10:19 AM
ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಕೃಷಿ ಭೂಮಿಗೆ ಹೆಚ್ಚಿನ ನೀರಾವರಿ ಕಲ್ಪಿಸಲು ಆದ್ಯತೆ; ಯಡಿಯೂರಪ್ಪ
10:18 AM
ರೈತರಿಗೆ ವೈಜ್ಞಾನಿಕ ಗೋದಾಮು ಸೌಲಭ್ಯ, 2019ರ ಸೆಪ್ಟೆಂಬರ್ ಬಳಿಕ ಹೊಸ ಕೈಗಾರಿಕಾ ನೀತಿ ಜಾರಿ. ನಾವೆಲ್ಲರೂ ಜೊತೆಯಾಗಿ ಅಭಿವೃದ್ಧಿಗೆ ಕೈಜೋಡಿಸೋಣ; ಬಿಎಸ್ ವೈ
10:16 AM
ಬೆಂಗಳೂರಿನ ಮಾಣಿಕ್ಯ ಶಾ ಪರೇಡ್ ಮೈದಾನದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.
09:06 AM
ಜೈ ಹಿಂದ್, ವಂದೇ ಮಾತರಂ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಅಂತ್ಯ.
09:01 AM
ರಾಸಾಯನಿಕದ ಬಳಕೆಯಿಂದ ಭೂಮಿಯನ್ನು ನಾವು ನೋಯಿಸುತ್ತಿದ್ದೇವೆ. ಸಾವಯವ ಗೊಬ್ಬರದಿಂದ ಕೃಷಿ ಮಾಡಿ ಈ ಭೂಮಿಯನ್ನು ಉಳಿಸಬೇಕಿದೆ.
08:58 AM
2022ರ ಮೊದಲು ಭಾರತದ ಕನಿಷ್ಠ15 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಪ್ರವಾಸೋದ್ಯಮ ಅಭಿವೃದ್ದಿಗೆ ಪಣ ತೊಡೋಣ.
08:54 AM
ಏನೇ ಖರೀದಿಸಲೂ ಹೋದರೂ ಬಟ್ಟೆ ಚೀಲ ಕೊಂಡೊಯ್ಯಿರಿ. ಒಂದು ಸಣ್ಣ ನಿರ್ಧಾರದಿಂದ ದೊಡ್ಡ ಬದಲಾವಣೆ ಸಾಧ್ಯ.
08:53 AM
ಎಲ್ಲಾ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಬೇಡಿ ಎಂದು ಬೋರ್ಡ್ ಹಾಕಿ.
08:51 AM
ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ. ಪ್ಲಾಸ್ಟಿಕ್ ನಿರ್ಮೂಲನೆಗೆ ಜನಸಾಮಾನ್ಯರು ಪಣ ತೊಡಬೇಕಿದೆ.
08:51 AM
"ಚೀಫ್ ಆಫ್ ಡಿಫೆನ್ಸ್ ಸ್ಟಾಫ್" ಎಂಬ ಹೊಸ ಹುದ್ದೆ ಸೃಷ್ಠಿ. ಇದು ರಕ್ಷಣಾ ಪಡೆಗಳನ್ನು ಬಲವರ್ಧನೆ ಮಾಡಲಿದೆ.
08:47 AM
ನಮಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಅವಕಾಶ ಸಿಗಲಿಲ್ಲ. ಆದರೆ ನಮಗೆ ದೇಶಕ್ಕಾಗಿ ಬದುಕುವ ಅವಕಾಶ ಸಿಕ್ಕಿದೆ.
08:44 AM
ಭಯೋತ್ಪಾದನೆ ರಫ್ತು ಮಾಡುವವರಿಗೆ ತಕ್ಕ ಶಾಸ್ತಿ. ಅವರ ಬಣ್ಣ ಬಯಲಾಬೇಕಿದೆ.
08:44 AM
ಭಯೋತ್ಪಾದನೆ ಮಾನವೀಯತೆಯ ಮೇಲಿನ ದಾಳಿಯಾಗಿದೆ.
08:43 AM
ಕೇವಲ ಭಾರತ ಮಾತ್ರವಲ್ಲ ನಮ್ಮ ನೆರೆಯ ದೇಶಗಳಿಗೂ ಭಯೋತ್ಪಾದನೆಯ ಸಮಸ್ಯೆಯಿದೆ. ಬಾಂಗ್ಲಾ, ಶ್ರೀಲಂಕಾ, ಅಫಘಾನಿಸ್ಥಾನದಲ್ಲಿ ಭಯೋತ್ಪಾದನೆಯ ಸಮಸ್ಯೆಯಿದೆ.
