02:43 PM
ಹಲವು ಯೋಜನೆಗಳ ಘೋಷಣೆಗಳೊಂದಿಗೆ ಸುದೀರ್ಘ್ ಬಜೆಟ್ ಭಾಷಣ ಮುಗಿಸಿದ ಸಿಎಂ ಬೊಮ್ಮಾಯಿ ,ಸದನದ ಬಜೆಟ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ.
02:36 PM
ತೆರಿಗೆ ವ್ಯವಸ್ಥೆ , ಜನ ಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಕಡಿಮೆ ಮಾಡಲಾಗಿದ್ದು, ಅದನ್ನೂ ಹೆಚ್ಚಿಸುವುದಿಲ್ಲ.
02:36 PM
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆದ್ಯತೆಯಲ್ಲಿ ಕೆಲಸ. ಶಿಕ್ಷಣಕ್ಕೆ ಪ್ರಾಮುಖ್ಯತೆ,ಮಹಿಳೆಯರ ಉದ್ಯೋಗಾವಕಾಶಕ್ಕೆ ಆದ್ಯತೆ, ಅಪೌಷ್ಟಿಕತೆ ನಿರ್ಮೂಲನೆ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ.
02:30 PM
200 ಕನ್ನಡ ಚಲನ ಚಿತ್ರಗಳಿಗೆ ವಾರ್ಷಿಕ ಪ್ರೋತ್ಸಾಹ.ಕಾನೂನು ಸುವ್ಯವಸ್ಥೆ ಬಲ ಪಡಿಸಲು ಕ್ರಮ, ನೂತನ ಮಹಿಳಾ ಕೆ ಎಸ್ ಆರ್ ಪಿ ಘಟಕ . ಬಂಧಿಕಾನೆ ಅಭಿವೃದ್ಧಿ ಮಂಡಳಿ ರಚನೆ. ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಗಳ ಅಳವಡಿಕೆ.
02:28 PM
ದೇವಾಲಯದ ಅರ್ಚಕರಿಗೆ ತಸ್ತಿಕ್ ಹೆಚ್ಚಳ. ಆಡಳಿತ ವ್ಯವಸ್ಥೆ ಸುಧಾರಣೆಗೆ ಎರಡನೇ ಆಡಳಿತ ಸುಧಾರಣಾ ಆಯೋಗ ರಚನೆ.
02:26 PM
ಕೋವಿಡ್ ಯಶಸ್ವಿ ನಿರ್ವಹಣೆ ಮಾಡಿದ್ದೇವೆ. ಅವಿವಾಹಿತ, ವಿಚ್ಛೇಧಿತ ಮಹಿಳೆಯರಿಗೆ ಮಾಸಾಶನ ಹೆಚ್ಚಳ. ಬಿಬಿಎಂಪಿ ಮತ್ತು ಎಲ್ಲಾ ಕಡೆ ನಕಲಿ ತಡೆಗೆ ಕ್ರಮ. ಶ್ರೀ ಶೈಲ ದಲ್ಲಿ ಯಾತ್ರಿ ನಿವಾಸ ಸಂಕೀರ್ಣ, ಪಂಡರಾಪುರದಲ್ಲಿ ವಸತಿಗೃಹಗಳು.
02:23 PM
ಟೂರಿಸ್ಟ್ ಗೈಡ್ ಗಳಿಗೆ ಎರಡು ಸಾವಿರ ಪ್ರೋತ್ಸಾಹ ಧನ. ಹಸಿರು ಆಯೋಗ ಎಕೋ ಬಜೆಟ್ , ನೂರು ಕೋಟಿ ರೂ. ಅನುದಾನ. ಶ್ರೀಗಂಧ ಬೆಳೆಯಲು ಅನುಮತಿ, ಸಾಗಾಟ ಪ್ರಕ್ರಿಯೆಯಲ್ಲಿ ಸಡಿಲಿಕೆ. ಖಾಸಗಿ ಭೂಮಿ ಮರ ಕಡಿಯುವ ಮತ್ತು ಸಾಗಾಣಿಕೆ ಸಡಿಲಿಕೆ. ಇಳಕಲ್ ನಲ್ಲಿ ಪಕ್ಷಿಧಾಮ.
02:20 PM
ಪ್ರವಾಸೋದ್ಯಮ ಅಭಿವೃದ್ಧಿ, ಶಿವಮೊಗ್ಗದ ಜೋಗ ಜಲಪಾತದಲ್ಲಿ , ಯಾಣ ದಲ್ಲಿ ರೋಪ್ ವೇ ನಿರ್ಮಾಣ. ಮೈಸೂರು ಚಾಮುಂಡಿ, ದತ್ತಪೀಠದಲ್ಲಿ ರೋಪ್ ವೇ. ಕಡಲ ತಡಿಯಲ್ಲಿ ಸಿ ಆರ್ ಝೆಡ್ ಸಡಿಲಿಕೆಗೆ ಒತ್ತು.
02:18 PM
ಪೆ ಅಂಡ್ ಪ್ಲೇ ಉತ್ತೇಜನ, ಸಾಹಸ ಕ್ರೀಡೆಗಳಿಗೆ ಉತ್ತೇಜನ. ನೇತಾಜಿ ಬೋಸ್ 125 ನೇ ಜನ್ಮ ದಿನಾಚರಣೆ NCC ವಿಶೇಷ ತರಬೇತಿ .
02:17 PM
ಕಾಸರಗೋಡಿನಲ್ಲಿ, ಗೋವಾದಲ್ಲಿ ಕನ್ನಡ ಭವನಗಳ ನಿರ್ಮಾಣ. ಸ್ವಾಮೀ ವಿವೇಕಾನಂದ ಸ್ವಯಂ ಸೇವಾ ಗುಂಪುಗಳ ನಿರ್ಮಾಣ. ನೂರು ಯುವ ಜನರಿಗೆ ಪೈಲಟ್ ತರಬೇತಿ.
02:15 PM
ನಮ್ಮ ನಾಡು ನಮ್ಮ ಸಂಸ್ಕ್ರತಿ, ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜನೆ.
02:14 PM
ಬೆಂಗಳೂರು ಹೃದಯ ಭಾಗದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ಪೋ ನಿರ್ಮಾಣ. ಬಿ.ಉಪನಗರ ರೈಲ್ವೇ ಯೋಜನೆ. ಕಾವೇರಿ ನೀರು ಸರಬರಾಜು ಯೋಜನೆಗೆ ವೇಗ. ಪೀಣ್ಯ ದಲ್ಲಿ ಕೈಗಾರಿಕಾ ಪಾರ್ಕ್ , 5000 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಬೆಂಗಳೂರಿನಲ್ಲಿ ನಿರ್ಮಾಣ.
