05:48 PM
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಗಳಿಸಿದ ನಂತರ ಹನುಮಾನ್ ಮಂದಿರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್.
05:07 PM
ಕೋಮುವಾದಿ ರಾಜಕಾರಣವನ್ನು ಜನರು ಒಪ್ಪುವುದಿಲ್ಲ ಎಂದು ಜನರು ಸಂದೇಶ ನೀಡಿದ್ದಾರೆ ಎಂದ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತ.
05:00 PM
ಇದು ನನಗೆ ದೊರೆತ ಅತ್ಯಂತ ದೊಡ್ಡ ಉಡುಗೊರೆ: ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತ ಕೇಜ್ರಿವಾಲ್.
04:36 PM
ಅರವಿಂದ್ ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಮುಖಂಡ ಮನೋಜ್ ತಿವಾರಿ
04:08 PM
ಮನ್ ಕಿ ಬಾತ್ ಅಲ್ಲ, ಜನ್ ಕಿ ಬಾತ್ ಎಂದು ಕೇಜ್ರಿವಾಲ್ ಗೆ ಶುಭ ಹಾರೈಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
04:05 PM
ಆಪ್ ನ ರಾಘವ್ ಛಡ್ಡಾ ರಾಜೀಂದರ್ ನಗರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.
04:05 PM
ಪಟೇಲ್ ನಗರದಲ್ಲಿ ಆಪ್ ನ ರಾಜ್ ಕುಮಾರ್ ಆನಂದ್ ಗೆ ಗೆಲುವು
03:47 PM
ದೆಹಲಿ ಜನತೆ ಒಂದು ಸಂದೇಶ ರವಾನಿಸಿದ್ದಾರೆ. ಕುಡಿಯುವ ನೀರು, ವಿದ್ಯುತ್, ರಸ್ತೆ, ಮೊಹಲ್ಲಾ ಕ್ಲಿನಿಕ್ ಕೊಟ್ಟವರಿಗೆ ಮತ ನೀಡಿ ಆಶೀರ್ವದಿಸಿದ್ದಾರೆ.
03:42 PM
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ, ಇದು ಕೇಜ್ರಿವಾಲ್ ಗೆಲುವಲ್ಲ, ಇದು ದೆಹಲಿ ಜನರ ಗೆಲುವು.ಇದು ಇಡೀ ದೇಶದ ಜನರ ಗೆಲುವಾಗಿದೆ.
03:36 PM
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಆಮ್ ಆದ್ಮಿ ಪಕ್ಷ 63 ಸ್ಥಾನಗಳಲ್ಲಿ, ಬಿಜೆಪಿ 07 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ತಿಳಿಸಿದೆ.
03:07 PM
ಕೊನೆಗೂ ಗೆದ್ದು ಬೀಗಿದ ಮನೀಶ್ ಸಿಸೋಡಿಯಾ.
02:36 PM
ದ್ವೇಷದ ರಾಜಕಾರಣವನ್ನು ತಿರಸ್ಕರಿಸಿದ್ದಕ್ಕೆ ಧನ್ಯವಾದಗಳು ಎಂದು ದೆಹಲಿಗೆ ಜನತೆಗೆ ಧನ್ಯವಾದ ಹೇಳಿದ ಅಖಿಲೇಶ್ ಯಾದವ್.
02:33 PM
ಮತ್ತೆ ಮುನ್ನಡೆಯತ್ತ ಮನೀಶ್ ಸಿಸೋಡಿಯಾ. ಪತ್ಪರ್ ಗಂಜ್ ಕ್ಷೇತ್ರದಲ್ಲಿ 650 ಮತಗಳ ಮುನ್ನಡೆಯಲ್ಲಿ ಸಿಸೋಡಿಯಾ
02:31 PM
ಕಲ್ಕಾಜಿ ಕ್ಷೇತ್ರದಲ್ಲಿ ಆಪ್ ನ ಆತಿಶಿಗೆ ಗೆಲುವು.
01:39 PM
ಅರವಿಂದ್ ಕೇಜ್ರಿವಾಲ್ ಗೆ ಶುಭಾಶಯ ಕೋರಿದ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.
