಷೇತ್ರದಲ್ಲಿ 56.06ರಷ್ಟು ಮತದಾನ.
03:53 PM
ಮಹಾಲಕ್ಷೀ ಲೇಜೌಟ್ ಕ್ಷೇತ್ರದಲ್ಲಿ 30.73 ರಷ್ಟು ಮತದಾನ,ಹೊಸಕೋಟೆ ಕ್ಷೇತ್ರದಲ್ಲಿ 54.12 ರಷ್ಟು ಮತದಾನ.
03:53 PM
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 60.43ರಷ್ಟು ಮತದಾನ,ಶಿವಾಜಿನಗರ ಕ್ಷೇತ್ರದಲ್ಲಿ 32.72 ರಷ್ಟು ಮತದಾನ.
03:52 PM
ಯಲ್ಲಾಪುರ ಕ್ಷೇತ್ರದಲ್ಲಿ 56.21ರಷ್ಟು ಮತದಾನ,ವಿಜಯನಗರ ಕ್ಷೇತ್ರದಲ್ಲಿ 47.38 ರಷ್ಟು ಮತದಾನ.
03:52 PM
ಕಾಗವಾಡ ಕ್ಷೇತ್ರದಲ್ಲಿ 51.41ರಷ್ಟು ಮತದಾನ,ಗೋಕಾಕ್ ಕ್ಷೇತ್ರದಲ್ಲಿ 53.03 ರಷ್ಟು ಮತದಾನ.
03:52 PM
ಯಶವಂತಪುರ ಕ್ಷೇತ್ರದಲ್ಲಿ ಶೇ.38.83ರಷ್ಟು ಮತದಾನ,ಅಥಣಿ ಕ್ಷೇತ್ರದಲ್ಲಿ 56.05ರಷ್ಟು ಮತದಾನ.
03:33 PM
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ.60ರಷ್ಟು ಮತದಾನ. ಕೆಆರ್ ಪುರಂನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ.
03:32 PM
ಮಧ್ಯಾಹ್ನ ಮೂರು ಗಂಟೆವರೆಗೆ 46.62ರಷ್ಟು ಮತದಾನವಾಗಿದೆ. ಕೆ.ಆರ್.ಪುರಂ ಕ್ಷೇತ್ರದಲ್ಲಿ ಕೇವಲ ಶೇ.29ರಷ್ಟು ಮತದಾನ.
02:30 PM
ಮತದಾನ ಮಾಡಿ ಹಸೆಮಣೆ ಏರಿದ ಯುವಕ; ಕೆ ಆರ್ ಪೇಟೆ ಕ್ಷೇತ್ರದ ಚೌಡೇನಹಳ್ಳಿಯ ಮುತ್ತುರಾಜ್ ಮದುವೆಗೆ ಮುನ್ನ ಮತದಾನದ ಹಕ್ಕು ಚಲಾಯಿಸಿದ ಮದುಮಗ
02:10 PM
ನಟ ಅಜಯ್ ರಾವ್, ಶ್ರೀಮುರಳಿ, ನಟಿ ಹರ್ಷಿಕಾ ಪೂಣಚ್ಚ ತಮ್ಮ ಹಕ್ಕು ಚಲಾಯಿಸಿದರು
01:54 PM
15 ಕ್ಷೇತ್ರಗಳಲ್ಲಿ ಆಗಿರುವ ಒಟ್ಟು ಮತದಾನ 32.5 ಶೇಕಡ
01:51 PM
ಮಧ್ಯಾಹ್ನ 1 ಗಂಟೆ ವೇಳೆಯವರೆಗೆ ನಡೆದ ಮತದಾನ: ಹಿರೇಕೆರೂರು ಶೇ 38.63, ರಾಣೇಬೆನ್ನೂರು ಶೇ 37.11, ಅಥಣಿ- 40.89%, ಕಾಗವಾಡ- 37.72%, ಗೋಕಾಕ ಶೇ 37.37% , ಚಿಕ್ಕಬಳ್ಳಾಪುರ ಶೇ 39.03ರಷ್ಟು ಮತದಾನ ನಡೆದಿದೆ.
01:51 PM
ಚಿಕ್ಕಬಳ್ಳಾಪುರದಲ್ಲಿ ಮತದಾನ ಮಾಡಲು ಬೆಳಕಿನ ಸಮಸ್ಯೆ. ಕತ್ತಲಿರುವುದರಿಂದ ಮತಯಂತ್ರ ಸರಿಯಾಗಿ ಕಾಣುತ್ತಿಲ್ಲವೆಂದು ಮತದಾರರ ದೂರು
01:38 PM
ಹುಣಸೂರಿನ ಕರಿಗೌಡನ ಬೀದಿ ಮತಗಟ್ಟೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ, ಜಟಾಪಟಿ.