02:10 PM
ಬನಶಂಕರಿಯಲ್ಲಿ ಸ್ಕೈ ವಾಕ್ ,ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ. ಕಾಮಗಾರಿಗೆ ಚಾಲನೆ. ಗುರುಗುಂಟೆ ಪಾಳ್ಯದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಕ್ರಮ. ಆಧುನಿಕ ಸ್ಮಾರ್ಟ್ ಸಿಟಿ ನಿರ್ಮಾಣ
02:08 PM
ನೋಡಿ ಕಲಿ ಮಾಡಿ ತಿಳಿ ವಿದ್ಯಾರ್ಥಿಗಳಿಗೆ ಲ್ಯಾಬ್ ಇನ್ ಎ ಕಿಟ್ ವಿತರಣೆ. ಬೆಂಗಳೂರು ನಗರಕ್ಕೆ ಸಂಚಾರಕ್ಕೆ ಮೆಟ್ರೋ ತುರ್ತು ಅನುಷ್ಠಾನ. ಸೌಂದರ್ಯ ವೃದ್ಧಿಗೆ ಒತ್ತು. ರಸ್ತೆ, ಕೆರೆ, ಉದ್ಯಾನವನಗಳ ಅಭಿವೃದ್ಧಿ , ನಮ್ಮ ಮೆಟ್ರೋ ಹೊಸ ಮಾರ್ಗ ಸೇರ್ಪಡೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕಾಮಗಾರಿಗೆ ವೇಗ
02:04 PM
ಮಂಡ್ಯದ ಮೈ ಶುಗರ್ ಕಾರ್ಖಾನೆ ಪುನಶ್ಚೇತನ. ರಾಜ್ಯದ ವಿವಿಧೆಡೆ ಜವಳಿ ಪಾರ್ಕ್ ಗಳ ನಿರ್ಮಾಣ
02:04 PM
ಎಫ್ ಡಿ ಐ ನಲ್ಲಿ ಶೇ 40 ರಷ್ಟು ಆಕ್ರಮಿಸಿದ್ದು , ರಾಷ್ಟ್ರದಲ್ಲಿ ಆಗ್ರ ಸ್ಥಾನದಲ್ಲಿದೆ, ಸ್ಟಾರ್ಟ್ ಅಪ್ ಉತ್ತೇಜನಕ್ಕೆ ಇದು ಸಾಕ್ಷಿ.
02:01 PM
ಕೈಗಾರಿಕಾ ವಸತಿ ನಿಯಂತ್ರಣ , ತುಮಕೂರು, ಧಾರವಾಡ ವಿಶೇಷ ಆಧ್ಯತೆ. ಚಿನ್ನ, ಆಭರಣ ವೃದ್ಧಿಗೆ ೧೦ ಸಾವಿರ ಮಂದಿಗೆ ಉದ್ಯೋಗ ಲಭ್ಯ.
02:00 PM
ನವ ಕರ್ನಾಟಕ ದಿಂದ ನವ ಭಾರತ -ಪರಿಸರ ಸ್ನೇಹಿ ನವ ನಗರಗಳ ನಿರ್ಮಾಣ, ಆರ್ಥಿಕ ದುರ್ಬಲರ ಉದ್ಯಮ ಅಭಿವೃದ್ಧಿಗೆ ಉತ್ತೇಜನ.
01:58 PM
ಮೈಸೂರು ವಿಮಾನ ನಿಲ್ದಾಣ ರನ್ ವೇ ಅಭಿವೃದ್ಧಿ, ಹೆಲಿಪ್ಯಾಡ್ ಗಳ ಅಭಿವೃದ್ಧಿ, ಸಾರಿಗೆ ಅಗತ್ಯ ಪೂರೈಸಲು ವಾಟೆರ್ ವೇಸ್ ನಿರ್ಮಾಣ
01:57 PM
ಬಂದರು ಅಭಿವೃದ್ಧಿ ಸಾಗರ ಮಾಲಾ ಯೋಜನೆ- ಕಾರವಾರ ಬಂದರಿನ ವಿಸ್ತರಣೆ, ಬೈಂದೂರು ಮತ್ತು ಮಲ್ಪೆ ಪ್ರದೇಶದಲ್ಲಿ ಇನ್ನು ಕೆಲ ಬಂದರುಗಳ ನಿರ್ಮಾಣ
01:54 PM
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ, ಶಿಕ್ಷಣ, ಸಾಮಜಿಕ ಮತ್ತು ಮೈಕ್ರೋ ಯೋಜನೆಗಳಿಗೆ ಹಣ ಬಿಡುಗಡೆ ಯಾಗಿದೆ. 9 ನೂತನ ರೈಲು ಮಾರ್ಗಗಳು , ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ
01:53 PM
1600 ಕೋಟಿ ರೂ 22- 23 ರಲ್ಲಿ ಗ್ರಾಮೀಣ ರಸ್ತೆ ನೀರ್ಮಾಣಕ್ಕೆ ಮೀಸಲು, 100 ಕೋಟಿ ರೂ ಕೆರೆಗಳ ಅಭಿವೃದ್ಧಿಗೆ. ಗ್ರಾಮ ಪಂಚಾಯತಿ ಮೂಲಕ ಜನನ, ಮರಣ ಮತ್ತು ವಿವಾಹ ನೋಂದಣಿ
01:53 PM
ರಾಜ್ಯದ ಐಟಿ -ಬಿಟಿ ಉತ್ತೇಜನ, ಯುವಜನಾಂಗಕ್ಕೆ ಉದ್ಯೋಗ ನೀಡಲು ಕ್ರಮ.ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳಿಗೆ ನಳ ಸಂಪರ್ಕಕ್ಕೆ 7 ಸಾವಿರ ಕೋಟಿ ವೆಚ್ಚ
01:34 PM
ಪೊಲೀಸ್ ಗೃಹ ಯೋಜನೆಗೆ ಅನುದಾನ, ಇದಕ್ಕಾಗಿ 250 ಕೋಟಿ ರೂಪಾಯಿ ಅನುದಾನ. ಮೊಬಿಲಿಟಿ ಯೋಜನೆಗೆ 50 ಕೋಟಿ ರೂಪಾಯಿ, ಅಗ್ನಿಶಾಮಕ ಸಿಬಂದಿ ವಿಮೆ ಮೊತ್ತ ಹೆಚ್ಚಳ.
01:33 PM
ಅರ್ಚಕರ ತಸ್ತೀಕ್ 60 ಸಾವಿರ ರೂಪಾಯಿ. ಕೊಲ್ಲೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಮೇಲ್ ಮರವತ್ತೂರು ಪ್ರಯಾಣಕ್ಕೆ ಟ್ಯೂರ್ ಪ್ಯಾಕೇಜ್.
01:31 PM
ರಾಜ್ಯದಲ್ಲಿ ಮೊಹಲ್ಲಾ ಕ್ಲಿನಿಕ್.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ 100 ವಸತಿ ನಿಲಯ ಘೋಷಣೆ. ಪ್ರೌಢ ಮತ್ತು ಪಿಯು ಕಾಲೇಜು ಅಭಿವೃದ್ಧಿಗೆ 100 ಕೋಟಿ ರೂಪಾಯಿ.
01:29 PM
ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಕೆ, ನಿಗಮಗಳ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲು.
01:26 PM
ಪಡಿತರದಲ್ಲಿ 5ಕೆಜಿ ಅಕ್ಕಿ ಜತೆ 1ಕೆಜಿ ರಾಗಿ ಅಥವಾ ಜೋಳ ವಿತರಣೆ. ಇದರಿಂದ 4.34 ಕೋಟಿ ಫಲಾನುಭವಿಗಳಿಗೆ ಅನುಕೂಲ. 15 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ.
01:25 PM
ತುಮಕೂರಿನಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಾಮಾ ಸೆಂಟರ್. ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಿಜಿ ಆರಂಭ.
01:24 PM
ಹುಬ್ಬಳ್ಳಿಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆ. ಕಾಳಿ ನದಿಯಿಂದ ಕುಡಿಯುವ ನೀರು ಪೂರೈಕೆ. ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ನೀರು ಪೂರೈಕೆಯಾಗಲಿದೆ.
01:23 PM
ಮಕ್ಕಳ ಅಭಿವೃದ್ಧಿಗೆ 40.994 ಕೋಟಿ ರೂಪಾಯಿ ಅನುದಾನ, ಜವಳಿ ಪಾರ್ಕ್ ನಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.ನೀರಾವರಿ ಸೌಕರ್ಯಕ್ಕೆ 7000 ಕೋಟಿ ರೂಪಾಯಿ.
01:21 PM
ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್, 4 ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಆರಂಭಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಸಿದ್ದ ಉಡುಪು ಕಾರ್ಖಾನೆ ಸ್ಥಾಪನೆ.
