06:51 PM
14 ತಿಂಗಳ ಬಳಿಕ ಬಿಎಸ್ ಯಡಿಯೂರಪ್ಪ ಮತ್ತೆ ರಾಜ್ಯದ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
06:44 PM
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರು ಬಿಎಸ್ ವೈಗೆ ಪ್ರತಿಜ್ಞಾವಿಧೀ ಬೋಧಿಸಿದರು.
06:43 PM
4ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ, ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಿಎಸ್ ವೈ.
06:18 PM
ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ .
06:06 PM
ಯಡಿಯೂರಪ್ಪಗೆ ರಾಜಭವನದಲ್ಲಿ ಸ್ವಾಗತ, ಯಡಿಯೂರಪ್ಪ ಕಾಲಿಗೆರಗಿದ ಹಲವು ಬಿಜೆಪಿ ಕಾರ್ಯಕರ್ತರು, ಮುಖಂಡರು.
06:02 PM
ಹಸಿರು ಶಾಲು ಹೊದ್ದು ರಾಜಭವನಕ್ಕೆ ಆಗಮಿಸಿದ ಬಿಎಸ್ ಯಡಿಯೂರಪ್ಪ. 4ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಿಎಸ್ ವೈ.
05:52 PM
ಬಿಜೆಪಿ ಕಚೇರಿಯಿಂದ ರಾಜಭವನಕ್ಕೆ ತೆರಳಿದ ಬಿಎಸ್ ಯಡಿಯೂರಪ್ಪ, ಕಾರ್ಯಕ್ರಮಕ್ಕೆ ಕೆಎನ್ ರಾಜಣ್ಣ, ರೋಷನ್ ಬೇಗ್ ಆಗಮನ.
05:45 PM
ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಪ್ರತಿಜ್ಞಾವಿಧಿ ಸ್ವೀಕರಿಸಲು ಕ್ಷಣಗಣನೆ, ಕೆಲವೇ ಹೊತ್ತಿನಲ್ಲಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ.
04:55 PM
ಬಿಜೆಪಿ ಕಚೇರಿಗೆ ಆಗಮಿಸಿದ ಬಿಎಸ್ ಯಡಿಯೂರಪ್ಪ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ನಿಯೋಜಿತ ಸಿಎಂ.
04:50 PM
ಬಿಎಸ್ ವೈ ಪ್ರಮಾಣವಚನ ಯಾಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾರ್ಗಗಳಲ್ಲಿ ಬದಲಾವಣೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಲು ರಾಜಭವನ ಹೊರಗೆ ವ್ಯವಸ್ಥೆ.
04:30 PM
ರಾಜಭವನದಲ್ಲಿ ಭದ್ರತೆ ಪರಿಶೀಲಿಸಿದ ಅಲೋಕ್ ಕುಮಾರ್. ರಾಜಭವನದಲ್ಲಿ ಭರದಿಂದ ಸಾಗಿದ ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆ.
04:24 PM
ಶನಿವಾರ ಬೆಳಗ್ಗೆ ಹುಟ್ಟೂರು ಬೂಕನರೆಗೆ ಬಿಎಸ್ ಯಡಿಯೂರಪ್ಪ ಭೇಟಿ. ವಿಶೇಷ ಪೂಜೆ ಸಲ್ಲಿಸಿದ ಕೆಎಸ್ ಈಶ್ವರಪ್ಪ.
03:49 PM
ಹಿಂದಿನ ಸರ್ಕಾರದ ಎಲ್ಲಾ ಆದೇಶಗಳನ್ನು ತಡೆಹಿಡಿಯಲು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮೌಖಿಕ ಆದೇಶ ನೀಡಿದ ನಿಯೋಜಿತ ಸಿಎಂ ಯಡಿಯೂರಪ್ಪ.
03:34 PM
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಎಲ್ ಇಡಿ ಸ್ಕ್ರೀನ್ ಅಳವಡಿಕೆ. ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭ ವೀಕ್ಷಣೆಗೆ ಅವಕಾಶ.
03:33 PM
ಸ್ಥಿರ ಸರಕಾರ ರಚಿಸಲು ಬಿಎಸ್ ಯಡಿಯೂರಪ್ಪಗೆ ಸಹಕರಿಸುತ್ತೇವೆ. ಎಸ್ ಆರ್ ವಿಶ್ವನಾಥ್ ಹೇಳಿಕೆ
03:32 PM
ಭದ್ರತೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಬಹುಮತ ಸಾಬೀತು ಬಳಿಕವೇ ಸಚಿವ ಸಂಪುಟ ರಚನೆ.
02:26 PM
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಬ್ಯಾರಿಕೇಡ್ ವ್ಯವಸ್ಥೆ. ದೇವೇಗೌಡರ ನಿವಾಸಕ್ಕೆ ತೆರಳಿದ ಎಚ್ ಡಿಕೆ.
02:24 PM
ವಕೀಲರ ಜತೆ ಚರ್ಚಿಸುತ್ತಿರುವ ಮೂವರು ಅನರ್ಹ ಶಾಸಕರು. ಇತರ ಶಾಸಕರಿಂದಲೂ ಅನರ್ಹ ಶಾಸಕರು ಸಲಹೆ ಪಡೆಯುತ್ತಿದ್ದಾರೆ.