08:41 AM
ರಪ್ತು ಹೆಚ್ಚಳಕ್ಕೆ ನಮ್ಮ ಸರ್ಕಾರದಿಂದ ಕ್ರಮ
08:41 AM
ಪ್ರತಿ ಗ್ರಾಮದಲ್ಲಿ ಆಪ್ಟಿಕಲ್ ಫೈಬರ್, ಬ್ರಾಡ್ ಬ್ಯಾಂಡ್ ವ್ಯವಸ್ಥೆ.
08:40 AM
ಪ್ರವಾಸೋದ್ಯಮ ಅಭಿವೃದ್ದಿಗೆ ಸರ್ಕಾರ ಕ್ರಮ ಕೈಗೊಂಡಿದೆ.
08:39 AM
ನಮ್ಮ ದೇಶದ ಜೊತೆ ವ್ಯಾಪಾರ ಮಾಡಲು ಎಲ್ಲರೂ ಉತ್ಸುಕರಾಗಿದ್ದಾರೆ.
08:38 AM
ಹಣದುಬ್ಬರವನ್ನು ನಿಯಂತ್ರಿಸಿ ಅಭಿವೃದ್ದಿಯ ಮಂತ್ರ ಜಪಿಸಿದ್ದೇವೆ.
08:37 AM
5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುತ್ತಿದ್ದೇವೆ. ಕೆಲವರು ಇದು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ 2014ರಿಂದ 2019ರವರೆಗೆ 3 ಟ್ರಲಿಯನ್ ಡಾಲರ್ ಗೆ ಏರಿಕೆಯಾಗಿದೆ.
08:33 AM
ಪ್ರತಿಯೊಬ್ಬರಲ್ಲೂ ದಿನದಿಂದ ದಿನಕ್ಕೆ ಯೋಚನಾ ಶಕ್ತಿ ಬದಲಾಗುತ್ತಿದೆ.
08:30 AM
ಮೊದಲು ಪಕ್ಕಾ ರಸ್ತೆಯನ್ನು ಜನ ಕೇಳುತ್ತಿದ್ದರು. ಈಗ ಚತುಷ್ಪಥ ರಸ್ತೆಯನ್ನು ಜನ ಕೇಳುತ್ತಿದ್ದಾರೆ.
08:29 AM
ಭಾರತದ ಮೇಲೆ ಜಗತ್ತೇ ನಂಬಿಕೆ ಇಟ್ಟಿದೆ.
08:28 AM
ಸರ್ಕಾರದ ಪ್ರತಿಯೊಂದು ಯೋಜನೆಯೂ ಜನರನ್ನು ತಲುಪಬೇಕಿದೆ.
08:26 AM
ಉದ್ಯಮ ಸರಳೀಕರಣದಲ್ಲಿ ಭಾರಿ ಪ್ರಗತಿ ಸಾಧಿಸಿದ್ದೇವೆ.
08:22 AM
ಜೀವನ ಶೈಲಿ ಮತ್ತು ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ.
08:22 AM
ವ್ಯವಸ್ಥೆ ನಿರ್ವಹಿಸುವ ಮನಸ್ಸು ಕೂಡಾ ಬದಲಾಗಬೇಕಿದೆ.
08:21 AM
ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ದೇಶಕ್ಕೆ ನಷ್ಟವಾಗಿದೆ. ಈಗಾಗಲೇ ಈ ರೋಗ ದೊಡ್ದದಾಗಿ ಬೆಳೆದಿದೆ.
08:20 AM
ಭ್ರಷ್ಟಾಚಾರ ನಿರ್ಮೂಲನೆಗೆ ಹಲವು ತಂತ್ರಜ್ಞಾನ ತಂದಿದ್ದೇವೆ.
08:17 AM
ಸಣ್ಣ ಕುಟುಂಬದ ಮೂಲಕ ಕೆಲವರು ದೇಶ ಭಕ್ತಿ ಪ್ರದರ್ಶಿಸುತ್ತಿದ್ದಾರೆ.
08:16 AM
ಜನಸಂಖ್ಯೆ ಸ್ಪೋಟದಿಂದ ಮುಂದಿನ ತಲೆಮಾರಿಗೆ ಸಮಸ್ಯೆಯಾಗಲಿದೆ. ಜನಸಂಖ್ಯೆ ನಿಯಂತ್ರಣ ಬಗ್ಗೆ ಜಾಗೃತಿಯಾಗಬೇಕಿದೆ. ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಜಾಗೃತಿ ಅಗತ್ಯ.
08:13 AM
ನೀರಿನ ಅಭಿಯಾನವು ಜನಸಾಮಾನ್ಯರ ಅಭಿಯಾನವಾಗಬೇಕು.
