12:39 PM
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕೇಂದ್ರ ಬಜೆಟ್ ಮಂಡನೆ ಮುಕ್ತಾಯ
12:37 PM
12 ರಿಂದ 15 ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ
12:35 PM
6 ರಿಂದ 9 ಲಕ್ಷದವರೆಗೆ 10 ಪರ್ಸೆಂಟ್ ತೆರಿಗೆ
12:34 PM
9 ರಿಂದ 12 ಲಕ್ಷದವರೆಗೆ 15 ಪರ್ಸೆಂಟ್ ತೆರಿಗೆ
12:33 PM
3 ರಿಂದ 6 ಲಕ್ಷದವರೆಗೆ 5 ಪರ್ಸೆಂಟ್ ತೆರಿಗೆ
12:28 PM
ಸೇವಾ ಸುಂಕ 37 ರಿಂದ 27 ಪರ್ಸೆಂಟ್ ಗೆ ಇಳಿಕೆ
12:27 PM
3 ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ
12:24 PM
7 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ: ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರದಿಂದ ತೀರ್ಮಾನ
12:22 PM
7 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
12:20 PM
ಐಟಿ ರಿಟರ್ನ್ಸ್ ಗೆ ಹೊಸ ಫಾರ್ಮ್ ಜಾರಿ. 16 ದಿನಗಳಲ್ಲಿ ಐಟಿ ರಿಟರ್ನ್ಸ್ ಪಡೆಯಬಹುದು.
12:18 PM
ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು.ರೆಡಿಮೇಟ್ ಬಟ್ಟೆ ಬೆಲೆ ಏರಿಕೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ.ವಿದೇಶಿ ವಾಹನಗಳ ಆಮದು ದುಬಾರಿ.
12:15 PM
ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ, ಬಂಗಾರ, ಬೆಳ್ಳಿ, ವಜ್ರ ದುಬಾರಿ. ಸಿಗರೇಟ್, ಪ್ಯಾಟಿನಂ ದುಬಾರಿ.
12:13 PM
ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು. ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ.
12:10 PM
ಪ್ರಸಕ್ತ ಸಾಲಿನ ವಿತ್ತೀಯ ಕೊರತೆ ಶೇ.6.4ರಷ್ಟಿದೆ. 2025-26ಕ್ಕೆ ವಿತ್ತೀಯ ಕೊರತೆ ಶೇ.4.9ಕ್ಕೆ ಇಳಿಕೆ ಸಾಧ್ಯತೆ.
12:09 PM
ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಶೇ.76ರಷ್ಟು ಹೆಚ್ಚಳ. ಆರ್ ಬಿಐ ಮೂಲಕ ಪ್ರತ್ಯೇಕ ಪದವಿಗೆ ಅವಕಾಶ. 2023-24ನೇ ಸಾಲಿನ ವಿತ್ತೀಯ ಕೊರತೆ 5.9ಕ್ಕೆ ಇಳಿಕೆ ಸಾಧ್ಯತೆ.
12:07 PM
ಬ್ಯಾಂಕ್ ಕಾಯ್ದೆ, ಆರ್ ಬಿಐ ಕಾಯ್ದೆಗೆ ಹೊಸ ನಿಯಮ ಜರಿ. ಮಹಿಳಾ ಸಮ್ಮಾನ್ ನಲ್ಲಿ 2 ಲಕ್ಷದವರೆಗೆ ಠೇವಣಿಗೆ ಅವಕಾಶ.
11:58 AM
ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆ್ಯಪ್. ಒಂದು ಜಿಲ್ಲೆಗೆ ಒಂದು ಉತ್ಪನ್ನ. "ದೇಖೋ ಅಪ್ನಾ ದೇಶ್" ಪ್ರವಾಸೋದ್ಯಮಕ್ಕೆ ಹೊಸ ಮಸೂದೆ.
11:56 AM
ಮಷಿನ್ ಕಲಿಕೆಗೆ ಕೇಂದ್ರದಿಂದ ಅನುದಾಣ. 47 ಲಕ್ಷ ಯುವಕರಿಗೆ ಕಲಿಕಾ ವೇತನ. ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್ ಒತ್ತು.
11:53 AM
ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ವಾಹನಗಳು ಗುಜರಿಗೆ.
11:52 AM
2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ. ಸಾಮಾನ್ಯ ಗುರುತು ಚೀಟಿಯಾಗಿ ಪ್ಯಾನ್ ಕಾರ್ಡ್ ಬಳಕೆ.
11:50 AM
ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ. 10 ಸಾವಿರ ಬಯೋ ಇನ್ ಪುಟ್ ಸೆಂಟರ್ ಗಳ ಸ್ಥಾಪನೆ.
11:50 AM
ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್ ಸ್ಕೀಂ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ. ಗೋಬರ್ಧನ್ ಯೋಜನೆ ಅಡಿ 200 ಬಯೋಗ್ಯಾಸ್ ಪ್ಲ್ಯಾಂಟ್.
11:48 AM
ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು. ಗ್ರೀನ್ ಹೈಡ್ರೋಜನ್ ಮಿಷನ್ ಗೆ 19,700 ಕೋಟಿ ರೂಪಾಯಿ ಮೀಸಲು.
11:46 AM
IITಗೆ 5 ವರ್ಷಗಳ ಕಾಲ ಅಧ್ಯಯನಕ್ಕೆ ಅನುದಾನ. 5ಜಿ ಅಪ್ಲಿಕೇಶನ್ ಅಭಿವೃದ್ಧಿಗೆ ನೂರು ಲ್ಯಾಬ್ ಸ್ಥಾಪನೆ.
11:44 AM
ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ಕ್ರಮ. ಲ್ಯಾಬ್ ನಲ್ಲಿ ಸಹಜ ಡೈಮಂಡ್ ಗಳ ಉತ್ಪಾದನೆ. ಈ ಮೂಲಕ ನೈಸರ್ಗಿಕ ವಜ್ರ ಉತ್ಪಾದನೆಗೆ ಕ್ರಮ.
11:43 AM
ಇ-ಕೋರ್ಟ್ ಗಳಿಗೆ 7 ಸಾವಿರ ಕೋಟಿ ರೂಪಾಯಿ ಅನುದಾನ. ಪ್ರಧಾನಿ ಅವಾಸ್ ಯೋಜನೆಗೆ 79 ಸಾವಿರ ಕೋಟಿ ರೂ. ಅನುದಾನ.
11:42 AM
ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗೆ 15 ಸಾವಿರ ಕೋಟಿ ಮೀಸಲು. ಸರ್ಕಾರಿ ನೌಕರರಿಗಾಗಿ ಮಿಷನ್ ಕರ್ಮಯೋಗಿ ಯೋಜನೆ. KYC ಸರಳೀಕರಣಕ್ಕೆ ಕೇಂದ್ರದ ಕ್ರಮ.
11:41 AM
ನಗರೋತ್ಥಾನಕ್ಕೆ 10 ಸಾವಿರ ಕೋಟಿ ರೂಪಾಯಿ ಮೀಸಲು. MSMEಗಳಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ. 2047ರೊಳಗೆ ಮ್ಯಾನ್ ಹೋಲ್ ಮುಕ್ತ ಒಳಚರಂಡಿ ವ್ಯವಸ್ಥೆ ಗುರಿ.
11:39 AM
ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ. ಕೃತಕ ಬುದ್ಧಿಮತ್ತೆ ಜಾರಿ. ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ AI(ಕೃತಕ ಬುದ್ಧಿಮತ್ತೆ) ಸೆಂಟರ್ ಗಳ ಸ್ಥಾಪನೆ.
11:37 AM
ಮ್ಯಾನ್ ಹೋಲ್ ನಿಂದ ಮಷಿನ್ ಹೋಲ್ ಗೆ ಬದಲಾವಣೆ. ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ. ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ರಸ್ತೆ ನಿರ್ಮಾಣಕ್ಕೆ ನೆರವು.
11:35 AM
ರೈಲ್ವೆಗೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು.ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ. ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ.
11:34 AM
ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು. ಜಿಡಿಪಿಯ ಶೆ.3.3ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲು.
11:29 AM
ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋಟಿ ಮೀಸಲು, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ.
11:27 AM
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಗಳು. ಸಾರ್ವಜನಿಕ ಗ್ರಂಥಾಲಯಗಳಲ್ಲಿ ರೋಗಗಳ ಬಗ್ಗೆ ಮಾಹಿತಿ. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ಮಿಸಲು.
11:24 AM
ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು. ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ.
11:22 AM
157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ. ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಬೆಳವಣಿಗೆ. ಮೀನುಗಾರಿಕೆಗೆ 6 ಸಾವಿರ ಕೋಟಿ ಮೀಸಲು.
11:20 AM
ಶ್ರೀಅನ್ನ ಜೋಳ, ಶ್ರೀ ಅನ್ನರಾಗಿ, ಶ್ರೀಅನ್ನ ಗೋಧಿ, ಸಿರಿಧಾನ್ಯಗಳ ಕೃಷಿ ಯೋಜನೆಗೆ ಹೊಸ ಯೋಜನೆ.ಸಿರಿಧಾನ್ಯ ಕೃಷಿಗೆ ಆದ್ಯತೆ.
11:16 AM
ಪ್ರಮುಖ ಮೂರು ಅಂಶಗಳ ಮೇಲೆ ಬಜೆಟ್ ಮಂಡನೆ. ಕೃಷಿಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ. ಉಜ್ವಲ ಯೋಜನೆಯಲ್ಲಿ 9.6 ಲಕ್ಷ ಗ್ಯಾಸ್ ವಿತರಣೆ.
11:15 AM
ಯುವ ಸಬಲೀಕರಣ, ಮಹಿಳಾ ಸಬಲೀಕರಣ. ಹಿಂದುಳಿದ ವರ್ಗಗಳ ಮೇಲೆ ಬಜೆಟ್ ನಲ್ಲಿ ಆದ್ಯತೆ. ಗರೀಭ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ.
11:14 AM
ಆತ್ಮನಿರ್ಭರ ಯೋಜನೆಯಡಿ ಕುಶಲಕರ್ಮಿಗಳಿಗೆ ನೆರವು. ಹಸಿರು ಕ್ರಾಂತಿಗೆ ಬಜೆಟ್ ನಲ್ಲಿ ಮನ್ನಣೆ. ಈ ಬಾರಿಯೂ ಬಜೆಟ್ ನಲ್ಲಿ ಸಪ್ತ ಮಂತ್ರ.
11:12 AM
ಕರಕುಶಲಕರ್ಮಿಗಳಿಗೆ ನೂತನ ಯೋಜನೆ.ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್. ಕೋವಿನ್, ಆಧಾರ್ ಹಾಗೂ ಯುಪಿಎ ವ್ಯವಸ್ಥೆ ನಿರ್ವಹಣೆಗೆ ವಿಶ್ವಮನ್ನಣೆ. ಪಿಎಂ ವಿಕಾಸ್ ಹೊಸ ಯೋಜನೆ ಜಾರಿ.
11:11 AM
14 ಕೋಟಿ ರೈತರಿಗೆ 2.7 ಲಕ್ಷ ಕೋಟಿ ವಿಮೆ ಹಂಚಿಕೆ. 220ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ್ದೇವೆ. 81 ಲಕ್ಷ ಸ್ವಸಹಾಯ ಗುಂಪಿಗೆ ಸಹಾಯ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೆರವು.
11:09 AM
47 ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ. ಭಾರತಕ್ಕೆ ವಿಶ್ವ ನೀಡಿರುವ ಮನ್ನಣೆಗೆ ಜಿ.20ಯೇ ಸಾಕ್ಷಿ. ಆರ್ಥಿಕತೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 5ನೇ ಸ್ಥಾನ ಬಂದಿದೆ.
11:08 AM
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7ರಷ್ಟು ವೃದ್ಧಿಯಾಗಿದೆ. ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ.11.7 ಲಕ್ಷ ಶೌಚಾಲಯ ನಿರ್ಮಾಣ ಮಾಡಿದ್ದೇವೆ.
11:06 AM
ಮಹಿಳೆಯರು, ಎಸ್ ಸಿ, ಎಸ್ ಟಿ ವರ್ಗದವರಿಗೆ, ಯುವಕರಿಗೆ ಪ್ರಮುಖ ಆದ್ಯತೆ. ಪ್ರಧಾನ್ ಮಂತ್ರಿ ಗರೀಭ್ ಕಲ್ಯಾಣ್ ಯೋಜನೆಗೆ 2 ಲಕ್ಷ ಕೋಟಿ ರೂ.ಘೋಷಣೆ.
11:03 AM
ಇದು ಅಮೃತಕಾಲದ ಮೊದಲ ಬಜೆಟ್. 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದೇನೆ.ಇಡೀ ಜಗತ್ತೇ ಭಾರತದ ಸಾಧನೆಯನ್ನು ಶ್ಲಾಘಿಸಿದೆ.
11:01 AM
ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕಲಾಪ ಆರಂಭ. ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
10:42 AM
ಕೆಲವೇ ಕ್ಷಣಗಳಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
10:39 AM
ಪ್ರಧಾನಿ ನೇತೃತ್ವದ ಸಂಪುಟ ಸಭೆ ಮುಕ್ತಾಯ. ಬಜೆಟ್ ಮಂಡನೆಗೆ ಸಂಪುಟ ಸಭೆ ಅನುಮೋದನೆ.ಸಂಸತ್ ಭವನಕ್ಕೆ ಬಜೆಟ್ ಪ್ರತಿ ತಂದ ಸಿಬಂದಿಗಳು.
10:06 AM
ಬುಧವಾರ ಸಂಸತ್ ನಲ್ಲಿ ಮಂಡನೆಯಾಗಲಿರುವ ಬಜೆಟ್ ಕಾಗದ ರಹಿತ ಆಗಲಿದೆ. ಬಜೆಟ್ ಮುಖ್ಯಾಂಶಗಳು, ಬಜೆಟ್ ಭಾಷಣ ಸೇರಿದಂತೆ ಸವಿವರವಾದ ಮಾಹಿತಿ ಆ್ಯಪ್ ನಲ್ಲಿ ಲಭ್ಯವಾಗಲಿದೆ.
10:04 AM
ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. 9 ವರ್ಷಗಳ ಬಳಿಕ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ನಿರೀಕ್ಷೆ.
09:58 AM
ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ. ಬಜೆಟ್ ಮಂಡನೆಗೆ ಸಂಪುಟದ ಒಪ್ಪಿಗೆ ಪಡೆಯಲಿರುವ ನಿರ್ಮಲಾ ಸೀತಾರಾಮನ್.
09:51 AM
ಇಂದಿನ ಜಾಗತಿಕ ಸ್ಥಿತಿಯಲ್ಲಿ ಭಾರತ ಮಂಡಿಸಲಿರುವ ಬಜೆಟ್ ನತ್ತ ಇಡೀ ವಿಶ್ವವೇ ನೋಡುತ್ತಿದೆ. ಭಾರತದ ಬಜೆಟ್ ಜಗತ್ತಿಗೆ ಭರವಸೆಯ ಆಶಾಕಿರಣವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
09:49 AM
5ನೇ ಬಾರಿ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. 2024ರ ಲೋಕಸಭಾ ಚುನಾವಣೆಗೂ ಮುನ್ನ ಮಂಡನೆಯಾಗಲಿರುವ ಕೊನೆಯ ಪೂರ್ಣ ಬಜೆಟ್ ಇದಾಗಿದೆ.
09:48 AM
2023-24ನೇ ಸಾಲಿನ ಬಜೆಟ್ ಪ್ರತಿಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ. ಬಜೆಟ್ ಮಂಡನೆಗೆ ರಾಷ್ಟ್ರಪತಿ ಮುರ್ಮು ಅಂಕಿತ.
09:46 AM
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಬೆಳಗ್ಗೆ 11ಗಂಟೆಗೆ 2023-2024ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.