06:32 PM
ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣ ಹೀಗಿದೆ : ದಕ್ಷಿಣ ಕನ್ನಡ - 72.97%, ಉಡುಪಿ-ಚಿಕ್ಕಮಗಳೂರು - 69.83%, ತುಮಕೂರು -70.28%, ಮಂಡ್ಯ- 70.23%, ಮೈಸೂರು - 61.32, ಚಾಮರಾಜನಗರ - 66.51, ಹಾಸನ - 71.20%, ಬೆಂಗಳೂರು ಗ್ರಾಮಾಂತರ - 59.43%, ಬೆಂಗಳೂರು ಉತ್ತರ - 48.19%, ಬೆಂಗಳೂರು ದಕ್ಷಿಣ - 49.36%, ಬೆಂಗಳೂರು ಕೇಂದ್ರ - 45.34%, ಚಿಕ್ಕಬಳ್ಳಾಪುರ - 69.33%, ಕೋಲಾರ - 69.99%, ಚಿತ್ರದುರ್ಗ - 61.75%.
06:23 PM
ರಾಜ್ಯದಲ್ಲಿ ಪ್ರಥಮ ಹಂತದ ಮತದಾನ ಮುಕ್ತಾಯಗೊಂಡಿದೆ. ಕೆಲವೊಂದು ಸಣ್ಣಪುಟ್ಟ ಗೊಂದಲಗಳ ನಡುವೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಎಪ್ರಿಲ್‌ 23ನೇ ತಾರೀಖು ಮಂಗಳವಾರದಂದು ನಡೆಯಲಿದೆ.
06:15 PM
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6ರತನಕ ನಡೆದ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗ ನೀಡಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ ದೇಶದೆಲ್ಲೆಡೆ 61.12% ಮತದಾನ ಆಗಿದೆ.
06:12 PM
ಐಜಿಪಿ ಡಿ. ರೂಪಾ ಮತ್ತು ಮುನೀಷ್‌ ಮುದ್ಗಿಲ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾರ್ಮೆಲ್‌ ಶಾಲಾ ಮತದಾನ ಕೆಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
06:05 PM
ನಿತ್ಯೋತ್ಸವ ಕವಿ ಪದ್ಮಶ್ರೀ ಕೆ.ಎಸ್‌. ನಿಸ್ಸಾರ್‌ ಅಹಮ್ಮದ್‌ ಅವರು ಕುಟುಂಬ ಸದಸ್ಯರೊಂದಿಗೆ ಪದ್ಮನಾಭನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
06:00 PM
ಚಿತ್ರದುರ್ಗದಲ್ಲಿ ಬಿಜೆಪಿ ಬೆಂಬಲಿಗನ ಮೇಲೆ ‘ಕೈ’ ಬೆಂಬಲಿಗರ ಹಲ್ಲೆ. ಮತಪಟ್ಟಿಯಲ್ಲಿ ಹೆಸರಿಲ್ಲದೇ ಇದ್ದುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪ. ಗಾಯಾಳು ಜಯಣ್ಣ ಚಳ್ಳಕೆರೆ ಆಸ್ಪತ್ರೆಗೆ ದಾಖಲು. ಚಳ್ಳಕೆರೆ ತಾಲೂಕಿನ ಹನ್ನೂರು ಗ್ರಾಮದಲ್ಲಿ ಘಟನೆ.
05:57 PM
ತನ್ನೆರಡೂ ಕೈಗಳನ್ನು ಕಳೆದುಕೊಂಡಿರುವ ಆಳ್ವಾಸ್‌ ಕಾಲೇಜಿನ ಉದ್ಯೋಗಿ ಸಬಿತಾ ಮೊನೀಸ್‌ ಅವರು ಗರ್ಡಾಡಿ ಮತಕೇಂದ್ರದಲ್ಲಿ ತಮ್ಮ ಕಾಲುಗಳ ಸಹಾಯದಿಂದ ಮತ ಚಲಾಯಿಸಿದರು.
05:53 PM
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ಗರ್ಭಿಣಿಯೊಬ್ಬರು ಸೀಮಂತ ಕಾರ್ಯ ಮುಗಿಸಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಗಮನ ಸೆಳೆದರು.