01:20 PM
ನಗರಾಭಿವೃದ್ಧಿಗೆ 16,076 ಕೋಟಿ ರೂಪಾಯಿ, ಆರೋಗ್ಯ ಕ್ಷೇತ್ರಕ್ಕೆ 13982 ಕೋಟಿ ರೂಪಾಯಿ, ಬೆಂಗಳೂರು ಮೂಲಸೌಕರ್ಯಕ್ಕೆ 6000 ಕೋಟಿ ರೂಪಾಯಿ. 2022ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ.
01:18 PM
ಕೃಷಿ ಮತ್ತು ತೋಟಗಾರಿಕೆಗೆ 8,457 ಕೋಟಿ ರೂಪಾಯಿ, ಲೋಕೋಪಯೋಗಿ ಇಲಾಖೆಗೆ 10,447 ಕೋಟಿ ರೂಪಾಯಿ, ಜಲಸಂಪನ್ಮೂಲ ಇಲಾಖೆಗೆ 20,106 ಕೋಟಿ ರೂಪಾಯಿ
01:17 PM
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂಪಾಯಿ, ಮರು ಡಾಂಬರೀಕರಣಕ್ಕೆ 440 ಕೋಟಿ ರೂಪಾಯಿ, ಯಶಸ್ವಿ ಯೋಜನೆ ಮರು ಜಾರಿಗೆ 300 ಕೋಟಿ ರೂಪಾಯಿ.
01:16 PM
ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ ಯೋಜನೆ, ಆಳಸಮುದ್ರ ಮೀನುಗಾರಿಕಗೆ ದೋಣಿ ವಿಸ್ತರಣೆ,ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ, ಆಟೋ ಚಾಲಕರಿಗೆ ಸಹಾಯ.
01:14 PM
ದೀನದಯಾಳ್ ಹಾಸ್ಟೆಲ್ ನಿರ್ಮಾಣಕ್ಕೆ 250 ಕೋಟಿ ರೂಪಾಯಿ, ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ.
01:13 PM
ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರಿಗೆ ದೀನ್ ದಯಾಳ್ ಹಾಸ್ಟೆಲ್. ಬೆಂಗಳೂರಿಗೆ ಜ್ಯುವೆಲ್ಲರಿ ಪಾರ್ಕ್. ಕಂದಾಯ ಇಲಾಖೆಗೆ 16,388 ಕೋಟಿ ರೂಪಾಯಿ ಅನುದಾನ.
01:12 PM
ಯಶಸ್ವಿನಿ ಯೋಜನೆ ಮತ್ತೆ ಆರಂಭ.ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಅನುದಾನ, ಗಂಗಾಕಲ್ಯಾಣ ಯೋಜನೆಗೆ 1115 ಸಾವಿರ ಕೋಟಿ ರೂಪಾಯಿ.
01:10 PM
ನಂದಿಬೆಟ್ಟದಲ್ಲಿ 93 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣ. ಜೋಗ ಜಲಪಾತದಲ್ಲಿ 116 ಕೋಟಿ ರೂ. ವೆಚ್ಚದಲ್ಲಿ ಹೋಟೆಲ್ ಮತ್ತು ರೋಪ್ ವೇ ಅಭಿವೃದ್ಧಿ.
01:07 PM
ಬಾಲ್ಯ ವಿವಾಹ ತಡೆಗೆ ಸ್ಫೂರ್ತಿ ಯೋಜನೆ ವಿಸ್ತರಣೆ, ರೇಷ್ಮೆ ಗೂಡಿಗೆ 10,000 ರೂ. ಪ್ರೋತ್ಸಾಹ ಧನ. ಹಾಲು ಉತ್ಪಾದಕರ ಸಾಲಸೌಲಭ್ಯಕ್ಕೆ ಕ್ಷೀರಸಮೃದ್ಧಿ ಸಹಕಾರ ಬ್ಯಾಂಕ್.
01:06 PM
ಮೈಷುಗರ್ ಕಾರ್ಖಾನೆಗೆ 50 ಕೋಟಿ ರೂಪಾಯಿ. ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿ ನಿಲಯ. ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆ. ಯಾವುದೇ ತೆರಿಗೆ ಹೆಚ್ಚಳ ಇಲ್ಲ.
01:05 PM
ಬಿಸಿಯೂಟ ತಯಾರಕರ ಗೌರವಧನ 1000 ರೂಪಾಯಿ ಹೆಚ್ಚಳ. ಆ್ಯಸಿಡ್ ದಾಳಿಯ ಸಂತ್ರಸ್ತ ಮಹಿಳೆಯರ ಮಾಸಿಕ ಧನ 10,000 ರೂಪಾಯಿಗೆ ಏರಿಕೆ.
01:03 PM
ಚಿತ್ರದುರ್ಗಕ್ಕೆ ಹೊಸ ವೈದ್ಯಕೀಯ ಕಾಲೇಜು, ರಾಜ್ಯದ 52 ಲಕ್ಷ ಮಕ್ಕಳಿಗೆ ಹಾಲಿನ ಪುಡಿ. ಆಶಾಕಾರ್ಯಕರ್ತೆಯರ ಗೌರವ ಧನ ಹೆಚ್ಚಳ. ಪ್ರವಾಸಿ ಗೈಡ್ ಗಳಿಗೆ ಮಾಸಿಕ 2ಸಾವಿರ ರೂ.ಗೌರವ ಧನ.
01:02 PM
ರಾಝ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಆದ್ಯತೆ. ಕೃಷ್ಣಾಮೇಲ್ದಂಡ 3ನೇ ಹಂತಕ್ಕೆ 5ಸಾವಿರ ಕೋಟಿ ರೂಪಾಯಿ. ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರೂಪಾಯಿ.
01:01 PM
ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯ ಸುಂಕ ಏರಿಕೆ ಇಲ್ಲ. ಸಿನಿಮಾ ಸಬ್ಸಿಡಿ 125ರಿಂದ 200 ಕನ್ನಡ ಚಲನಚಿತ್ರಗಳಿಗೆ ವಿಸ್ತರಣೆ, ಮೇಕೆದಾಟು ಯೋಜನೆಗೆ 1000 ಸಾವಿರ ಕೋಟಿ.
01:00 PM
ಬೆಳಗಾವಿಗೆ ಪ್ರಾದೇಶಿಕ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ. 8ಪುಟಗಳಲ್ಲಿ ಪ್ರಕಟಗೊಳ್ಳುವ ಪತ್ರಿಕೆಗಳಿಗೆ ಹೊಸ ಯೋಜನೆ.
12:59 PM
ತುರ್ತು ವೈದ್ಯಕೀಯ ಸೇವೆಗೆ ಏರ್ ಆ್ಯಂಬುಲೆನ್ಸ್, ಕೊಡಗು ಮತ್ತು ಜಂಬೋಟಿ ಜೇನು ಜನಪ್ರಿಯತೆಗೆ ಆದ್ಯತೆ. ದ್ವಿತಳಿ ರೇಷ್ಮೇ ಗೂಡಿಗೆ 10 ಸಾವಿರ ರೂ.ಸಹಾಯಧನ.
12:58 PM
ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆಗೆ ಅನುದಾನ. ಮುಖ್ಯಮಂತ್ರಿ ಆರೋಗ್ಯವಾಹಿನಿ ಘೋಷಣೆ. ಹಾವೇರಿ, ಶಿಗ್ಗಾಂವಿ ಆಸ್ಪತ್ರೆ ಮೇಲ್ದರ್ಜೆಗೆ.
12:57 PM
ಅಲ್ಪಸಂಖ್ಯಾತ ವಸತಿ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ಮರುನಾಮಕರಣ. ಮಾರುಕಟ್ಟೆ ಸ್ಥಾಪಿಸಲು 50 ಕೋಟಿ ರೂಪಾಯಿ ನಿಗದಿ.
12:56 PM
ಕೃಷಿ ಇಲಾಖೆಗೆ 8,457 ಕೋಟಿ ರೂಪಾಯಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಗೆ 4,713 ಕೋಟಿ ರೂಪಾಯಿ, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 11,222 ಕೋಟಿ ರೂಪಾಯಿ.
12:55 PM
30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ಸಹಾಯಧನ. ರಾಜ್ಯದಲ್ಲಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರ. ಶ್ರೀಶೈಲದಲ್ಲಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿಗೃಹ.
12:54 PM
ಪಹಣಿ, ಜಾತಿ ಪ್ರಮಾಣಪತ್ರ, ಅಟ್ಲಾಸ್, ಕಂದಾಯ ದಾಖಲೆ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಯೋಜನೆ. ವೀರಶೈವ ಲಿಂಗಾಯತ ಅಭಿವೃದ್ಧಿಗೆ 100 ಕೋಟಿ.
12:51 PM
ರಾಯಚೂರು ವಿವಿಗೆ 15 ಕೋಟಿ ರೂಪಾಯಿ, ಬೆಳಗಾವಿಯ ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ. ಕೊಡವ ಜನಾಂಗದ ಅಭಿವೃದ್ಧಿಗೆ 50 ಕೋಟಿ ರೂಪಾಯಿ.
12:50 PM
ವಿಧವಾ ವೇತನ, ಲೈಂಗಿಕ ಅಲ್ಪಸಂಖ್ಯಾತರ ಮಾಸಿಕ ಪಿಂಚಣಿ ವೇತನ 800 ರೂಪಾಯಿಗೆ ಹೆಚ್ಚಳ. ಮರಾಠ ಅಭಿವೃದ್ಧಿಗೆ 50 ಕೋಟಿ ರೂಪಾಯಿ.
12:49 PM
ಕ್ರಿಶ್ಚಿಯನ್ನರ ಅಭಿವೃದ್ಧಿಗೆ 50 ಕೋಟಿ ರೂಪಾಯಿ, ನಾರಾಯಣ ಗುರು ಸ್ಮರಣಾರ್ಥ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗದಲ್ಲಿ ತಲಾ ಒಂದು ನಾರಾಯಣಗುರು ವಸತಿ ಶಾಲೆ.
12:49 PM
ಹಿಂದುಳಿದ ತಾಲೂಕುಗಳ ಅಭಿವೃದ್ದಿಗೆ 3,000 ಸಾವಿರ ಕೋಟಿ, ಕುರಿಗಾರರಿಗೆ ಕುರಿದೊಡ್ಡಿ ನಿರ್ಮಿಸಲು ಸಹಾಯಧನ, ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್.
12:47 PM
ವಸತಿ ರಹಿತ ಮೀನುಗಾರರಿಗೆ 5,000 ಮನೆ ಘೋಷಣೆ, ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ, ಪ್ರವಾಹದಿಂದ ಹಾನಿಯಾದ ಕೆರೆ ಅಭಿವೃದ್ಧಿಗೆ 200 ಕೋಟಿ.
12:47 PM
ಎತ್ತಿನಹೊಳೆ ಯೋಜನೆಗೆ 3,000 ಸಾವಿರ ಕೋಟಿ. ಆಹಾರ ಇಲಾಖೆಗೆ 2,228 ಕೋಟಿ ರೂಪಾಯಿ, ಪಾರದರ್ಶಕತೆಗಾಗಿ ಟೆಂಡರ್ ಪರಿಶೀಲನಾ ಸಮಿತಿ.
12:45 PM
2 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತ. ಬೆಂಗಳೂರಿಗೆ 8409 ಕೋಟಿ ರೂಪಾಯಿ. ಮಹಿಳಾ ಸಬಲೀಕರಣಕ್ಕೆ 43,188 ಕೋಟಿ.