03:31 AM
ಚಂದ್ರಯಾನ-2 ಯೋಜನೆಯ ಫಲಿತಾಂಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
03:18 AM
ವಿಕ್ರಂ ಲ್ಯಾಂಡರ್ ಕಳುಹಿಸಿರುವ ದತ್ತಾಂಶಗಳನ್ನು (ಡೇಟಾ) ಪರಿಶೀಲಿಸಲು ಸಮಯಾವಕಾಶ ಬೇಕೆಂದ ಇಸ್ರೋ.
03:17 AM
ಇಸ್ರೋ ನಡೆಸಲುದ್ದೇಶಿಸಿದ್ದ ಪತ್ರಿಕಾಗೋಷ್ಠಿ ರದ್ದಾಗಿದೆ.
03:17 AM
ವಿಕ್ರಂ ಲ್ಯಾಂಡರ್ ಇಸ್ರೋ ಸಂವಹನ ಕೇಂದ್ರದಿಂದ ಸಂವಹನ ಕಳೆದುಕೊಂಡಿರುವುದರಿಂದ ಸದ್ಯಕ್ಕೆ ಚಂದ್ರಯಾನ-2ರ ಫಲಿತಾಂಶ ಅತಂತ್ರ.
02:26 AM
ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ
02:23 AM
ನಿಮ್ಮ ಸಾಧನೆಗೆ ದೇಶವೇ ಹೆಮ್ಮೆಪಡುತ್ತಿದೆ. ನನ್ನ ಬೆಂಬಲ ನಿಮ್ಮ ಜೊತೆಗೆ ಸದಾ ಇರುತ್ತದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ.
02:20 AM
ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬುತ್ತಿರುವ ಪ್ರಧಾನಿ ಮೋದಿ
02:20 AM
ಸಿಗ್ನಲ್ ಕಡಿತಗೊಂಡ ಬಳಿಕದ ದತ್ತಾಂಶ ಪರಿಶೀಲನೆಗೆ ತೀರ್ಮಾನಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರಿಂದ ಪ್ರಕಟನೆ.
02:13 AM
ವಿಶ್ವಾಸ ಕಳೆದುಕೊಳ್ಳದ ವಿಜ್ಞಾನಿಗಳು. ಶುಭ ಸಂದೇಶದ ನಿರೀಕ್ಷೆಯಲ್ಲಿ ಭಾರತೀಯರು.
02:12 AM
ಚಂದ್ರನ ನೆಲದ ಮೇಲಿಂದ 400 ಮೀಟರ್ ಎತ್ತರದಲ್ಲಿದ್ದಾಗ ಕಡಿತಗೊಂಡ ಸಿಗ್ನಲ್.
02:09 AM
ಲ್ಯಾಂಡರ್ ಮತ್ತು ಆರ್ಬಿಟರ್ ಮಧ್ಯೆ ಮತ್ತೆ ಮೂಡಿದ ಸಂಪರ್ಕ
02:07 AM
ವಿಕ್ರಂ ಲ್ಯಾಂಡರ್ ನಿಂದ ಸಿಗ್ನಲ್ ಕಟ್. ವಿಜ್ಞಾನಿಗಳಲ್ಲಿ ಮನೆ ಮಾಡಿದ ಆತಂಕ
02:04 AM
ವಿಕ್ರಂ ಸಿಗ್ನಲ್ ಗೆ ಕಾಯುತ್ತಿರುವ ಇಸ್ರೋ ವಿಜ್ಞಾನಿಗಳು.
02:02 AM
ಇಸ್ರೋ ನಿಯಂತ್ರಣ ಕೇಂದ್ರದ ಸೂಚನೆಯ ನಿರೀಕ್ಷೆಯಲ್ಲಿ ಎಲ್ಲರೂ…
01:59 AM
ದೀರ್ಘ ಸಮಾಲೋಚನೆಯಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳು.
01:50 AM
ಕೆಲವೇ ಸೆಕೆಂಡುಗಳಲ್ಲಿ ಚಂದ್ರನನ್ನು ಸ್ಪರ್ಶಿಸಲಿರುವ ವಿಕ್ರಂ.