01:07 PM
ಚಿಕ್ಕಬಳ್ಳಾಪುರದಲ್ಲಿ ಮತದಾನ ಮಾಡಲು ಬೆಳಕಿನ ಸಮಸ್ಯೆ. ಕತ್ತಲಿರುವುದರಿಂದ ಮತಯಂತ್ರ ಸರಿಯಾಗಿ ಕಾಣುತ್ತಿಲ್ಲವೆಂದು ಮತದಾರರ ದೂರು
01:03 PM
ಹಿರೇಕೆರೂರು ಮತಗಟ್ಟೆಯಲ್ಲಿ ವೃದ್ಧೆಯೋರ್ವರು ಕುಸಿದು ಬಿದ್ದು ಸಾವು
12:53 PM
ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತ್ಯುತ್ತರ; ಅವರಿಗೆ ಐಡಿಯಾಲಜಿ ಗೊತ್ತಿಲ್ಲ, ಈ ಹೇಳಿಕೆಗೆ ನಗಬೇಕೋ ಅಳಬೇಕೋ ಎಂದ ಸಿದ್ದರಾಮಯ್ಯ.
12:44 PM
ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ್ದ ಮತದಾನ ಬಿಸಿಲೇರಿದಂತೆ ಬಿರುಸಾಗುತ್ತಿದೆ.
12:29 PM
ಕರ್ನಾಟಕದ ಭವ್ಯ ಪರಂಪರೆಗೆ ಅಪರೇಷನ್ ಕಮಲ ದೊಡ್ಡ ಕಳಂಕ: ಕಾಂಗ್ರೆಸ್ ಟ್ವೀಟ್
12:25 PM
ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಅಂಜನಪ್ಪ ಮತ ಚಲಾವಣೆ
12:06 PM
ಶಿವಾಜಿನಗರದ ಹುಲಸೂರು ಮತಗಟ್ಟೆಯಲ್ಲಿ ಮತದಾನದ ವೇಳೆ ಫೋಟೋ ತೆಗೆದವನನ್ನು ಬಂಧನ; ಮತ ಅಸಿಂಧು
11:57 AM
ಇಷ್ಟರವರೆಗಿನ ಮತದಾನ ಪ್ರಕ್ರಿಯೆಯಲ್ಲಿ ಯಲ್ಲಾಪುರದಲ್ಲಿ ಅತೀ ಹೆಚ್ಚು ಮತದಾನ ನಡೆದಿದ್ದರೆ (23.87), ಶಿವಾಜಿನಗರ ಕ್ಷೇತ್ರದಲ್ಲಿ ಅತೀ ಕಡಿಮೆ ಎಂದರೆ 3.04 ಶೇಕಡಾ ಮತದಾನ ನಡೆದಿದೆ.
11:33 AM
ಅಥಣಿ ಕ್ಷೇತ್ರದಲ್ಲಿ 23.11%, ಕಾಗವಾಡ 21.34%, ಗೋಕಾಕ ಕ್ಷೇತ್ರದಲ್ಲಿ 20.45% ಮತದಾನವಾಗಿದೆ.
11:27 AM
ಬೆಳಿಗ್ಗೆ 11 ಗಂಟೆಯವರೆಗೆ ರಾಣೆಬೆನ್ನೂರಿನಲ್ಲಿ 19.06 ಶೇ., ಹಿರೇಕೆರೂರು ಕ್ಷೇತ್ರದಲ್ಲಿ 20.03 ಶೇ, ವಿಜಯನಗರ ಕ್ಷೇತ್ರದಲ್ಲಿ 20.03 ಶೇಕಡಾ ಮತದಾನವಾಗಿದೆ.
11:23 AM
ಮೂಲಸೌಕರ್ಯಕ್ಕೆ ಒತ್ತಾಯಿಸಿ ವಿಜಯನಗರದ ಮುದ್ಲಾಪುರದಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ.