08:13 AM
ತಿರುವಳ್ಳವರ್ "ನೀರು ಜೀವನದ ಮೂಲ ಶಕ್ತಿ" ಎಂದಿದ್ದರು. ನೀರು ಸಂರಕ್ಷಣೆಯ ಅಭಿಯಾನ ಆಗಬೇಕಿದೆ.
08:12 AM
ಜಲ್ ಜೀವನ್ ಯೋಜನೆ ಮೂಲಕ ಕುಡಿಯುವ ನೀರು ಪೂರೈಕೆ. ಜಲ್ ಜೀವನ್ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರ್ವಹಣೆ
08:10 AM
ಪ್ರಧಾನಿ ಮೋದಿಯಿಂದ ಜಲಜೀವನ ಯೋಜನೆ ಘೋಷಣೆ. ಇದಕ್ಕಾಗಿ 3.5 ಲಕ್ಷ ಕೋಟಿ ರೂ. ಮೀಸಲು
08:08 AM
ದೇಶದ ಅರ್ಧಕ್ಕರ್ಧ ಜನರು ಕುಡಿಯೋ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಹೋಗುವ ಪರಿಸ್ಥಿತಿ ಇದೆ. ಈ ಸಮಸ್ಯೆ ನಿವಾರಣೆಗೆ ಜಲ ಜೀವನ್ ಯೋಜನೆ ಪೂರಕವಾಗಲಿದೆ.
08:06 AM
ದೇಶದ ಅಭಿವೃದ್ದಿಗೆ ಬಡತನ ನಿರ್ಮೂಲನೆಯಾಗಬೇಕು. ಸಮಾನ ಸ್ವಾಭಿಮಾನ ಬದುಕು ಕಲ್ಪಿಸಿದರೆ ಬಡತನ ನಿರ್ಮೂಲನೆ
08:05 AM
ಜಿಎಸ್ ಟಿಯಿಂದ ಒಂದು ದೇಶ ಒಂದು ತೆರಿಗೆ ಸಾಕಾರವಾಯ್ತು.
08:04 AM
ಒಂದು ದೇಶ ಒಂದೇ ಚುಣಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
08:03 AM
ಗರ್ವದಿಂದ ಹೇಳುತ್ತೇನೆ. " ಒಂದು ದೇಶ ಒಂದೇ ಸಂವಿಧಾನ"
08:02 AM
ಜಮ್ಮು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಶಾಂತಿಗಾಗಿ ಕೆಲಸ. ಕಾಶ್ಮೀರದ ಮಹಿಳೆಯರಿಗೆ ಮತ್ತು ದಲಿತರ ಅಭಿವೃದ್ದಿಗೆ ಪಣ
08:00 AM
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ, ಪ್ರತ್ಯೇಕವಾದಗಳಿಗೆ ಹಿಂದೆ ಅವಕಾಶವಿತ್ತು. ಇನ್ನು ಮುಂದೆ ಇದಕ್ಕೆ ಅವಕಾಶವಿಲ್ಲ.
07:58 AM
ನವದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ
07:57 AM
ಕಾಶ್ಮೀರದ ಅಭಿವೃದ್ದಿ ಇದರಿಂದ ಸಾಧ್ಯತೆ. 70 ವರ್ಷ ಪ್ರಯತ್ನ ಪಟ್ಟರೂ ಫಲ ನೀಡಿರಲಿಲ್ಲ
07:56 AM
ಕಾಶ್ಮೀರಿಗಳ ಆಸೆ ಈಡೇರಿಸಬೇಕೆಂದು ನಮ್ಮ ಆಸೆ. ಇದರಲ್ಲಿ ನಮ್ಮದೇನು ಸ್ವಂತದ್ದು ಏನು ಇಲ್ಲ.
07:55 AM
ರೈತರಿಗೂ ಕಿಸಾನ್ ಸಮ್ಮಾನ್ ಯೋಜನೆ. 90 ಸಾವಿರ ಕೋಟಿ ರೈತರಿಗೆ ಮೀಸಲಿಟ್ಟಿದ್ದೇವೆ.
07:55 AM
35ಎ, ಅನುಚ್ಛೇಧ 370 ರದ್ದು ಮಾಡಿದ್ದೇವೆ. 70ವರ್ಷದಿಂದ ಆಗದೇ ಇದ್ದುದನ್ನು 70 ದಿನದಲ್ಲಿ ಮಾಡಿದ್ದೇವೆ.
07:53 AM
ತ್ರಿವಳಿ ತಲಾಖ್‌ನಿಂದ ಭಯದ ಜೀವನ ಸಾಗಿಸುತ್ತಿದ್ದರು. ಈಗ ದೇಶದ ಮುಸ್ಲಿಂ ಸೋದರಿಯರು ಭಯ ಮುಕ್ತ ಜೀವನ ನಡೆಸಬಹುದು.