01:47 AM
ಚಂದಿರನ ನೆಲದಿಂದ ಸರಿಸುಮಾರು 15 ಕಿಲೋ ಮೀಟರ್ ಎತ್ತರದಲ್ಲಿರುವ ವಿಕ್ರಂ. ಇನ್ನು ಎರಡು ನಿಮಿಷಗಳ ಅವಧಿ ಬಾಕಿ
01:45 AM
ಪ್ರತಿಯೊಬ್ಬರಲ್ಲೂ ಕಾತರ, ಆತಂಕ… ಇನ್ನು ನಾಲ್ಕು ನಿಮಿಷಗಳಲ್ಲಿ ಇತಿಹಾಸ ನಿರ್ಮಾಣ
01:45 AM
ನಿಧಾನವಾಗಿ ಚಂದ್ರನ ನೆಲದತ್ತ ಇಳಿಯುತ್ತಿರುವ ವಿಕ್ರಂ ಲ್ಯಾಂಡರ್.
01:24 AM
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ಇಸ್ರೋದ ಚಂದ್ರಯಾನ-2ರ ನಿಯಂತ್ರಣ ಕೇಂದ್ರಕ್ಕೆ ಆಗಮಿಸಿದ್ದಾರೆ.
01:23 AM
ಇಸ್ರೋ ಅಧಿಕೃತ ಯೂ ಟ್ಯೂಬ್ ಚಾನೆಲ್ https://www.youtube.com/watch?v=7iqNTeZAq-c ನಲ್ಲಿ ಐತಿಹಾಸಿಕ ಕ್ಷಣದ ನೇರಪ್ರಸಾರ.
01:16 AM
ಚಂದ್ರನ ಮೇಲೆ ‘ವಿಕ್ರಂ’ ಇಳಿಯಲು ಇನ್ನೊಂದೇ ಹೆಜ್ಜೆ ; ಐತಿಹಾಸಿಕ ಕ್ಷಣಕ್ಕೆ ಇನ್ನುಳಿದಿರುವುದು 30 ನಿಮಿಷಗಳು ಮಾತ್ರ.
01:16 AM
ಚಂದ್ರಯಾನ-2ರ ಯೋಜನಾ ತಂಡದಲ್ಲಿ 30% ಮಹಿಳೆಯರು.
01:15 AM
ಭಾರತೀಯ ವಿಜ್ಞಾನಿ ಮತ್ತು ಹೆಸರಾಂತ ಖಗೋಳಶಾಸ್ತ್ರಜ್ಞ ಪದ್ಮಭೂಷಣ ವಿಕ್ರಂ ಸಾರಾಭಾಯ್ ಅವರ ನೆನಪಿಗಾಗಿ ಲ್ಯಾಂಡರ್ ಗೆ ‘ವಿಕ್ರಂ’ ಎಂದು ನಾಮಕರಣ ಮಾಡಲಾಗಿದೆ.
12:39 AM
ವಿಕ್ರಂ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತರದಿಂದಿರುವ ಭಾರತೀಯರು.
11:01 PM
ಚಂದ್ರನ ಮೆಲೆ ವಿಕ್ರಂ ಲ್ಯಾಂಡರ್ ಇಳಿಯುವುದಕ್ಕೆ ಇಸ್ರೋ ಕೇಂದ್ರದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ.
10:40 PM
ಪ್ರಧಾನಿ ಮೋದಿ ಅವರ ಜೊತೆ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಸುಮಾರು 60 ರಿಂದ 70 ವಿದ್ಯಾರ್ಥಿಗಳು ವಿಕ್ರಂ ಲ್ಯಾಂಡರ್ ಅವತರಣವನ್ನು ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳಲಿದ್ದಾರೆ.
10:38 PM
ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.
10:37 PM
ಈ ಸವಾಲಿನ ಕ್ಷಣಕ್ಕೆ ಭಾರತೀಯರೂ ಸೇರಿದಂತೆ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ.
10:37 PM
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಈ ಸಾಫ್ಟ್ ಲ್ಯಾಂಡಿಂಗ್ ಇಸ್ರೋ ಪಾಲಿಗೆ ಅತೀ ಸವಾಲಿನ ಕ್ಷಣಗಳಾಗಲಿವೆ.
10:36 PM
1471 ಕೆ.ಜಿ. ತೂಕ ಹೊಂದಿರುವ ವಿಕ್ರಂ ನೌಕೆ ಇಂದು ಮಧ್ಯರಾತ್ರಿ 01.30 ರಿಂದ 02.30ರ ನಡುವೆ ಚಂದ್ರನ ಅಂಗಳದಲ್ಲಿ ಇಳಿಯಲಿದೆ.