05:49 PM
ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಚಾಲೆಂಜ್‌ ಓಟು - ದೂರು ಕೊಟ್ಟು ಪೇಚಿಗೆ ಸಿಲುಕಿದ ಮತದಾರ. ಶಿಕ್ಷಾರ್ಹ ಪ್ರಕರಣವಾಗಿರುವುದರಿಂದ 6 ತಿಂಗಳು ಜೈಲು ಸಾಧ್ಯತೆ.
05:46 PM
ಸಾಯಂಕಾಲ 5 ಗಂಟೆಯವರೆಗಿನ ಮಾಹಿತಿಗಳ ಪ್ರಕಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 72.3% ಮತದಾನ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 75.82 ಮತದಾನವಾಗಿದೆ. ಉಳಿದಂತೆ ಪುತ್ತೂರು - 77.64%, ಬಂಟ್ವಾಳ - 75.65%, ಸುಳ್ಯ - 74.34%, ಮೂಡಬಿದಿರೆ - 71.3%, ಮಂಗಳೂರು ಉತ್ತರ - 71%, ಮಂಗಳೂರು ದಕ್ಷಿಣ - 65.17% ಹಾಗೂ ಮಂಗಳೂರು ನಗರದಲ್ಲಿ 60.03% ಮತದಾನವಾಗಿದೆ.
05:29 PM
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಪುರ ಗ್ರಾಮದಲ್ಲಿ ಸುಮಲತಾ ಅಂಬರೀಷ್‌ ಬೆಂಬಲಿಗರು ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಘರ್ಷಣೆ. ಸುಮಲತಾ ಪರ ಪೋಲಿಂಗ್‌ ಏಜೆಂಟ್‌ ಶರ್ಟ್‌ ಹರಿದು ಹಲ್ಲೆ.
05:02 PM
ಫೇಸ್‌ ಬುಕ್‌ ಮುಖಾಂತರ ಮತಯಾಚನೆ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕರ್ತವ್ಯನಿರತ ಚುನಾವಣಾ ಅಧಿಕಾರಿಯವರು ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
04:45 PM
ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಕ್ಷೇತ್ರವಾರು ಒಟ್ಟಾರೆ ಮತದಾನ ಪ್ರಮಾಣ ಹೀಗಿದೆ : ದಕ್ಷಿಣ ಕನ್ನಡ - 60.46%, ಉಡುಪಿ-ಚಿಕ್ಕಮಗಳೂರು - 56.44%, ತುಮಕೂರು -54.68%, ಮಂಡ್ಯ- 55.11%, ಮೈಸೂರು - 50.39, ಚಾಮರಾಜನಗರ - 50.76, ಹಾಸನ - 54.74%, ಬೆಂಗಳೂರು ಗ್ರಾಮಾಂತರ - 44.46%, ಬೆಂಗಳೂರು ಉತ್ತರ - 39.07%, ಬೆಂಗಳೂರು ದಕ್ಷಿಣ - 40.58%, ಬೆಂಗಳೂರು ಕೇಂದ್ರ - 36.31%, ಚಿಕ್ಕಬಳ್ಳಾಪುರ - 55.07%, ಕೋಲಾರ - 52.50%, ಚಿತ್ರದುರ್ಗ - 49.25%.
03:53 PM
ಮೈಸೂರು ಶೇ.47, ತುಮಕೂರು ಶೇ.55, ಹಾಸನ ಶೇ.57, ಚಿತ್ರದುರ್ಗ ಶೇ.50, ಬೆಂಗಳೂರು ಉತ್ತರ ಶೇ.39,
03:51 PM
ಲೋಕಸಭೆ ಚುನಾವಣೆ 3ಗಂಟೆವರೆಗೆ ದಾಖಲಾದ ಶೇಕಡವಾರು ಮತದಾನ: ಬೆಂಗಳೂರು ಕೇಂದ್ರ ಶೇ.39, ಬೆಂಗಳೂರು ದಕ್ಷಿಣ ಶೇ.45, ಚಿಕ್ಕಬಳ್ಳಾಪುರ ಶೇ.49, ಕೋಲಾರ ಶೇ.44, ದಕ್ಷಿಣ ಕನ್ನಡ ಶೇ.61, ಮಂಡ್ಯ ಶೇ.57, ಉಡುಪಿ ಶೇ.57.
03:19 PM
ಎರಡು ಸಾವಿರ ಜನರಿಗೆ ಒಂದೇ ವೋಟಿಂಗ್ ಮಿಷನ್..ಬೆಂಗಳೂರಿನ ಆವಲಹಳ್ಳಿ ಬೂತ್ ನಂ 282 ರ ಅವ್ಯವಸ್ಥೆ. ಕಾದು ಕಾದು ಬೇಸತ್ತು ವಾಪಸ್ ತೆರಳುತ್ತಿರುವ ಮತದಾರರು.
02:58 PM
ಎರಡು ಸಾವಿರ ಜನರಿಗೆ ಒಂದೇ ವೋಟಿಂಗ್ ಮಿಷನ್.ಆವಲಹಳ್ಳಿ ಬೂತ್ ನಂ 282ರಲ್ಲಿ ಅವ್ಯವಸ್ಥೆ. ಕಾದು ಕಾದು ಬೇಸತ್ತು ವಾಪಸು ತೆರಳುತ್ತಿರುವ ಮತದಾರರು.
02:57 PM
ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಕುಟುಂಬದಿಂದ ಮತದಾನ. ಚಾಮರಾಜನಗರದ ಕೆಲವು ಕಡೆ ಮಳೆ. ಮತದಾನಕ್ಕೆ ಅಡ್ಡಿ.
02:08 PM
ಕರ್ನಾಟಕ ಒಟ್ಟು ಶೇ.36, ಮಹಾರಾಷ್ಟ್ರ ಶೇ.30, ಉತ್ತರಪ್ರದೇಶ ಶೇ.38, ಪಶ್ಚಿಮಬಂಗಾಲ ಶೇ.46,
02:08 PM
ಮೈಸೂರು ಶೇ.35, ಚಾಮರಾಜನಗರ ಶೇ.37, ಬೆಂಗಳೂರು ಗ್ರಾಮಾಂತರ ಶೇ.31, ಹಾಸನ ಶೇ.44, ತುಮಕೂರು ಶೇ.39, ಕೋಲಾರ ಶೇ.37, ದಕ್ಷಿಣ ಕನ್ನಡ ಶೇ.49,
02:05 PM
ಲೋಕಸಭೆ ಸಮರ-ಮಧ್ಯಾಹ್ನ 1ಗಂಟೆವರೆಗೆ ನಡೆದ ಶೇಕವಾಡವಾರು ಮತದಾನ: ಬೆಂಗಳೂರು ಉತ್ತರ ಶೇ.30, ಬೆಂಗಳೂರು ದಕ್ಷಿಣ ಶೇ.30, ಉಡುಪಿ-ಚಿಕ್ಕಮಗಳೂರು ಶೇ.46, ಚಿಕ್ಕಬಳ್ಳಾಪುರ ಶೇ.36, ಮಂಡ್ಯ ಶೇ.38.
01:50 PM
ನಮ್ಮ ಕರ್ತವ್ಯಗಳನ್ನು ನಾನು ಮಾಡಬೇಕು. ನಮ್ಮ ಕರ್ತವ್ಯ ಮಾಡದೇ ಬೇರೆಯವರಿಗೆ ಕೈ ತೋರಿಸಬಾರದು. ಯಾರಿಗೂ ತೊಂದರೆಯಾಗಬಾರದು ಎಂದು ಮಧ್ಯಾಹ್ನ ಸಮಯ ಮತದಾನ ಮಾಡಲು ಬಂದಿದ್ದೇನೆ. ಎರಡನೇ ಹಂತದ ಪ್ರಚಾರಕ್ಕೆ ಹೋಗಲ್ಲ. ಮುಂದಿನ ದಿನಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ ನಟ ಯಶ್.
01:49 PM
ಮಾತದಾನ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ದಂಪತಿಗಳ ಆಕ್ರೋಶ . ಬೆಂಗಳೂರು ಮಹದೇವಪುರ ಕ್ಷೇತ್ರದ ನಾರಾಯಣ ಇ ಟೆಕ್ನೋ ಸ್ಕೂಲಿನಲ್ಲಿ ಘಟನೆ.
01:48 PM
ಕೆ.ಆರ್.ಪುರ:ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಜಿನಾಪುರದ ಪ್ಲಾಟ್ ಪಾರಂ ರೋಡ್ ನಲ್ಲಿ ಘಟನೆ.
01:33 PM
ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮತಗಟ್ಟೆಗೆ ಆಗಮಿಸಿದ ನಟ ಶಿವಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
01:26 PM
ಬಿಬಿಎಂಪಿ ಚುನಾವಣಾ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಕೋರಮಂಗಲ EWC ಕ್ವಾಟ್ರಸ್‌ ನಲ್ಲಿ ವಾಸವಿದ್ದ ಸುಮಾರು 3000 ಮತದಾರರ ಹೆಸರು ಮತದಾನ ಪಟ್ಟಿಯಿಂದ ಹೊರಕ್ಕೆ. ನವೀಕರಣಕ್ಕಾಗಿ ಈ ಕ್ವಾರ್ಟಸ್‌ ಅನ್ನು ಬಿಬಿಎಂಪಿ ನೆಲಸಮಗೊಳಿಸಿರುವುದರಿಂದ ಇಲ್ಲಿ ವಾಸವಿದ್ದವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವ ಕುರಿತು ಮಾಹಿತಿ ಲಭ್ಯ.
01:08 PM
ಲೋಕಸಭೆ ಚುನಾವಣೆ ಮತದಾನದ ದಿನ ರಜೆ ನೀಡಿದ್ರೂ ಸುರಾನಾ ಕಾಲೇಜು ಓಪನ್. ವಿದ್ಯಾರ್ಥಿಗಳು, ಪೋಷಕರನ್ನು ಕರೆಸಿ ಅಡ್ಮಿಷನ್ ಪ್ರಕ್ರಿಯೆಯಲ್ಲಿ ತೊಡಗಿರುವ ಆಡಳಿತ ಮಂಡಳಿ. ಸಿಬ್ಬಂದಿಗೂ ಕೂಡ ಮತದಾನಕ್ಕೆ ಅವಕಾಶ ಮಾಡಿಕೊಡದ ಆಡಳಿತ ಮಂಡಳಿ. ಮತದಾನ ಬಿಟ್ಟು ಅಡ್ಮಿಷನ್ ಗಾಗಿ ಮುಗಿ ಬಿದ್ದಿರುವ ಪೋಷಕರು.
01:07 PM
ಮಂಡ್ಯದ ದೊಡ್ಡರಸಿಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ನಿಖಿಲ್ ಪರ ಬೆಂಬಲಿಗರ ನಡುವೆ ಘರ್ಷಣೆ. ಘಟನಾ ಸ್ಥಳಕ್ಕೆ ಪೊಲೀಸರ ಆಗಮನ, ಪರಿಸ್ಥಿತಿ ತಿಳಿಗೊಳಿಸಲು ಯತ್ನ.
01:05 PM
ಸ್ಯಾಂಡಲ್ ವುಡ್ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ರಮೇಶ್, ಜಗ್ಗೇಶ್ ಮತಚಲಾಯಿಸಿದರು. ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತಚಲಾಯಿಸಿದರು.
12:46 PM
ಲೋಕಸಭಾ ಚುನಾವಣೆ;12ಗಂಟೆವರೆಗೆ ನಡೆದ ಶೇಕಡವಾರು ಮತದಾನ-ಕೋಲಾರ ಶೇ.21, ದಕ್ಷಿಣ ಕನ್ನಡ ಶೇ.33, ಉಡುಪಿ-ಚಿಕ್ಕಮಗಳೂರು ಶೇ.32, ಮಂಡ್ಯ ಶೇ.25, ಮೈಸೂರು ಶೇ.26, ಬೆಂಗಳೂರು ಉತ್ತರ ಶೇ.20ರಷ್ಟು. ಬೆಂಗಳೂರು ಕೇಂದ್ರ ಶೇ.19ರಷ್ಟು.
12:45 PM
ಲೋಕಸಭಾ ಚುನಾವಣೆ;12ಗಂಟೆವರೆಗೆ ನಡೆದ ಶೇಕಡವಾರು ಮತದಾನ- ಹಾಸನ ಶೇ.25, ಬೆಂಗಳೂರು ದಕ್ಷಿಣ ಶೇ.20, ತುಮಕೂರು ಶೇ.23, ಚಿತ್ರದುರ್ಗ ಶೇ.20, ಚಿಕ್ಕಬಳ್ಳಾಪುರ ಶೇ.21, ಬೆಂಗಳೂರು ಗ್ರಾಮಾಂತರ ಶೇ.20.
12:33 PM
ಲೋಕಸಭಾ ಚುನಾವಣೆ;ಕರ್ನಾಟಕದಲ್ಲಿ ಶೇ.19.58ರಷ್ಟು ಮತದಾನ. ಹಾಸನ ಜಿಲ್ಲೆ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿ ಮತದಾನ.
12:30 PM
ಲೋಕಸಮರ; ಬಿಸಿಲ ಹಿನ್ನಲೆ ಬೆಂಗಳೂರು ಹೊರವಲಯದ ಮತಗಟ್ಟೆಗಳಲ್ಲಿ ನೀರಸ ಪ್ರಕ್ರಿಯೆ. ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಮತಚಲಾವಣೆ.
12:27 PM
ಮತದಾನಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ. ಇಂದು ಮಧ್ಯಾಹ್ನದ ವೇಳೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ. ಗುಡುಗು,ಮಿಂಚು ಗಾಳಿ ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
12:26 PM
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಪದ್ಮನಾಭ ನಗರದ ಮತಕೇಂದ್ರ 172ರ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕಲಾಗಿದ್ದು, ಅದರಿಂದ 15ಕ್ಕೂ ಹೆಚ್ಚು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ.
12:13 PM
ಮಂಡ್ಯದ ದೊಡ್ಡರಸೀಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತದಾನ, ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮತದಾನ, ಚಿತ್ರದುರ್ಗದ ಪಂಜಯ್ಯನಹಟ್ಟಿಯಲ್ಲಿ ಮತದಾನ ಬಹಿಷ್ಕಾರ. ಗ್ರಾಮಕ್ಕೆ ತಹಸೀಲ್ದಾರ್ ನಾಗರಾಜ್ ಭೇಟಿ, ಗ್ರಾಮಸ್ಥರ ಮನವೊಲಿಕೆಗೆ ಯತ್ನ.
11:53 AM
ಅನಂತ್ ಕುಮಾರ್ ಆರು ಭಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ರು. ನಾನು ಪ್ರತಿಭಾರಿಯೂ ಅವರೊಂದಿಗೆ ಬಂದು ಮತದಾನ ಮಾಡುತ್ತಿದ್ದೆ. ಆದ್ರೆ ಈ ಭಾರಿ ಅವರು ಇಲ್ಲ. ಇದು ಬೇಸರದ ಸಂಗತಿ. ದೇಶದ ಅಭಿವೃದ್ದಿಗೆ,ಸುಭದ್ರತೆಗೆ ನಮ್ಮ ಮತ. ಹೀಗಾಗಿ ನಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು ಮತದಾನ ಮಾಡಿದ್ದೇನೆ. ಮತದಾನದ ಬಳಿಕ ತೇಜಸ್ವಿನಿ ಅನಂತ್ ಕುಮಾರ್ ಹೇಳಿಕೆ.
11:51 AM
ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಮತಯಂತ್ರದಲ್ಲಿ ದೋಷ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ. ಕ್ರಮ ಸಂಖ್ಯೆಯಲ್ಲೂ ಗೊಂದಲ ಇವಿಎಂ ಅದಲು ಬದುಲಾಗಿದೆ ಎನ್ನುವ ಆರೋಪ ಇವಿಎಂ ಸರಿ ಪಡಿಸುವಂತೆ ಸೂಚನೆ ನೀಡಿದ ಅಧಿಕಾರಿ.
11:51 AM
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನ ಪುರ ಹಾಗೂ ಕೆ ಆರ್ ಪುರದಲ್ಲಿ ಮತದಾರರ ನೀರಸ ಪ್ರತಿಕ್ರಿಯೆ. ಸಾವಿರಕ್ಕೂ ಅಧಿಕ ಮತದಾರರಿರುವ ಬಹುತೇಕ ವಾರ್ಡಗಳಲ್ಲಿ ಶೆ. 10ರಷ್ಟು ಮತದಾನ.
11:48 AM
ರಾಜ್ಯಾದ್ಯಂತ ಬಿರುಸಿನ ಮತದಾನ. ಸಚಿವ ಡಿಕೆಶಿ, ನಟ ಅರ್ಜಿನ್ ಸರ್ಜಾ, ಹಾಸನದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತದಾನ. ಡಾಲರ್ಸ್ ಕಾಲೋನಿಯಲ್ಲಿ ಸಚಿವೆ ಜಯಮಾಲಾ ಮತದಾನ.
11:43 AM
ಲೋಕಸಮರ ಬೆಳಗ್ಗೆ 11ಗಂಟೆವರೆಗೆ ನಡೆದ ಶೇಕಡವಾರು ಮತದಾನ: ದಕ್ಷಿಣ ಕನ್ನಡ ಶೇ.33, ಮೈಸೂರು ಶೇ.25, ಹಾಸನ ಶೇ.24, ಉಡುಪಿ-ಚಿಕ್ಕಮಗಳೂರು ಶೇ.30, ಚಾಮರಾಜನಗರ ಶೇ.19, ಮಂಡ್ಯ ಶೇ.24.
11:41 AM
ಲೋಕಸಮರ ಬೆಳಗ್ಗೆ 11ಗಂಟೆವರೆಗೆ ನಡೆದ ಶೇಕಡವಾರು ಮತದಾನ: ತುಮಕೂರು ಶೇ.22ರಷ್ಟು, ಚಿತ್ರದುರ್ಗ ಶೇ.19, ಚಿಕ್ಕಬಳ್ಳಾಪುರ ಶೇ.18, ಬೆಂಗಳೂರು ಗ್ರಾಮಾಂತರ ಶೇ.20, ಬೆಂಗಳೂರು ಕೇಂದ್ರ ಶೇ.17, ಕೋಲಾರ ಶೇ.21.
11:39 AM
ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಜಿಎಫ್ ಸ್ವರ್ಣನಗರದಲ್ಲಿ ಹಣ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಪುಣ್ಯಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
11:31 AM
ಕೋರಮಂಗಲದಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷ ಹಣ ಹಂಚುತ್ತಿದೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ.
11:26 AM
ಸ್ಯಾಂಡಲ್ ವುಡ್ ನಟರಾದ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರು ಮತಚಲಾಯಿಸಿದರು. ಅಲ್ಲದೇ ತಪ್ಪದೇ ಮತದಾನ ಮಾಡಿ, ಯುವ ಮತದಾರರು ಯಾವುದೇ ಕಾರಣಕ್ಕೂ ಮತಚಲಾಯಿಸದೇ ಮನೆಯಲ್ಲಿ ಕೂರಬೇಡಿ ಎಂದು ಮನವಿ ಮಾಡಿಕೊಂಡರು.
11:01 AM
ಮತದಾನ ನಮ್ಮ ಕರ್ತವ್ಯ.ಒಂದು ರಾಷ್ಟ್ರ ಕಟ್ಟುವ ಕಾರ್ಯ.ಹಾಗಾಗಿ ದಯಮಾಡಿ ಎಲ್ಲರೂ ಮತ ಹಾಕಿ.ರಜೆ ಇದೆ ಅಂತ ಯಾರೂ ಮನೆಯಲ್ಲಿ ಕೂರಬೇಡಿ.ಮತದಾನದ ಬಳಿಕ ಸುಧಾ ಮೂರ್ತಿ ಹೇಳಿಕೆ.
11:00 AM
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ನಿವಾಸಿ,ಪಿಯುಸಿ ವಿದ್ಯಾರ್ಥಿ ಎಚ್ ಆರ್ ಪ್ರಜ್ವಲ್ ರವೀಶ್ ಅವರು ಪ್ರಥಮ ಬಾರಿಗೆ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಇದರ ಸವಿ ನೆನಪಿಗಾಗಿ ಶೆಟ್ಟಿಹಳ್ಳಿ ರೈಲ್ವೆ ಸಮಾನಾಂತರ ರಸ್ತೆ ಬದಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.
11:00 AM
282 ಮತ್ತು 283 ಮತಗಟ್ಟೆ ಇವಿಎಂ ನಲ್ಲಿ ತಾಂತ್ರಿಕ ದೋಷ ಹೊಳೆನರಸೀಪುರದಲ್ಲಿ ಮತದಾನ ತಾತ್ಕಾಲಿಕ ಸ್ಥಗಿತ ಸ್ಥಳಕ್ಕೆ ಬಾರದ ಅಧಿಕಾರಿಗಳು.
10:59 AM
ಮತದಾನ ನಮ್ಮ ಹಕ್ಕು, ಎಲ್ಲರೂ ಬಂದು ಮತದಾನ ಮಾಡಿ. ನಾವು ಜೀವಂತ ಇದ್ದೇವೆ ಅನ್ನೋದಕ್ಕೆ ಮತದಾನ ಸಾಕ್ಷಿ. ಬೆಂಗಳೂರಿನಲ್ಲಿ ಮತದಾನದ ಬಳಿಕ ಸಚಿವೆ ಜಯಮಾಲಾ ಹೇಳಿಕೆ.
10:58 AM
ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಬೆಂಗಳೂರಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮತದಾನ.
10:57 AM
ಬೆಂಗಳೂರು ನಗರದ ಕೆಎಲ್ ಇ ಕಾಲೇಜಿನ ಬೂತ್ ನ ಮತದಾರರ ಪಟ್ಟಿಯಲ್ಲಿ 367 ಜನರ ಹೆಸರೇ ಇಲ್ಲದೆ ಕಂಗಾಲು. ಬೆಳಗ್ಗೆ 6ಗಂಟೆಯಿಂದ ಮತದಾನಕ್ಕಾಗಿ ಕಾಯುತ್ತಿರುವ ಮತದಾರರು.
10:26 AM
ಲೋಕಸಭಾ ಚುನಾವಣೆಯಲ್ಲಿ ಬೆಳಗ್ಗೆ 10ಗಂಟೆವರೆಗೆ ಶೇಕವಾಡವಾರು ಮತದಾನದ ವಿವರ: ಉಡುಪಿ-ಚಿಕ್ಕಮಗಳೂರು ಶೇ.13ರಷ್ಟು, ಹಾಸನ ಶೇ.7ರಷ್ಟು, ದಕ್ಷಿಣ ಕನ್ನಡ ಶೇ.14.94ರಷ್ಟು, ಚಿತ್ರದುರ್ಗ ಶೇ.5.58ರಷ್ಟು, ತುಮಕೂರು ಶೇ.7.39, ಮಂಡ್ಯ ಶೇ.6.05ರಷ್ಟು, ಮೈಸೂರು ಶೇ.7.74ರಷ್ಟು.
10:23 AM
ಲೋಕಸಭಾ ಸಮರದ 2ನೇ ಹಂತದಲ್ಲಿ 11ರಾಜ್ಯಗಳಲ್ಲಿ ಬೆಳಗ್ಗೆ 9ಗಂಟೆವರೆಗೆ ಶೇ.7.95ರಷ್ಟು ಮತದಾನವಾಗಿದೆ.
10:21 AM
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿಎನ್ ಬಚ್ಚೇಗೌಡ, ಮೈಸೂರು ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರಿನಲ್ಲಿ ರಾಮದಾಸ್, ಮಂಗಳೂರಿನ ಬಲ್ಮಠದಲ್ಲಿ ಮಿಥುನ್ ರೈ ಮತಚಲಾಯಿಸಿದರು.
10:09 AM
ಹೆಚ್ಚುವರಿ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ನಿಧನ.ಚಾಮರಾಜನಗರ ಸುಲ್ತಾನ್ ಷರೀಪ್ ಸರ್ಕಲ್ ಬಳಿ‌ ಇರುವ ಮತಗಟ್ಟೆಯಲ್ಲಿ ದುರ್ಘಟನೆ.
09:58 AM
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಶೇ.7.79ರಷ್ಟು, ಚಿತ್ರದುರ್ಗ ಶೇ.5.58ರಷ್ಟು ಮತದಾನ,ದಕ್ಷಿಣ ಕನ್ನಡ ಶೇ.9.27, ಹಾಸನ ಶೇ.11ರಷ್ಟು, ಮೈಸೂರು ಶೇ.11ರಷ್ಟು ಮತದಾನ.
09:53 AM
ಬೆಳಗ್ಗೆ 7ರಿಂದ 9ಗಂಟೆವರೆಗಿನ ಶೇಕಡಾವಾರು ಮತದಾನ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ.9.80ರಷ್ಟು,ಚಿಕ್ಕಬಳ್ಳಾಪುರ ಶೇ.11.03, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ.9.23ರಷ್ಟು, ಬೆಂಗಳೂರು ಉತ್ತರ ಶೇ.6.39, ಮಂಡ್ಯ ಶೇ.04ರಷ್ಟು, ಮೇಲುಕೋಟೆ ಶೇ.7. ತುಮಕೂರು ಶೇ.7.39ರಷ್ಟು, ಕೋಲಾರ ಶೇ.5.88
09:20 AM
ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತದಾನ ಮಾಡಿದರು. ಅವರ ಜೊತೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್‌ ಗೌಡ ಅವರೂ ಸಹ ತಮ್ಮ ಹಕ್ಕನ್ನು ಚಲಾಯಿಸಿದರು.
09:04 AM
ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ ರೈ ಅವರು, ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಕೃಷ್ಣ ಭೈರೇ ಗೌಡ, ನಟ ರಮೇಶ್‌ ಅರವಿಂದ್‌, ನಟ ಜಗ್ಗೇಶ್‌ ಅವರು ತಮ್ಮ ತಮ್ಮ ಕೇಂದ್ರಗಳಲ್ಲಿ ಮತದಾನ ಮಾಡಿದರು.
09:01 AM
ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕೋಟತಟ್ಟು ಗ್ರಾಮ ಪಂಚಾಯತ್‌ ನ 165ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ತಮ್ಮ ಹಕ್ಕನ್ನು ಚಲಾಯಿಸಲು ಶ್ರೀನಿವಾಸ ಪೂಜಾರಿಯವರು ಸುಮಾರು 45 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು.
08:57 AM
ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದ ಸುಳ್ಯದ ಏನೆಕಲ್ಲಿನ ಜನಾರ್ಧನ ಗೌಡ ದಂಪತಿ ಪುತ್ರಿ ಅಶ್ವಿ‌ನಿ ಅವರು ವಿವಾಹ ಮಂಟಪಕ್ಕೂ ತೆರಳುವ ಮುನ್ನ ಬಾನಡ್ಕ ಬೂತ್‌ ಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.
08:43 AM
ತೆಕ್ಕಟ್ಟೆ ಕುವೆಂಪು ಶಾಲಾ ಮತಗಟ್ಟೆ ಸಂಖ್ಯೆ 83ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 15 ನಿಮಿಷ ವಿಳಂಬವಾಗಿ ಮತದಾನ ಪ್ರಾರಂಭ.
08:42 AM
ಸಚಿಮ ಯು.ಟಿ. ಖಾದರ್‌, ಮೈತ್ರಿ ಅಭ್ಯರ್ಥಿ ವಿಜಯ ಶಂಕರ್‌, ಸದಾನಂದ ಗೌಡ, ತೇಜಸ್ವಿ ಸೂರ್ಯ, ಡಾ. ಜಿ. ಪರಮೇಶ್ವರ್‌, ಪ್ರಮೋದ್‌ ಮಧ್ವರಾಜ್‌, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
08:40 AM
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಹಾಗೂ ದೇಶದ ವಿವಿಧೆಡೆಗಳಲ್ಲಿ ಎರಡನೇ ಹಂತದ ಮತದಾನ ಪ್ರಾರಂಭ.
08:29 AM
ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಅವರು ಹೆೆ.ಎಚ್‌.ಎಸ್‌.ಆರ್‌. ಲೇಔಟ್‌ ನಲ್ಲಿರುವ ಲಾರೆನ್ಸ್‌ ಇಂಗ್ಲಿಷ್‌ ಶಾಲೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
07:24 AM
ತುಮಕೂರು ಸಿದ್ದಲಿಂಗ ಸ್ವಾಮೀಜಿ ಮತದಾನ, ಚೆನ್ನೈನ ಉತ್ತರ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತದಾನ,
07:06 AM
ಉಡುಪಿ-ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮಂಡ್ಯ ಮತದಾರರಲ್ಲಿ ಉತ್ಸಾಹ. ಮತಚಲಾಯಿಸಿದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ.
07:02 AM
2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಆರಂಭ. 12ರಾಜ್ಯಗಳ 95 ಕ್ಷೇತ್ರಗಳಲ್ಲಿ ಮತದಾನ. ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮತದಾನ ಶುರು.
06:58 AM
ದೇಶದ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ...ಗುರುವಾರ ಬೆಳಗ್ಗೆಯಿಂದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದೆ.
06:57 AM
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮಂಡ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳಿದ್ದರೂ ಹಣಾಹಣಿ ಮಾತ್ರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಡುವೆ.
06:56 AM
ರಾಜ್ಯದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 241 ಅಭ್ಯರ್ಥಿಗಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ವಿ.ಶ್ರೀನಿವಾಸ್ ಪ್ರಸಾದ್ ಅನೇಕ ಘಟಾನುಘಟಿಗಳು ಕಣದಲ್ಲಿದ್ದಾರೆ.