11:21 AM
ಬಹುಮತ ಬಂದರೆ ಸರಕಾರ ರಚಿಸುತ್ತೇವೆ ಎಂದಿದ್ದೆ, ಮುಖ್ಯಮಂತ್ರಿಯಾಗಬೇಕು ಎಂದಿಲ್ಲ. ಮೊದಲು ಫಲಿತಾಂಶ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
10:52 AM
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 5.59 ಶೇಕಡಾ ಮತದಾನ. ರಾಣೆಬೆನ್ನೂರು 6.22 ಶೇ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ 8.21 ಶೇಕಡಾ ಮತದಾನ
10:48 AM
ಹೊಸಕೋಟೆಯಲ್ಲಿ 9.01ರಲ್ಲಿ ಮತದಾನ
10:37 AM
ಗೊಕಾಕ: ಮದ್ಯಪಾನ ಮಾಡಿ ಮತಗಟ್ಟೆಗೆ ಬಂದ ಅಧಿಕಾರಿಯನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಆದೇಶ
10:28 AM
ವಾಸ್ತು ಸರಿಯಿಲ್ಲವೆಂದು ಮತಯಂತ್ರವನ್ನು ತಿರುಗಿಸಿ ಮತ ಚಲಾಯಿಸಿದ ಕೆ ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ ಎಲ್ ದೇವರಾಜು
10:22 AM
ಮತಗಟ್ಟೆಯಿಂದ ಕೈ ಎಜೆಂಟ್ ನನ್ನು ಹೊರ ಕಳುಹಿಸಿದ ಪೊಲೀಸರು. ಕ್ರಿಮಿನಲ್ ಆರೋಪ ಹಿನ್ನಲೆ ಕ್ರಮ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಘಟನೆ
10:12 AM
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತದಾನ.
10:03 AM
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9ರವರೆಗೆ ಶೇ 6.91 ರಷ್ಟು ಮತದಾನ.
10:03 AM
ಬಿಜೆಪಿ ಸೇರಿದ್ದ ಶಿವಾಜಿನಗರದ ಸಂಪಂಗಿರಾಮನಗರ ಕಾಂಗ್ರೆಸ್ ಕಾರ್ಪೋರೇಟರ್ ವಸಂತ ಕುಮಾರ್ ಮತ್ತೆ ಕಾಂಗ್ರೆಸ್ ಗೆ
10:00 AM
ಬೆಳಗಾವಿ ಉಪ ಚುನಾವಣೆ: ಮತದಾನ ಶೇಕಡಾವಾರು ಬೆಳಿಗ್ಗೆ 9:00 ಗಂಟೆಗೆ ಒಟ್ಟು : 7.10%
09:39 AM
ಹಿರೇಕೆರೂರು ಕ್ಷೇತ್ರದಲ್ಲಿ 9 ಗಂಟೆವರೆಗೆ ಶೇ. 5.59 ಮತದಾನ ಹಾಗೂ ರಾಣೇಬೆನ್ನೂರು ಶೇ 6.22 ಮತದಾನ ನಡೆಯಿತು
09:24 AM
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೆರೇಸಂದ್ರ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್, ಪತ್ನಿ ಪ್ರೀತಿ ಸುಧಾಕರ್ ಹಾಗೂ ತಂದೆ ಪಿ.ಎನ್ ಕೇಶವರೆಡ್ಡಿ ಜೊತೆ ಮತದಾನ ಮಾಡಿದರು.
09:19 AM
ಹಲವಡೆ ಕೈಕೊಟ್ಟ ಇವಿಎಂ; ವೋಟರ್ ಲಿಸ್ಟ್ ನಲ್ಲಿ ಹಲವರ ಹೆಸರು ಮಾಯ; ಮತಗಟ್ಟೆ ಎದುರು ಮತದಾರರ ಆಕ್ರೋಶ
09:13 AM
ಹೊಸಕೋಟೆ ಮತಗಟ್ಟೆಯಲ್ಲಿ ಎಂಟಿಬಿ ಗರಂ; ಎಜೆಂಟ್ ಚುನಾವಣಾಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್
09:05 AM
ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರ ಗೋಕಾಕ್ ವಿಧಾನಸಭಾ ಕ್ಷೇತ್ರ: ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ನಿಂದ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ.
08:56 AM
ಬೆಳಗಾವಿಯ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ರಾಜು ಕಾಗೆ ಮತ ಚಲಾಯಿಸಿದರು.
08:53 AM
ಹಿರೇಕೆರೂರಿನ ಬಾಳೆಂಬೆದ ಮತಗಟ್ಟೆಯಲ್ಲಿ ಬಿ ಸಿ ಪಾಟೀಲ್ ಮತದಾನ. ಬಿ ಸಿ ಪಾಟೀಲ್ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ
08:48 AM
ಹುಣಸೂರಿನಲ್ಲಿ ಬಿಜೆಪಿ ಹುರಿಯಾಳು ಎಚ್. ವಿಶ್ವನಾಥ್ ಹಕ್ಕು ಚಲಾವಣೆ
08:40 AM
ಪತ್ನಿ ಪ್ರತಿಭಾ ಅವರ ಜೊತೆಗೆ ಮತಗಟ್ಟೆಗೆ ಆಗಮಿಸಿದ ಶರತ್ ಬಚ್ಚೇಗೌಡ ಮತದಾನ. ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ.