01:34 PM
ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ದಿನೇಶ್ ಮೊಹಾನಿಯಾ. ಆಪ್ ನ ಅಭ್ಯರ್ಥಿ ದಿನೇಶ್ ಮೊಹಾನಿಯಾ
01:25 PM
ಓಕ್ಲಾ ಕ್ಷೇತ್ರದಲ್ಲಿ ಆಪ್ ನ ಅಮಾನತುಲ್ಲಾ ಖಾನ್ ಗೆ ಭರ್ಜರಿ ಗೆಲುವು. ಬಿಜೆಪಿಯ ಬ್ರಹಾಮ್ ಸಿಂಗ್ ವಿರುದ್ಧ ಗೆಲುವು
01:18 PM
ದೆಹಲಿ ಹಾಲಿ ವಿಧಾನಸಭೆಯನ್ನು ವಿಸರ್ಜಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್. ಮೂರನೇ ಬಾರಿಗೆ ಆಪ್ ಸರ್ಕಾರ ದಿಲ್ಲಿ ಗದ್ದುಗೆ ಏರಲು ಸಜ್ಜು.
01:09 PM
ಸೀಲಂಪುರ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಜಯಭೇರಿ. ಆಪ್ ನ ಅಬ್ದುಲ್ ರೆಹಮಾನ್ ಗೆ ಗೆಲುವು
01:05 PM
ಶಾಲಿಮಾರ್ ಬಾಘ್ ನಲ್ಲಿ ಗೆಲುವು ಸಾಧಿಸಿದ ಆಪ್ ನ ಬಂದನಾ ಕುಮಾರಿ.
12:57 PM
ಕೇಜ್ರಿವಾಲ್ ರಿಗೆ ಶುಭ ಹಾರೈಸಿದ ಪಶ್ಚಿಮ ಬೆಂಗಾಳದ ಮಮತಾ ಬ್ಯಾನರ್ಜಿ. ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದ ದೀದಿ
12:38 PM
ದಿಯೋಲಿ ಕ್ಷೇತ್ರದಲ್ಲಿ ಆಪ್ ಗೆ ಜಯ: ಆಪ್ ಅಭ್ಯರ್ಥಿ ಪ್ರಕಾಶ್ ಜರ್ವಾಲಿಗೆ ಜಯಭೇರಿ
12:14 PM
ಹಿನ್ನಡೆಯಲ್ಲಿರುವ ಮನೀಶ್ ಸಿಸೋಡಿಯಾ, ವಿಜೇಂದರ್ ಗುಪ್ತಾ, ಅಲ್ಕಾ ಲಂಬಾ, ತೇಜಿಂದರ್ ಪಾಲ್ ಬಗ್ಗಾ, ಕಪಿಲ್ ಮಿಶ್ರಾ, ಸುನೀಲ್ ಯಾದವ್
12:09 PM
ಓಕ್ಲಾ ಕ್ಷೇತ್ರದಲ್ಲಿ ಆಪ್ ನ ಅಮಾನತುಲ್ಲಾ ಖಾನ್ ಗಿಂತ 194 ಮತಗಳ ಮುನ್ನಡೆಯಲ್ಲಿ ಬಿಜೆಪಿಯ ಬ್ರಹಾಮ್ ಸಿಂಗ್
11:48 AM
ಓಕ್ಲಾ, ಚಾತ್ತಾರ್ ಪುರ್, ದಿಲ್ಲಿ ಕಂಟೋನ್ಮೆಂಟ್, ಗೋಕುಲ್ ಪುರ್, ಉತ್ತಮ್ ನಗರ್ ಹಾಗೂ ಪ್ರತಾಪ್ ಗಂಜ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆ.
11:48 AM
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಗೆ ಶುಭ ಕೋರಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್
11:43 AM
ಕಲ್ಕಾಜಿ ಕ್ಷೇತ್ರದಲ್ಲಿ ಆತಿಶಿ ಗೆ ಮತ್ತೆ ಮುನ್ನಡೆ. ಆಪ್ ನ ಅಭ್ಯರ್ಥಿಯಾಗಿರುವ ಆತಿಶಿ
11:26 AM
ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆ. ಕಳೆದ ಬಾರಿ ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿತ್ತು.
11:20 AM
ಪತಪರ್ ಗಂಜ್ ನಲ್ಲಿ ಮನೀಶ್ ಸಿಸೋಡಿಯಾ ಹಾಗೂ ನೇಗಿ ನಡುವೆ ಹಾವು-ಏಣಿ ಆಟ. 71 ಮತಗಳ ಮುನ್ನಡೆ ಸಾಧಿಸಿದ ಸಿಸೋಡಿಯಾ.
11:15 AM
1500 ಮತಗಳ ಹಿನ್ನಡೆ ಅನುಭವಿಸಿದ ಡಿಸಿಎಂ ಮನೀಶ್ ಸಿಸೋಡಿಯಾ, ಬಿಜೆಪಿಯ ರವೀಂದ್ರ ಸಿಂಗ್ ನೇಗಿಗೆ ಮುನ್ನಡೆ.
11:08 AM
ಮಾಲ್ವಿಯಾ ಕ್ಷೇತ್ರದಲ್ಲಿ ಆಪ್ ನ ಸೋಮ್ ನಾಥ್ ಭಾರ್ತಿ ಪ್ರತಿಸ್ಪರ್ಧಿ ಬಿಜೆಪಿಯ ಶೈಲೇಂದ್ರ ಸಿಂಗ್ ಗಿಂತ 7ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.
10:59 AM
ದಿಲ್ಲಿಯ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಇನ್ನೂ ಹಲವು ಸುತ್ತು ಮತಎಣಿಕೆ ಬಾಕಿ ಇದೆ.
10:58 AM
ದಿಲ್ಲಿಯಲ್ಲಿ ಮೂರನೇ ಬಾರಿಯೂ ಆಪ್ ಅಧಿಕಾರಕ್ಕೆ ಏರಲಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕಾಂಗ್ರೆಸ್ ಸೋಲು ಒಳ್ಳೆಯ ಸಂದೇಶ ಕೊಡಲ್ಲ-ಕಾಂಗ್ರೆಸ್ ಸಂಸದ ಎಆರ್ ಚೌಧುರಿ.
10:45 AM
70ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 53 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದ್ದು, ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
10:41 AM
5ನೇ ಸುತ್ತಿನ ಮತಎಣಿಕೆ ಬಳಿಕ ಬಿಜೆಪಿ ಮುನ್ನಡೆ ಸಾಧಿಸಲಿದೆ. 27 ಕ್ಷೇತ್ರಗಳಲ್ಲಿ ಇನ್ನೂ ಪೈಪೋಟಿ ಇದೆ. ಫಲಿತಾಂಶದಲ್ಲಿ ಬದಲಾವಣೆಯಾಗಲಿದೆ ಎಂದ ದಿಲ್ಲಿ ಬಿಜೆಪಿ ಅಧ್ಯಕ್ಷ ತಿವಾರಿ.
10:39 AM
ದಿಲ್ಲಿಯ ಚಾಂದಿನಿ ಚೌಕ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಸಿಂಗ್ 6043 ಮತಗಳ ಮುನ್ನಡೆ ಸಾಧಿಸಿದ್ದಾರೆ.
10:38 AM
ಶಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿರುವ ಓಕ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
10:37 AM
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟ ಆಮ್ ಆದ್ಮಿ ಸರ್ಕಾರಕ್ಕೆ ಜನ ಬೆಂಬಲ. ಶಹೀನ್ ಬಾಗ್ ಹೋರಾಟಕ್ಕೆ ಆಪ್ ಬೆಂಬಲ ನೀಡದಿರುವುದು ಗೆಲುವಿಗೆ ಸಾಥ್ ನೀಡಿದೆ.
10:23 AM
ನವದೆಹಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ವಿಜೇಂದರ್ ಗುಪ್ತಾಗಿಂತ 2,600 ಮತಗಳ ಮುನ್ನಡೆ ಸಾಧಿಸಿದ್ದಾರೆ.
10:21 AM
ಚುನಾವಣಾ ಆಯೋಗದ ವರದಿ ಪ್ರಕಾರ ಆಮ್ ಆದ್ಮಿ ಪಕ್ಷ 32 ಕ್ಷೇತ್ರಗಳಲ್ಲಿ, ಬಿಜೆಪಿ 16 ಕ್ಷೇತ್ರಗಳಲ್ಲಿ ಈವರೆಗೆ ಮುನ್ನಡೆ ಸಾಧಿಸಿರುವುದಾಗಿ ತಿಳಿಸಿದೆ.
10:19 AM
ದೆಹಲಿ ಚುನಾವಣಾ ಪ್ರಚಾರದಲ್ಲಿಯೂ ಕಾಂಗ್ರೆಸ್ ನಿರಾಸಕ್ತಿ. ಈ ಬಾರಿಯೂ ಕಾಂಗ್ರೆಸ್ ಮತಗಳು ಆಪ್ ಗೆ ದೊರೆಯುವಂತಾಗಿದೆ.
10:03 AM
ರಾಜಿಂದರ್ ನಗರ್ ಕ್ಷೇತ್ರದಲ್ಲಿ ಆಪ್ ನ ರಾಘವ್ ಛಡ್ಡಾ ಗೆ ಮುನ್ನಡೆ
09:44 AM
ಕಲ್ಕಾಜಿ ಕ್ಷೇತ್ರದಲ್ಲಿ ಆಪ್ ನ ಆತಿಶಿಗೆ ಹಿನ್ನಡೆ. ಬಿಜೆಪಿಯ ಧರಂಬೀರ್ ಸಿಂಗ್ ಗೆ ಮುನ್ನಡೆ. ಆರಂಭಿಕವಾಗಿ ಮುನ್ನಡೆಯಲ್ಲಿದ್ದ ಆತಿಶಿ.
09:38 AM
ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿಜೇಂದರ್ ಗುಪ್ತಾ ಮುನ್ನಡೆಯಲ್ಲಿ
09:32 AM
ಪಟೇಲ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಾ ತಿರಾತ್ ಹಿನ್ನಡೆಯಲ್ಲಿದ್ದಾರೆ.
09:21 AM
ದ್ವಾರಕಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರದ್ಯುಮ್ನ ರಜಪೂತ್ ಗೆ ಮುನ್ನಡೆ
09:05 AM
ಬಿಜೆಪಿಯ ಕಪಿಲ್ ಮಿಶ್ರಾಗೆ ಹಿನ್ನಡೆ. ಮೊಡೆಲ್ ಟೌನ್ ಕ್ಷೇತ್ರದಲ್ಲಿ ಕಪಿಲ್ ಮಿಶ್ರಾಗೆ ಹಿನ್ನಡೆ.
08:58 AM
ಬಿಜೆಪಿ ಯುವ ನಾಯಕ ಹರಿನಗರ್ ಕ್ಷೇತ್ರದ ಅಭ್ಯರ್ಥಿ ತೇಜಿಂದರ್ ಪಾಲ್ ಬಗ್ಗಾ ಗೆ ಮುನ್ನಡೆ
08:56 AM
ಚಾಂದನಿ ಚೌಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಗೆ ಆರಂಭಿಕ ಹಿನ್ನಡೆ.
08:52 AM
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪತ್ಪರ್ ಗಂಜ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
08:49 AM
ಬಿಜೆಪಿ 55 ಕ್ಷೇತ್ರಗಳಲ್ಲಿ ಜಯ ಗಳಿಸಿದರೂ ಅಚ್ಚರಿ ಪಡಬೇಡಿ: ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ
08:46 AM
ಕಲ್ಕಾಜಿ ಕ್ಷೇತ್ರದಲ್ಲಿ ಆತಿಶಿಗೆ ಮುನ್ನಡೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೌತಮ್ ಗಂಭೀರ್ ವಿರುದ್ಧ ಸೋಲನುಭವಿಸಿದ್ದ ಆತಿಶಿ
08:38 AM
ಮಾಳವಿಯಾ ನಗರ ಕ್ಷೇತ್ರದಲ್ಲಿ ಆಪ್ ನ ಸೋಮನಾಥ್ ಭಾರ್ತಿಗೆ ಮುನ್ನಡೆ
08:35 AM
ಚುನಾವಣೆ ಕಣದಲ್ಲಿರುವ ಅತೀ ಶ್ರೀಮಂತ ಅಭ್ಯರ್ಥಿ ಎಎಪಿಯ ಧರ್ಮಪಾಲ ಲಕ್ರಾ ಅವರು ಮುಂಡ್ಕಾ ಕ್ಷೇತ್ರದಲ್ಲಿ ಮುನ್ನಡೆ
08:19 AM
ನವದೆಹಲಿ ಕ್ಷೇತ್ರದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಮುನ್ನಡೆ
08:16 AM
ಆಮ್ ಆದ್ಮಿ ಪಕ್ಷಕ್ಕೆ 30 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ, 8 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ
08:11 AM
ಆಮ್ ಆದ್ಮಿ ಪಕ್ಷ ಕಳೆದ 5 ವರ್ಷದಿಂದ ಜನರಿಗಾಗಿಯೇ ಕೆಲಸ ಮಾಡುತ್ತಿದೆ. ಇಂದು ಖಂಡಿತಾ ಗೆಲ್ಲುತ್ತೇವೆ- ಮನೀಶ್ ಸಿಸೋಡಿಯಾ
08:07 AM
ಅಂಚೆ ಮತಗಳ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆರಂಭಿಕ ಮುನ್ನಡೆ
08:03 AM
70 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಎಣಿಕೆ ಕಾರ್ಯ ಆರಂಭ
08:01 AM
ದೆಹಲಿ ಚುನಾವಣೆ ಮತ ಎಣಿಕೆ ಆರಂಭ, ಮೊದಲು ಅಂಚೆ ಮತಗಳ ಎಣಿಕೆ