07:51 AM
ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ಅನ್ನು ಜಾರಿಗೊಳಿಸಿದ್ದೇವೆ. ಇದರಿಂದಾಗಿ ವೈದ್ಯರ ಗೌರವ ಹೆಚ್ಚಲು ಕಾರಣವಾಗಿದೆ.
07:48 AM
ರೈತರು, ದಲಿತರು,ಆದಿವಾಸಿಗಳು ಅಭಿವೃದ್ದಿಗೆ ಪಣ
07:48 AM
ನಮ್ಮ ಸರ್ಕಾರ ಜನರ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದೆ. ಜನರಲ್ಲಿ ಹೊಸ ಭರವಸೆ ಮೂಡಿಸಿದ್ದೇವೆ.
07:47 AM
ಭಯೋತ್ಪಾಧನೆ ವಿರುದ್ಧ ತಕ್ಕ ನಿರ್ಧಾರ ತೆಗೆದುಕೊಂಡಿದ್ದೇವೆ.
07:46 AM
2014ರಲ್ಲಿ ನಾನು ಪ್ರಧಾನಿಯಾಗಿದ್ದಾಗ ನಾನು ಹೊಸಬನಾಗಿದ್ದೆ. ಆಗ ಜನರಲ್ಲಿ ನಿರಾಸೆ ಇತ್ತು. 2019ರಲ್ಲಿ ಜನರಲ್ಲಿ ನಿರಾಸೆ ಇಲ್ಲ.
07:44 AM
ನಮ್ಮ ಸರ್ಕಾರ ಬಂದು ಹತ್ತು ವಾರಗಳೂ ಆಗಿಲ್ಲ. ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸಿದ್ದೇವೆ. ಅನುಚ್ಛೇಧ 370, 35ಎ ತೆಗೆಯುವ ಮೂಲಕ ಸರ್ದಾರ್ ಪಟೇಲ್ ಕನಸು ಸಾಕಾರವಾಗಿದೆ
07:41 AM
ದೇಶದ ಅಭಿವೃದ್ದಿ ಶಾಂತಿಗಾಗಿ ಹಲವರು ದುಡಿದಿದ್ದಾರೆ
07:41 AM
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ವಂದನೆಗಳು
07:40 AM
ದೇಶದ ಜನತೆಗೆ ಸ್ವಾತಂತ್ರ್ಯ ದಿನ ಮತ್ತು ರಕ್ಷಾ ಬಂಧನದ ಶುಭಾಶಯ ಕೋರಿದ ಪ್ರಧಾನಿ ಮೋದಿ
07:38 AM
ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ
07:09 AM
7.18ಕ್ಕೆ ಲಾಹೋರಿ ಗೇಟ್ ಮೂಲಕ ಕೆಂಪುಕೋಟೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 7.30ಕ್ಕೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ.
06:48 AM
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಗಡಿನಿಯಂತ್ರಣ ರೇಖೆ, ಬಾರಾಮುಲ್ಲಾ, ಉರಿ ಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ.
06:46 AM
ದೇಶಕ್ಕೆ ಸ್ವಾತಂತ್ರ್ಯ ಬಂದು 70ವರ್ಷಗಳ ನಂತರ ಕಣಿವೆ ರಾಜ್ಯದಲ್ಲಿ ಮೊದಲ ಬಾರಿಗೆ ತಿರಂಗ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.
06:45 AM
ಜಮ್ಮು-ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ, ಲಡಾಖ್ ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಸಿದ್ದತೆ. ಬರೋಬ್ಬರಿ 1.5 ಲಕ್ಷ ಸೇನಾ ಯೋಧರ ನೇಮಕ.
06:44 AM
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಹಾರಲಿದೆ ತ್ರಿವರ್ಣ ಧ್ವಜ.
06:43 AM
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 2ನೇ ಬಾರಿ ಅಧಿಕಾರದ ಗದ್ದುಗೆ ಏರಿದ ನಂತರ ಬಂದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣಕ್ಕಾಗಿ ಕೆಂಪುಕೋಟೆಯಲ್ಲಿ ಸಿದ್ಧತೆ.
06:38 AM
ಧ್ವಜಾರೋಹಣ ನೆರವೇರಿದ ನಂತರ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
06:36 AM
ಬೆಳಗ್ಗೆ 7ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲಿದ್ದಾರೆ.
06:31 AM
ಜಮ್ಮು-ಕಾಶ್ಮೀರ, ಲಡಾಖ್, ದೆಹಲಿ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಭದ್ರತೆ.
06:30 AM
ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆ.