07:37 PM
ಮಣಿಪುರದಲ್ಲಿ ಬಿಜೆಪಿಗೆ ಸಲಾಂ 60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಸಂಯುಕ್ತ ಜನತಾ ದಳ 6 ಸ್ಥಾನ, ಕಾಂಗ್ರೆಸ್ 4, ಕುಕಿ ಪೀಪಲ್ಸ್ ಮೈತ್ರಿಕೂಟ 2 , ನಾಗಾ ಪೀಪಲ್ಸ್ ಫ್ರಂಟ್ 5 , ಎಂಪಿಪಿ 8 ಮತ್ತು ಪಕ್ಷೇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ.
07:27 PM
403 ಸದಸ್ಯ ಬಲದ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದ್ದು, ಮಿತ್ರ ಪಕ್ಷಗಳು ಹಲವು ಸ್ಥಾನಗಳಲ್ಲಿ ಗೆದ್ದಿವೆ. ಬಿಜೆಪಿ 252 ಸ್ಥಾನ ಗೆದ್ದಿದ್ದು, ಪ್ರಮುಖ ವಿಪಕ್ಷ ಅಖಿಲೇಶ್ ಯಾದವ್ ಅವರ ನಾಯಕತ್ವದ ಸಮಾಜವಾದಿ ಪಕ್ಷ 114 ಸ್ಥಾನ ಗೆದ್ದಿದೆ.
07:27 PM
ಸಿಖ್ಭರ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ದೈತ್ಯ ಶಕ್ತಿಯಾಗಿ ಹೊರ ಹೊಮ್ಮಿದೆ. 117 ಸ್ಥಾನಗಳ ಪೈಕಿ ಭಗವಂತ್ ಮಾನ್ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದ ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ
07:26 PM
ಉತ್ತರಾಖಂಡದದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ 70 ಸ್ಥಾನಗಳ ಪೈಕಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಭರ್ಜರಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ಅಚ್ಚರಿಯೆಂದರೆ ಮತದಾರರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸೋಲು ಉಣಿಸಿದ್ದಾರೆ. ಸದ್ಯ ಯಾರು ಮುಂದಿನ ಸಿಎಂ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದು ಪ್ರಮುಖ ವಿಪಕ್ಷವಾಗಿದೆ. ಬಿಎಸ್ ಪಿ 2, ಪಕ್ಷೇತರರು 2 ಸ್ಥಾನಗಳನ್ನು ಗೆದ್ದಿದ್ದಾರೆ.
07:26 PM
40 ಸದಸ್ಯ ಬಲದ ಗೋವಾ ದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿದ್ದು, ಸರಕಾರ ರಚಿಸಲಿದೆ. ಬಿಜೆಪಿಗೆ ಮೂವರು ಇತರರು ಈಗಾಗಲೇ ಬೆಂಬಲ ವ್ಯಕ್ತಪಡಿಸಿದ್ದು, ಪ್ರಮೋದ್ ಸಾವಂತ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್ 11 , ಆಮ್ ಆದ್ಮಿ ಪಕ್ಷ 2 , ಪಕ್ಷೇತರರು 3 , ಎಂಜಿಪಿ 2 ಮತ್ತು ಆರ್ ಜಿಪಿ 1 ಸ್ಥಾನ ಗೆದ್ದಿದೆ.
06:10 PM
ರಾಜ್ಯದ ವೈಶಾಲ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಯುಪಿ ಮೇಲೆ ಕಣ್ಣಿಟ್ಟಿದ್ದರು. ನಮ್ಮನ್ನು ಬಹುಮತದಿಂದ ಗೆಲ್ಲಿಸಿರುವ ಜನರಿಗೆ ನಾನು ಕೃತಜ್ಞನಾಗಿದ್ದೇನೆ.ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಯುಪಿ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಸರ್ಕಾರವನ್ನು ರಚಿಸುತ್ತೇವೆ:ಸಿಎಂ ಯೋಗಿ ಆದಿತ್ಯನಾಥ್
06:09 PM
70 ಸದಸ್ಯಬಲದ ಉತ್ತರಾಖಂಡ್ ವಿಧಾನಸಭೆಯ ಚುನಾವಣೆಯ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ದವಾಗಿದೆ. ಆದರೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಪರಾಜಯಗೊಂಡಿದ್ದಾರೆ.
05:54 PM
ಉತ್ತರಾಖಂಡ ಅಧಿಕೃತ ಟ್ರೆಂಡ್‌ಗಳು: ಬಿಜೆಪಿ 20 ಗೆದ್ದು 27ರಲ್ಲಿ ಮುನ್ನಡೆ, ಕಾಂಗ್ರೆಸ್ 6 ಗೆದ್ದು 13ರಲ್ಲಿ ಮುನ್ನಡೆ, ಬಿಎಸ್‌ಪಿ 1 ಗೆದ್ದು ಇನ್ನೊಂದರಲ್ಲಿ ಮುನ್ನಡೆ, ಸ್ವತಂತ್ರರು 2 ಕಡೆಗಳಲ್ಲಿ ಮುನ್ನಡೆ.
05:17 PM
ಪಂಜಾಬ್‌ನ ಮೋಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್ ಅವರನ್ನು ಎಎಪಿಯ ಡಾ.ಅಮನ್‌ದೀಪ್ ಕೌರ್ ಅರೋರಾ 20,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
05:13 PM
ನಾವು ಈ ದೇಶದ ರಾಜಕೀಯವನ್ನು ಬದಲಾಯಿಸುತ್ತೇವೆ: ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್
05:11 PM
ಹಾಲಿ ಮುಖ್ಯಮಂತ್ರಿ ಬಿಜೆಪಿಯ ಎನ್ ಬಿರೇನ್ ಸಿಂಗ್ ಅವರು ಹೀಂಗಾಂಗ್ ಕ್ಷೇತ್ರದಿಂದ 17,000 ಮತಗಳ ಅಂತರದಿಂದ ಕಾಂಗ್ರೆಸ್ ಪ್ರತಿಸ್ಪರ್ಧಿ ಪಂಗೀಜಂ ಶರತ್ಚಂದ್ರ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ.
05:10 PM
ಫಲಿತಾಂಶಗಳು ತುಂಬಾ ಆಶ್ಚರ್ಯಕರ ದೊಡ್ಡ ಹಣದುಬ್ಬರದ ನಂತರ, ಇದು ಸಾರ್ವಜನಿಕರ ಆದೇಶವಾಗಿದ್ದರೆ, ಸಾರ್ವಜನಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ವ್ಯಾಖ್ಯಾನ ಏನು ಎಂದು ನನಗೆ ಅರ್ಥವಾಗುತ್ತಿಲ್ಲ- ಹರೀಶ್ ರಾವತ್
05:09 PM
"ಹಿಂದೂ-ಮುಸ್ಲಿಂ-ಸಿಖ್-ಇಸೈ ಸಬ್ಕೆ ಸಬ್ ಹೇ ಭಾಜಪೇಯಿ." ತುಷ್ಟೀಕರಣ ರಾಜಕಾರಣ, ಜಾತಿಯ ಆಧಾರದ ಮೇಲೆ ರಾಜ್ಯವನ್ನು ವಿಭಜಿಸಿದ ಎಲ್ಲರಿಗೂ ಇದು ಉತ್ತರವಾಗಿದೆ- ಬಿಜೆಪಿ ನಾಯಕಿ ಅಪರ್ಣಾ ಯಾದವ್
05:07 PM
ಉತ್ತರಾಖಂಡ ಸಿಎಂಪುಷ್ಕರ್ ಸಿಂಗ್ ಧಾಮಿ ಗೆ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 6,900 ಮತಗಳಿಂದ ಹಿನ್ನಡೆ. ಡೆಹ್ರಾಡೂನ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಸಿಎಂ
05:05 PM
ವಿವಿಧ ಪಕ್ಷಗಳ ನಡುವಿನ ಮತಗಳ ವಿಭಜನೆಯು ನಮ್ಮ ಸಂಖ್ಯೆಯು ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿದೆ-ಗೋವಾ ಕಾಂಗ್ರೆಸ್ ಉಸ್ತುವಾರಿ ಚಿದಂಬರಂ
03:35 PM
ನಾನು ರಾಜ್ಯವಾರು ಪ್ರಚಾರ ಮಾಡುವಲ್ಲಿ ಮಗ್ನನಾಗಿ ನನ್ನ ಸ್ವಂತ ಕ್ಷೇತ್ರವನ್ನು ತಲುಪಲು ಸಾಧ್ಯವಾಗದ ಕಾರಣ ಕಡಿಮೆ ಅಂತರದಲ್ಲಿ ಗೆದ್ದಿದ್ದೇನೆ ಆದರೆ ಬಿಜೆಪಿ ಬಹುಮತದಿಂದ ಗೆದ್ದಿದೆ. ಇದು ದೊಡ್ಡ ವಿಷಯ. 20 ಸ್ಥಾನಗಳು ದೃಢಪಟ್ಟಿವೆ, 3 ಇತರರು ತಮ್ಮ ಬೆಂಬಲವನ್ನು ದೃಢಪಡಿಸಿದ್ದಾರೆ - ಗೋವಾ ಸಿಎಂ ಪ್ರಮೋದ್ ಸಾವಂತ್
03:18 PM
ಸುಖಬೀರ್ ಸಿಂಗ್ ಬಾದಲ್ , ಕ್ಯಾಪ್ಟನ್ ಸಾಹಬ್ , ಚನ್ನಿ ಸಾಹಬ್, ಪ್ರಕಾಶ್ ಸಿಂಗ್ ಬಾದಲ್, ನವಜೋತ್ ಸಿಂಗ್ ಸಿಧು , ಬಿಕ್ರಮ್ ಸಿಂಗ್ ಮಜಿಥಿಯಾ ಸೋತರು, ಪಂಜಾಬ್ ಅದ್ಭುತ ಸಾಧನೆ ಮಾಡಿದೆ-ಕೇಜ್ರಿವಾಲ್
02:50 PM
ಭಗತ್ ಸಿಂಗ್ ಅವರ ಗ್ರಾಮ ಖಟ್ಕರ್‌ಕಾಲನ್‌ನಲ್ಲಿ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ, ರಾಜಭವನದಲ್ಲಿ ಅಲ್ಲ: ಭಗವಂತ್ ಮಾನ್
02:42 PM
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರ ನಗರದಿಂದ 40,144 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಎಣಿಕೆ ಮುಂದುವರಿದಿದೆ.
02:40 PM
ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮತ್ತು ಅವರ ತಾಯಿ ಹರ್ಪಾಲ್ ಕೌರ್ ಅವರು ಸಂಗ್ರೂರ್‌ನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸ್ವಾಗತಿಸುತ್ತಿರುವಾಗ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡರು.
02:38 PM
ಮಣಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಇಂಫಾಲ್‌ನಲ್ಲಿರುವ ಸಿಎಂ ಎನ್ ಬಿರೇನ್ ಸಿಂಗ್ ಅವರ ನಿವಾಸದಲ್ಲಿ ಸಂಭ್ರಮಾಚರಣೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೀಂಗಾಂಗ್ ನಲ್ಲಿ 18,271 ಮತಗಳಿಂದ ಮುನ್ನಡೆ.
02:37 PM
ಮಾಜಿ ಸಿಎಂ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಸಂಸ್ಥಾಪಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಟಿಯಾಲದಿಂದ 19,873 ಮತಗಳ ಅಂತರದಿಂದ ಸೋತಿದ್ದಾರೆ.
02:25 PM
ನಾವು ಪೂರ್ಣ ಹೃದಯದಿಂದ ಮತ್ತು ಸಂಪೂರ್ಣ ನಮ್ರತೆಯಿಂದ ಪಂಜಾಬಿಗಳು ನೀಡಿದ ಆದೇಶವನ್ನು ಸ್ವೀಕರಿಸುತ್ತೇವೆ- ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್
02:23 PM
ಉತ್ತರಾಖಂಡದಲ್ಲಿ ಭರ್ಜರಿ ಬಹುಮತ ಪಡೆಯುವತ್ತ ಬಿಜೆಪಿ . 47 ಸ್ಥಾನಗಳಲ್ಲಿ ಮುನ್ನಡೆ, ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಮುನ್ನಡೆ.
02:15 PM
ಪಂಜಾಬ್ ನಲ್ಲಿ ಎಎಪಿ ಭರ್ಜರಿ ಜಯ ಸಾಧಿಸಿದ ಬಳಿಕ ದೆಹಲಿ ಸಿಎಂ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರೊಂದಿಗೆ ದೆಹಲಿಯ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
01:59 PM
ಗೋವಾದ ಬಿಜೆಪಿ ಅಭ್ಯರ್ಥಿಗಳಾದ ವಾಳಪೈ ಕ್ಷೇತ್ರದಲ್ಲಿ ವಿಶ್ವಜಿತ್ ರಾಣೆ, ಪರ್ಯೆ ಕ್ಷೇತ್ರದಲ್ಲಿ ಪತ್ನಿ ದಿವ್ಯಾ ರಾಣೆ ದಂಪತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ.
01:37 PM
ಗೋವಾದಲ್ಲಿ ಎಎಪಿ ಎರಡು ಸ್ಥಾನಗಳನ್ನು ಗೆದ್ದಿದೆ. ಕ್ಯಾಪ್ಟನ್ ವೆಂಜಿ ಮತ್ತು ಎರ್ ಕ್ರೂಜ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿಯಾಗಿದೆ- ಅರವಿಂದ್ ಕೇಜ್ರಿವಾಲ್ ಟ್ವೀಟ್
01:35 PM
ಶಿರೋಮಣಿ ಅಕಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಪಂಜಾಬ್‌ನ ಲಂಬಿ ಕ್ಷೇತ್ರದಿಂದ ಭಾರಿ ಹಿನ್ನಡೆ ಅನುಭವಿಸಿದ್ದಾರೆ.
01:31 PM
ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಜಲಾಲಾಬಾದ್ ಕ್ಷೇತ್ರದಿಂದ 10,526 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ.
01:29 PM
"ಜನರ ಧ್ವನಿಯು ದೇವರ ಧ್ವನಿಯಾಗಿದೆ ... ಪಂಜಾಬ್ ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸಿ ... ಆಪ್ ಗೆ ಅಭಿನಂದನೆಗಳನ್ನು ಸಲ್ಲಿಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು
01:27 PM
ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 1 ಸ್ಥಾನ ಗೆದ್ದು ,ಕ್ರಮವಾಗಿ 18 ಮತ್ತು 10ರಲ್ಲಿ ಮುನ್ನಡೆ ಸಾಧಿಸಿವೆ.
01:15 PM
ಈ ಗೆಲುವಿನ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ, ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ- ಗೋವಾ ಸಿಎಂ ಪ್ರಮೋದ್ ಸಾವಂತ್
01:14 PM
ಅಧಿಕೃತ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ಭದೌರ್ (22,843 ಮತಗಳಿಂದ) ಮತ್ತು ಚಮ್ಕೌರ್ ಸಾಹಿಬ್ (2671 ಮತಗಳಿಂದ) ಹಿನ್ನಡೆಯಲ್ಲಿದ್ದಾರೆ.
01:11 PM
ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು,ನಾವು ಪ್ರತಿಯೊಂದು ಅಭಿವೃದ್ಧಿಯ ಅಂಶಗಳಿಗಾಗಿ ಕೆಲಸ ಮಾಡಿದ್ದೇವೆ, ಅದಕ್ಕಾಗಿಯೇ ಸಾರ್ವಜನಿಕರು ನಮ್ಮನ್ನು ನಂಬುತ್ತಾರೆ.ಬುಲ್ಡೋಜರ್ ಮುಂದೆ ಯಾವುದೂ ಬರುವುದಿಲ್ಲ, ಅದು ಸೈಕಲ್ ಆಗಿರಲಿ ಅಥವಾ ಇನ್ನೇನೇ ಇರಲಿ ಎಲ್ಲವನ್ನೂ ಒಂದು ನಿಮಿಷದಲ್ಲಿ ಮುಗಿಸುತ್ತದೆ: ಬಿಜೆಪಿ ಸಂಸದೆ ಹೇಮಾ ಮಾಲಿನಿ
01:09 PM
ಪಣಜಿಯಲ್ಲಿ ಭಾರಿ ಬಿಜೆಪಿಗೆ ಸ್ಪರ್ಧೆಯೊಡ್ಡಿದ ಉತ್ಪಲ್ ಪರ್ರಿಕರ್ ಗೆ ಹಾಲಿ ಶಾಸಕರಾಗಿದ್ದ ಮಾನ್ಸೆರಾತ್ ವಿರುದ್ಧ 713 ಮತಗಳಿಂದ ಸೋಲು.
12:54 PM
ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿರಾಶೆಯಾಗಿದೆ. ಬಿಜೆಪಿ ಕಾರ್ಯಕರ್ತರು ನನಗಾಗಿ ಕೆಲಸ ಮಾಡಿಲ್ಲ ಎಂದು ಗೋವಾದ ಪಣಜಿ ಕ್ಷೇತ್ರದ ವಿಜೇತ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರೇಟ್ ಹೊಸ ಬಾಂಬ್ ಸಿಡಿಸಿದ್ದಾರೆ.
12:46 PM
ಪ್ರಧಾನಿ ಮೋದಿ ಮತ್ತು ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ, ನಾವು ಉತ್ತರಾಖಂಡದ ಜನರಿಗೆ ಕಲ್ಯಾಣ ನೀತಿಗಳನ್ನು ನೀಡಿದ್ದೇವೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಪಡೆದಿದ್ದೇವೆ: ಡೆಹ್ರಾಡೂನ್‌ನಲ್ಲಿ ಸಚಿವ ಪ್ರಹ್ಲಾದ್ ಜೋಶಿ
12:38 PM
ಐದು ರಾಜ್ಯಗಳಲ್ಲಿ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ವಿಜಯೋತ್ಸವ ಮೆರವಣಿಗೆಗೆ ವಿಧಿಸಿದ್ದ ನಿಷೇಧವನ್ನು ಚುನಾವಣಾ ಆಯೋಗ ಗುರುವಾರ ಹಿಂಪಡೆದಿದೆ.
12:33 PM
ಗೋರಖ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಮುನ್ನಡೆ.
12:30 PM
ಅಸ್ಸಾಂನ ಮಜುಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಭುವನ್ ಗಾಮ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ನ ಚಿತ್ತರಂಜನ್ ಬಸುಮತರಿ ಅವರಿಗಿಂತ ಸುಮಾರು 17,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
12:29 PM
ಜನರು ವಂಶಾಡಳಿತ ರಾಜಕಾರಣವನ್ನು ತಿರಸ್ಕರಿಸಿ, ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ಬಿಎಸ್‌ಪಿ ಈ ಸ್ಥಿತಿಗೆ ತಲುಪುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಸಮಾಜವಾದಿ ಪಕ್ಷವೂ ಜಾಣತನದಿಂದ ಹೋರಾಟ ನಡೆಸಿತ್ತು. ರಾಜಕೀಯ ಪಕ್ಷಗಳು ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು ಎಂದು ನಾನು ಹೇಳಲು ಬಯಸುತ್ತೇನೆ: ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
12:28 PM
ಉಪಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರಾಥು ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.
12:19 PM
ಸಂಗ್ರೂರಿನ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ನಿವಾಸದಲ್ಲಿ ಜಿಲೇಬಿ ತಯಾರಿ, ಹೂವಿನ ಅಲಂಕಾರ ಮಾಡಲಾಗುತ್ತಿದೆ.
12:14 PM
ಸ್ವತಂತ್ರ ಅಭ್ಯರ್ಥಿಯಾಗಿ ಇದು ಉತ್ತಮ ಹೋರಾಟವಾಗಿದೆ, ಜನರಿಗೆ ನನ್ನ ಧನ್ಯವಾದಗಳು. ಹೋರಾಟದ ಬಗ್ಗೆ ತೃಪ್ತಿ ಇದೆ ಆದರೆ ಫಲಿತಾಂಶ ಸ್ವಲ್ಪ ನಿರಾಶಾದಾಯಕವಾಗಿದೆ ಎಂದು ದಿವಂಗತ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಮತ ಎಣಿಕೆ ಕೇಂದ್ರದಿಂದ ಹೊರನಡೆದಿದ್ದಾರೆ.
12:13 PM
ಉತ್ತರಪ್ರದೇಶ : ಸಮಾಜವಾದಿ ಪಕ್ಷದ ಅಜಂ ಖಾನ್ ರಾಂಪುರ ಕ್ಷೇತ್ರದಿಂದ ಮುನ್ನಡೆ; ಸ್ವಾಮಿ ಪ್ರಸಾದ್ ಮೌರ್ಯ ಫಾಜಿಲ್‌ನಗರದಿಂದ ಹಿಂದುಳಿದಿದ್ದಾರೆ.
12:11 PM
ಉತ್ತರಪ್ರದೇಶ ಚುನಾವಣೆ 2022: ಜಹೂರಾಬಾದ್ ಕ್ಷೇತ್ರದಿಂದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಒಪಿ ರಾಜ್‌ಭರ್ ಮುನ್ನಡೆ.
12:10 PM
ಹರಿದ್ವಾರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪುತ್ರಿ ಅನುಪಮಾ ರಾವತ್ ಮುನ್ನಡೆ ಸಾಧಿಸಿದ್ದಾರೆ
11:56 AM
ಉತ್ತರಾಖಂಡ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಹರೀಶ್ ರಾವತ್ ಅವರು ಲಾಲ್ಕುವಾದಲ್ಲಿ 10,000 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ.
11:55 AM
ಇನ್ನು ಮುಂದೆ ಪಂಜಾಬ್ ಅನ್ನು 'ಉಡ್ತಾ ಪಂಜಾಬ್' ಎಂದು ಕರೆಯಲಾಗುವುದಿಲ್ಲ, ಆದರೆ 'ಉತ್ತ ಪಂಜಾಬ್'... ಎಲ್ಲಾ ಕ್ರೆಡಿಟ್ ಆಪ್ ಕಾರ್ಯಕರ್ತರಿಗೆ ಸಲ್ಲುತ್ತದೆ. ಸರಕಾರ ಪ್ರಗತಿಪರವಾಗಿ ಎಲ್ಲರಿಗೂ ಕೆಲಸ ಮಾಡುತ್ತದೆ: ಆಪ್ ಪಂಜಾಬ್ ಸಹ-ಪ್ರಭಾರ ರಾಘವ್ ಚಡ್ಡಾ.
11:53 AM
ಪಂಜಾಬ್ ಕೇಜ್ರಿವಾಲ್ ಮಾದರಿ ಆಡಳಿತಕ್ಕೆ ಅವಕಾಶ ನೀಡಿದೆ. ಇಂದು ಅವರ ಆಡಳಿತ ಮಾದರಿ ರಾಷ್ಟ್ರಮಟ್ಟದಲ್ಲಿ ನೆಲೆಯೂರಿದೆ. ಇದು 'ಆಮ್ ಸಾಮಾನ್ಯ ವ್ಯಕ್ತಿಯ ವಿಜಯವಾಗಿದೆ: ಮನೀಶ್ ಸಿಸೋಡಿಯಾ
11:49 AM
ಪಂಜಾಬ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಎಂ ಚೆನ್ನಿ, ನವಜ್ಯೋತ್ ಸಿಂಗ್ ಸಿಧು ಇಬ್ಬರಿಗೂ ಹಿನ್ನಡೆ.