08:38 AM
ಕುಟುಂಬ ಸಮೇತರಾಗಿ ಆನಂದ್ ಸಿಂಗ್ ಮತದಾನ. ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್
08:36 AM
ಹೊಸಕೋಟೆ ಕ್ಷೇತ್ರದ ಬೆಂಡಿಗಾನಹಳ್ಳಿಯಲ್ಲಿ 108 ವರ್ಷದ ರಾಮಕ್ಕರಿಂದ ಮತ ಚಲಾವಣೆ
08:30 AM
ಕೊಡಿಯಾಳ ಮತಗಟ್ಟೆಯಲ್ಲಿ ಮತಚಲಾಯಿಸಿದ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್
08:16 AM
ಮತದಾನದ ಬಳಿಕ, 140 ದಿನಗಳ ರಾಜಕೀಯ ಅಜ್ಞಾತವಾಸ ಇವತ್ತು ಅಂತ್ಯವಾಗುವ ಭರವಸೆಯಿದೆ, ಈ ಬಾರಿ ಹೆಚ್ಚಿನ ಅಂತರಿದಂದ ಗೆಲ್ಲುತ್ತೆನೆಂಬ ವಿಶ್ವಾಸವಿದೆ ಎಂದ ಡಾ. ಕೆ ಸುಧಾಕರ್.
08:09 AM
ಮಂಡ್ಯದ ಬಂಡಿಹೊಳೆಯಲ್ಲಿ ಕೈಕೊಟ್ಟ ಇವಿಎಂ.ಮತಗಟ್ಟೆ ಸಂಖ್ಯೆ 151ರಲ್ಲಿ ದೋಷ ಪತ್ತೆ ಸಾಲುಗಟ್ಟಿ ನಿಂತ ಮತದಾರರು
08:03 AM
ಶಿವಾಜಿ ನಗರದಲ್ಲಿ ಮಾಜಿ ಸಚಿವ ಜಮೀರ್ ಆಹ್ಮದ್ ರಿಂದ ಮತದಾನ. ಮತಗಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ವ್ಯಕ್ತಿಯಯೋರ್ವನನ್ನು ಠಾಣೆಗೆ ಎಳೆದೊಯ್ದ ಪೊಲೀಸರು.
07:57 AM
ಯಲ್ಲಾಪುರ ಹಾಗೂ ಬನವಾಸಿ ಭಾಗದ ತಲಾ ಒಂದು ಮತಗಟ್ಟೆಯಲ್ಲಿ ಅಣಕು ಮತದಾನದ ವೇಳೆ ಇವಿಎಂನಲ್ಲಿ ದೋಷ ಪತ್ತೆ. ತಕ್ಷಣ ಮತಯಂತ್ರದ ಬದಲಾವಣೆ, ಸರಾಗ ಮತದಾನಕ್ಕೆ ವ್ಯವಸ್ಥೆ.
07:54 AM
ಚಿಕ್ಕಬಳ್ಳಾಪುರ ಮತಗಟ್ಟೆ ಸಂಖ್ಯೆ 163ರಲ್ಲಿ ಗಲಾಟೆ. ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದ ಎಜೆಂಟರುಗಳು
07:52 AM
ಕಾಗೆವಾಡ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಆರಂಭ: ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಉಗಾರ ಖರ್ದ್ ಪಟ್ಟಣದಲ್ಲಿ ಹಕ್ಕು ಚಲಾವಣೆ.
07:50 AM
ಗೋಕಾಕ್ ನ ಕೊಣ್ಣುರು ಗ್ರಾಮದಲ್ಲಿ ಮೊದಲ ವೋಟ್ ಮಾಡಿದ ಮದುಮಗ.ಮತದಾನ ಮೊದಲು,ಮದುವೆ ಆಮೇಲೆ ಎಂದ ಮದುಮಗ ಐಜಾಜ್ ಮನಿಯಾರ್.
07:47 AM
ಅಥಣಿಯಲ್ಲಿ ಮೊದಲ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಮತಗಟ್ಟೆ ಸಂಖ್ಯೆ 99ರಲ್ಲಿ ಹಕ್ಕು ಚಲಾವಣೆ.
