04:31 PM
ಇ.ಡಿ.ಕೆಲ ಆಯ್ದ ಅಂಶಗಳನ್ನು ಮಾತ್ರ ಹೇಳುತ್ತಿದೆ. ಆಗಸ್ಟ್ 20ರ ಆದೇಶವನ್ನು ನೋಡಿ. ನಾಯಿಯನ್ನು ಬಿಟ್ಟು ಬಾಲ ಮಾತ್ರ ಅಲ್ಲಾಡಿಸಲು ಸಾಧ್ಯವಿಲ್ಲ- ಸಿಂಘ್ವಿ
04:31 PM
ಈಗಾಗಲೇ ಇ.ಡಿ.ಅಧಿಕಾರಿಗಳು 4 ದಿನಗಳ ಕಾಲ ಡಿಕೆಶಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ವಿಚಾರಣೆಯ ಅಗತ್ಯವಿಲ್ಲ ಎಂದು ಡಿಕೆಶಿ ಪರ ವಕೀಲ ಸಿಂಘ್ವಿ ವಾದ ಮಂಡಿಸಿದ್ದಾರೆ.
04:29 PM
ಫ್ಲ್ಯಾಟ್ ನಲ್ಲಿ ಸಿಕ್ಕಿರುವ ಎಂಟೂವರೆ ಕೋಟಿ ರೂಪಾಯಿ ಬಗ್ಗೆ ವಿಚಾರಣೆ ವೇಳೆ ಉತ್ತರ ಕೊಟ್ಟಿಲ್ಲ. ಹೀಗಾಗಿ ಡಿಕೆಶಿಯನ್ನ ಬಂಧಿಸಿಯೇ ವಿಚಾರಣೆ ನಡೆಸಬೇಕಾಗಿದೆ-ಇ.ಡಿ.
04:29 PM
ಐಟಿ ಅಧಿಕಾರಿಗಳ ದಾಳಿ ಆಧರಿಸಿ ಇ.ಡಿ ತನಿಖೆ ನಡೆಸುತ್ತಿದೆ. ಕೆಲವೇ ವರ್ಷಗಳಲ್ಲಿ ಡಿಕೆ ಶಿವಕುಮಾರ್ ಕುಟುಂಬ ಸಂಪತ್ತು ಅಗಾಧವಾಗಿದೆ-ಇಡಿ ವಕೀಲರ ವಾದ.
04:05 PM
ಜಾರಿ ನಿರ್ದೇಶನಾಲಯದ ಪರ ನಟರಾಜನ್ ವಾದ ಮಂಡನೆ. ಪಿಎಂಎಲ್ ಕಾಯ್ದೆ ಅಡಿ ಶಿವಕುಮಾರ್ ಬಂಧನ. 14 ದಿನ ಕಸ್ಟಡಿಗೆ ನೀಡುವಂತೆ ಇಡಿ ಮನವಿ.
04:04 PM
ಕೋರ್ಟ್ ಕಟಕಟೆಯಲ್ಲಿ ಕೈಕಟ್ಟಿ ನಿಂತಿರುವ ಡಿಕೆ ಶಿವಕುಮಾರ್. ಡಿಕೆಶಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ.
04:04 PM
ವಿಚಾರಣೆ ವೇಳೆ ತನಿಖಾಧಿಕಾರಿಗಳನ್ನು ಕರೆದ ನ್ಯಾಯಾಧೀಶರು. ನ್ಯಾಯಾಲಯಕ್ಕೆ ದಾಖಲೆ ನೀಡಿದ ತನಿಖಾಧಿಕಾರಿ.
04:03 PM
ಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ. ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ.
03:44 PM
ನ್ಯಾಯಾಧೀಶರಿಗಾಗಿ ಕಾಯುತ್ತಿರುವ ಇ.ಡಿ ಅಧಿಕಾರಿಗಳು ಮತ್ತು ಡಿಕೆ ಶಿವಕುಮಾರ್. ಕೊಠಡಿಗೆ ತೆರಳಿರುವ ನ್ಯಾಯಾಧೀಶರು.
02:59 PM
ಇಂದೇ ಡಿಕೆ ಶಿವಕುಮಾರ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ.
02:28 PM
ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಶಿಕಾರಿಪುರದಲ್ಲಿ ಪ್ರತಿಭಟನೆ. ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ನಡುವೆ ಮಾತಿನ ಚಕಮಕಿ.
02:17 PM
ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕುಣಿಗಲ್ ಬಂದ್. ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ.
02:14 PM
ಡಿಕೆ ಶಿವಕುಮಾರ್ ಏನಾದ್ರು ಕಾನೂನು ಉಲ್ಲಂಘಿಸಿದ್ದಾರೆಯೇ?.ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ. ಕೋರ್ಟ್ ನಲ್ಲಿ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ-ಜಿ.ಪರಮೇಶ್ವರ್
02:12 PM
ಡಿಕೆ ಶಿವಕುಮಾರ್ ವಕೀಲರು ಕೋರ್ಟ್ ಗೆ ಆಗಮನ. ಡಿಕೆಶಿ ಭೇಟಿಗೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ.
01:08 PM
ಜಾರಿ ನಿರ್ದೇಶನಾಲಯದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ. ಇ.ಡಿ.ಅಮಾನುಷವಾಗಿ ನಡೆದುಕೊಂಡಿದೆ.
01:00 PM
ಮಧ್ಯಾಹ್ನ 2ಗಂಟೆಗೆ ಡಿಕೆಶಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು.
12:51 PM
ಹಾವೇರಿ ಜಿಲ್ಲಾ ಕಾಂಗ್ರೆಸ್ ಹಾಗೂ ಡಿಕೆ ಶಿವಕುಮಾರ್ ಅಭಿಮಾನಿಗಳಿಂದ ನಗರದಲ್ಲಿ ಟಯರ್ ಸುಟ್ಟು ಪ್ರತಿಭಟನೆ.
12:51 PM
ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ.
12:47 PM
ಡಿಕೆ ಶಿವಕುಮಾರ್ ಬಂಧ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ನಡೆಸುತ್ತಿದ್ದ ಕೈ ಕಾರ್ಯಕರ್ತರ ಬಂಧನ.
12:42 PM
ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ, ಕನಕಪುರದ ಸಾತನೂರಿನಲ್ಲಿ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು.
12:36 PM
ಮಂಗಳೂರಿನಲ್ಲಿ ಮಳೆಯ ನಡುವೆಯೂ ಕಾಂಗ್ರೆಸ್ ಪ್ರತಿಭಟನೆ, ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ.
12:34 PM
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು.
12:33 PM
ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಮುಂಡಗೋಡ, ಕೊಪ್ಪಳದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.
12:28 PM
ರಾಮನಗರ, ಮಂಡ್ಯ, ಕೊಪ್ಪಳ, ಸೇರಿದಂತೆ ಕೆಲವೆಡೆ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
12:27 PM
ಡಿಕೆ ಶಿವಕುಮಾರ್ ಬಂಧನ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ತಿರುವು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಪ್ರತಿಭಟನೆಗೆ ಕಾರಣವಾಗಿದೆ.