11:47 AM
ಪಂಜಾಬ್ ನಲ್ಲಿ ಐತಿಹಾಸಿಕ ದಾಖಲೆಯ ಗೆಲುವಿನತ್ತ, ದೆಹಲಿಯಲ್ಲೂ ಆಮ್ ಆದ್ಮಿ ಕಾರ್ಯಕರ್ತರ ಸಂಭ್ರಮಾಚರಣೆ.
11:45 AM
ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಮೊದಲ ಅಧಿಕೃತ ಗೆಲುವು ಪ್ರಕಟ. ಬಿಜೆಪಿ ಅಭ್ಯರ್ಥಿ ಅಶ್ವಿನಿ ಶರ್ಮಾ ಗೆಲುವು.
11:38 AM
ಉತ್ತರಾಖಂಡದಲ್ಲಿ ಬಿಜೆಪಿ ಆತಂಕ ದೂರ ಸ್ಪಷ್ಟ ಬಹುಮತ ಸಿಗುವ ಸಂಭವ. 44 ಸ್ಥಾನಗಲ್ಲಿ ಮುನ್ನಡೆ, ಮ್ಯಾಜಿಕ್ ನಂಬರ್ 36.
11:35 AM
ಸಂಜೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ.
11:32 AM
ಇವಿಎಂ ನಲ್ಲಿ ಮೋಸ ಆಗಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ. ಬಿಜೆಪಿ ವಿರುದ್ಧ ಆಕ್ರೋಶ.
11:30 AM
ಭಾರಿ ಹಿನ್ನಡೆ ಬಳಿಕ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚೆನ್ನಿ ರಾಜಭವನದತ್ತ. ಕಾಂಗ್ರೆಸ್ ಪಕ್ಷದಲ್ಲಿ ಆವರಿಸಿದ ನಿರಾಸೆಯ ಕಾರ್ಮೋಡ.
11:28 AM
ಭಾರಿ ನಿರೀಕ್ಷೆ ಮೂಡಿಸಿದ್ದ ಪಣಜಿಯಲ್ಲಿ ಉತ್ಪಲ್ ಪರ್ರಿಕರ್ ಅವರಿಗೆ ಹಿನ್ನಡೆ, ಮುನ್ನಡೆ ಕಾಯ್ದು ಕೊಂಡಿರುವ ಬಿಜೆಪಿ ಅಭ್ಯರ್ಥಿ ಮೊನ್ಸೆರಾಟ್.
11:25 AM
ಪ್ರಬಲ ಪಕ್ಷಗಳಾಗಿದ್ದ ಕಾಂಗ್ರೆಸ್ ಮತ್ತು ಬಿಎಸ್ ಪಿ ಗೆ ಭಾರಿ ಹಿನ್ನಡೆ. ಉತ್ತರ ಪ್ರದೇಶದಲ್ಲಿ ತಲಾ ನಾಲ್ಕು ಸ್ಥಾನಗಳಲ್ಲಿ ಮಾತ್ರ ಮುನ್ನಡೆ.
11:23 AM
ಸಿಎಂ ಯೋಗಿ ಸ್ವಕ್ಷೇತ್ರ ಗೋರಖ್ ಪುರದಲ್ಲಿ ಕೇಸರಿ ಪಡೆ ಕಾರ್ಯಕರ್ತರಿಂದ ಸಂಭ್ರಮಾಚರಣೆ. ಬುಲ್ಡೋಜರ್ ಆಟಿಕೆ ಪ್ರದರ್ಶನ.