07:21 AM
ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ವಿಶೇಷವಾಗಿ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
07:20 AM
ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, ಆ ಪೈಕಿ 45 ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
07:20 AM
ಅಹಿತಕರ ಘಟನೆಗಳು ನಡೆಯದಂತೆ 254 ಮತಗಟ್ಟೆಗಳಿಗೂ ಸೇರಿ ಬರೋಬ್ಬರಿ 1,500 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
07:19 AM
15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಆರಂಭ. ನಿಧಾನಕ್ಕೆ ಮತಗಟ್ಟೆಗೆ ಆಗಮಿಸುತ್ತಿರುವ ಮತದಾರರು.
06:37 AM
ಯಾವೊಬ್ಬ ಮತದಾರನೂ ತನ್ನ ಹಕ್ಕಿನಿಂದ ವಂಚಿತನಾಗಬಾರದು ಎಂಬುದು ಚುನಾವಣಾ
ಆಯೋಗದ ಆಶಯ.
06:36 AM
ಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎಂ-3 ಇವಿಎಂಗಳನ್ನು ಬಳಸಲಾಗುತ್ತಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಎಂ-3 ಇವಿಎಂಗಳನ್ನು ಬಳಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು.
06:36 AM
ಚಿಕ್ಕಬಳ್ಳಾಪುರದಲ್ಲಿ 99 ಸಾವಿರ ಪುರುಷರು 1 ಲಕ್ಷ ಮಹಿಳಾ ಮತದಾರರು ಇದ್ದಾರೆ.
06:36 AM
ವಿಜಯನಗರ ಕ್ಷೇತ್ರದಲ್ಲಿ 1.16 ಲಕ್ಷ ಪುರುಷರು, 1.20 ಲಕ್ಷ ಮಹಿಳೆಯರು ಇದ್ದಾರೆ.
06:35 AM
ಗೋಕಾಕ್‌ನಲ್ಲಿ 1.20 ಲಕ್ಷ ಪುರುಷ ಮತದಾರರು ಇದ್ದರೆ, ಮಹಿಳಾ ಮತದಾರರ ಸಂಖ್ಯೆ 1.23 ಲಕ್ಷ.
06:35 AM
ಗೋಕಾಕ್ ಮತ್ತು ವಿಜಯನಗರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
06:34 AM
ಮತದಾನ ಮಾಡಬೇಕಿರುವ 37.82 ಲಕ್ಷ ಮತದಾರರ ಪೈಕಿ 19.25 ಲಕ್ಷ ಪುರುಷರು, 18.52 ಲಕ್ಷ ಮಹಿಳೆಯರು, 414 ಇತರರು, 79 ಸಾವಿರ ಯುವ ಮತದಾರರು, 24, 744 ವಿಕಲಚೇತನ ಮತದಾರರು ಇದ್ದಾರೆ.
06:33 AM
ಗೋಕಾಕ್, ಹಿರೇಕೆರೂರು, ವಿಜಯನಗರ, ಯಶವಂತಪುರ, ಕೆ.ಆರ್. ಪುರಂ, ಹೊಸಕೋಟೆ, ಹುಣಸೂರು ಸೇರಿದಂತೆ 15 ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ಗಂಟೆ ವರೆಗೆ ಮತದಾನ ನಡೆಯಲಿದೆ.
06:32 AM
ಬಿಜೆಪಿ 13 ಕ್ಷೇತ್ರದಲ್ಲಿ ಮಾತ್ರ ಅನರ್ಹರಿಗೆ ಟಿಕೆಟ್ ನೀಡಿದ್ದು,ಶಿವಾಜಿನಗರದಲ್ಲಿ ರೋಷನ್ ಬೇಗ್ ಬದಲು ಶರವಣ, ರಾಣೆಬೆನ್ನೂರಿನಲ್ಲಿ ಆರ್.ಶಂಕರ್ ಬದಲು ಅರುಣ್ ಕುಮಾರ್ ರನ್ನು ಕಣಕ್ಕಿಳಿಸಿದೆ.
06:31 AM
13 ಮಂದಿ ಅನರ್ಹ ಶಾಸಕರು ಸೇರಿದಂತೆ 165 ರಣಕಲಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.
06:29 AM
ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.ಉಪಚುನಾವಣೆ ಗೆಲುವು ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಸವಾಲು,ಕಾಂಗ್ರೆಸ್-ಜೆಡಿಎಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
06:27 AM
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಗುರುವಾರ ಬೆಳಗ್ಗೆ 7ಗಂಟೆಯಿಂದ ಆರಂಭ.