10:35 PM
ಇನ್ನು ಉಳಿದಿರುವುದು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಇಳಿಯಲಿರುವ ಐತಿಹಾಸಿಕ ಕ್ಷಣ ಮಾತ್ರ.
10:33 PM
ಸೆಪ್ಟಂಬರ್ 04ರಂದು ಎರಡನೇ ಕಕ್ಷೆ ಜಾರಿಸುವಿಕೆ ಪ್ರಕ್ರಿಯೆ 09 ಸೆಕೆಂಡುಗಳಲ್ಲಿ ಪೂರ್ಣಗೊಂಡಿತ್ತು.
10:33 PM
ಚಂದ್ರಯಾನ-2ರ ಪ್ರಥಮ ಕಕ್ಷೆ ಜಾರಿಸುವಿಕೆ ಪ್ರಕ್ರಿಯೆ ಸೆಪ್ಟಂಬರ್ 03ರಂದು ನಡೆಯಿತು. ಈ ಕಾರ್ಯಕ್ಕೆ ಇಸ್ರೋ ವಿಜ್ಞಾನಿಗಳಿಗೆ ತಗುಲಿದ ಸಮಯ 04 ಸೆಕೆಂಡುಗಳು.
10:33 PM
ಇಸ್ರೋದ ಈ ಎಲ್ಲಾ ಕಾರ್ಯಗಳಿಗೆ ಬೆಂಗಳೂರು ಸಮೀಪದ ಬೈಲಾಲುವಿನಲ್ಲಿ ಇರಿಸಲಾಗಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್ (IDSN) ಆ್ಯಂಟೆನಾಗಳು ಸಹಕಾರ ನೀಡುತ್ತಿವೆ.
10:33 PM
ಆರ್ಬಿಟರ್ ಮತ್ತು ವಿಕ್ರಂ ಲ್ಯಾಂಡರ್ ನ ಕಾರ್ಯಕ್ಷಮತೆಯನ್ನು ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್ ವರ್ಕ್ ನಲ್ಲಿ (ISTRAC) ಸ್ಥಾಪಿಸಲಾಗಿದ್ದ ಮಿಶನ್ ಅಪರೇಷನ್ ಕಾಂಪ್ಲೆಕ್ಸ್ (MOX) ಮೂಲಕ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
10:33 PM
ಸೆಪ್ಟಂಬರ್ 02 ಸೋಮವಾರದಂದು ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರಯಾನ-2 ಆರ್ಬಿಟರ್ ನಿಂದ ಪ್ರತ್ಯೇಕಗೊಂಡು ಚಂದ್ರನ ಅಂಗಳದತ್ತ ಮುಖಮಾಡಿತ್ತು.
10:12 PM
ಇನ್ನು ಚಂದ್ರನ ಕಕ್ಷೆಯಲ್ಲಿ ನೌಕೆಯ ಪಥ ಏರಿಸುವಿಕೆಯ ದ್ವಿತೀಯ, ತೃತೀಯ, ನಾಲ್ಕನೇ ಮತ್ತು ಐದನೇ ಹಂತದ ಪ್ರಕ್ರಿಯೆಗಳು ಕ್ರಮವಾಗಿ ಆಗಸ್ಟ್ 21, 28, 30 ಮತ್ತು ಸೆಪ್ಟಂಬರ್ 01ರಂದು ಯಶಸ್ವಿಯಾಗಿ ನೆರವೇರಿತ್ತು.
10:09 PM
ಚಂದ್ರಯಾನ ನೌಕೆಯಲ್ಲಿ ಇರಿಸಲಾಗಿದ್ದ ಎಲ್ 14 ಕೆಮರಾ ಚಂದ್ರ ಬಿಂಬವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು.
10:08 PM
ಆಗಸ್ಟ್ 20ರಂದು ಚಂದ್ರಯಾನ-2ರ ಮಹತ್ವದ ಹೆಜ್ಜೆಯಾಗಿ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಸಂಕೀರ್ಣ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತ್ತು. ಈ ಪಥ ಏರಿಸುವಿಕೆ ಪ್ರಕ್ರಿಯೆ 1738 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 48 ನಿಮಿಷಗಳಲ್ಲಿ ಪೂರ್ಣಗೊಂಡಿತ್ತು. ಈ ಮೂಲಕ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು.
10:05 PM
ಆಗಸ್ಟ್ 14ರಂದು ಚಂದ್ರಯಾನ-2 ನೌಕೆ ಚಂದ್ರನ ಪಥವನ್ನು ಪ್ರವೇಶಿಸಿತ್ತು.
10:03 PM
ಆಗಸ್ಟ್ 06ನೇ ತಾರೀಖಿನಂದು ಐದನೇ ಬಾರಿಗೆ ಭೂಕಕ್ಷೆ ಏರಿಸುವ ಕಾರ್ಯ ಸುಗಮವಾಗಿ ನಡೆದಿತ್ತು.
10:02 PM
ಆಗಸ್ಟ್ 4ನೇ ತಾರೀಖಿನಂದು ವಿಕ್ರಂ ಲ್ಯಾಂಡರ್ ಭೂಮಿಯ ಚಿತ್ರಗಳನ್ನು ಸೆರೆಹಿಡಿದು ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಿತ್ತು.
10:00 PM
ಬಳಿಕ ಜುಲೈ 26, 29ರಂದು ಮತ್ತು ಆಗಸ್ಟ್ 02ನೇ ತಾರೀಖುಗಳಂದು ಕ್ರಮವಾಗಿ ಚಂದ್ರಯಾನ-2 ನೌಕೆಯ ಎರಡನೇ, ಮೂರನೇ ಮತ್ತು ನಾಲ್ಕನೇ ಹಂತದ ಭೂಕಕ್ಷೆ ಏರಿಸುವ ಕಾರ್ಯ ಯಶಸ್ವಿಯಾಗಿತ್ತು.
09:59 PM
ಬಳಿಕ ಜುಲೈ 26ರಂದು ಎರಡನೇ ಬಾರಿಗೆ ನೌಕೆಯ ಭೂಕಕ್ಷೆ ಏರಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿತ್ತು.
09:57 PM
ಜುಲೈ24ರಂದು ಚಂದ್ರಯಾನ-2 ನೌಕೆಯನ್ನು ಭೂಕಕ್ಷೆಯಿಂದ ಏರಿಸುವ ಪ್ರಥಮ ಹಂತದ 48 ಸೆಕೆಂಡುಗಳ ಕಾರ್ಯಾಚರಣೆಯನ್ನು ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಡೆಸಿದ್ದರು.
09:53 PM
GSLV MK III-M1 ಮೂರು ಹಂತಗಳನ್ನು ಹೊಂದಿದ್ದು ಒಟ್ಟು 43.3 ಮೀಟರ್ ಎತ್ತರದ ರಾಕೆಟ್ ಇದಾಗಿತ್ತು. 3850 ಕೆ.ಜಿ. ತೂಕವಿದ್ದ ಈ ರಾಕೆಟ್ ಉಡ್ಡಯನಗೊಂಡ 16 ನಿಮಿಷಗಳಲ್ಲಿ ಭೂಕಕ್ಷೆಯನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.
09:52 PM
ಜುಲೈ 22ರ ಸೋಮವಾರ ಮಧ್ಯಾಹ್ನ 2.43ರ ಸುಮಾರಿಗೆ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ವಾಹನವನ್ನು ಹೊತ್ತ ‘ಬಾಹುಬಲಿ’ ಹೆಸರಿನ GSLV MK III-M1 ರಾಕೆಟ್ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಆಗಸಕ್ಕೆ ಚಿಮ್ಮಿತ್ತು.
09:45 PM
ಬಳಿಕ ಜುಲೈ 22ರಂದು ಚಂದ್ರಯಾನ -2ರ ಮರು ಉಡ್ಡಯನ ನಿಗದಿಯಾಗಿತ್ತು.
09:44 PM
ಜುಲೈ 15ರಂದು ನಿಗದಿಯಾಗಿದ್ದ ಚಂದ್ರಯಾನ-2ರ ರಾಕೆಟ್ ಉಡ್ಡಯನ ಕಾರ್ಯ ತಾಂತ್ರಿಕ ಕಾರಣಗಳಿಂದಾಗಿ ರದ್ದುಗೊಂಡಿತ್ತು.
09:41 PM
ಚಂದ್ರಯಾನ 2ರಲ್ಲಿ ಕಳುಹಿಲ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಇಸ್ರೋ ಸಜ್ಜು.