03:00 PM
2023-24ನೇ ಸಾಲಿನ ಬಜೆಟ್ ಮಂಡನೆ ಮುಕ್ತಾಯ. ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಜೆಟ್ ಅನ್ನು 2ಗಂಟೆ 50 ನಿಮಿಷಗಳ ಸುದೀರ್ಘ ಕಾಲ ಮಂಡಿಸಿದರು.
02:41 PM
ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿಪಡಿಸಲಾಗಿದೆ. ಮಕ್ಕಳ ಪ್ರಸ್ತಾಪಿತ ಯೋಜನೆಗಳಿಗೆ 51,220 ಕೋಟಿ ರೂ. ಅನುದಾನ.
02:40 PM
2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿಎನ್ ಜಿಒಗಳ ಸಹಯೋಗದೊಂದಿಗೆ ಎರಡು ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
02:38 PM
ಸೋಲಿಗ ಸಮುದಾಯ, ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟ ಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 50 ಕೋಟಿ ಮೀಸಲು
02:35 PM
ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು, ಭೂ ಸಿರಿ ಯೋಜನೆ ಕೈಬಿಟ್ಟ ಯೋಜನೆ, ಶ್ರಮಶಕ್ತಿ ಯೋಜನೆ ಬಂದ್.
02:23 PM
ಅನ್ನಭಾಗ್ಯ- 10,000 ಕೋಟಿ ರೂ., ಗೃಹಜ್ಯೋತಿ-13,910 ಕೋಟಿ ರೂ.,ಶಕ್ತಿ ಯೋಜನೆ - 4,000 ಕೋಟಿ ರೂ., ಇಂದಿರಾ ಕ್ಯಾಂಟೀನ್ -100ಕೋಟಿ ರೂ., ನಮ್ಮ ಮೆಟ್ರೋ- 30,000ಕೋಟಿ ರೂ.
02:16 PM
ಆಹಾರ ಇಲಾಖೆ-10,460ಕೋಟಿ ರೂ., ಸಮಾಜ ಕಲ್ಯಾಣ-11,173ಕೋಟಿ ರೂ. , ಬೆಂಗಳೂರು ಅಭಿವೃದ್ಧಿಗೆ -45,000ಕೋಟಿ ರೂ., ಎತ್ತಿನಹೊಳೆ-23,252 ಕೋಟಿ ರೂ., ಕುಡಿಯುವ ನೀರು- 770 ಕೋಟಿ ರೂ., ಶಿಕ್ಷಣ ಇಲಾಖೆ-37,587 ಕೋಟಿ ರೂ. ಅನುದಾನ
02:09 PM
2023-24 ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿ. ಮಕ್ಕಳ ಉದ್ದೇಶಿತ ಯೋಜನೆಗಳಿಗೆ 51,229 ಕೋಟಿ ರೂ. ಅನುದಾನ.
02:09 PM
ಏಳು ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳ ಪ್ರಾರಂಭ.
02:08 PM
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಳ.
02:07 PM
4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು.
02:06 PM
ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚ, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆ.
02:01 PM
ಹಂಪಿ ಸೇರಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ 75 ಕೋಟಿ ರೂ. ಮೀಸಲು, ಮೈಲಾರ, ಗಾಣಗಾಪುರ, ಮಳಖೇಡ ಸೇರಿ ವಿವಿಧ ತಾಣಗಳ ಅಭಿವೃದ್ಧಿ
01:55 PM
ಇಂಧನ- 22000 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-24,166 ಕೋಟಿ ರೂ., ನೀರಾವರಿ-19,000 ಕೋಟಿ ರೂ., ಗ್ರಾಮೀಣಾಭಿವೃದ್ಧಿ-18,000 ಕೋಟಿ ರೂ., ಸಾರಿಗೆ ಮತ್ತು ಒಳಾಡಳಿತ- 16,000 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ- 5,860 ಕೋಟಿ ರೂ., ಕಂದಾಯ- 16,000 ಕೋಟಿ ರೂ., ಪಶು ಸಂಗೋಪನೆ ಇಲಾಖೆ - 3,024 ಕೋಟಿ ರೂ.
01:53 PM
ಪೊಲೀಸರ ವಾಹನ ಬದಲಾವಣೆಗಾಗಿ 100 ಕೋಟಿ, ಕೃಷಿ ಇಲಾಖೆಗೆ 5,860 ಕೋಟಿ, ಜೈನರ ಪುಣ್ಯಕ್ಷೇತ್ರಕ್ಕೆ 25 ಕೋಟಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ, ವಕ್ಫ್ ಆಸ್ತಿ ಅಭಿವೃದ್ಧಿಗೆ 50 ಕೋಟಿ.
01:51 PM
19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ರೂಪಾಯಿ ಮೀಸಲು. ಎಇಡಿ ಕಲ್ಪಿಸಲು ಸರ್ಕಾರದಿಂದ 6 ಕೋಟಿ ಮೀಸಲು. ಬೆಂಗಳೂರಿನಲ್ಲಿ 448 ನಮ್ಮ ಕ್ಲಿನಿಕ್ ಸ್ಥಾಪನೆ.
01:50 PM
ನರೇಗಾ ಯೋಜನೆಯಡಿಯಲ್ಲಿ ''ಕೂಸಿನ ಮನೆ'' ಹೆಸರಿನಲ್ಲಿ 4000 ಗ್ರಾಮಪಂಚಾಯತ್ ಗಳಲ್ಲಿ ಶಿಶು ಪಾಲನಾ ಕೇಂದ್ರಗಳು.
01:48 PM
ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ. ಶಾಲಾ ಮಕ್ಕಳ ಬಿಸಿಯೂಟಕ್ಕೆ 280 ಕೋಟಿ ರೂಪಾಯಿ ಅನುದಾನ.
01:43 PM
ಕೋಟೆಗಳ ಅಭಿವೃದ್ಧಿಗೆ 75 ಕೋಟಿ. ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ. ಕೋಲಾರದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಸ್ಥಾಪನೆ.
01:42 PM
ಪೆಟ್ರೋಲ್ ಬಂಕ್ ಸ್ಥಾಪನೆಗೆ ಪರವಾನಿಗೆ. ಕೃಷಿ ಇಲಾಖೆಗೆ 5860 ಕೋಟಿ, ಎತ್ತಿನ ಹೊಳೆ ಯೋಜನೆಗೆ ಆದ್ಯತೆ. ಜಿಲ್ಲೆಗೊಂದು ಗೋ ಶಾಲೆ ಯೋಜನೆ ಕೈಬಿಟ್ಟ ಸರ್ಕಾರ.
01:40 PM
ಬೆಂಗಳೂರಿನಲ್ಲಿ ಸೆಮಿ ಕಂಡಕ್ಟರ್ ವಲಯ ಅಭಿವೃದ್ಧಿಗೆ ಯೋಜನೆ. ಪ್ರತಿಯೊಬ್ಬ ವ್ಯಕ್ತಿಗೂ ಇಂಧನ ಖಾತರಿ ನೀಡುವ ಯೋಜನೆ ಜಾರಿ.
01:35 PM
ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್ ಸೇರಿ ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೆ 4 ಲಕ್ಷ ರೂ. ವಿಮೆ, 2 ಲಕ್ಷ ರೂ ಜೀವ ವಿಮೆ , 2 ಲಕ್ಷ ರೂ ಅಪಘಾತ ವಿಮೆ.
01:34 PM
ವಿದ್ಯುತ್ ದುರ್ಬಳಕೆ ತಡೆಯಲು ಜಾಗೃತಿ ಮೂಡಿಸುವುದು. ಜುಲೈ1ರಿಂದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್.
01:31 PM
ಕೇಂದ್ರ ಸರ್ಕಾರ ಗುರುತಿಸದ 40 ಲಕ್ಷ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ. ಇಂದಿರಾ ಕ್ಯಾಂಟೀನ್ ಗೆ ಹೊಸ ಮೆನು ಜಾರಿಗೆ ಚಿಂತನೆ.
01:28 PM
ಜಲಜೀವನ್ ಮಿಷನ್ ಯೋಜನೆಯ ಲೋಪ ಪತ್ತೆ ಹಚ್ಚಲು ತನಿಖೆಗೆ ನಿರ್ಧಾರ. ಲೋಪದೋಷ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ.
01:27 PM
4 ಇಎಸ್ ಐ ಆಸ್ಪತ್ರೆಗಳಲ್ಲಿ ಮಾಡ್ಯೂಲರ್ ಥಿಯೇಟರ್ ಸ್ಥಾಪನೆ. ESI ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗೆ 85 ಕೋಟಿ ರೂಪಾಯಿ.
01:26 PM
ಪಿಕಪ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ಸೌಲಭ್ಯ. ರೋಗ ಪತ್ತೆ ಕೇಂದ್ರಗಳ ಉನ್ನತೀಕರಣಕ್ಕೆ 35 ಕೋಟಿ ರೂ. ಅನುದಾನ.
01:25 PM
ರೈತರಿಗೆ ಶೂನ್ಯ ಬಡ್ಡಿದರದ ಮಿತಿ ಹೆಚ್ಚಳ. ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.ಮಧ್ಯಾಮಾವಧಿ, ದೀರ್ಘಾವಧಿ ಸಾಲದ ಮಿತಿ ಏರಿಕೆ. ಮೈಸೂರು ಚಾಮುಂಡಿ ದೇವಾಲಯ ಅಭಿವೃದ್ಧಿ.
01:21 PM
5 ಗ್ಯಾರಂಟಿಗಳ ಜಾರಿಗೆ ಶೇ.26ರಷ್ಟು ಸಾಲ ಪಡೆಯಲು ಸರ್ಕಾರ ನಿರ್ಧಾರ. ಕೇಂದ್ರ ಸರ್ಕಾರದಿಂದ ಶೇ.4ರಷ್ಟು ಅನುದಾನದ ನಿರೀಕ್ಷೆ. ಶೇ.50ರಷ್ಟು ತೆರಿಗೆ ಆದಾಯದಿಂದ ಹಣ ಹೊಂದಿಸಲು ಯೋಜನೆ.
01:18 PM
ಕುಡಿಯುವ ನೀರು ಯೋಜನೆಗೆ 770 ಕೋಟಿ ರೂಪಾಯಿ.ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು 10 ಕೋಟಿ ರೂ. ಅನುದಾನ.
01:15 PM
ಏಷ್ಯನ್, ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೆ ಪೊಲೀಸ್, ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಹುದ್ದೆ.
01:13 PM
ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಹಠಾತ್ ಹೃದಯಾಘಾತ ಸಾವುಗಳನ್ನು ತಡೆಯಲು ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ 6 ಕೋಟಿ ವೆಚ್ಚದಲ್ಲಿ ಎಇಡಿ ಯಂತ್ರ ಸ್ಥಾಪನೆಗೆ ನಿರ್ಧಾರ.
01:10 PM
ಬೆಂಗಳೂರಿನ 83 ಕಿಲೋ ಮೀಟರ್ ಹೈಡೆನ್ಸಿಟಿ ಕಾರಿಡಾರ್. ಇದಕ್ಕಾಗಿ 273 ಕೋಟಿ ರೂಪಾಯಿ ಅನುದಾನ.
01:09 PM
ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ. ನಗರ ಸಂಚಾರ ಬಲಪಡಿಸಲು ಕ್ರಮ. ಕಾನೂನು ಸುವ್ಯವಸ್ಥೆ ಬಲಪಡಿಸಲು ಕ್ಯಾಮರಾ ಕಣ್ಗಾವಲು.
01:08 PM
ಮಾರ್ಗಸೂಚಿ ದರ ಶೇ.14ರಷ್ಟು ಹೆಚ್ಚಳ. ನೈತಿಕ ಪೊಲೀಸ್ ಗಿರಿ ತಡೆಯಲು ನಿರ್ದಾಕ್ಷಿಣ್ಯ ಕ್ರಮ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ.
01:06 PM
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಾಜಿ ದೇವದಾಸಿಯರು, ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ಸಿಗಲಿದೆ.
01:04 PM
ಆಹಾರ ಇಲಾಖೆಗೆ 10,490 ಕೋಟಿ ರೂ.ಅನುದಾನ. ಕಾಯದ ನಿಧಿ ಯೋಜನೆಯ ಅನುದಾನ ಹೆಚ್ಚಿಸಿದ ಸರ್ಕಾರ.
01:02 PM
ಕೊಪ್ಪಳ, ಕಾರವಾರ, ಕೊಡಗು ಜಿಲ್ಲಾಸ್ಪತ್ರೆ ಉನ್ನತೀಕರಣ. ಕಲಬುರಗಿಯಲ್ಲಿ 70 ಕೋಟಿ ರೂ. ವೆಚ್ಚದ ತಾಯಿ-ಮಗು ಆಸ್ಪತ್ರೆ. ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು.
12:58 PM
4.42 ಕೋಟಿ ಬಿಪಿಎಲ್ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಲಾಭ. ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 30,000 ಕೋಟಿ.
12:53 PM
ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಡಯಾಲಿಸ್ ಕೇಂದ್ರ ಸ್ಥಾಪನೆ. ಒಟ್ಟು 219 ಡಯಾಲಿಸಿಸ್ ಸೆಂಟರ್ ನಿರ್ಮಾಣಕ್ಕೆ ನಿರ್ಧಾರ.
12:52 PM
1,62,000 ಕೋಟಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.ಪ್ರಮುಖ 3 ಇಲಾಖೆಗಳಿಂದ ರಾಜಸ್ವ ಸಂಗ್ರಹ ಗುರಿ. ಅಬಕಾರಿ ರಾಜಸ್ವ 36,000, ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಕೋಟಿ, ನೋಂದಣಿ, ಮುದ್ರಾಂಕ ಇಲಾಖೆಯಿಂದ 25,000 ಸಾವಿರ ಕೋಟಿ.
12:50 PM
ರೈತರ ಹಿತದೃಷ್ಟಿಯಿಂದ ಕೇಂದ್ರದ ತಿದ್ದುಪಡಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲು ನಿರ್ಧಾರ. ಅನ್ನಭಾಗ್ಯ ಯೋಜನೆ ಜಾರಿಗೆ ಪರ್ಯಾಯ ಮಾರ್ಗ.
12:49 PM
1ರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮೊಟ್ಟೆ ವಿತರಣೆ. ವಾರದಲ್ಲಿ 2ದಿನ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಣೆ. ಇದರಿಂದ 60 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.
12:48 PM
ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ. ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಮೇಲ್ಸೇತುವೆ.
12:46 PM
ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಜಾರಿ. 2ನೇ ಹಂತದಲ್ಲಿ ಹೊಸ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ.
12:45 PM
ಕೃಷಿಕರಿಗೆ ಶೂನ್ಯ ಬಡ್ಡಿದರದ ಸಾಲವನ್ನು ಮೂರರಿಂದ ಐದು ಲಕ್ಷಕ್ಕೆ ಏರಿಕೆ
12:45 PM
ಶಾಲಾ-ಕಾಲೇಜುಗಳಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ. ಈ ಯೋಜನೆಗೆ 200 ಕೋಟಿ ರೂಪಾಯಿ ಅನುದಾನ.
12:44 PM
ಮೀನುಗಾರಿಕೆ ದೋಣಿಗಳಲ್ಲಿ ಸೀಮೆಎಣ್ಣೆ ಇಂಜಿನ್ ಗಳನ್ನು ಡೀಸೆಲ್ ಇಂಜಿನ್ ಮಾಡಲು ತಲಾ 50 ಸಾವಿರ ಸಹಾಯಧನ
12:42 PM
ಹಿಂದಿನ ಸರ್ಕಾರದ ಪಠ್ಯ ಪರಿಷ್ಕರಣೆಗೆ ನಿರ್ಧಾರ
12:41 PM
ಮೈಸೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
12:40 PM
ದೇಶದಲ್ಲೆ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ಸ್ಥಾಪನೆ
12:39 PM
ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ. ಕಲುಗುಬರಗಿಯಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ
12:38 PM
ಮೀನುಗಾರರಿಗೆ 50 ಸಾವಿರದಿಂದ ಮೂರು ಲಕ್ಷದವರೆಗೆ ಸಾಲದ ಮಿತಿ ಏರಿಕೆ
12:37 PM
ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ
12:34 PM
ಬೆಂಗಳೂರಿಗೆ ಬಂಪರ್ ಕೊಡುಗೆ ಕೊಟ್ಟ ಸಿಎಂ. ಜಾನುವಾರುಗಳ(ಹಸು, ಎಮ್ಮೆ) ಆಕಸ್ಮಿಕ ಸಾವುಗಳಿಗೆ 10 ಸಾವಿರ ಪರಿಹಾರ. ಕುರಿ, ಮೇಕೆ ಸಾವನ್ನಪ್ಪಿದರೆ 5 ಸಾವಿರ ಪರಿಹಾರ.
12:32 PM
ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ 5 ಕೋಟಿ ರೂಪಾಯಿ. ಬೆಂಗಳೂರಿನಲ್ಲಿ ವೈಟ್ ಟಾಪಿಂಗ್, ರಸ್ತೆ, ತ್ಯಾಜ್ಯ ನಿರ್ವಹಣೆ, ನಗರೋತ್ಥಾನಕ್ಕೆ 45 ಸಾವಿರ ಕೋಟಿ ಅನುದಾನ
12:30 PM
ಇಂದಿರಾ ಕ್ಯಾಂಟಿನ್ ಗೆ 100 ಕೋಟಿ ರುಪಾಯಿ. 5 ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ.
12:29 PM
ಕೃಷಿ ನವೋದ್ಯಮಕ್ಕೆ 10 ಕೋಟಿ. 100 ಸಹಕಾರಿ ಸಂಸ್ಥೆಗಳಿಗೆ 20 ಲಕ್ಷ ರೂಪಾಯಿ ಸಾಲ ಸೌಲಭ್ಯ. ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ಗೆ 10 ಕೋಟಿ.
12:28 PM
ಮೈಸೂರು ಕಲಬುರಗಿಯಲ್ಲಿ ಟ್ರಾಮಾ ಸೆಂಟರ್. ಆರೋಗ್ಯ ಇಲಾಖೆಗೆ 14,950 ಕೋಟಿ ರೂಪಾಯಿ ಅನುದಾನ. ಸಮಾಜ ಕಲ್ಯಾಣ ಇಲಾಖೆಗೆ 11,173.
12:23 PM
ಕೃಷಿ ಭಾಗ್ಯ ಯೋಜನೆಗಳಿಗೆ ಮನ್ರೇಗಾ ಯೋಜನೆಯಡಿ 100 ಕೋಟಿ ರೂಪಾಯಿ. ಅನುಗ್ರಹ ಯೋಜನೆ ಮರುಜಾರಿ.