01:38 PM
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಬಿಎಸ್ ಯಡಿಯೂರಪ್ಪ ಭಾಷಣ. ರಾಜಭವನದ ಸುತ್ತಿ ಬಿಗಿ ಪೊಲೀಸ್ ಭದ್ರತೆ.
01:15 PM
ಕಾಂಗ್ರೆಸ್ ವತಿಯಿಂದ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ. ವಿಶ್ವಾಸಮತ ಯಾಚನೆಗೆ ಒತ್ತಡ ಹೇರಿದ್ದಾರೆ. ರಾಜ್ಯಪಾಲರಿಂದ ಜನಾದೇಶಕ್ಕೆ ಧಿಕ್ಕಾರ.
01:14 PM
ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಬಂದಿದ್ದೇನೆ -ರಾಷ್ಟ್ರೀಯ ಸೈನಿಕ ಸ್ಮಾರಕದ ಬಳಿ ಯಡಿಯೂರಪ್ಪ ಹೇಳಿಕೆ
01:13 PM
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹಬ್ಬದ ವಾತಾವರಣ. ಪ್ರಮಾಣವಚನ ಸ್ವೀಕಾರದ ವೇಳೆ ಸಂಭ್ರಮಾಚರಣೆಗೆ ಸಿದ್ಧತೆ.
12:46 PM
ಬಿಎಸ್ ವೈ ಪ್ರಮಾಣವಚನ ಸ್ವೀಕಾರಕ್ಕೆ ಜೆಡಿಎಸ್ ಆಕ್ರೋಶ. ಬಿಎಸ್ ಯಡಿಯೂರಪ್ಪ ಹುಟ್ಟೂರಾದ ಬೂಕನಕೆರೆಯಲ್ಲಿ ಸಂಭ್ರಮ.
12:21 PM
ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕುಮಾರಸ್ವಾಮಿ ನಿರ್ಧಾರ.
11:52 AM
ಸಂಜೆ 6ಗಂಟೆಗೆ ಬಿಎಸ್ ವೈ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ- ಅಲೋಕ್ ಕುಮಾರ್
11:52 AM
ಇಂದು ಬಿಎಸ್ ಯಡಿಯೂರಪ್ಪ ಮಾತ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ. ಮಧ್ಯಾಹ್ನ 3.30ಕ್ಕೆ ಬಿಜೆಪಿ ಹೈಕಮಾಂಡ್ ನವದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ.
11:39 AM
ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಿಜೆಪಿ ನಿಯೋಗ. ಜಗದೀಶ್ ಶೆಟ್ಟರ್, ಬೊಮ್ಮಾಯಿ, ಲಿಂಬಾವಳಿ ಬೆಂಗಳೂರಿಗೆ.
11:38 AM
ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ನಿಯೋಜಿತ ಸಿಎಂ ಬಿಎಸ್ ಯಡಿಯೂರಪ್ಪಗೆ ರಾಜ್ಯಪಾಲರ ಸೂಚನೆ.
11:31 AM
ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಕುಮಾರಸ್ವಾಮಿ, ಸಿದ್ದರಾಮಯ್ಯ ಗೂ ಆಹ್ವಾನ ನೀಡಿದ ಬಿಎಸ್ ವೈ.
11:28 AM
ಸ್ಪೀಕರ್ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೆ ವಕೀಲರ ಸಹಮತ. ತಡರಾತ್ರಿ ಸಭೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಗೆ ನಿರ್ಧಾರ.
11:28 AM
ನಿನ್ನೆ ತಡರಾತ್ರಿ ಹಿರಿಯ ವಕೀಲರ ಜೊತೆ ಸಮಾಲೋಚನೆ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹಸಚಿವರು ಆಗಿರುವ ಅಮಿತ್ ಶಾ.
11:21 AM
4ನೇ ಬಾರಿ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
11:20 AM
ಬಿಎಸ್ ಯಡಿಯೂರಪ್ಪ ಮನವಿಯಂತೆ ಶುಕ್ರವಾರ ಸಂಜೆ 6ರಿಂದ 6.15ರೊಳಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಮಯ ನಿಗದಿ.
11:20 AM
ರಾಜಭವನಕ್ಕೆ ಭೇಟಿ ನೀಡಿದ ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಸಮಯ ನಿಗದಿಗೆ ಮನವಿ.
11:19 AM
ಸ್ಪೀಕರ್ ನಿರ್ಧಾರ ಪ್ರಕಟದ ಬೆನ್ನಲ್ಲೇ ಶುಕ್ರವಾರ ದೆಹಲಿ ಹೈಕಮಾಂಡ್ ನಿಂದ ಬಿಎಸ್ ವೈ ಗ್ರೀನ್ ಸಿಗ್ನಲ್..ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕರೆ.
11:19 AM
ಕಾಂಗ್ರೆಸ್ ನ ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.
11:18 AM
ಸ್ಪೀಕರ್ ರಮೇಶ್ ಕುಮಾರ್ ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷದ ಇಬ್ಬರು ಹಾಗೂ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು.